Advertisement

Tag: kendasampige

ಅಮೃತವಾಹಿನಿಯೊಂದು ಹರಿಯುತಿದೆ: ಸುಧಾ ಆಡುಕಳ ಅಂಕಣ

ಅಮ್ಮನ ಮಾತು ಕೇಳಿ ಭಾವುಕಳಾದ ಅವಳು, “ಕಷ್ಟ ಬಂದಾಗಲೇ ನಮ್ಮೋರು, ತಮ್ಮೋರು ಯಾರಂತ ಗೊತ್ತಾಗೂದು ಅಮ್ಮಾ. ತನ್ನ ದಣಿ ಮಾತು ಅಂದ್ರೆ ಶಾಸ್ನ ಅಂತ ಹೇಳ್ತಾನೇ ಇವ್ರು ಜೈಲಿಗೋದ್ರು. ದಣಿ ಈಗ ಗುರುತೇ ಇಲ್ಲದೋರ ಹಾಗೆ ಕಾರಲ್ಲಿ ಬರ‍್ರ ಹೋಯ್ತರೆ. ಬದುಕೇ ಮುಗದೋಯ್ತು ಅಂದ್ಕಂಡು ಹೊಳೆದಾಟಿ ಬಂದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಏಳನೆಯ ಕಂತು ನಿಮ್ಮ ಓದಿಗೆ

Read More

ರಾಜಕ್ಕಳ ನಿರ್ಧಾರ…!: ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ

“ಮಗಳಿಗೆ ನೌಕರಿ ಸಿಕ್ಕರೆ ಗುಂಡಪ್ಪನ ಬಡತನ ದೂರಾಗ್ತದೆ. ನಾವಂತೂ ಇಡೀ ಜೀವನ ಬಡತನದಾಗೇ ಕಳೆದವಿ. ಮೊದಲು ಹ್ಯಾಂಗ ಇದ್ದೇವೋ ಈಗಲೂ ಹಂಗೇ ಇದ್ದೀವಿ. ನಮ್ಮಿಂದ ಹೊಸ ಮನೆ ಕಟ್ಟಿಸೋದಾಗಲಿ ಹಳೆ ಮನೆ ರಿಪೇರಿ ಮಾಡಿಸೋದಾಗಲಿ ಯಾವದೂ ಆಗಲಿಲ್ಲ” ಅಂತ ಸುಭಾಷ ನೊಂದು ನುಡಿದಾಗ “ನಮ್ಮ ಮಕ್ಕಳು ಆವಾಗ ಸರಿಯಾಗಿ ಓದಲಿಲ್ಲ, ನಾವೂ ಹೆಚ್ಚಿನ ಪ್ರೋತ್ಸಾಹ ನೀಡಲಿಲ್ಲ.
ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರೇಮಶೇಖರ ಬರೆದ ಕತೆ

ಅವರು ಕಣ್ಣುಗಳನ್ನು ಅರೆಮುಚ್ಚಿಕೊಂಡಿದ್ದರು. ನಾನು ತಲೆತಗ್ಗಿಸಿದೆ. ಅವರು ನನ್ನ ಭುಜ ತಟ್ಟಿದರು. “ಮೊದಲು ನಿಮ್ಮಮ್ಮನ ಲೈಫ್ ಸೆಕ್ಯೂರ್ ಆಗಲಿ” ಅಂದರು. ಸ್ವಲ್ಪ ತಡೆದು “ನಿನ್ನನ್ನ ಮನೇಲೇ ಇರಿಸಿಕೊಳ್ಳೋದಿಕ್ಕೆ ನಿನ್ನ ಹೊಸಾ ತಂದೆಯ ಅಬ್ಜೆಕ್ಷನ್ ಏನೂ ಇಲ್ಲ ಅಂತ ತಿಳಕೋಬೇಕು ನಾವು. ಹಾಗಂತ ನಿಮ್ಮಮ್ಮನ್ನ ಕೇಳು” ಅಂದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರೇಮಶೇಖರ ಬರೆದ ಕತೆ “ಭೂಮಿ-ಹೆಣ್ಣು” ನಿಮ್ಮ ಓದಿಗೆ

Read More

ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ್ ಶಾ ಭಾರತ ಸಿನಿ ಉದ್ಯಮದಲ್ಲಿ ನಾನು ಮೆಚ್ಚುವ ನಟರಲ್ಲಿ ಒಬ್ಬರು. ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ವಿಶಿಷ್ಟತೆ ತರಬಲ್ಲ ಶಕ್ತಿ ಇರುವ ಅಪರೂಪದ ನಟ. ಆದರೆ ಈ ಸಿನಿಮಾದಲ್ಲಿ ನನ್ನ ಅನುಭವ ಅಷ್ಟು ಹಿತಕರವಾಗಿರಲಿಲ್ಲ. ಕನ್ನಡದ ಸಂಭಾಷಣೆ ನೆನಪಿಟ್ಟುಕೊಳ್ಳಲು ಅಸಾಧ್ಯವಾಗಿ ಅವರಿಗೆ ಇರುಸುಮುರುಸಾಗುತ್ತಿತ್ತು. ಅದರಿಂದ ಹುಟ್ಟಿದ ಅಸಹನೆ ಚಿತ್ರೀಕರಣದ ವೇಳೆಯಲ್ಲೂ ಪ್ರತಿಧ್ವನಿಸುತ್ತಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಮನೆ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ಜವಾಬ್ದಾರಿಗಳು ಹೊರೆಯಲ್ಲ..: ಎಸ್. ನಾಗಶ್ರೀ ಅಜಯ್ ಅಂಕಣ

“ದುಡ್ಡಿನ ಮದ ಹತ್ತಿರುವ ಮಕ್ಕಳು, ದುಡ್ಡೇ ದೊಡ್ಡಪ್ಪ ಎನ್ನುವ ಆಡಳಿತ ಮಂಡಳಿ, ನಮ್ಮ ವೈಯಕ್ತಿಕ ಬದುಕಿನ ಕಷ್ಟಗಳೇ ಹಾಸಿಹೊದ್ದುಕೊಳ್ಳುವಷ್ಟು ಇರುವಾಗ ಈ ಪೀಡೆಗಳಿಗೆ ಪುಸ್ತಕದಲ್ಲಿರೋದನ್ನ ಹೇಳಿಕೊಟ್ಟು ಬಂದರೆ ಆಯ್ತು. ಊರ ಉಸಾಬರಿ ನಮಗ್ಯಾಕೆ? ಬದುಕೋ ದಾರಿ ಹುಡುಕಬೇಕು.”
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ