Advertisement

Tag: Kannada Theatre

ಮಳೆ ನಕ್ಷತ್ರಗಳ ಲೆಕ್ಕಾಚಾರದ ನಡುವೆ

ಹಳ್ಳಿಗರು ನಮಗಿಂತ ಬೆಸ್ಟ್. ಅವರಲ್ಲೂ ನಾಟಕ ಮಾಡುವ ಉಮೇದು ಇದೆ. ಹಾಗೆ ನೋಡಿದರೆ ನಮಗಿಂತ ಹೆಚ್ಚು ಇದೆ. ಆದರೆ ಅವರಿಗೆ ನಾಟಕ ಎನ್ನುವುದು ತಮ್ಮ ಬಿಡುವಿನ ದಿನಗಳ ಒಂದು ದಿವ್ಯ ಬಾಬ್ತು. ಮಳೆಗಾಲ ಆರಂಭವಾಗಿ ಬೇಸಾಯ ಆರಂಭಿಸಿ ಉತ್ತುಬಿತ್ತು ಫಸಲು ಕೈಗೆ ಬರುತ್ತದೆ ಅನಿಸಿದಾಗ ಅವರು ನಾಟಕದ ಪ್ರಾಕ್ಟೀಸ್ ಮಾಡಿ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

Read More

ನಾಟಕವೆಂದರೆ ಶೃತಿಗೆ ಅಣಿಗೊಳಿಸಿದ ವೀಣೆಯಂತೆ

ರಂಗದ ಕಾಯಕ ಅಂದರೆ ಮೊದಲು ನಮ್ಮ ಮನೋಧರ್ಮ ಗುರುತಿಸಿಕೊಂಡು ನಾಟಕ ಕಟ್ಟಿ ಅದು ಪ್ರೇಕ್ಷಕರ ಕಣ್ಣುಗಳ ಫ್ರೇಮಿನಲ್ಲಿ ಸರಿಯಾಗಿ ಫಿಟ್ಟಾಗುತ್ತದೆಯೇ ಎಂದು ಅಂದಾಜು ಮಾಡಿಕೊಳ್ಳಬೇಕು. ನಂತರ ಜನರಿಗೆ ಕಾಯಬೇಕು. ಪಾರ್ಕಿಂಗ್ ಕಡೆ ಕಣ್ಣು ಹಾಯಿಸುತ್ತಿರಬೇಕು. ಇಷ್ಟಾದ ಮೇಲೆ ಭರ್ಜಿಯ ಮೊನೆಗಳಿಗೆ ಮೈ ಒಡ್ಡಿ ನಿಲ್ಲಬೇಕು ಮತ್ತು ನೋವಿನಲ್ಲೂ ನಗಬೇಕು. ನಗಲು ಸಾಧ್ಯವಾಗದಿದ್ದರೆ ಮನಸ್ಸಿನ ಹದ ಕೆಡುತ್ತದೆ. ಮನಸ್ಸು ಕೆಟ್ಟರೆ ಬದುಕಿನ ನೋಟಕ್ರಮದ ಜಾಡು ತಪ್ಪುತ್ತದೆ. ಒಟ್ಟು ಚಿತ್ರವೇ ಕಲಕಿಹೋಗುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಮತ್ತೆ…

Read More

ನಾಟಕದ ನ್ಯೂನತೆಗಳೂ, ಬಂಡೇಳುವ ಜೀವಿಗಳೂ..

ಬೀಚಿ ಅವರ ವಿಡಂಬನೆಗಳಲ್ಲಿ ಬದುಕಿನ ಅಪಸವ್ಯಗಳ ಬಗೆಗೆ ಗಾಢ ವಿಷಾದ ಇರುತ್ತದೆ. ಅದನ್ನ ನಗೆಯಲ್ಲಿ ದಾಟಿಸಬೇಕಾದ ಅನಿವಾರ್ಯವನ್ನ ಅವರು ಸೃಷ್ಟಿಸಿಕೊಂಡಿದ್ದಾರೆ. ವಿಷಾದವನ್ನು ಅದರ ರೂಟ್ ಲೆವೆಲ್‌ನಲ್ಲಿ ಅರ್ಥೈಸಿಕೊಂಡವ ಮಾತ್ರ ಅವರ ವಿಡಂಬನೆಗೆ ನಗಬಲ್ಲ. ಬೀಚಿ ಅವರು ಬರೆದ ವಿಡಂಬನೆಗಳು ಅರ್ಥವಾಗಬೇಕು ಅಂದರೆ ಅವರ ಸಾಹಿತ್ಯವನ್ನು ಓದ್ತಾ ಇರುವವರ ಸುತ್ತ ಇರುವ…

Read More

ಪ್ರೇಕ್ಷಕರ ಜೊತೆಗಿನ ಸಂಬಂಧಗಳ ಮಹತ್ವ ಅರಿಯೋಣ

ಒಂದು ಬದಲಾವಣೆ ರಂಗಭೂಮಿಯಲ್ಲಿ ಬರಬೇಕು ಎಂದು ಆಗ್ರಹಿಸುವಾಗ ನಾವು ಆಯ್ಕೆ ಮಾಡಿಕೊಳ್ಳುವ ನಾಟಕಗಳ ಕಥಾವಸ್ತು ಯಾವುದು ಮತ್ತು ಅದು ಹೇಗಿರಬೇಕು ಅನ್ನೋದು ಮುಖ್ಯ ಆಗುತ್ತದೆ. ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ನಾವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇವೋ, ಅದು ಪ್ರೇಕ್ಷಕರಿಗೆ ಅರ್ಥ ಆಗಬೇಕಾಗಿದೆ. ಸಾಮಾನ್ಯವಾಗಿ ನಾವು ಮಾಡುವ ಎಲ್ಲಾ ನಾಟಕಗಳು ಪ್ರೇಕ್ಷಕರಿಗೆ ಅರ್ಥ ಆಗುವುದಿಲ್ಲ.
’ರಂಗಭೂಮಿಯಲ್ಲಿ ಮರುಚಿಂತನೆ’ ಕುರಿತು ಗೌರಿ ಅದಮ್ಯ ಬರೆದ ಅನಿಸಿಕೆ ಇಲ್ಲಿದೆ:

Read More

ಗುಬ್ಬಿ ಕಂಪನಿ ‘ಕುರುಕ್ಷೇತ್ರ’ ನಾಟಕ ಮತ್ತು ಸಾವಧಾನ ಕ್ರಿಯೆ…

“ಜೀವನದಲ್ಲಿ ತಿರುವುಗಳು ಯಾರಿಗೆ ಯಾವಾಗ ಹೇಗೆ ಬರುತ್ತವೆ ಎಂದು ಮೊದಲೇ ನಿಶ್ಚಯಿಸಿ ಹೇಳುವುದು ಹೇಗೆ..? ಆದವಾನಿ ಹತ್ತಿರ ಒಳಗುಂದ ಅಂತ ಒಂದು ಹಳ್ಳಿ. ಅಲ್ಲಿ ಚಂದಣ್ಣನವರ ನಾಟಕಗಳು ನಡೆಯುತ್ತಿದ್ದವು. ಸದಾರಮೆ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಳ್ಳನ ಆರೋಗ್ಯ ಬಿಗಡಾಯಿಸಿತು. ಆಗ ವೀರಣ್ಣನವರಿಗೆ ಕಳ್ಳನ ಪಾತ್ರ ನಿರ್ವಹಣೆಗೆ…”

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ