Advertisement

Tag: Roopashree Kalliganur

ನಾವು ತಿನ್ನುವ ಆಹಾರದ ಮೂಲ ಯಾವುದು?

ನಾವು ತಿನ್ನುವ ಆಹಾರದ ಬಗ್ಗೆ ಬೆಳೆದ ಪ್ರಜ್ಞೆಯಿಂದ ಒಂದಷ್ಟು ಕಂಪೆನಿಗಳು ಹೊಸ ರೀತಿಯಲ್ಲಿ ಲಾಭಮಾಡಿಕೊಳ್ಳಲಾರಂಭಿಸಿದ್ದು ಒಂದೆಡೆಯಾದರೆ, ಮತ್ತೊಂದಷ್ಟು ಜನ ತೀರಾ ಮತ್ತೊಂದು ಹಾದಿಯಲ್ಲಿ ಯೋಚಿಸಲಾರಂಭಿಸಿದ್ದರು. ನಾವು ತಿನ್ನುವ ತರಕಾರಿಗಳನ್ನು ನಾವೇ ಬೆಳೆದುಕೊಂಡರೆ ಹೇಗೆ? ಹೀಗಂದುಕೊಂಡ ಬಹುತೇಕ ಜನರು ಇದ್ದದ್ದು ಬೆಂಗಳೂರಿನಂಥ ಮಹಾನಗರಗಳಲ್ಲಿ. ಮನೆ ಕಟ್ಟಲಿಕ್ಕೆ ಒಂದು ಸೈಟಿಗೆ ಸಾಕಷ್ಟು ಒದ್ದಾಡಬೇಕಾದಾಗ ಇನ್ನು ತರಕಾರಿಗಳನ್ನು ಬೆಳೆದುಕೊಳ್ಳುವುದು ಹೇಗೆ ಅನ್ನುವ ಜಿಜ್ಞಾಸೆಯ ಸಮಯದಲ್ಲೇ ಕೆಲವೊಂದಷ್ಟು ಜಾಣರು ಟೆರೆಸ್‌ ಗಾರ್ಡನಿಂಗ್‌ ಆರಂಭಿಸಿಯೇ ಬಿಟ್ಟರು. ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಹಾರಲು ತವಕಿಸುವ ಮನಸ್ಸಿಗೆ ಪ್ರವಾಸವೆಂಬ ರೆಕ್ಕೆಯಿರಲಿ

ಎಲ್ಲ ಹಕ್ಕಿಗಳಂತೆಯೇ ನನ್ನ ಕಣ್ಣಿಗೆ ಕಾಣಿಸಿದ ಆ ಹಕ್ಕಿ ವಿಶೇಷವಾದುದು ಎಂದು ನನಗೇನೂ ಗೊತ್ತಿರಲಿಲ್ಲ. ಜೀವನದಲ್ಲಿ ಎಷ್ಟೋ ಬಾರಿ ಹೀಗೆಯೇ ಆಗುತ್ತದೆ. ನಮ್ಮೊಡನೆ ಇರುವ ಯಾವುದೋ ವಿಷಯದ ವಿಶೇಷತೆ, ಇನ್ಯಾರೋ ಹೇಳಿದಾಗಲೇ ಅರಿವಾಗುವುದು. ಹಕ್ಕಿಗಳೋ ಸದಾ ವಿಶೇಷ ಕತೆಗಳನ್ನು ತಿಳಿದಿರುತ್ತವೆ. ಯಾಕೆಂದರೆ ಪ್ರವಾಸ ಎಂಬುದು ಅವುಗಳಿಗೆ ವಿಶೇಷವೇ ಅಲ್ಲ. ಆದರೆ ಮನುಷ್ಯರು ಮಾತ್ರ ಪ್ರವಾಸ ಹೋಗಬೇಕಾದರೆ..

Read More

ಸ್ವಾಭಿಮಾನಕ್ಕೆ ಅಂತಸ್ತಿನ ಗಡಿರೇಖೆಗಳುಂಟೆ!

“ಆಕೆಯದ್ದು ವಿಚಿತ್ರ ಸ್ವಭಾವ. ಅಮ್ಮ ಹೇಳಿರುತ್ತಿದ್ದ ಸಮಯಕ್ಕೆ ಯಾವತ್ತೂ ಬಂದಿದ್ದು ನನಗೆ ನೆನಪಿಲ್ಲ. ತನಗೆ ಬಿಡುವಾದಾಗಲೇ ಆಕೆ ಕೆಲಸಕ್ಕೆ ಬರೋದು. ಹಾಗಂತ ಕಡಿಮೆ ದುಡ್ಡಿಗೆ, ಚೌಕಾಸಿಗೆ ಬರುವ ಹೆಂಗಸೂ ಆಕೆಯಲ್ಲ. ಹಾಗೇನಾದ್ರೂ ಕೇಳಿದ್ರೆ ‘ಆಯ್ತು, ಎಲ್ಡು ಬಟ್ಟೆ ಕಮ್ಮಿ ಒಕ್ಕೊಡ್ತೀನಿ.. ಸುಮ್ಮನಿರ್ತಾರಾ…ʼ ಅಂತ ಸೀದಾ ಕೇಳಿಬಿಡುವವಳು. ಹಾಗಾಗಿ ಅವಳ ಈ ಸ್ವಭಾವ ಸಹಿಸಿಕೊಳ್ಳುವವರು ಅಥವಾ ಅನಿವಾರ್ಯವಿದ್ದವರು ಮಾತ್ರವೇ ಅವಳನ್ನು ಕೆಲಸಕ್ಕೆ ಕರೆಯುತ್ತಿದ್ದರು. …”

Read More

ಆನೆ ಬಂತೊಂದಾನೆ… ಅಲ್ಲ.. ಮೂರಾನೆ!

“ಆ ಸುದ್ದಿ ಓದಿ ಎರಡು ಮೂರು ದಿನವಾಗಿರಲಿಲ್ಲ, ಮನೆ ಕೆಲಸಕ್ಕೆ ಬರುವ ಗಂಗೆ ಒಂದು ಬೆಳಗ್ಗೆ ಅತ್ತೆ ಹತ್ತಿರ ಕೊಡವ ಭಾಷೆಯಲ್ಲಿ ಗಂಭೀರವಾಗಿ ಏನನ್ನೋ ಮಾತನಾಡುತ್ತಿದ್ದರು. “ರಾತ್ರಿ ಎಲ್ಲ ನಿದ್ದೆಯೇ ಇಲ್ಲ ಅಕ್ಕಯ್ಯಾ… ಹೀಗೇ ಇವು ಬರ್ತಾ ಹೋದ್ರೆ, ಎಂತ ಮಾಡೋದು ನಾವು? ಗಾಬರಿಯಾಯ್ತದೆ. ಬೆಳಗ್ಗೆ ಬೆಳಗ್ಗೆ ಬೇಗ ಕೆಲಸಕ್ಕೆ ಬಾ ಅಂತಾರೆ. ಒಂದೊಂದ್‌ ಸಲಾ.ಕೆಲ್ಸಾ ಮುಗ್ಸಿ ಮನೇಗ್‌ ಹೋಗೋದು ಲೇಟಾಯ್ತದೆ. ರಾತ್ರಿ ಒಬ್ಬರೇ ಸಿಕ್ರೆ ಬಿಡ್ತಾವ..? ತುಳ್ದು ಜಜ್ಜಿ ಹಾಕ್ತವೆ…”..”

Read More

ಅಗರ್ತಲಾದ ಬೀದಿಗಳಲ್ಲಿ ಸುತ್ತಾಡಿದ ನೆನಪುಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ

“ತ್ರಿಪುರಾ ವಿಶ್ವವಿದ್ಯಾಲಯದಿಂದ ನೀರ್ ಮಹಲ್ ಮೂವತ್ತು ಕಿಲೋಮೀಟರುಗಳಷ್ಟು ದೂರವಿತ್ತು. ಹಾದಿಯುದ್ದಕ್ಕೂ ಅಲ್ಲಲ್ಲಿ ಹಸುರು ಗದ್ದೆಗಳು, ಕೈಕಾಲು ಮುರಿದುಕೊಂಡು ಬೀದಿಗೆ ಬಿದ್ದ ಬಂಗಾಳಿ ದೇವತೆಯರು, ಮೆಟಲ್ ಶೀಟಿನ ಅಂಗಡಿಗಳು, ಮನೆಗಳು, ಕಾಡು ಕಡಿದು ಎದೆಯುಬ್ಬಿಸಿಕೊಂಡು ಎದ್ದು ನಿಂತಿದ್ದ ರಬ್ಬರ್ ತೋಟಗಳು ಸಿಕ್ಕವು. ಪ್ರವಾಸಿಗರ ಕೊರತೆಯಿಂದ ಹಾಗೂ ಬಡತನದ ಹೊಡೆತದಿಂದ ಅಗರ್ತಲಾ…”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ