Advertisement

Tag: book

ಮೀನಿನ ರುಚಿ ಹಿಡಿದು ಅಲೆದಾಡಿದವರು

ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್‌ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಆದರೆ ಇದನ್ನು ಪ್ರವಾಸ ಕಥನವೆನ್ನಲು ಸಾಧ್ಯವೇ ಅಥವಾ ಬೇರೆ ಏನಾದರೂ ಹೆಸರು ಕೊಡಬೇಕೆ ಅನ್ನುವುದು ನನಗೆ ತಿಳಿದಿಲ್ಲ. ಯಾಕೆಂದರೆ ಮೀನಿನ ಖಾದ್ಯಗಳ ಸವಿಯುವ ನೆಪದಲ್ಲಿ ಭಾರತದ ಪ್ರತಿ ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ಭೇಟಿಕೊಟ್ಟು, ಆಯಾ ರಾಜ್ಯಗಳಲ್ಲಿ ಮೀನು ಅಲ್ಲಿನ ಸಂಸ್ಕೃತಿಯಲ್ಲಿ ವಹಿಸಿದ ಪಾತ್ರದ ಬಗ್ಗೆ ಲೇಖಕರು ಬಹಳ ಆಳವಾಗಿ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

Read More

ವಾಟರ್ ಸ್ಟೋನ್ಸ್ ಪುಸ್ತಕ ಮಳಿಗೆಯೆಂಬ ಜಾಗತಿಕ ಕಿಟಕಿ

ಎಲ್ಲಿಯೇ ಹೋದರೂ ಅಲ್ಲಿನ ನ್ಯೂಸ್‌ಪೇಪರ್ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ನೋಡುವುದು, ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಮತ್ತೊಂದು ಇಷ್ಟದ ಕೆಲಸ. ಈ ಬಾರಿ ಹಾಗೆ ಹೋಗಿದ್ದು ಲಂಡನ್‌ನ ಹೃದಯ ಭಾಗದಲ್ಲಿ ಪಿಕಡೆಲಿ ರಸ್ತೆಯಲ್ಲಿ ‘ವಾಟರ್‌ಸ್ಟೋನ್ಸ್’ ಎನ್ನುವ ಹೆಸರು ಹೊತ್ತು, ವರ್ಷ ಒಂದಕ್ಕೆ ಎಪ್ಪತ್ತೆರಡು ಸಾವಿರ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಸರಸ್ವತಿ ಪ್ರತಿಮೆಯಂತೆ ಕಂಗೊಳಿಸುತ್ತಿರುವ ಪುಸ್ತಕ ಸ್ವರ್ಗಕ್ಕೆ.
ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.

Read More

ಕುರಿತೋದದ ಚಿತ್ತಾರಗಿತ್ತಿಯರು ಎಳೆವ ಗೆರೆಗಳು

ಮಲೆಕರ್ನಾಟಕದ ದೀವರರ ಜನಾಂಗದ ಮಹಿಳೆಯರು ಹಸೆಚಿತ್ತಾರವನ್ನು ಗೋಡೆಯ ಮೇಲೆ, ಬುಟ್ಟಿಗಳು, ಬಾಗಿಲು, ಕಿಟಕಿ, ಇಡುಕಲು, ಮಡಕೆ ಇವುಗಳ ಮೇಲೆ ಸಸ್ಯಜನ್ಯ ಮೂಲದ ಬಣ್ಣಗಳಿಂದ ಶುಭ ಸಂದರ್ಭಗಳಲ್ಲಿ ಆಕರ್ಷಕ ರೀತಿಯಲ್ಲಿ ಚಿತ್ತಾರ ಬಿಡಿಸುತ್ತಾರೆ. ಚಿತ್ರಿಸಲು ಬೇಕಾದ ಬಣ್ಣಗಳನ್ನು ಅವರೇ ತಯಾರಿಸಿಕೊಳ್ಳುವರು. ಈ ಕಲೆಯನ್ನು ದೀವರ  ಮಹಿಳೆಯರ ಹಸೆ ಚಿತ್ತಾರವೆಂದೇ ಗುರುತಿಸಲಾಗಿದೆ
ರವಿರಾಜ್ ಸಾಗರ್ ಬರೆದ ಸಂಶೋಧನಾ ಕೃತಿ “ಕರ್ನಾಟಕ ದೇಶಿ ಚಿತ್ರಕಲೆ ಹಸೆ ಚಿತ್ತಾರ” ಕುರಿತು ಮಧು ಗಣಪತಿರಾವ್ ಮಡೆನೂರು ಬರಹ .

Read More

ಬರವಣಿಗೆ ಎಂಬ ಅಫೀಮು

ಎಲ್ಲರಿಗೂ ಸಮನಾಗಿ ಸಿಗುವ ಇಪ್ಪತ್ನಾಲ್ಕೇ ಘಂಟೆಗಳನ್ನು ಇವರೆಲ್ಲ ತಡೆದು ನಿಲ್ಲಿಸಿದರು ಹೇಗೆ? ಜೀವನಕ್ಕೆ ಬೇಕಾದ ಹಣ ಸಂಪಾದಿಸಿದರು ಹೇಗೆ? ಮನೆಯನ್ನು ತೂಗಿಸಿದರು ಹೇಗೆ? ಅರೆ ಹೊಟ್ಟೆ ಉಂಡೇ ಎಷ್ಟು ರಾತ್ರಿ ಕಳೆದರು? ಅಷ್ಟಾಗಿಯೂ ಒಂದೊಳ್ಳೆಯ ಪುಟ ಬರೆದ ಮೇಲೆ ಅವರ ತುಟಿಯ ಮೇಲೆ ಮೂಡಿದ ಮುಗುಳೆಂಥದು? ಅಪಹಾಸ್ಯಕ್ಕೊಳಗಾದರೇ? ಪ್ರೀತಿಸುವವರಿಂದ ದೂರವಾದರೇ? ಅವರು ತಮ್ಮ ಬರವಣಿಗೆಗಾಗಿ ತೆತ್ತ ಬೆಲೆಯೆಂಥದು? ಕಲೆಯಿಂದ ಸಿಗುವ ಸುಖ ಈ ಎಲ್ಲವನ್ನೂ ಮೀರಿದ್ದೇ?

Read More

ಓದುವ ಖುಷಿಗೆ ಪ್ರೇರಣೆ ನೀಡುವ ಹೊಸ ಪರಿಮಳ

ಓದುವುದನ್ನು ಇಷ್ಟಪಡುವವರಿಗೆ ಲೇಖ ಮಲ್ಲಿಕಾ ಪುಸ್ತಕ ಇಷ್ಟವಾಗಬಹುದು. ತಮ್ಮ ದೀರ್ಘವಾದ ಓದಿನ ಅನುಭವ ಸಾರವನ್ನು ಭಟ್ಟಿಇಳಿಸಿ, ಲೇಖಕಿ ಸುಮಾ ವೀಣಾ ಅವರು ಈ ಕೃತಿಯನ್ನು ರಚಿಸಿದ್ದಾರೆ. ಸಾಹಿತ್ಯ ಲೋಕದ ಕೈಪಿಡಿಯಂತಿರುವ ಪುಸ್ತಕದಲ್ಲಿ, ಉಲ್ಲೇಖವಾಗಿರುವ ಪುಸ್ತಕಗಳೂ ಮಹತ್ವದ್ದಾಗಿವೆ. ತಮ್ಮ ಅಧ್ಯಯನಶೀಲತೆ, ಸಂಶೋಧನೆ, ಸಾಹಿತ್ಯಾಸಕ್ತಿ, ತೌಲನಿಕ ಮೀಮಾಂಸೆಯನ್ನೊಳಗೊಂಡಂತೆ ಅವರು ರೂಪಿಸಿದ ಈ ಪುಸ್ತಕವು ಸಂಗ್ರಾಹ್ಯವಾದುದು. ಲೇಖ ಮಲ್ಲಿಕಾ ಸಾಹಿತ್ಯ ಕೃತಿಯ ಕುರಿತ ವಿಶ್ಲೇಷಣಾ ಬರಹವೊಂದನ್ನು ಬರೆದಿದ್ದಾರೆ ಡಿ.ಯಶೋದಾ. 

Read More
  • 1
  • 2

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ