Advertisement

Tag: Novel

ಉಪದ್ರವಿ ಸಾಹಿತಿಗಳು ಬೇಕಾಗಿದ್ದಾರೆ: ಕುಂ. ವೀರಭದ್ರಪ್ಪ

ಬಳ್ಳಾರಿಯ ಕಡಕ್ ಭಾಷೆಯಲ್ಲಿ ಮಾತನಾಡುವ ಸಾಹಿತಿ ಕುಂ.ವೀರಭದ್ರಪ್ಪ ಅವರು, ಪ್ರತಿಭಟನೆ, ಪ್ರಶ್ನಿಸುವ ಮನೋಭಾವವನ್ನು ಇಷ್ಟಪಡುವವರು. ಸ್ವಭಾವಕ್ಕೆ ತಕ್ಕಂತೆ ಬಂಡಾಯವನ್ನು ಮೆಚ್ಚಿಕೊಂಡು ಸಾಹಿತ್ಯ ಕೃಷಿ ಮಾಡಿದ ಅವರು ಬರೆದ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಇತ್ತೀಚೆಗೆ ಅವರಿಗೆ ಜೀವಬೆದರಿಕೆಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಅವರೊಡನೆ ಒಂದಿಷ್ಟು ಹೊತ್ತು ಮಾತನಾಡಿದಾಗ ಕನ್ನಡ ಸಾಹಿತ್ಯ ಲೋಕದ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡರು.

Read More

“ಕಾನನ ಜನಾರ್ದನ” ಕಾದಂಬರಿಯ ಒಂದೆರಡು ಪುಟಗಳು

ಹತ್ತು ದಿನಗಳಿಂದ ಅವರು ಹೆಚ್ಚು ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ನಮ್ಮದೇ ರೀತಿಯಲ್ಲಿ ಅವಲೋಕಿಸುತ್ತಿದ್ದೆವು. ನಮಗೆ ಇಬ್ಬರು ಮಾತ್ರವೆ ಕೆ. ನಾಗಯ್ಯ ಅವರ ಈಗಿನ ಸ್ಥಿತಿಗೆ ಸಂಬಂಧ ಹೊಂದಿರಲು ಸಾಧ್ಯ ಎಂಬ ಸಂಶಯ ಮೂಡಿತು. ಇಬ್ಬರೂ ಕೂಡ ಇತ್ತೀಚೆಗೆ ಅವರು ತೊಡಗಿಸಿಕೊಂಡಿದ್ದ ಚಟುವಟಿಕೆಗೆ ಸಂಬಂಧ ಪಟ್ಟವರು: ಒಬ್ಬರು ನಾಗಯ್ಯ ಇತ್ತೀಚೆಗೆ ಬರೆದ ಕಾದಂಬರಿಯ ಪ್ರಕಾಶಕರು.
ಡಾ. ಕೆ. ಎನ್. ಗಣೇಶಯ್ಯ ಬರೆದ “ಕಾನನ ಜನಾರ್ದನ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ!

ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿ ಇಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಅಧ್ಯಾಯವೊಂದು ನಿಮ್ಮ ಓದಿಗೆ

Read More

ಮಾಸ್ತಿಯವರ ಐತಿಹಾಸಿಕ ಕಾದಂಬರಿಗಳ ಕಥಾವಿಸ್ತಾರ

ಮಾಸ್ತಿಯವರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಕಾಲಕ್ಕೆ ಆದರ್ಶಪ್ರಾಯ ಚಾರಿತ್ರಿಕ ಕಥಾನಾಯಕರನ್ನು ಚಿತ್ರಿಸುವ ಮಾದರಿ ಒಂದು ಕಡೆ ಇತ್ತು. ಇನ್ನೊಂದು ಕಡೆ ಬಂಗಾಳದ ‘ಆನಂದಮಠ’ದಂಥ ಕಾದಂಬರಿ, ಶಿವಾಜಿ, ರಾಜಸಿಂಹರಂಥ ದೇಶಭಕ್ತರ ಜೀವನವನ್ನು ವೈಭವೀಕರಿಸಿ ಬರೆಯುವ ಮಾದರಿ ಇತ್ತು. ಇವರಿಗೆ ಹೋಲಿಸಿದರೆ ಮಾಸ್ತಿಯವರ ಎರಡೂ ಕಾದಂಬರಿಗಳ ಕಥಾನಾಯಕರು ಇಂಥ ಅದರ್ಶಪೂರ್ಣ ಮಾದರಿಗಳಿಗೆ ಹೊರತಾಗಿದ್ದಾರೆ.

Read More

“ಭವಿಷ್ಯದ ಕರಾಳತೆಯನ್ನು ಮುಂಗಂಡ ಎರಡು ಕಾದಂಬರಿಗಳು”

ಜಾಗತಿಕ ಪ್ರಭುತ್ವದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯಲ್ಲಿ ಗೋಚರಿಸುವ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ ‘ಎಲ್ಲರೂ ಎಲ್ಲರ ಸಂಬಂಧಿ’. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತಹ ‘ಕಾವುಮನೆ’ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಕಮಲಾಕರ ಕಡವೆ ಅಂಕಣದಲ್ಲಿ ಬ್ರೇವ್ ನ್ಯೂ ವರ್ಲ್ಡ್ ಕಾದಂಬರಿಯ ವಿಶ್ಲೇಷಣೆ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ