Advertisement

Tag: Kodibettu Rajalakshmi

ಸುಮ್ಮನಿರುವುದು ಸಾಧ್ಯವಿಲ್ಲ ಎನ್ನುವ ಮಹಾಭಾರತ ಕತೆ

ಮನುಷ್ಯರು ಒಳ್ಳೆಯ ವಿಚಾರಗಳನ್ನೇ ಆಯ್ಕೆ ಮಾಡಿ ಅದೇ ದಾರಿಯಲ್ಲಿ ನಡೆಯಲು ಸಾಯುಜ್ಯ, ಮೋಕ್ಷ ಎಂಬ ಪರಿಕಲ್ಪನೆಗಳನ್ನು ಹಿರಿಯರು ಪ್ರತಿಪಾದಿಸಿದ್ದಾರೆ. ದೇವರು ಎಂಬ ಪರಿಕಲ್ಪನೆಯೂ ಇದೇ ಮಾದರಿಯದು ಎಂದೇ ಇಟ್ಟುಕೊಳ್ಳುವುದಾರೆ, ದೇವರನ್ನು ತಲುಪಲು ಎರಡು ದಾರಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಪ್ರಧಾನವಾಗಿ ತೋರುತ್ತದೆ. ತಪಸ್ಸು, ಅಧ್ಯಯನ ಅನುಶಾಸನದಂತಹ ವಿಧಾನಗಳು ಒಂದು ದಾರಿ. ಹಾಡು, ನೃತ್ಯ, ಚಿತ್ರ ಮುಂತಾದ ಲಲಿತಕಲೆಗಳ ಮೂಲಕ ನಡೆಯುವ ದೇವರ ಆರಾಧನೆಯು ಇನ್ನೊಂದು ದಾರಿ. ಎರಡೂ ದಾರಿಯನ್ನು ಸದೃಢಗೊಳಿಸಲು ಆಧಾರವಾಗಿ ನಿಲ್ಲುವುದು ಭಾರತ ಕತೆ. ಅದು ಸರಳವಾದ ಓದಿಗೆ ದಕ್ಕುವುದು ವಚನ ಭಾರತ ವೆಂಬ ಕೃತಿಯಲ್ಲಿ. ‘ವಚನ ಭಾರತ’ ಪುಸ್ತಕದ ಓದಿನ ನೆನಪುಗಳನ್ನು ಉಲ್ಲೇಖಿಸಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ಸವಾರಿ ಹೊರಟಳು ಮಳೆ ಮಹಾರಾಜ್ಞಿ

ಅಲ್ಲಿಯವರೆಗೆ ಹೂವುಗಳೆಲ್ಲ ಮಳೆಮಾಯಿಯನ್ನೇ ಭಜಿಸುತ್ತ, ಮಳೆಗಾಲದಲ್ಲೇ ಅರಳುತ್ತಿದ್ದವು. ಆದರೆ ಒಂದು ದಿನ  ಪುಷ್ಪರಾಜ ತನ್ನವರನ್ನೆಲ್ಲ ಕರೆದು ಆಜ್ಞಾಪಿಸಿದ. “ನೋಡಿ ಹೂಗಿಡಗಳೆ, ಇನ್ನುಮುಂದೆ ನೀವೆಲ್ಲಾ ಬೇಸಿಗೆಯಲ್ಲಿಯೇ ಅರಳಬೇಕು. ಬೇಸಿಗೆಯಲ್ಲಿ ಭೂಮಿಯಮ್ಮ ತುಂಬ ಬಳಲಿರುತ್ತಾಳೆ. ನಮಗೆಲ್ಲ ಆಧಾರವಾಗಿರುವ ಭೂಮಿಯಮ್ಮನಿಗೆ ನಾವು ಸ್ವಲ್ಪವಾದರೂ ಸಂತೋಷವನ್ನು ಮೂಡಿಸಬೇಕು’’ ಎಂದು ಆದೇಶಿಸಿದ.  ಅಂದಿನಿಂದ ಹೂವುಗಳೆಲ್ಲ ಬೇಸಿಗೆಯಲ್ಲಿ ಅರಳಲು ಶುರುವಾದವು. ‘ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂದು ಭೂಮಿಯಮ್ಮ ನಕ್ಕಳು. ಮಳೆಮಾಯಿಯ ಸವಾರಿ ಕತೆಯೊಂದನ್ನು ಹೆಣೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ನೇಯ್ಗೆಯೆಂಬ ಸುದೀರ್ಘ ನಡಿಗೆ

ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದ ನೇಕಾರರು ನೇಯುವ ಈ ಸೀರೆಯ ವಿನ್ಯಾಸ ಅಪರೂಪವಾದುದು. ತಿಳಿ ಬಣ್ಣದ ಮೈ ಮತ್ತು ಗಾಢ ಬಣ್ಣದ ಅಂಚುಸೆರಗಿನ ಸೀರೆಯು ಕರಾವಳಿಯ ಹವಾಮಾನಕ್ಕೆ ಕ್ಷೇಮಭಾವ ಕೊಡುವಂತಹುದು. ಪರಿಸರಕ್ಕೆ ಧಕ್ಕೆ ಮಾಡದ ಸಾವಯವ ಉಡುಪು ಮಮತಾ ರೈ ಅವರಿಗೆ ಇಷ್ಟವಾಗಿರುವುದು ಕೇವಲ ವಿನ್ಯಾಸದ ಕಾರಣದಿಂದಲ್ಲ.ಬದುಕು ಪರಿಸರಕ್ಕೆ ಹತ್ತಿರವಾಗಿರಬೇಕು ಎಂಬಅವರ ಆಶಯವೇ ಅವರ ಈ ಕಾಯಕಕ್ಕೆ ಪ್ರೇರಣೆ. ಸೀರೆಯ ಪಯಣವೊಂದರ ಕುರಿತು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ಬದುಕನ್ನು ಅರಸಿಕೊಂಡು ಓಡುತ್ತಲೇ ಇರಬೇಕು

ರೆಹಮಾನಿ ಅವರು ಉಕ್ರೇನ್‍ ನಲ್ಲಿ ನೆಲೆಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಒಂದು ವರ್ಷವೂ ಭರ್ತಿಯಾಗಿದೆಯೋ, ಇಲ್ಲವೋ, ಅಲ್ಲಿ ಯುದ್ಧದ ಬಿಸಿಯೇರುತ್ತಿರುವುದು ಕಾಣಿಸಿತು. ತಾವು ಬಯಸಿದ ಬದುಕು ಅಲ್ಲಿಯೂ ಸಿಗುತ್ತಿಲ್ಲ ಎಂದು ಗೊತ್ತಾದ ಕೂಡಲೇ ಮತ್ತೆ ಅಲ್ಲಿಂದ ಹೊರಡಲೇಬೇಕಾಯಿತು. ರಷ್ಯಾ ಪಡೆಗಳು ಸ್ಫೋಟಿಸುತ್ತಿದ್ದ ಬಾಂಬುಗಳ ಸದ್ದಿನ ನಡುವೆಯೇ ಅವರು ಆ ದೇಶವನ್ನು ತೊರೆದರು. ಯಾರದೋ ಯುದ್ಧ ದಾಹಕ್ಕಾಗಿ ಬದುಕು ಕಳೆದುಕೊಳ್ಳುತ್ತಿರುವವರ ಕತೆಗಳಿಗೆ ದನಿಯೆಲ್ಲಿದೆ.

Read More

ಅಂತಿಮ ನ್ಯಾಯಾಧೀಶರು ಜನರೇ ಅಲ್ವೇ..

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾ ದೇವಿ ಅವರು ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ದೇಶದ ವಿವಿಧೆಡೆಗಳಲ್ಲಿ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳ ಜೊತೆಗೆ ದೀರ್ಘಕಾಲ ಉಳಿದುಕೊಂಡು ಅವರ ಹಾಡುಕಥೆಗಳನ್ನು ಗ್ರಹಿಸಲು ಪ್ರಯತ್ನಿಸುತ್ತ, ಅವರ ಜೀವನಮೌಲ್ಯಗಳ ಕುರಿತು ಕಾದಂಬರಿ, ಕತೆಗಳನ್ನು ಬರೆದವರು. ಅಷ್ಟು ಮಾತ್ರವಲ್ಲ, ಅವರ ಹಕ್ಕುಗಳ ಪರವಾಗಿ ಹೋರಾಡಿದರು. ಜನವರಿ ೧೪ ಅವರು ಹುಟ್ಟಿದ ದಿನ. ಅವರನ್ನು ಕೇರಳದಲ್ಲಿ ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ