ದೊರೆ ಆರನೇ ಜಾರ್ಜ್ ಜೀವನದ ಒಂದು ಕತೆ ʻದ ಕಿಂಗ್ಸ್ ಸ್ಪೀಚ್ʼ

ದೊರೆಯ ಉಗ್ಗು ನಿವಾರಣೆ ಕುರಿತ ಪ್ರಯತ್ನಗಳು ಮುಂದುವರಿದ ಹಾಗೆ ಚಿತ್ರದಲ್ಲಿ ದೃಶ್ಯಗಳ ಒಟ್ಟಾರೆ ಭಾವದಲ್ಲಿ ತೀವ್ರತೆ ಹೆಚ್ಚಾಗುತ್ತದೆ. ಅವುಗಳಲ್ಲಿ ದೊರೆಯ ತಲ್ಲಣ, ತಳಮಳಗಳಿರುತ್ತವೆ, ತನ್ನ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮತ್ತು ಹಿಂಜರಿಕೆಗಳಿರುತ್ತವೆ. ಅಷ್ಟೇ ಅನುಮಾನ ಹಾಗೂ ರೋಷ ಉಗ್ಗಿನ ದೋಷ ನಿವಾರಣೆಗೆ ಪ್ರಯತ್ನಿಸುವ ಡಾಕ್ಟರ್ ಜೆಫ್ರಿ ರಶ್ಲಿ ಬಗ್ಗೆ ಇರುತ್ತದೆ. ಈ ಜೆಫ್ರಿಯಾದರೋ ಸಾಂಪ್ರದಾಯಿಕ ವಿದ್ಯೆ ಹೊಂದಿದ ಡಾಕ್ಟರಲ್ಲ. ಅವನ ಹಿನ್ನೆಲೆಯೇ ಬೇರೆ.

Read More