Advertisement

Tag: Geetha Vasanth

ಪ್ರೊ. ಷ. ಶೆಟ್ಟರ್ ಜೊತೆ ಡಾ. ಗೀತಾ ವಸಂತ ನಡೆಸಿದ್ದ ಮಾತುಕತೆ

“ವ್ಯಾಕರಣ, ಛಂದಸ್ಸುಗಳನ್ನು ಬಾಲ್ಯದಲ್ಲಿ ಉರು ಹೊಡೆಸುತ್ತಿದ್ದರು. ಆಗ ಅದು ತಲೆಗೆ ಹತ್ತಲೇ ಇಲ್ಲ. ಕಂಠಪಾಠವು ಸಂಸ್ಕೃತದ ಕಲಿಕಾವಿಧಾನ. ಆದರೆ, ವ್ಯಾಕರಣ, ಛಂದಸ್ಸುಗಳು ಭಾಷೆಯ ಸಮಗ್ರ ತಿಳುವಳಿಕೆಗೆ ಅಗತ್ಯ. ಆ ಗ್ರಂಥಗಳನ್ನೂ ರಸಾಸ್ಪಾದಕ್ಕಾಗಿ, ರಸಾಸ್ಪಾದದ ಮೂಲಕ ಓದಲು ಸಾಧ್ಯ. ವ್ಯಾಕರಣ ಗ್ರಂಥಗಳ ಲೇಖಕರೂ ತುಂಟರು. ಸಾಕಷ್ಟು ರಸಿಕರು! ಉದಾಹರಣೆಗಳನ್ನು ಕೊಡುವಾಗ ರಸಾಸ್ವಾದದ ಸ್ಥಳಗಳನ್ನು ನಿರ್ಮಿಸುವಲ್ಲಿ ಅವರು ನಿಪುಣರು. ಇಂಥ ಸೂಕ್ಷ್ಮಗಳನ್ನು ಬೋಧಕರು ಗಮನಿಸಬೇಕು. ಕಾವ್ಯವನ್ನು ಸಹ ರಸಾಸ್ಪಾದದ ಮೂಲಕವೇ ತಲುಪಿಸುವುದು ಜಾಣತನ.”

Read More

ಕಥನಗಾರಿಕೆಯ ಬೈನಾಕ್ಯುಲರ್ ನಲ್ಲಿ ಕಂಡ ಗತ ಮತ್ತು ವರ್ತಮಾನಗಳು:ವಿಕ್ರಮ್ ಕಥೆಗಳ ಕುರಿತು ಗೀತಾ ವಸಂತ

ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ.

Read More

ಹೆಣ್ತನದ ದೇಸಿ ನೆಲೆಗಳಲ್ಲಿ ಸಂಚರಿಸಿರುವ ಕಾವ್ಯದ ತಾಜಾ ಕಸುವು

“ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ.”

Read More

ವೈದೇಹಿಯವರ ಕಾಲುದಾರಿಯ ಕಥನಗಳು ಮತ್ತು ಕಾಡುವ ಕಥಾಪಾತ್ರಗಳು

ಹದಿಹರೆಯದ ದಿನಗಳಲ್ಲಿ ಓದಿನ ಕಿಚ್ಚುಹಚ್ಚಿದವರು ವೈದೇಹಿ.ಹಾಗೆ ಅವರು ಒಂದಷ್ಟು ಪಾತ್ರಗಳನ್ನು ಎದೆಯಲ್ಲಿ ಊರಿಬಿಟ್ಟರು. ಅವುಗಳ ಒಡಲ ಉರಿ ಒಳಗೊಳಗೇ ಸದಾ ಉರಿಯುತ್ತ ಪ್ರಖರ ಸಂವೇದನೆಯೊಂದನ್ನು ರೂಪಿಸಿದ್ದು ಸುಳ್ಳಲ್ಲ ಆ ಪಾತ್ರಗಳಾದರೂ ಎಂಥವು? ಅಕ್ಕು, ಅಮ್ಮಚ್ಚಿ, ಸಿರಿ, ಸೌಗಂಧಿ, ಕಮಲಾವತಿ, ಸುಬ್ಬಕ್ಕ ಇಂಥವೇ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ