Advertisement

Tag: World Movie

ಸದ್ದು… ಇಲ್ಲಿ ಯುದ್ಧ ಕತೆ ಹೇಳುತ್ತಿದೆ…

ಮೇಲ್ನೋಟಕ್ಕೆ ಇದು ಪೌಲ್ ಮತ್ತು ಆತನ ಸ್ನೇಹಿತರ ಜೀವನದ ಕತೆ ಆದರೂ, ಅದರ ಜೊತೆಯಲ್ಲಿ ಯುದ್ಧವನ್ನು ಒಳಗಿನಿಂದ ಹೊರಗಿನಿಂದ ತೋರಿರುವ ರೀತಿ ಅನನ್ಯ. ಯುದ್ಧವೆಂದರೆ ಹಸಿವು. ನೆಲದ ಹಸಿವು. ಇದರ ಜೊತೆಯಲ್ಲಿ ದೇಹದ ಹಸಿವು ಹೆಣ್ಣಿನ ಹಸಿವು ಹೆಚ್ಚಾಗಿ ಯುದ್ಧದಲ್ಲೇ ಇದ್ದು ಬದುಕಿನ ಹಸಿವನ್ನು ಅದ್ಭುತವಾಗಿ ತೋರಿಸಿದ್ದಾರೆ, ಪ್ರತಿ ಸೈನಿಕನು ಕೊನೆ ಗಳಿಗೆಯಲ್ಲಿ ಬದುಕಲು ಒದ್ದಾಡುವ ಕ್ಷಣಗಳಿವೆ.
‘ಆಲ್ ಕ್ವೈಯೆಟ್ ಆನ್ ದ ವೆಸ್ಟರ್ನ್‌ ಫ್ರಂಟ್’ ಸಿನಿಮಾದ ಕುರಿತು ಜಯರಾಮಾಚಾರಿ ಬರಹ

Read More

ಏಕಾಂಗಿಯ ಸ್ವಗತಗಳು…

ಪ್ರಕಾಶನ ಸಂಸ್ಥೆಯ ಸಹಾಯಕಿ ಅವನ ಬಗ್ಗೆ ಹಿತವಾದ ಭಾವನೆಯಿಂದ ಪ್ರತಿಕ್ರಿಯಿಸುತ್ತಾಳೆ. ಇಂಟವ್ಯೂ ಮುಗಿದ ಮೇಲೆ ಭೇಟಿಯಾಗಲು ಇಷ್ಟಪಡುತ್ತಾಳೆ. ಪ್ರಕಾಶನದ ಒಡೆಯನಿಗೆ ಮಾತು ಮುಂದುವರಿಸಲು ಇಷ್ಟವಿರುತ್ತದೆ. ಆದರೆ ಆಂಡರ್ಸ್‌ನ ಶಿಥಿಲವಾದ ಅಂತರಂಗ ಅವನನ್ನು ವಿಪರೀತವಾಗಿ ವರ್ತಿಸುವಂತೆ ಮಾಡುತ್ತದೆ. ಅವನಿಂದ ಸಿವಿಯನ್ನು ಕಸಿದುಕೊಂಡು ಹಠಾತ್ತನೆ ಹೊರಡುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾದ ಸರಣಿ

Read More

ರಾಜಕೀಯ ಸ್ಥಿತಿಗೊಂದು ಪ್ರತಿಕ್ರಿಯೆ ಇರಾನ್‌ ನ ʻಕಾಂದಹಾರ್ʼ

ಮೊಹಿಸಿನ್ ಮಕ್ಬಲ್‌ಬಫ್ ಆಫ್ಘಾನಿಸ್ತಾನದ ಬಗ್ಗೆ ತಯಾರಿಸಿದ ಇತರ ಚಿತ್ರಗಳಿಗಿಂತ ಆಫ್ಘಾನಿಸ್ತಾನದಲ್ಲಿಯೇ ಚಿತ್ರೀಕರಣಗೊಂಡು ವಿಶೇಷ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ʻಕಾಂದಹಾರ್ʼ. ನರಕದಲ್ಲಿರುವವರ ಬಗ್ಗೆ ಅಲ್ಲಿಯೇ ಹೋಗಿ ಚಿತ್ರೀಕರಣ ಮಾಡುತ್ತೇನೆ ಎನ್ನುವ ಎದೆಗಾರಿಕೆ ಮಕ್ಬಲ್‌ಬಫ್‌ನದು. ತಾನು ಅಲ್ಲಿರುವಷ್ಟು ಕಾಲ ಪ್ರತಿದಿನವೂ ಒಂದು ಪರೀಕ್ಷೆಯಾಗಿತ್ತು, ಜೀವವನ್ನು ಎಡಗೈಯಲ್ಲಿ ಹಿಡಿದಿರಬೇಕಾಗಿತ್ತು. ಅಲ್ಲಿನ ಜನರ ಅನುಮಾನ, ಆತಂಕಗಳನ್ನು ತೀರ ಪ್ರಯಾಸದಿಂದ ನಿವಾರಿಸಬೇಕಾಗಿತ್ತು. ಚಿತ್ರದಲ್ಲಿ ನಟಿಸಲು ಅಲ್ಲಿನವರನ್ನೇ ಅವಲಂಬಿಸಬೇಕಾದ ಪ್ರಸಂಗವಿತ್ತು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇರಾನ್‌ ನ ʻಕಾಂದಹಾರ್ʼ ಸಿನಿಮಾದ ವಿಶ್ಲೇಷಣೆ

Read More

ಯುದ್ಧ ನಂತರದ‌ ಕತ್ತಲಲ್ಲಿ ಅರಿವಿನ ಬೆಳಕು

ಜೈನಾ ದುಬಾಯಿಂದ ಬೈರುತ್ ಗೆ ಬಂದು ಅಲ್ಲಿಂದ ಆಕ್ರಮಣಕ್ಕೆ ಒಳಗಾದ ಬಿಂಟ್ ಬಿಲ್‌ ಊರನ್ನು ತಲುಪಿರುತ್ತಾಳೆ. ಟೋನಿಯೊಂದಿಗೆ ಪ್ರಯಾಣ ಸಾಗುತ್ತಿದ್ದಂತೆ ಇಬ್ಬರಿಗೂ ತಮ್ಮಷ್ಟಕ್ಕೆ ಇರುವುದು ಅಸಹಜವೆನ್ನಿಸಿ, ನಿಧಾನವಾಗಿ ಕೇವಲ ವ್ಯಕ್ತಿಗಳಂತೆ ಇದ್ದವರು ಪರಸ್ಪರ ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಅವರ ಭಾವಗಳಲ್ಲಿ, ಮುಖಚಹರೆಗಳಲ್ಲಿ ವ್ಯಕ್ತವಾಗುವುದನ್ನು ಸಮೀಪ ಚಿತ್ರಿಕೆಗಳಲ್ಲಿ ನಿರೂಪಿತಗೊಂಡಿವೆ. ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಲೆಬನಾನ್‌ನ ʻಅಂಡರ್‌ ದ ಬಾಂಬ್ಸ್ʼ ಸಿನಿಮಾದ ವಿಶ್ಲೇಷಣೆ

Read More

ಸಮೀಪ ಚಿತ್ರಿಕೆಗಳಲ್ಲಿ ಕತೆ ಹೇಳುವ ಅಮೆರಿಕದ ʻಪ್ರೆಷಸ್ʼ

ಕ್ಲೇರೀಸ್‌ಗೆ ಹೊಸ ಸ್ಕೂಲಿನ ಟ್ರೈನ್ ಟೀಚರ್ ರೇನ್‌ಳ ಮಾತು, ವರ್ತನೆಗಳು ಅವಳೊಳಗೆ ಹುದುಗಿರುವ ಸಂಕಟವನ್ನು ತಕ್ಕಷ್ಟು ಉಪಶಮನ ಮಾಡುತ್ತವೆ. ತನಗೊಂದೂ ತಿಳಿಯುವುದಿಲ್ಲ, ಶುದ್ಧ ಅನಕ್ಷರಸ್ಥೆ ಎಂದು ಬೇಡಿಕೊಳ್ಳುವ ರೀತಿ ಅವಳ ವರ್ತನೆ. ಯಾರೂ ನನ್ನನ್ನು ಪ್ರೀತಿಸುವುದಿಲ್ಲ ಎಂದು ಕಣ್ಣೀರಿಡದೆ ಕಠಿಣವಾಗಿ ಹೇಳುತ್ತಾಳೆ. ಯಾರಿಲ್ಲದಿದ್ದರೂ ನಿನ್ನ ಮಕ್ಕಳು ನಿನ್ನನ್ನು ಪ್ರೀತಿಸುತ್ತವೆ ಎನ್ನುತ್ತಾಳೆ ಟೀಚರ್‌ ರೇನ್‌.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ಸರಣಿ

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ