Advertisement

Tag: Nature

ಬದುಕ ಬೆಳಗಿಸುವ ಸರಳ ಸೂತ್ರಗಳು

ಮೊಗ್ಗು ಸಹಜವಾಗಿ ಬಿರಿದಾಗಲೇ ಹೂವಾಗುವುದು. ಬಗೆಬಗೆಯ ಸಸ್ಯವರ್ಗಗಳು ಸೇರಿಯೇ ಕಾಡಾಗುವುದು, ಮರಕ್ಕೆ ಭೂಮಿಯಾಸರೆ, ಮರವು ಬಳ್ಳಿಗಾಸರೆಯಾದರೆ ಹೂ, ಕಾಯಿ, ಹಣ್ಣುಗಳು ಸಕಲ ಜೀವಿಗಳಿಗಾಸರೆಯಾಗಿ ಪೊರೆಯುತ್ತವೆ. ಇಲ್ಲಿ ಎರೆಹುಳುವಿನಿಂದ ಹಿಡಿದು ಚಿಟ್ಟೆಗೂ, ಹುಲಿಗೂ, ಹುಲ್ಲಿಗೂ ಅದರದೇ ಆದ ಕೆಲಸಗಳಿವೆ. ಯಾವುದೂ ಮುಖ್ಯವಲ್ಲ; ಯಾವುದೂ ಅಮುಖ್ಯವಲ್ಲ. ಮನುಷ್ಯನ ಕೆಲಸಕ್ಕೂ, ಕಾಯಕಕ್ಕೂ ಅನ್ವಯಿಸಿಕೊಳ್ಳಬೇಕಾದ ಮಾತುಗಳಿವು.
ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ಉತ್ತಮ ಪೂರ್ವಜರಾಗುವುದು ಹೇಗೆ?

ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.
ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಕೀಟಹಾರಿ ನಾಚಿಕೆ ಮುಳ್ಳು ಮತ್ತು ಘಾಟಿ ಕೋಳಿ: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥಾನಕ

“ಒಮ್ಮೆ ಹೊರ ಜಗಲಿಯಲ್ಲಿ ಕುಳಿತು ಸುಮ್ಮನೆ ರಸ್ತೆ ನೋಡುತ್ತಿರಬೇಕಾದರೆ ಅಚಾನಕ್ಕಾಗಿ ಕೋಳಿ ವಿಚಿತ್ರವಾಗಿ ಶಬ್ದ ಹೊರಡಿಸಲಾರಂಭಿಸಿತು. ನೋಡ ನೋಡುತ್ತಿದ್ದಂತೆ ಅನತಿ ದೂರದಲ್ಲೇ ಹದ್ದೊಂದು ನೆಲದ ಮಟ್ಟಕ್ಕೆ ಹಾರಿದ್ದು ಕಂಡಿತು. ಮರಿಗಳು ಅವಕ್ಕಾಗಿ ಹೇಂಟೆಯ ಹೊಟ್ಟೆಯೊಳಗಡೆ ಮುದುಡಿಕೊಂಡವು. ಎರಡು ಮರಿಗಳು ತುಂಬಾ ದೂರದಲ್ಲಿದ್ದರಿಂದ ಅವುಗಳಿಗೆ ಕೂಡಿಕೊಳ್ಳಲಾಗಲಿಲ್ಲ.”

Read More

ದಟ್ಟ ಕಾಡಿನ ನಡುವೆ ಕುರಿಂಗಲ್ಲು ಹೊಳೆಯಿತು:ಪ್ರಸಾದ್ ಬರೆಯುವ ಮಾಳ ಕಥಾನಕ

”ನಾವು ಮೇಲೆ ಹೋದಂತೆಲ್ಲಾ ಮಗಿಲಿನೆತ್ತರಕ್ಕೆ ತೇಲಿ ಹೋದಂತೆ, ಈವರೆಗೂ ಕಂಡಿರದ ವಿಸ್ಮಯ ಲೋಕವೊಂದನ್ನು ಬೆನ್ನಟ್ಟಿ ಹೋಗುವಂತೆ ಅನ್ನಿಸುತ್ತಿತ್ತು. ಕಾಡಿನ ಎಳೆಬಿಸಿಲು ರಚ್ಚೆ ಹಿಡಿದ ಮಗುವಿನಂತೆ ಮೆತ್ತಗಾಗಿದ್ದರೂ, ಅದರ ಪ್ರಖರತೆಗೆ ಮೈಯೆಲ್ಲಾ ಆಗಲೇ ಬೆವರಾಗಿತ್ತು. ಅಲ್ಲೊಂದು ಮರದ ನೆರಳಿನಲ್ಲಿ ಕೂತು ಸುಸ್ತಿನ ನಿಟ್ಟುಸಿರು ಬಿಟ್ಟು, ಮಗಿಲಿನೆತ್ತರಕ್ಕೆ ನೋಡಿದೆವು.”

Read More

ಜನಮತ

ಸಾಹಿತ್ಯ ಪ್ರಕಾರಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ