ಜ ನಾ ತೇಜಶ್ರೀ ಪುಸ್ತಕದ ಕುರಿತು ನೂತನ ದೋಶೆಟ್ಟಿ ಬರಹ

ಸೃಷ್ಟಿ ಸ್ಥಿತಿ ಲಯ – ಕವಿತೆಯನ್ನು ಈ ಮೇಲಿನ ಗಿಳಿಮರ ಕವಿತೆಯ ಇನ್ನೊಂದು ಭಾಗವಾಗಿಯೂ ಓದಬಹುದು. ಆದರೂ ಇದರ ಅರ್ಥ ಹೊಳಹು ಬೇರೆಯೇ. ಇಲ್ಲಿನ ಹಕ್ಕಿದಂಡು, ಕಪ್ಪೆ, ಈಚಲು ಮರಗಳೆಲ್ಲ ಒಂದೊಂದೂ ಒಂದು ಜಗವೇ ಆಗಿಯೂ, ಒಂದೇ ಜಗವಾಗಿಯೂ ಕಂಡು ಬೆರಗಾಗುವ ಕವಿ ಮನಸ್ಸು ತುಂಬಿ ಉಮ್ಮಳಿಸುತ್ತದೆ. ಆ ಕಣ್ಣೀರಲ್ಲಿ ಆನಂದ ತುಳುಕಿದರೂ, ಲೋಕದ ಡೊಂಕ ನೆನೆದು ಕಳವಳಿಸುತ್ತದೆ. ಮರವನ್ನು ಶಿವನಾಗಿಸಿದ್ದು ಕವಿಗೇ ಅಚ್ಚರಿಯಾಗಿ ಶಿವಶಿವಾ… ಎಂದು ಉದ್ಗರಿಸಿದ್ದಾರೆ.
ಯಕ್ಷಿಣಿ ಕನ್ನಡಿ ಕವಯತ್ರಿ ಜ.ನಾ. ತೇಜಶ್ರೀ ಬರೆದ ‘ಯಕ್ಷಿಣಿ ಕನ್ನಡಿ’ ಕವನ ಸಂಕಲನದ ಕುರಿತು ನೂತನ ದೋಶೆಟ್ಟಿ ಬರಹ

Read More