Advertisement

Tag: Movies

ಹಲವು ಹೃದಯಗಳ ಮುಟ್ಟಿದ ಚಲನಚಿತ್ರೋತ್ಸವ..

ಮೂರನೇ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻಫೋಟೋʼ ಚಿತ್ರದ್ದು ಬೇರೆಯದೇ ರೀತಿಯ ಛಾಪು. ಚಿತ್ರೋತ್ಸವದ ಎರಡನೇ ದಿನ 4ನೇ ಪರದೆಯಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿದು ತುಂಬಿದ್ದರು. ಆಸನಗಳು ಸಾಲದಕ್ಕೆ ಚಿತ್ರಮಂದಿರದ ನಿಯಮವನ್ನೂ ಮುರಿದು ಮೆಟ್ಟಿಲುಗಳ ಮೇಲೆ ಕುಳಿತು ಸಹ ಹಲವರು ಚಿತ್ತ ಬದಲಿಸದೇ ನೆಟ್ಟ ದೃಷ್ಟಿಯಲ್ಲೇ ಚಿತ್ರವನ್ನು ವೀಕ್ಷಿಸಿದರು.
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ನೋಡಿದ ಸಿನಿಮಾಗಳ ಕುರಿತು ಕುಮಾರ ಬೇಂದ್ರೆ ಬರಹ

Read More

ಕನ್ನಡಕ್ಕೆ ಮತ್ತೊಂದು ಗರಿ ʻಹದಿನೇಳೆಂಟುʼ

ಹರಿ ಒಬ್ಬ ಸದ್ಗುಣ ಯುವಕನೇ ಆಗಿದ್ದರೂ ಅರಿವಿನ ಕೊರತೆಯಿಂದ ಆ ವಿಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿ ಅದು ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಂಡ. ಅಲ್ಲಿಗೆ ಸುಮ್ಮನಾಗದೇ, ತನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ತನ್ನ ದೇಹವನ್ನೇ ಹಂಚಿಕೊಂಡ ದೀಪಾಳಿಗೆ ಅದರಿಂದ ಏನಾದೀತು ಎನ್ನುವ ಸಾಮಾನ್ಯ ವಿವೇಚನೆಯನ್ನೂ ಮಾಡದೇ ಆ ವಿಡಿಯೋವನ್ನು ಒಬ್ಬ ಫೇಸ್‌ಬುಕ್‌ಸ್ನೇಹಿತನೊಂದಿಗೆ ಹಂಚಿಕೊಂಡ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ಮತ್ತೊಂದು ಚಲನಚಿತ್ರ ʻಹದಿನೇಳೆಂಟುʼ ಕುರಿತು ಕುಮಾರ ಬೇಂದ್ರೆ ಬರಹ

Read More

ಚೆಗೆವಾರನನ್ನು ನೆನಪಿಸುವ ʻಮೋಟಾರ್ ಸೈಕಲ್ ಡೈರೀಸ್ʼ

1952ರಲ್ಲಿ ಅದೊಂದು ದಿನ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಒಂದಾದ ಅರ್ಜಂಟೀನಾದಲ್ಲಿ ಮೆಡಿಕಲ್ ಓದುತ್ತಿದ್ದ ಸ್ನೇಹಿತರಾದ ಅರ್ನೆಸ್ಟೋ ಚೆಗೆವಾರ ಮತ್ತು ಆಲ್ಬರ್ಟೋ ಗ್ರೆನಾಡೋಗೆ ಒಂದು ಅಪೂರ್ವವಾದ ಉಮೇದು ಉಂಟಾಗುತ್ತದೆ. ಅದು ಎಂಥವರನ್ನೂ ಬೆಚ್ಚಿಬೀಳಿಸುವಂಥಾದ್ದು. ಸುಮಾರು ಎಂಟು ಸಾವಿರ ಮೈಲಿ ವಿಸ್ತಾರದ ಇಡೀ ದಕ್ಷಿಣ ಅಮೆರಿಕವನ್ನು 1939ನೇ ಮಾಡೆಲ್ಲಿನ ಮೋಟಾರ್ ಬೈಕಿನಲ್ಲಿ ಸುತ್ತಾಡಿಕೊಂಡು ಬರಬೇಕು, ಎಂದು. ಹಾಗೆಂದೇ ಪ್ರಯಾಣ ಹೊರಟ ಗೆಳೆಯರಿಬ್ಬರ ಸ್ವಭಾವ, ನಡವಳಿಕೆ ಒಂದಕ್ಕೊಂದು ತಾಳಮೇಳವಿಲ್ಲದ್ದು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಬ್ರೆಜಿ಼ಲ್‌ನ ʻಮೋಟಾರ್ ಸೈಕಲ್ ಡೈರೀಸ್ʼ ಸಿನಿಮಾದ ವಿಶ್ಲೇಷಣೆ

Read More

ರಾಜಕೀಯ ಸ್ಥಿತಿಗೊಂದು ಪ್ರತಿಕ್ರಿಯೆ ಇರಾನ್‌ ನ ʻಕಾಂದಹಾರ್ʼ

ಮೊಹಿಸಿನ್ ಮಕ್ಬಲ್‌ಬಫ್ ಆಫ್ಘಾನಿಸ್ತಾನದ ಬಗ್ಗೆ ತಯಾರಿಸಿದ ಇತರ ಚಿತ್ರಗಳಿಗಿಂತ ಆಫ್ಘಾನಿಸ್ತಾನದಲ್ಲಿಯೇ ಚಿತ್ರೀಕರಣಗೊಂಡು ವಿಶೇಷ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ʻಕಾಂದಹಾರ್ʼ. ನರಕದಲ್ಲಿರುವವರ ಬಗ್ಗೆ ಅಲ್ಲಿಯೇ ಹೋಗಿ ಚಿತ್ರೀಕರಣ ಮಾಡುತ್ತೇನೆ ಎನ್ನುವ ಎದೆಗಾರಿಕೆ ಮಕ್ಬಲ್‌ಬಫ್‌ನದು. ತಾನು ಅಲ್ಲಿರುವಷ್ಟು ಕಾಲ ಪ್ರತಿದಿನವೂ ಒಂದು ಪರೀಕ್ಷೆಯಾಗಿತ್ತು, ಜೀವವನ್ನು ಎಡಗೈಯಲ್ಲಿ ಹಿಡಿದಿರಬೇಕಾಗಿತ್ತು. ಅಲ್ಲಿನ ಜನರ ಅನುಮಾನ, ಆತಂಕಗಳನ್ನು ತೀರ ಪ್ರಯಾಸದಿಂದ ನಿವಾರಿಸಬೇಕಾಗಿತ್ತು. ಚಿತ್ರದಲ್ಲಿ ನಟಿಸಲು ಅಲ್ಲಿನವರನ್ನೇ ಅವಲಂಬಿಸಬೇಕಾದ ಪ್ರಸಂಗವಿತ್ತು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇರಾನ್‌ ನ ʻಕಾಂದಹಾರ್ʼ ಸಿನಿಮಾದ ವಿಶ್ಲೇಷಣೆ

Read More

ಮೃಗಯಾತನೆಗಳ ಮರೆಸುವ ಸಂಗೀತದ ಎಳೆ

“ನನಗೆ ನನ್ನ ಅಪ್ಪ ಯಾರು ಅಂತ ಗೊತ್ತಿಲ್ಲ, ನನ್ನ ಅಮ್ಮನಿಗೆ ತನಗೆ ಎಷ್ಟು ಜನ ಮಕ್ಕಳು ಎಂದು ಗೊತ್ತಿಲ್ಲ, ನನ್ನ ಜೀವನದಲ್ಲಿ ಏನೂ ಚೆನ್ನಾಗಿಲ್ಲ, ಆದರೆ ಸಂಗೀತ ನುಡಿಸುವಷ್ಟು ಕಾಲ ನನಗೆ ನಾನೂ ಒಬ್ಬ ಮನುಷ್ಯಳು ಅನ್ನಿಸುತ್ತದೆ, ನನ್ನ ಮೇಲೆ ನನಗೆ ಗೌರವ ಬರುತ್ತದೆ, ನಾನು ಇದನ್ನು ಕಲಿಯಬೇಕು!’ ಎಂದು ಅವಳು ಅಬ್ಬರಿಸುತ್ತಾಳೆ.”

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ