ಪ್ರಾಣಿ ಪ್ರಪಂಚದ ತರ್ಕ ಮೀರಿದ ಕತೆಗಳು

ನಮ್ಮ ಕೆಂಚಬೆಕ್ಕಿನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತೇನೆ. ಇವನ ಪರಿಚಯವಾದ ನಂತರ ಕೆಂಚು-ಬಿಳಿ ಮಿಶ್ರಿತ ಎಲ್ಲಾ ಬೆಕ್ಕುಗಳೂ ನನ್ನ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುವಂತಾಗಿದ್ದು ಇವನ ವಿಶಿಷ್ಟ ಗುಣದಿಂದ. ಚುರುಕಿನ, ಇಲಿ ಹಿಡಿಯುವ, ಠಣ್ಣನೆ ನೆಗೆದು ಮಡಿಲಲ್ಲಿ ಕೂರುವ ಬೆಕ್ಕೊಂದು ಈಗ ನಿಮ್ಮ ಕಣ್ಮುಂದೆ ಬಂದು ನಿಂತಿರಬೇಕಲ್ಲವೇ? ಆದರೆ ಕೆಂಚ ಹಾಗಲ್ಲವೇ ಅಲ್ಲ. ಇವನು ಬಹಳ ಸೋಮಾರಿ. ಸೋಮಾರಿ ಎನ್ನುವುದಕ್ಕಿಂತ ‘ಹೆದ್‌ರ್‌ಪುಕ್ಲ’. ಬೇಟೆಗೂ ಇವನಿಗೂ ದೊಡ್ಡ ವೈರ. ಇಲಿ, ಹೆಗ್ಗಣ, ಗುಡ್ಡೆಹೆಗ್ಗಣ, ಅಳಿಲು, ಕೋಳಿ ಎಲ್ಲ ಬಿಡಿ ಒಂದು ಜಿರಳೆಯನ್ನೂ ಹಿಡಿಯಲಾರ! ಪ್ರಾಣಿಪ್ರಪಂಚದ ಲವಲವಿಕೆಯ ಕತೆಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ. 

Read More