Advertisement

Tag: Gurudath Amruthapura

ಮೊದ್ಲು ಕಾರ್‌ ಓಡ್ಸಿದ್ದು ಯಾರ್‌ ಗೊತ್ತಾ?!: ಗುರುದತ್ ಅಮೃತಾಪುರ ಸರಣಿ

ಕಾರ್ಲ್ ಬೆಂಜ್ ತನ್ನ ಪರಿಶ್ರಮದಿಂದ ನಿರ್ಮಿಸಿದ ಚಲಿಸುವ ವಾಹನದ ಬಗ್ಗೆ ಅವನಿಗೆ ಅನುಮಾನವಿತ್ತು. ಜೊತೆಗೆ ಸ್ಪಾರ್ಕ್ ಪ್ಲಗ್, ಬ್ಯಾಟರಿ ತಂತ್ರಜ್ಞಾನ ಇನ್ನೂ ಇರದ ಕಾರಣ, ನಿಂತಲ್ಲೇ ಕಾರನ್ನು ಪ್ರಾರಂಭಿಸಲು ಸಾಧ್ಯವಿರಲಿಲ್ಲ. ಈ ಕಾರಿಗೆ ಸ್ಟಿಯರಿಂಗ್ ಕೂಡ ಇಲ್ಲ. ದಿಕ್ಕು ಬದಲಾಯಿಸಲು ಸೈಕಲ್ ಗಾಲಿಗೆ ಕೊಡುವ ರೀತಿಯ ಒಂದು ಹತೋಟಿ ಮಾತ್ರ ಇದೆ.
“ದೂರದ ಹಸಿರು” ಸರಣಿಯಲ್ಲಿ ಜೆರ್ಮನಿಯ ಕಾರು ಸಂಗ್ರಹಾಲಯದ ಕುರಿತು ಗುರುದತ್ ಅಮೃತಾಪುರ ಬರಹ

Read More

ಗುಮ್ಮನಿಂದಲೂ ಚಾಕೋಲೇಟ್‌ ಕೊಡಿಸುವ “ಕಾರ್ನಿವಲ್” ಹಬ್ಬ…

ಅಕ್ಟೋಬರ್‌ನಿಂದ ಖಿನ್ನಗೊಂಡ ಮನಸ್ಸುಗಳು ಮತ್ತೆ ಸೂರ್ಯನ ಬೆಳಕು ಹೆಚ್ಚಾಗುವುದನ್ನು ಕಾದು ಕುಳಿತಿರುತ್ತವೆ. ಚಳಿಗಾಲದ ಸಂಕ್ರಮಣ ಬದುಕಿನ ಹುರುಪನ್ನು ಹಿಂದಿರುಗಿ ಕೊಡುತ್ತದೆ. ಬಹಳ ಹಿಂದಿನ ದಿನಗಳಲ್ಲಿ ನಂಬಿಕೆಗಳು ಹುಟ್ಟುವ ಕಾಲಘಟ್ಟದಲ್ಲಿ, ಫೆಬ್ರವರಿ ಸಮಯದ ದಿನಗಳನ್ನು ವಿಶೇಷವಾಗಿ ನೋಡಲಾಗುತ್ತಿತ್ತು. ಕತ್ತಲು ಎಂಬ ದುಷ್ಟ ಶಕ್ತಿಯನ್ನು ತೊಲಗಿಸಿ, ಬೆಳಕು ಎಂಬ ಭರವಸೆಯನ್ನು ಮರುಸ್ಥಾಪಿಸಲು ಜನರು ಒಂದು ಹಬ್ಬವನ್ನು ಹುಟ್ಟು ಹಾಕಿದರು.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ಸಿಸಿಲಿಯ ಹಾಳು ಹಂಪೆ ಈ ಸಿರಕುಸಾ

ಇಲ್ಲೊಂದು ಕ್ಯಾಥೆಡ್ರೆಲ್ ಇದೆ. ಇದರ ಮೂಲ ಗ್ರೀಕ್ ದೇವಾಲಯ. ಕ್ರಿ.ಪೂ. ಐದನೇ ಶತಮಾದಲ್ಲಿ ಕಟ್ಟಿದ ಈ ದೇವಾಲಯದ ಕಂಬಗಳು ಈಗಲೂ ಹಾಗೆಯೇ ಇವೆ. ರೋಮನ್ ಆಳ್ವಿಕೆಯಲ್ಲಿ ರೋಮನ್ ದೇವಾಲಯವಾಗಿತ್ತು. ನಂತರ ಕ್ರೈಸ್ತ ಧರ್ಮ ಬಂದ ನಂತರ ಇದನ್ನು ಚರ್ಚ್ ಆಗಿ ಮಾರ್ಪಾಡು ಮಾಡಲಾಯಿತು. ಆಮೇಲೆ ಅರಬ್ಬರ ಆಳ್ವಿಕೆಯಲ್ಲಿ ಮಸೀದಿ ಮಾಡಲಾಯಿತು. ನಂತರ ಮತ್ತೆ ಇಟಾಲಿಯನ್ ಆಳ್ವಿಕೆ ಬಂದ ನಂತರ ಇದನ್ನು ಪುನಃ ಚರ್ಚ್ ಮಾಡಲಾಯಿತು. ನನಗೆ ತಿಳಿದ ಮಟ್ಟಿಗೆ ಗ್ರೀಕ್ ದೇವಾಲಯದಿಂದ ಹಿಡಿದು ರೋಮನ್ ದೇವಾಲಯವಾಗಿ, ನಂತರ ಚರ್ಚ್ ಆಗಿ, ತದನಂತರ ಮಸೀದಿಯಾಗಿ ಮತ್ತೆ ಚರ್ಚ್ ಆದ ಇತಿಹಾಸವಿರುವ ಸ್ಥಳ ಇದೊಂದೇ! ದೂರದ ಹಸಿರು ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ಲ್ಯಾಪ್ಲ್ಯಾಂಡ್: ಒಂದು ಕನಸಿನ ಪಯಣ

ನೋಡನೋಡುತ್ತಿದ್ದಂತೆ ಲ್ಯಾಪ್ಲಾಂಡ್ ಪ್ರವಾಸದ ದಿನ ಬಂದೆ ಬಿಟ್ಟಿತು. ಮ್ಯುನಿಕ್‌ನಿಂದ ಹೆಲ್ಸಿಂಕಿಗೆ ವಿಮಾನ. ಫಿನ್ಲ್ಯಾಂಡ್ ರಾಜಧಾನಿಯಾದ ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ತೀರದ ಒಂದು ನಗರ. ಹೆಲ್ಸಿಂಕಿ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಾಲ್ಟಿಕ್ ಸಮುದ್ರವೂ ಹೆಪ್ಪುಗಟ್ಟಿದ ದೃಶ್ಯಗಳು ವಿಮಾನದೊಳಗೆ ಕೂತಿದ್ದ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತು! ದೊಡ್ಡ ಹಡಗೊಂದು ಹೆಪ್ಪುಗಟ್ಟಿರುವ ಹಿಮವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್‌ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್‌ ಅಮೃತಾಪುರ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ