ಮೆಳ್ಳಿಗೇರಿ ಸರ್ ಸಲುವಾಗಿ ಶಾಲೆಯನ್ನೇ ಬದಲಾಯಿಸಿದ್ದೆ!
ವಿದ್ಯಾರ್ಥಿಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಬ್ಬೊಬ್ಬ ಗಣಿತ ಪರಿಣತ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಮಾಡಿದ್ದರು. ನನಗೆ ಒಂದು ಗುಂಪಿನ ಜಬಾಬ್ದಾರಿ ಕೊಟ್ಟಿದ್ದರು. ದೊಡ್ಡದಾಗಿರುವ ಮನೆಯ ಸಹಪಾಠಿಗಳ ಕೋಣೆಯೊಂದರಲ್ಲಿ ರಾತ್ರಿ ಕುಳಿತು ಗಣಿತ ಬಿಡಿಸುತ್ತಿದ್ದೆವು. ಅಲ್ಲೇ ಮಲಗಿ ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆವು. ಹೀಗೆ ಸಹಪಾಠಿಗಳ ಮನೆಗೆ ಹೋಗಿ ಪಾಠ ಹೇಳುವುದನ್ನು ಮೊದಲಿನಿಂದಲೂ ಮಾಡುತ್ತಿದ್ದೆ. ಶ್ರೀಮಂತ ಹುಡುಗರ ತಾಯಂದಿರು ಬಡ ಹುಡುಗನ ತಾಯಿಯ ಮನೆಗೆ ಬಂದು “ಇವತ್ತು ನಿಮ್ಮ ಮಗನನ್ನು ನಮ್ಮ ಮನೆಗೆ ಕಳಿಸಿರಿ” ಎಂದು ಕೇಳುವುದು ನನಗೆ ಖುಷಿ ಕೊಡುತ್ತಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ