ವ್ಯಕ್ತಿವಿಶಿಷ್ಟತೆಯೆಡೆಗಿನ ಅಸ್ಪಷ್ಟ ಹೆಜ್ಜೆಗಳು

ಚಿಂತನಶೀಲರಾದ ಹೊಸ ತಲೆಮಾರಿನ ಯುವಜನರನ್ನು ರೂಪಿಸುವ ನಿಟ್ಟಿನಲ್ಲಿ ಸದಾ ಚಟುವಟಿಕೆಯಿಂದ ಇದ್ದ ಜಿ. ರಾಜಶೇಖರ್‌ ಅವರು ತೀರಿಕೊಂಡಿದ್ದಾರೆ. ಉಡುಪಿ ಎಂದರೆ ಜಿ.ರಾಜಶೇಖರ್‌ ಎಂದು ಹೇಳುವಷ್ಟು ಪ್ರಖರವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದ ಅವರು ಹೊಸವಿಚಾರಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ಸದಾ ಮುಕ್ತರಾಗಿದ್ದರು. ಸಿದ್ಧಾಂತಗಳು ಮತ್ತು ಆದರ್ಶ, ಅವುಗಳನ್ನು ವಾಸ್ತವವಾಗಿ ಕಾಣುವಲ್ಲಿ ಎದುರಾಗುವ ಸವಾಲುಗಳ ಕುರಿತು ತಮ್ಮದೇ ಆದ ನಿಲುವುಗಳನ್ನು ಪ್ರಾಮಾಣಿಕವಾಗಿ ಮಂಡಿಸುತ್ತಿದ್ದರು. ಅವರೊಂದಿಗಿನ ಸಹಮತ  – ಭಿನ್ನಮತಗಳ ನಡುವೆ ಸ್ನೇಹದ ದಾರಿ ಸವೆಸಿದವರು ಡಿ.ಎಸ್.‌ ನಾಗಭೂಷಣ್.‌  ರಾಜಶೇಖರ್‌ ಅವರ ಅಭಿನಂದನಾ ಗ್ರಂಥಕ್ಕೆ ಅವರು ಬರೆದಿದ್ದ ಲೇಖನವೊಂದು ನಿಮ್ಮ ಓದಿಗಾಗಿ ಇಲ್ಲಿದೆ.

Read More