ಪ್ರೊ. ಷ. ಶೆಟ್ಟರ್ ಜೊತೆ ಡಾ. ಗೀತಾ ವಸಂತ ನಡೆಸಿದ್ದ ಮಾತುಕತೆ

“ವ್ಯಾಕರಣ, ಛಂದಸ್ಸುಗಳನ್ನು ಬಾಲ್ಯದಲ್ಲಿ ಉರು ಹೊಡೆಸುತ್ತಿದ್ದರು. ಆಗ ಅದು ತಲೆಗೆ ಹತ್ತಲೇ ಇಲ್ಲ. ಕಂಠಪಾಠವು ಸಂಸ್ಕೃತದ ಕಲಿಕಾವಿಧಾನ. ಆದರೆ, ವ್ಯಾಕರಣ, ಛಂದಸ್ಸುಗಳು ಭಾಷೆಯ ಸಮಗ್ರ ತಿಳುವಳಿಕೆಗೆ ಅಗತ್ಯ. ಆ ಗ್ರಂಥಗಳನ್ನೂ ರಸಾಸ್ಪಾದಕ್ಕಾಗಿ, ರಸಾಸ್ಪಾದದ ಮೂಲಕ ಓದಲು ಸಾಧ್ಯ. ವ್ಯಾಕರಣ ಗ್ರಂಥಗಳ ಲೇಖಕರೂ ತುಂಟರು. ಸಾಕಷ್ಟು ರಸಿಕರು! ಉದಾಹರಣೆಗಳನ್ನು ಕೊಡುವಾಗ ರಸಾಸ್ವಾದದ ಸ್ಥಳಗಳನ್ನು ನಿರ್ಮಿಸುವಲ್ಲಿ ಅವರು ನಿಪುಣರು. ಇಂಥ ಸೂಕ್ಷ್ಮಗಳನ್ನು ಬೋಧಕರು ಗಮನಿಸಬೇಕು. ಕಾವ್ಯವನ್ನು ಸಹ ರಸಾಸ್ಪಾದದ ಮೂಲಕವೇ ತಲುಪಿಸುವುದು ಜಾಣತನ.”

Read More