ಆಂಗ್ಲ ಸಾಹಿತ್ಯ ವಿಹಾರಿ ಹಟ್ಟಿಯಂಗಡಿ ನಾರಾಯಣ ರಾವ್

ಹ. ನಾ. ರಾ. ಅವರ ಅನುವಾದದ ಮಹತ್ವವನ್ನು ಆ ಕಾಲದಲ್ಲಿ ಅಷ್ಟಾಗಿ ಗುರುತಿಸಲಿಲ್ಲವೆಂದೇ ಅನಿಸುತ್ತದೆ. ಅದಕ್ಕೆ ಕಾರಣ ಮುಖ್ಯವಾಗಿ ಬೆಂಗಳೂರು- ಮೈಸೂರು ಕೇಂದ್ರದ ಸಾಹಿತಿಗಳಿಗೆ ಅವರ ಅನುವಾದಗಳು ಅಲಭ್ಯವಾಗಿದ್ದವು ಎಂದು ಊಹಿಸಬಹುದು. ದಕ್ಷಿಣ ಕನ್ನಡದವರು ಅವರನ್ನು ಮುಖ್ಯ ಕವಿ-ಚಿಂತಕ ಎಂದು ಪರಿಗಣಿಸಿದ್ದರು. ಪಂಜೆಯವರು ‘ವಾಗ್ಭೂಷಣ’ದ ಸಂಚಿಕೆಯಲ್ಲಿ ಬಂದ ‘ಶೇಕ್ಸ್‌ಪಿಯರಿನ ಸುಭಾಷಿತ ಕಲಾಪಗಳ’ ಚೌಪದಿಗಳನ್ನು ಪಠ್ಯ ಪುಸ್ತಕಗಳಲ್ಲಿ ಬಳಸಿಕೊಂಡಿದ್ದರು. ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಹಟ್ಟಿಯಂಗಡಿ ನಾರಾಯಣ ರಾವ್ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

Read More