Advertisement

Tag: dadapeer

ಆಳದ ದನಿ ತುಂಬಾ ಕ್ಷೀಣವಾಗಿರುತ್ತೆ..

ಪುಣ್ಯ ಕೊನೆಯ ಬಾರಿ ಮಾತನಾಡಿದ್ದು ಇದೆ ಒಂದು ವಾರದ ಕೆಳಗೆ. ಅವನ ಶಾಲಾ ವಾರ್ಷಿಕೋತ್ಸವದಲ್ಲಿ… ಈ ರಗಳೆಗಳೆಲ್ಲ ಶುರುವಾದದ್ದು ಸುರಭಿಯಿಂದಲೇ ಎನ್ನಬೇಕು. ಆರನೇ ತರಗತಿ ಓದುತ್ತಿದ್ದ ಸುರಭಿ, ಒಂದು ದಿನ ಶಾಲೆಯಿಂದ ಬಂದದ್ದೆ ಜೋರಾಗಿ ಅಳತೊಡಗಿದಳು. ‘ಅಣ್ಣ ಹುಡುಗಿ ತರ ಆಡ್ತಾನೆ ಅಂತ ಎಲ್ಲರು ನಂಗೆ ಹೆಣ್ಣಿಗನ ತಂಗಿ ಅಂತ ಆಡ್ಕತಾರೆ…ಕಾಡಿಸ್ತಾರೆ. ನಾಳೆಯಿಂದ ಶಾಲೆಗೇ ಹೋಗಲ್ಲ!’ ಎಂದು ರಂಪ ಮಾಡತೊಡಗಿದ್ದಳು. ಅಂದಿನಿಂದಲೇ ಪ್ರತಾಪ್ ಇವನನ್ನ ಸರಿ ಮಾಡಲು ಶುರುಮಾಡಿದ್ದು… ಪುಣ್ಯನ ದನಿ ಹುಡುಗಿಯ ದನಿಯನ್ನು ಹೋಲುತ್ತಿತ್ತು. ದಾದಾಪೀರ್‌ ಜೈಮನ್‌ ಬರೆಯುವ ʻಜಂಕ್ಷನ್‌ ಪಾಯಿಂಟ್‌ʼ ಅಂಕಣದ ಹೊಸ ಬರಹ

Read More

ಜಂಕ್ಷನ್ ಪಾಯಿಂಟಿನ ಕಥೆಗಾರನಿಗೆ ಕೆಂಡಸಂಪಿಗೆಯ ಅಭಿನಂದನೆಗಳು

ಕನ್ನಡದ ತರುಣ ಕತೆಗಾರ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ತಮ್ಮನ್ನು ಕಲಾಭ್ಯಾಸಿ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರ ಮೊದಲ ಕಥಾಸಂಕಲನ ‘ನೀಲಕುರಿಂಜಿ’ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಗಳು ಪ್ರಕಟವಾದಾಗ ಎದುರಾಗುವ ಸಂಭ್ರಮಗಳು, ಜೊತೆಗೇ ಬರುವ ಟೀಕೆಗಳು ಇತ್ಯಾದಿ  ಸಾಹಿತ್ಯ ಕೃತಿಗಳು ಎದುರಿಸಬೇಕಾದ ʻಮಂಥನʼ ಎಂದು ಹೇಳುತ್ತ ಈ ಕ್ಷಣವನ್ನು ಸ್ವೀಕರಿಸಿದ್ದೇನೆ ಎನ್ನುತ್ತಾರೆ ದಾದಾಪೀರ್ . ಕೆಂಡಸಂಪಿಗೆಯಲ್ಲಿ ‘ಜಂಕ್ಷನ್ ಪಾಯಿಂಟ್’ ಅಂಕಣ ಬರೆಯುತ್ತಿರುವ ದಾದಾಪೀರ್ ಪ್ರಶಸ್ತಿ ಪಡೆದ ಸಂಭ್ರಮವನ್ನು ಸಂಕೋಚದಿಂದಲೇ ಇಲ್ಲಿ ಹಂಚಿಕೊಂಡಿದ್ದಾರೆ.

Read More

ಕಮಿಷನ್ ಕನಕನ ನಿಧಿ ಶೋಧದ ಕಥೆ

ಅಣೋ, ನನ್ ಪ್ರೀತಿಸ್ತಾ ಇರೋ ಹುಡುಗಿ ತೋರಿಸ್ತೀನಿ.’ ಎಂದು ಫೋನಿನಲ್ಲಿ ವಿ ಪ್ಯಾಟರ್ನ್ ಹಾಕಿ ಲಾಕ್ ತೆರೆದು ‘ಇವಳೇ ನೋಡಣೋ’ ಎಂದು ತೋರಿಸಿದ. ನಾನೆ ಪೂರ್ವಗ್ರಹದಿಂದ  ‘ನಿಜಕ್ಕೂ ಪ್ರೀತಿಸ್ತಾ ಇದ್ಯೇನೋ? ಅಥವಾ ಫ್ರೆಂಡ್ಸ್ ವಿಥ್ ಬೆನಿಫಿಟ್ಸ?’ ಅಂತ ಕೇಳಿದೆ. ಅದಕ್ಕವನು ತುಂಬಾ ಕ್ಲಾರಿಟಿಯಿಂದ ‘ನನಗೆ ಅವಳಿಷ್ಟ. ಅವಳಿಗೆ ನಾನಿಷ್ಟ. ಮದ್ವೆ ಯಾಕಗಬಾರದು?’ ಎಂದು ತುಂಬಾ ನಿಖರವಾಗಿ ಹೇಳಿದ. ನಾನು ನನ್ನ ಮನಸ್ಸಿನಲ್ಲಿ ‘ಎಲಾ ಚಾಲಾಕಿ!’ ಎಂದುಕೊಂಡೆ. ದಾದಾಪೀರ್‌ ಜೈಮನ್‌ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ