ನಿಶೆಯ ಹೆಬ್ಬಾವಿನ ಬಾಯಲ್ಲಿ ಮಲಗಿದ್ದೆ

“ನನ್ನ ಸ್ವಕಾರಣದಿಂದ ಪಿಎಚ್.ಡಿ ಸಂಶೋಧನೆಗೂ, ಅತಿಥಿ ಉಪನ್ಯಾಸಕ ವೃತ್ತಿಗೂ ರಾಜಿನಾಮೆ ನೀಡುತ್ತಿರುವೆ’ ಎಂದು ಒಂದು ಸಾಲಿನ ರಾಜಿನಾಮೆ ಬರೆದು ಲಕೋಟೆಯಲ್ಲಿಟ್ಟು ಯಾರ್ಯಾರಿಗೆ ಕೊಡಬೇಕೊ ಅವರಿಗೆಲ್ಲ ಕೊಟ್ಟು ಹಾಸ್ಟಲಿಗೆ ಬಂದೆ. ಆ ಕ್ಷಣವೇ ಕ್ಯಾಂಪಸ್ಸನ್ನು ತೊರೆದೆ. ಯಾರಿಗೂ ಹೇಳಲಿಲ್ಲ. ಇಷ್ಟು ಕಾಲ ಪೊರೆದ ಕ್ಯಾಂಪಸ್ಸೇ ನಿನ್ನನ್ನು ಬಿಟ್ಟು ಹೋಗುತ್ತಿರುವೆ. ನಿನ್ನ ಈ ನೆಲದ ಸಾರವನೆಲ್ಲ ತಾಯ ಎದೆ ಹಾಲ ಕುಡಿದಂತೆ ಹೀರಿ ಅರಗಿಸಿಕೊಂಡಿರುವೆ. ಹೋಗುವೆ ನನ್ನ ಮುದ್ದಿನ ನವಿಲುದಾರಿಗಳೇ ಎಂದು ಕತ್ತಲಲ್ಲಿ ಬಂದಿದ್ದೆ”
ʻನನ್ನ ಅನಂತ ಅಸ್ಪೃಶ್ಯ ಆಕಾಶʼ ಮೊಗಳ್ಳಿ ಗಣೇಶ್‌  ಆತ್ಮಕತೆಯ  ಮೂವತ್ತೇಳನೆಯ ಕಂತು. 

Read More