Advertisement

Tag: cricket

ಮಹಿಳಾ ಕ್ರಿಕೆಟ್ ಲೋಕದ‌ ತಾರೆಯರು….

ಅವರ ಕ್ರಿಕೆಟ್ ಜೀವನದಲ್ಲಿ ಕೋಚ್ ಆಗಿದ್ದ ರಮೇಶ್ ಪವಾರ್ ಅವರ ಜೊತೆ ಹೊಂದಾಣಿಕೆ ಇಲ್ಲದೆ ಕೆಲವು ಘರ್ಷಣೆಗಳಾದವು. ಬಿಸಿಸಿಐ ತನಕ ದೂರುಗಳು ಹೋದವು. ಅವರ ಮತ್ತು ಈಗಿನ ಕಪ್ತಾನ್‌ರ ಹರ್ಮನ್‌ಪ್ರೀತ್ ಕೌರ್ ಮಧ್ಯೆಯೂ ಅಷ್ಟು ಹೊಂದಾಣಿಕೆ ಇರಲಿಲ್ಲ. ಆದರೂ ವೃತ್ತಿಪರ ಸಂಬಂಧವನ್ನು ಬದಿಗಿಟ್ಟು ತಂಡದ ಹಿತಕ್ಕಾಗಿ ಜೊತೆಗೆ ಚೆನ್ನಾಗಿ ಆಡುತ್ತಿದ್ದಾರೆ. ಇದು ಬಹಳ ಮುಖ್ಯ. ವೈಯುಕ್ತಿಕವಾಗಿ ಏನೇ ಒಡಕು ತೊಡಕುಗಳಿರಲಿ ಅದನ್ನು ಬದಿಗಿಟ್ಟು ತಂಡದ ಏಳಿಗೆಗಾಗಿ ಶ್ರಮಿಸುವವರ ಕೊಡುಗೆ ಬಹಳ ಮಹತ್ತರವಾದದ್ದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

Read More

10 ಫಾರ್ 74 ಮತ್ತು ‘ಮೈಸೂರ್ ಎಕ್ಸ್‌ಪ್ರೆಸ್‌’

ಆದರೆ ಆ ಮ್ಯಾಚಿನಲ್ಲಿ ವೆಸ್ಟ್ ಇಂಡೀಸ್‌ನ ಬೋಲರ್ ಮೆರ್ವಿನ್ ಡಿಲ್ಲನ್‌ರ ಒಂದು ಬೌನ್ಸರ್ ಎಷ್ಟು ರಭಸದಿಂದ ಬಂತೆಂದರೆ ಕುಂಬ್ಳೆಯ ದವಡೆಗೆ ತಾಕಿ, ದವಡೆ ಮುರಿದುಹೋಯಿತು. ಕುಂಬ್ಳೆ ಆಸ್ಪತ್ರೆಗೆ ಹೋಗಿ ಶಸ್ತ್ರಚಿಕಿತ್ಸೆಗೆ ತಯಾರಾಗಿ ಯಾವಾಗ ಅದು ನಡೆಯುತ್ತೋ ಎಂದು ಎಲ್ಲರೂ ಕಾಳಜಿಯಿಂದ ಇದ್ದಾಗ, ವೆಸ್ಟ್ ಇಂಡೀಸ್ ಆಡುವಾಗ ಕುಂಬ್ಳೆ ಬ್ಯಾಂಡೇಜ್ ಹಾಕಿಕೊಂಡು ಮೈದಾನಕ್ಕೆ ಇಳಿದರು!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಅನಿಲ್‌ ಕುಂಬ್ಳೆ ಹಾಗೂ ಜಾವಗಲ್‌ ಶ್ರೀನಾಥ್‌ ಆಟದ ಕುರಿತ ಬರಹ ನಿಮ್ಮ ಓದಿಗೆ

Read More

ದ್ರಾವಿಡ್ ಮತ್ತು ಗಂಗೂಲಿ: ಒಂದು ಅಪೂರ್ವ ಜೋಡಿ

ಅವರ ಕ್ರಿಕೆಟ್ಟನ್ನು ಸದಾಕಾಲ ಸ್ಮರಿಸಲು ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ‘ದ ವಾಲ್‌ʼಗೆ ಒಂದು ಗೋಡೆ ಮೀಸಲಿಟ್ಟು ಅವರ ಚಿತ್ರವನ್ನು ಮಾಡಿಸಿದ್ದಾರೆ. ಇದು ಒಂದು ರೀತಿ ಜನಗಳು, ಕ್ರೀಡಾಭಿಮಾನಿಗಳು, ಮುಂದಿನ ಪೀಳಿಗೆಯವರು ರಾಹುಲ್ ದ್ರಾವಿಡ್‌ರ ಆಟವನ್ನು ಇಲ್ಲಿ ಬಂದು ನೋಡಿ ಅವರ ಆಟವನ್ನು ಸ್ಮರಿಸುವುದಕ್ಕೆ ಅವಕಾಶ. ಅದರ ಮೇಲೆ ಕನ್ಸಿಸ್ಟೆನ್ಸಿ, ಕಮಿಟ್ಮೆಂಟ್, ಕ್ಲಾಸ್ ಎಂದು ಬರೆಸಿದ್ದಾರೆ. ಅರ್ಥಾತ್‌ ಸ್ಥಿರತೆ, ಭದ್ಧತೆ ಮತ್ತು ಆಡುವ ಶಿಸ್ತು ಅನ್ನುವ ಅರ್ಥ ಕೊಡುತ್ತೆ. ಇದೆಲ್ಲವೂ ಅವರ ಆಟಗಾರಿಕೆಯಲ್ಲಿ ನೋಡಬಹುದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

Read More

ಕಪಿಲ್ ದೇವ್ ಮತ್ತು ಧೋಣಿ ಎಂಬ ಅಮೂಲ್ಯ ರತ್ನಗಳು

ಧೋಣಿ ಗೆದ್ದ ಕಪ್ಪನ್ನು ಚಿಕ್ಕವರಾದ ಜೊಗಿಂದರ್ ಮತ್ತು ಶ್ರೀಶಾಂತರಿಗೆ ಕೊಟ್ಟು ಕೊನೆಯಲ್ಲಿ ಹೋಗಿ ನಿಂತರು. ಅಂದಿನಿಂದ ಅದೇ ಅವರು ತಂದ ಹೊಸ ಪದ್ಧತಿ. ಅವರು ಕಪ್ಪನ್ನು, ಟ್ರೋಫಿಯನ್ನು ತಂಡದ ಹೊಚ್ಚ ಹೊಸಬರಿಗೆ ಕೊಟ್ಟು ಕೊನೆಯಲ್ಲಿ ಮಿಕ್ಕವರ ಜೊತೆ ನಿಲ್ಲುತ್ತಿದ್ದರು. ಗೆದ್ದಾಗಲೂ ಗದ್ದಲ ಮಾಡದೆ, ಸೋತಾಗಲೂ ಬಹಳ ಕುಗ್ಗದೆ, ಮುಂದೆ ಏನು ಮಾಡಬೇಕೂಂತ ಯೋಚಿಸುತ್ತಿದ್ದರು. ಒಬ್ಬ ಸ್ಥಿತಪ್ರಜ್ಞ ಹೇಗಿರುತ್ತಾನೆ, ಹೇಗೆ ವರ್ತಿಸುತ್ತಾನೆ ಎಂಬ ದರ್ಶನ ಪ್ರೇಕ್ಷಕರಿಗೆ ಮತ್ತು ಟಿವಿಯಲ್ಲಿ ನೋಡುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಅವರನ್ನು ನೋಡಿದಾಗ ಸಿಗುತ್ತಿತ್ತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ನಿಮ್ಮ ಓದಿಗೆ

Read More

ಭಾರತದ ಕ್ರಿಕೆಟ್‌ನ ಸ್ಪಿನ್ನರ್ಸಗಳು – 1

ಪ್ರಸನ್ನ ಬೋಲಿಂಗ್‌ನಲ್ಲಿ ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ ಅವರು ಬೋಲರ್‌ಗಿಂತ ಒಬ್ಬ ಬಾಲ್ ಹಿಡಿದ ಚೆಸ್ ಆಟಗಾರ ಎಂದು ಆಫ್ ಸ್ಪಿನ್ನರ್ ಮ್ಯಾಲೆಟ್ ಹೇಳುತ್ತಾರೆ. ಅವರ ಎದುರಿಗೆ ಆಡಿದ ಮಾಜಿ ಆಸ್ಟ್ರೇಲಿಯಾದ ನಾಯಕ ಇಯನ್ ಛಾಪೆಲ್ ಪ್ರಸನ್ನರನ್ನು ಪ್ರಪಂಚದ ಅತ್ಯಂತ ಸುಪ್ರಸಿದ್ಧಿ ನಂಬರ್ 1 ಬೋಲರ್ ಎಂದು ಘೋಷಿಸಿದರು. ಬಹಳ ಆಟಗಾರರು ಅವರನ್ನು ಮಾಂತ್ರಿಕ ಎಂದೂ ಕರೆದಿದ್ದಾರೆ. ಬಹಳ ಆಟಗಾರರು ಅವರನ್ನು ಮಾಂತ್ರಿಕ ಎಂದೂ ಕರೆದಿದ್ದಾರೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

Read More

ಜನಮತ

ಸಾಹಿತ್ಯ ಪ್ರಕಾರಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ