Advertisement

Tag: Nagarekha Gaonkar

ನೆನಪುಗಳಿಗೆ ಜೀವ ತುಂಬುವ ಬರಹ: ಸ್ಮಿತಾ ಅಮೃತರಾಜ್ ಬರಹ

ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು.
ನಾಗರೇಖಾ ಗಾಂವಕರ ಬರೆದ ಬಾಲ್ಯದ ಅನುಭವಗಳ ಕುರಿತ ಬರಹಗಳ “ಬಣ್ಣದ ಕೊಡೆ” ಕೃತಿಯ ಕುರಿತು ಸ್ಮಿತಾ ಅಮೃತರಾಜ್ ಸಂಪಾಜೆ ಬರಹ

Read More

ಮತ್ತೆ ಬಂದಿದೆ ಯುಗಾದಿ, ತರದು ಅಂದಿನ ಉಮೇದಿ

ಯುಗಾದಿಗೆ ಪರಿಸರದ ಕುರಿತ ಮಾತೇಕೆ? ಎಂದು ಪ್ರಶ್ನಿಸಬಹುದು ನೀವು!! ಚೈತ್ರಮಾಸದ ಪ್ರಾರಂಭದ ದಿನ ಯುಗಾದಿಯ ಆಚರಣೆ. ಪ್ರಕೃತಿಯ ಜೊತೆ ನಮ್ಮ ಸಂಬಂಧವನ್ನು ಆಚರಣೆಗಳ ಮುಖಾಂತರ ಗಟ್ಟಿಗೊಳಿಸಿಕೊಳ್ಳುತ್ತಾ ಬಂದ ದೇಶ ನಮ್ಮದು. ಪ್ರಕೃತಿ ಪೂಜೆಯೇ ನಮ್ಮ ಪೂರ್ವಿಕರ ನೈಜ ಆಚರಣೆಗಳಾಗಿದ್ದವು ಎಂಬುದು ನಮಗೆಲ್ಲ ತಿಳಿದ ಸಂಗತಿಯೇ..
ಪ್ರಕೃತಿ ಜೊತೆಗೆ ನಂಟಿರುವ ಯುಗಾದಿ ಹಬ್ಬ ಇಂದಿನ ದಿನಗಳಲ್ಲಿ ಹೇಗೆ ಆಚರಿಸಲ್ಪಡುತ್ತಿದೆ ಎನ್ನುವುದರ ಕುರಿತು ಬರೆದಿದ್ದಾರೆ ನಾಗರೇಖಾ ಗಾಂವಕರ

Read More

ಸಕೀನಾಳ ಮುತ್ತು: ರಮ್ಯತೆಯ ಹಿಂದಿನ ಅಸಂಗತತೆ

ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ.
ವಿವೇಕ ಶಾನಭಾಗ ಬರೆದ “ಸಕೀನಾಳ ಮುತ್ತು” ಕಾದಂಬರಿಯ ಕುರಿತು ನಾಗರೇಖಾ ಗಾಂವಕರ ಬರಹ

Read More

ಚನ್ನಪ್ಪ ಕಟ್ಟಿ ಅನುವಾದಿಸಿದ ʼಸ್ಕಾರ್ಲೆಟ್ ಪ್ಲೇಗ್ʼ ಕಾದಂಬರಿ ಕುರಿತು ನಾಗರೇಖಾ ಗಾಂವಕರ ಬರಹ

“ಬಿಲ್ ಮತ್ತು ಗ್ರ್ಯಾನ್ಸರ್ ಕುಟುಂಬದ ಸಂತಾನಗಳು ಮುಂದೆ ವಿವಾಹವಾಗಿ ಹುಟ್ಟಿದ ಮಕ್ಕಳು ಇಂದು ಗ್ರ್ಯಾನ್ಸರ್ ಜೊತೆಯಾಗಿದ್ದಾರೆ. ಇಂದು ಹಣ್ಣು ಹಣ್ಣು ಮುದುಕ ಆತ ಮೊಮ್ಮಕ್ಕಳ ಜೊತೆ ಕಾಡುಮೇಡು ಅಲೆಯುತ್ತಾ ಆ ದಿನದ ಆಹಾರದ ಹುಡುಕಾಟದಲ್ಲಿದ್ದಾನೆ. ಮೊಮ್ಮಕ್ಕಳು ಅನಾಗರಿಕರಂತೆ ತಮ್ಮ ತಾತನ ಅಸಹಾಯಕತೆಯನ್ನು ಗೇಲಿ ಮಾಡಿ ನಗುತ್ತವೆ. ಆತ ಬಳಸುವ ಸುಶಿಕ್ಷಿತ ಭಾಷೆ ಅವರಿಗೆ ಅಪಥ್ಯವೆನಿಸುತ್ತದೆ. ಸರಳವಾಗಿ ತಮಗೆ…”

Read More

ಜರಿಲಂಗ ಮತ್ತು ಸಣ್ಣು: ನಾಗರೇಖಾ ಗಾಂವಕರ ಬರೆದ ವಾರದ ಕತೆ

“ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆಯಾರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇಬಿಟ್ಟಿತು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೇ ಆಚೀಚೆ ನೋಡದೇ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು.”

Read More
  • 1
  • 2

ಜನಮತ

ಸಾಹಿತ್ಯ ಪ್ರಕಾರಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ