Advertisement

Tag: Travelogue

ನೈನಿತಾಲ್ ಟ್ರಿಪ್ ನಲ್ಲಿ ಭೇಟಿಯಾದ ಭಗಿನಿ ಮತ್ತು ಕವಿ

1929ರಲ್ಲಿ ಗಾಂಧೀಜಿ ಕೌಸಾನಿಗೆ ಬಂದು, ಒಂದು ಅತಿಥಿ ಗೃಹದಲ್ಲಿ 3 ತಿಂಗಳು ತಂಗಿದ್ದರು. ಅಲ್ಲಿ ಅವರು “ ಅನಾಸಕ್ತಿ ಯೋಗ” ದ ಬಗ್ಗೆ ಬರೆದ್ದದ್ದರಿಂದ ಆ ಗೆಸ್ಟ್ ಹೌಸ್ ಈಗ ಅನಾಸಕ್ತಿ ಆಶ್ರಮ ಎಂದು ಕರೆಸಿಕೊಳ್ಳುತ್ತಿದೆ. ಗಾಂಧಿ ಆಗ ಕೌಸಾನಿಯನ್ನು ‘ಸ್ವಿಟ್ಸರ್ ಲ್ಯಾಂಡ್’ ಎಂದು ಕರೆದಿದ್ದರಂತೆ. ಈಗ ಅನಾಸಕ್ತಿ ಆಶ್ರಮದಲ್ಲಿ ಮ್ಯೂಸಿಯಮ್, ಪುಸ್ತಗಳ ಸಂಗ್ರಹಾಲಯ ಮಾಡಲಾಗಿದೆ. ಸರ್ಕಾರದ ದೇಖ್‍ರೇಕಿಯಲ್ಲಿ ಇನ್ನೂ ಮೌನ ಮತ್ತು ಕಳಚಿಕೊಳ್ಳುವುದರ ಬಗ್ಗೆ ಆಸಕ್ತಿ ಹುಟ್ಟಿಸುತ್ತಾ ಸದ್ದು ಮಾಡದೆ ನಿಂತಿದೆ ಅನಾಸಕ್ತಿ ಆಶ್ರಮ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ  ಅಂಜಲಿ ರಾಮಣ್ಣ ಬರಹ ಇಂದಿನ ಓದಿಗಾಗಿ.

Read More

‘ಒಬ್ಬ ಸಾಮಾನ್ಯನೂ ರಾಮನೇ ಆಗಬಹುದು’

ಚಿಕ್ಕಮಗಳೂರಿನಲ್ಲಿ  ಬಾಬಾಬುಡನ್ ಗಿರಿಗೆ ತೆರಳಿ ದತ್ತಪೀಠದ ದರ್ಶನ ಪಡೆಯುವುದೊಂದು ಪ್ರೀತಿಯ ವಿಚಾರ. ಆದರೆ ಜನಜಂಗುಳಿಯ ನಡುವೆ ಕಿರಿದಾದ ಹಾದಿಯಲ್ಲಿ ಒಂದೊಂದೇ ಹೆಜ್ಜೆಯಿಟ್ಟು ಹೋದ ಬಳಿಕ ಮನಸ್ಸು ಮುದುಡಿದಂತಾಯಿತು. ನಿರಾಳವಾದ ವಾತಾವರಣದಲ್ಲಿ ಈ ಪರಿಸರವನ್ನು ಕಣ್ತುಂಬಿಕೊಂಡ ಬಾಲ್ಯದ ಕ್ಷಣಗಳು ನೆನಪಾದವು.  ಅಲ್ಲಿಂದ ಕೋದಂಡ ರಾಮ ಸೀತಾದೇವಿ ಮತ್ತು ಲಕ್ಷ್ಮಣನೊಡನೆ ತ್ರಿಭಂಗಿಯಲ್ಲಿ ನಿಂತಿರುವ ದೇವಸ್ಥಾನಕ್ಕೆ ತೆರಳಿದಾಗ ಅಲ್ಲೊಂದು ಸುಂದರವಾದ ವಿವರಣೆ ಸಿಕ್ಕಿತು. ಚಿಕ್ಕಮಗಳೂರು ಪ್ರವಾಸದ ನೆನಪುಗಳ ಬುತ್ತಿಯನ್ನು ಉಣಬಡಿಸಿದ್ದಾರೆ ಅಂಜಲಿ ರಾಮಣ್ಣ.

Read More

ಮಾರ್ಟಿನ್ ಲೂಥರ್ ಕಿಂಗ್ ನೆನಪಿನಲ್ಲಿ ಹಾಕಿದ ಹೆಜ್ಜೆಗಳು

ನಾನು ವಿದೇಶದಲ್ಲಿರುವ ಪರದೇಶಿ ಎನ್ನಿಸಲಿಲ್ಲ. ಅಮೆರಿಕ  ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ಆ ದಿನ ನನ್ನುಸಿರಿಗೆ ಉಸಿರು ಕೊಟ್ಟ ಮಾರ್ಟಿನ್. ನನಗೀಗ ಜೀವನ ಬೇಕು ಅನಿಸಲು ಶುರುವಾಯ್ತು. ಒಳಗಿನ ಕಣ್ಣು ಇಂಚಿಂಚೇ ತೆರೆಯ ಹತ್ತಿತು. ಮುಂದಿನ ಎಲ್ಲಾ ದಿನಗಳ ಪ್ರಯಾಣದಲ್ಲಿ ಅಲ್ಲಿನ ಎಲ್ಲೆಡೆಯಲ್ಲೂ ಕೆಳಮಟ್ಟದ ಕೆಲಸ ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಕೆಲಸಗಳನ್ನು ಕಪ್ಪು ಜನರೇ ಮಾಡುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಬಿಳಿಯರ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆನ್ನುವ ಹಪಾಹಪಿ ಅವರಲ್ಲಿ ಇನ್ನೂ ಜೀವಂತವಿರುವುದನ್ನು ಕಂಡೆ.
‘ಕಂಡಷ್ಟು ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಪಂಜಾಬಿಗೆ ಹೋಗಿ ಲಸ್ಸಿ ಕುಡಿಯದಿರೆ ಮೆಚ್ಚನಾ ಪರಮಾತ್ಮನು

ಅಮೃತಸರ ಸಿಖ್ಖರ ಮುಖ್ಯ ಸ್ಥಳವಾದರೂ ಇಲ್ಲಿಂದ 11 ಕಿಲೋಮೀಟರ್ ದೂರದಲ್ಲಿ ಇದೆ ಲವ-ಕುಶರ ಜನ್ಮಸ್ಥಾನ. ಈಗ ಅದನ್ನು ರಾಮತೀರ್ಥ ಮಂದಿರ ಎಂದು ಗುರುತಿಸಲಾಗಿದೆ. ಅಲ್ಲೊಂದು ಸಣ್ಣ ಗುಡಿ ಇದೆ. ಅದರ ಮುಂದೆ ಕುಳಿತಿದ್ದ ಹಿರಿಯರೊಬ್ಬರು ‘ಇಲ್ಲಿಗೆ ಯಾರೂ ಬರುವುದೇ ಇಲ್ಲ ಅದಕ್ಕೇ ನಿತ್ಯ ಪೂಜೆಯೂ ಇಲ್ಲ’ ಎಂದರು. ಸಲಾಕೆಯಿಂದ ಮಾಡಿದ್ದ ಬಾಗಿಲಿಗೆ ಬೀಗ ಹಾಕಿತ್ತು. ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ

Read More

ಲ್ಯಾಪ್ಲ್ಯಾಂಡ್: ಒಂದು ಕನಸಿನ ಪಯಣ

ನೋಡನೋಡುತ್ತಿದ್ದಂತೆ ಲ್ಯಾಪ್ಲಾಂಡ್ ಪ್ರವಾಸದ ದಿನ ಬಂದೆ ಬಿಟ್ಟಿತು. ಮ್ಯುನಿಕ್‌ನಿಂದ ಹೆಲ್ಸಿಂಕಿಗೆ ವಿಮಾನ. ಫಿನ್ಲ್ಯಾಂಡ್ ರಾಜಧಾನಿಯಾದ ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ತೀರದ ಒಂದು ನಗರ. ಹೆಲ್ಸಿಂಕಿ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಾಲ್ಟಿಕ್ ಸಮುದ್ರವೂ ಹೆಪ್ಪುಗಟ್ಟಿದ ದೃಶ್ಯಗಳು ವಿಮಾನದೊಳಗೆ ಕೂತಿದ್ದ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತು! ದೊಡ್ಡ ಹಡಗೊಂದು ಹೆಪ್ಪುಗಟ್ಟಿರುವ ಹಿಮವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್‌ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್‌ ಅಮೃತಾಪುರ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ