ಒಳ್ಳೆಯತನವೇ ಆಸ್ತಿಯಾಗಿದ್ದ ಕಾಲವದು

ಜನರು ಸ್ವಾಭಿಮಾನಿಗಳಾಗಿದ್ದರೆ ಹೊರತು ದುರಭಿಮಾನಿಗಳಾಗಿದ್ದಿಲ್ಲ. ಬೇರೆಯವರ ಘನತೆಯನ್ನು ಹಣ, ಅಂತಸ್ತು ಮತ್ತು ಹುದ್ದೆಗಳಿಂದ ಅಳೆಯುತ್ತಿರಲಿಲ್ಲ. ಮಾನವರಿಗೆ ಒಳ್ಳೆಯತನವೇ ಆಸ್ತಿಯಾಗಿತ್ತು. ಈ ಆಸ್ತಿ ಕಳೆದುಕೊಂಡರೆ ಸತ್ತುಹೋದಂತೆಯೆ ಎಂಬ ಭಾವ ಅವರಿಗಿತ್ತು. ಎಲ್ಲ ಸಮಾಜದವರನ್ನು ಗೌರವಿಸುತ್ತ ಸಾಧ್ಯವಾದ ಕಡೆಗಳಲ್ಲೆಲ್ಲ ಅವರ ಆಚರಣೆಗಳಲ್ಲಿ ಭಾಗವಹಿಸುತ್ತ ಎಲ್ಲರೊಳಗೊಂದಾಗಿ ಬದುಕುತ್ತಿದ್ದರು. ರಂಜಾನ್ ದರ್ಗಾ ಬರೆಯುವ  ಆತ್ಮಕತೆ  ‘ನೆನಪಾದಾಗಲೆಲ್ಲ’ ಸರಣಿಯ 26ನೆಯ ಕಂತು 

Read More