Advertisement

Tag: Kannada poem

ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

“ಅಮ್ಮನ ಹೊಟ್ಟೆಯಲ್ಲಿ
ಒಂಬತ್ತು ತಿಂಗಳು
ಬೆಚ್ಚಗೆ ಬೆಳೆದ
ಮಿದು ಮಿದು
ತನ್ನದೇ
ಹುಟ್ಟು ಬೆತ್ತಲೆ ದೇಹ
ಹೇಗಿದೆ ಈಗ…
ಬೆಳಕಿನಲ್ಲಿ ನೋಡಿಕೊಳ್ಳಲೂ;
ಅಸಡ್ಡೆಯಾಗಿ ರೂಪಾಂತರ ಹೊಂದಿರುವ
ಹಳೆಯ ಭಯ ಹಿಂಜರಿಕೆ ನಾಚಿಕೆ!”- ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

Read More

ಮಹಾಂತೇಶ ಪಾಟೀಲ ಬರೆದ ಈ ದಿನದ ಕವಿತೆ

“ಗಾಳಿಧೂಳು ಹೊಗೆಯನುಂಡು
ಕೈ ತೊಳೆಯುವುದು ಕಣ್ಣೀರಲಿ;
ಚಿಂದಿ ಆಯುವ ಬೆರಳುಗಳಿಗೆ ಜೋತುಬಿದ್ದ
ಗಗನಮನೆ ಮಂದಿಯ ಕಸದ ತೊಟ್ಟಿಲು;
ಅಕ್ರಮ ಸಂತಾನಕ್ಕೆ
ಸೊಳ್ಳೆಗಳ ಲಾಲಿಹಾಡು !” ಮಹಾಂತೇಶ ಪಾಟೀಲ ಬರೆದ ಈ ದಿನದ ಕವಿತೆ

Read More

ಶಶಿ ತರೀಕೆರೆ ಕವಿತೆ: ವೈಲ್ಡ್‌ ಅಂಡ್‌ ವಿಯರ್ಡ್

ತುಟಿ ಕಿತ್ತು ಬರುವಂತೆ
ನೀನು ನನಗೆ ಮುತ್ತು ಕೊಟ್ಟೆ
ನಾನು ಪ್ರತಿ ಸಂಜೆ
ಕಂಠಮಟ್ಟ ಕುಡಿದು ಮಲಗಿದೆ
ಹೇಳಬೇಕೆಂದರೆ ನಾವಿಬ್ಬರೂ
ಸ್ವಲ್ಪ ನಿದ್ದೆಯಲ್ಲಿಯೇ ಹೆಚ್ಚು ಉಸಿರಾಡಿದೆವು
ಒಂದೇ ಚಾದರದಲ್ಲಿ ಜ್ವರದ ಕಾವು
ಅನುಭವಿಸಿ ಗಳಗಳನೆ ಅತ್ತೆವು

Read More

ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

““ಪ್ರೇಮಕ್ಕೂ ಕಾಲ ಮಿತಿಯೇ” ಕೇಳಿದಂತೆ
ಭಾಸವಾಗಿ ಬೇಲಿಯೊಳಗಿನ ಬಿಂಬ
ತಣ್ಣಗೆ ಚಲಿಸುತ್ತದೆ
ಮತ್ತೆ ನೀನರಿಯದ ನಿನ್ನ ನೋಟಗಳಲ್ಲಿ
ಭಾವದಲೆಗಳ ತೇಲಿಬಿಡುತ್ತೇನೆ..”- ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

Read More

ಮೇಘನಾ ಸುಧೀಂದ್ರ ಬರೆದ ಹೊಸ ಕವಿತೆ

ಅಲ್ಲೆಲ್ಲೋ ಚೆಂದದ ಹುಡುಗ ಕಂಡರೆ ನಾಚಿಕೆಯಾಗಬೇಕೆಂದು
ಪರಿತಪಿಸುವ ಮನಸ್ಸಿಗೆ ಅವಳ ವಯಸ್ಸಿನ ಪದೇ ಪದೇ ನೆನಪು
ನಾಗರಹಾವಿನ ವಿಷ್ಣುವರ್ಧನನೂ ಅವಳ ಕೆನ್ನಯನ್ನ
ಕೆಂಪು ಮಾಡಲಿಲ್ಲ!…. ಮೇಘನಾ ಸುಧೀಂದ್ರ ಬರೆದ ಹೊಸ ಕವಿತೆ

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ