ತಾವಾಗೇ ಬಿದ್ದವರು ನನ್ನ ಬೈದಿದ್ದರು!: ಎಚ್. ಗೋಪಾಲಕೃಷ್ಣ ಸರಣಿ
ಬರ್ತಾ ಬರ್ತಾ ಅಜ್ಜಿ ಒಂದು ಗುಂಡಿಯಲ್ಲಿ ನೋಡದೆ ಕಾಲು ಇಟ್ಟಿತು. ಮೊಗಚಿಕೊಂಡು ಹಳ್ಳದಲ್ಲಿ ಮುಖಾಡೆ ಬಿದ್ದು ಬಿಡ್ತು. ಎಪ್ಪತ್ತು ವರ್ಷದ ಕೆಂಪು ಸೀರೆ ಉಟ್ಟ ಮಡಿ ಹೆಂಗಸು ಅಜ್ಜಿ ಆಗ. ತೆಳು ದೇಹ, ಮುಟ್ಟಿದ ಕಡೆ ಎಲ್ಲಾ ಮೂಳೆಗಳೇ, ಬೊಚ್ಚು ಬಾಯಿ ವಟ ವಟ ವಟ ನಾನ್ ಸ್ಟಾಪ್ ಮಾತು. ಅದು ಹೇಗೋ ಅವರನ್ನು ಮೇಲೆ ಎಬ್ಬಿಸಿದೆ. ದಾರಿ ಉದ್ದಕ್ಕೂ ಅದರ ಕೈಲಿ ಸಹಸ್ರ ನಾಮ ಮಾಡಿಸಿಕೊಂಡೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ