ಕುಂಡೆಹಬ್ಬ ತಂದ ಮಂಡೆಬಿಸಿ

ಕೊಡಗಿನ ಬುಡಕಟ್ಟು ಜನರ ಒಂದು ವಿಶಿಷ್ಟವಾದ ಹಬ್ಬ ‘ಬೋಡ್ ನಮ್ಮೆ’  ಅಥವಾ ‘ಕುಂಡೆ’ ಹಬ್ಬ. ಈ ಹಬ್ಬದಲ್ಲಿ ಇವರು ವಿಚಿತ್ರ ವೇಷ ಭೂಷಣಗಳನ್ನು ಧರಿಸುತ್ತಾರೆ. ಕೆಲವರು ಮೈಯ್ಯನ್ನು ಸೊಪ್ಪಿನಿಂದ ಮುಚ್ಚಿ, ಇನ್ನು ಕೆಲವರು ನವೀನ ಪೋಷಾಕುಗಳ ಜೊತೆಗೆ, ಕಪ್ಪು ಕನ್ನಡಕ, ತಲೆಗೆ ಚಿತ್ರ ವಿಚಿತ್ರವಾದ ಟೋಪಿಗಳನ್ನು ಹಾಕಿಕೊಂಡು ವೇಷ ಕಟ್ಟುತ್ತಾರೆ. ಹಬ್ಬವೆಂದ ಮೇಲೆ ಕುಡಿತ ಕುಣಿತ, ತಿನಿಸುಗಳಿರಬೇಕಲ್ಲವೇ. ಆದರೆ ಈ ಹಬ್ಬಕ್ಕೆ ಸಂಬಂಧಿಸಿದ ಘಟನೆಯೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಅಷ್ಟೇನೂ ಒಳ್ಳೆಯ ಘಟನೆಯಲ್ಲ ಅದು. ಹಬ್ಬ ತಂದಿಟ್ಟ ದುರಂತವು ಅನಾವರಣಗೊಳಿಸಿದ ಸತ್ಯಗಳನ್ನು  ಡಾ. ಕೆ.ಬಿ. ಸೂರ್ಯಕುಮಾರ್ ‘ನೆನಪುಗಳ ಮೆರವಣಿಗೆ’ ಅಂಕಣದಲ್ಲಿ ಪ್ರಸ್ತುತಪಡಿಸಿದ್ದಾರೆ. 

Read More