ನಾನು ಕೂಡ ಜಾಡಮಾಲಿಯಾಗಿದ್ದೆ

ಆ ಬಳೆಗಳ ಅಸಹಾಯಕತೆಗೂ ತಾಯ ಆಲಾಪಕ್ಕೂ ವ್ಯತ್ಯಾಸವೇ ಇರಲಿಲ್ಲ. ಅಪ್ಪನ ಜೊತೆ ಮೊದಲ ಬಾರಿಗೆ ಕೈ ಮಾಡಿದ್ದಳು. ಅವಳಿಗೆ ಗೊತಿತ್ತೇನೊ; ತಾನಿನ್ನು ಹೆಚ್ಚು ಕಾಲ ಉಳಿಯುವುದಿಲ್ಲವೆಂದು! ಅಬ್ಬರಿಸಿದಳು. ಬೀಸಿದ್ದ ಬೆತ್ತವ ತಟಕ್ಕನೆ ಹಿಡಿದಿದ್ದಳು. ಅಪ್ಪ ಉಷಾರಾದ. ದೊಣ್ಣೆಯ ಎರಡೂ ತುದಿಗಳ ಬಲವಾಗಿ ಹಿಡಿದುಕೊಂಡ, ತಾಯ ಅದರ ಮಧ‍್ಯ ಭಾಗವ ಹಿಡಿದು ಶಕ್ತಿ ಮೀರಿ ಅವನನ್ನು ಹಿಂದಕ್ಕೆ ನೂಕಿಕೊಂಡು ಹೋಗಿ ಗೋಡೆಗೆ ಒತ್ತರಿಸಿಕೊಂಡು ತನ್ನ ಕಾಲುಗಳ ಬಲವಾಗಿ ಹಿಂದಕ್ಕೆ ಊರಿ ಆ ಬೆತ್ತವನ್ನು ಅವನ ಗೋಣಿನತ್ತ ತಳ್ಳುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೆಯ ಕಂತು.

Read More