ಮಾಸ್ತಿಯವರ ಐತಿಹಾಸಿಕ ಕಾದಂಬರಿಗಳ ಕಥಾವಿಸ್ತಾರ

ಮಾಸ್ತಿಯವರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಕಾಲಕ್ಕೆ ಆದರ್ಶಪ್ರಾಯ ಚಾರಿತ್ರಿಕ ಕಥಾನಾಯಕರನ್ನು ಚಿತ್ರಿಸುವ ಮಾದರಿ ಒಂದು ಕಡೆ ಇತ್ತು. ಇನ್ನೊಂದು ಕಡೆ ಬಂಗಾಳದ ‘ಆನಂದಮಠ’ದಂಥ ಕಾದಂಬರಿ, ಶಿವಾಜಿ, ರಾಜಸಿಂಹರಂಥ ದೇಶಭಕ್ತರ ಜೀವನವನ್ನು ವೈಭವೀಕರಿಸಿ ಬರೆಯುವ ಮಾದರಿ ಇತ್ತು. ಇವರಿಗೆ ಹೋಲಿಸಿದರೆ ಮಾಸ್ತಿಯವರ ಎರಡೂ ಕಾದಂಬರಿಗಳ ಕಥಾನಾಯಕರು ಇಂಥ ಅದರ್ಶಪೂರ್ಣ ಮಾದರಿಗಳಿಗೆ ಹೊರತಾಗಿದ್ದಾರೆ.

Read More