ವಾಸ್ತವವಾಗಿ ನಮ್ಮ ಸುತ್ತಲಿನ ಸೃಷ್ಟಿಯೇ ಸೌಂದರ್ಯರಸಾನುಭವದ ಆಕರ. ಬಿರು ಬೇಸಿಗೆ. ಎಲ್ಲ ಸ್ತಬ್ಧವಾಗಿಬಿಟ್ಟಿದೆ. ಆಗ ಮೆಲ್ಲ ಮೆಲ್ಲಗೆ ಗಾಳಿ ಸುಳಿದರೆ ಸಾಕು ಆಹಾ ಎಂದು ಸಂತೋಷ ಪಡುತ್ತೇವೆ. ಎಲ್ಲೆಲ್ಲೂ ಗಾಳಿಯ ಸುಳಿವೇ ಇಲ್ಲ. ಆಗ ಇದ್ದಕಿದ್ದಂತೆ ಎನ್ನುವ ಹಾಗೆ ಗಾಳಿ ಬೀಸಿಬರುತ್ತದೆ. ಮರದಲ್ಲಿ ಎಲೆಗಳು, ರೆಂಬೆ ಕೊಂಬೆಗಳು ಅಲ್ಲಾಡತ್ತವೆ, ಆಗ ಎಷ್ಟು ಚೆನ್ನಾಗಿ ಮರ ನೃತ್ಯ ಮಾಡುತ್ತಾ ಇದೆಯಲ್ಲಾ ಎಂದು ಖುಷಿಯಾಗುತ್ತದೆ. ಬಳ್ಳಿಯಲ್ಲಿ ಎಲ್ಲೋ ಅಡಗಿಕೊಂಡಿರುವ ಮೊಗ್ಗು ಹೂವಾಗಿ ಅರಳುತ್ತದ. ಅದರ ಪರಿಮಳ ಘಂ ಎಂದು ನಮ್ಮನ್ನು ತಾಕುತ್ತದೆ. ಮನಸ್ಸು ಆಹಾ ಎಂದು ಸಂಭ್ರಮಿಸುತ್ತದೆ, ಇಂಥ ಎಲ್ಲ ಸಂದರ್ಭಗಳಲ್ಲಿ ಮನಸ್ಸು ಹುಲ್ಲಿಗಿಂತಲೂ ಹಗುರವಾಗುತ್ತದೆ, ಕೃಷ್ಣ ಅಲ್ಲಿ ನೆಲೆಯೂರುತ್ತಾನೆ ಎನ್ನುತ್ತಾರೆ ಪುತಿನ.
ಲೇಖಕಿ, ತತ್ವಶಾಶ್ತ್ರ ಪ್ರಾಧ್ಯಾಪಕಿ ಪದ್ಮಿನಿ ಹೆಗಡೆ ಬರೆದ ಕಾವ್ಯ ರಸಗ್ರಹಣ.

ನಮ್ಮ ಭಾರತೀಯ ಚಿಂತನೆಗೆ ಒಂದು ವಿಶೇಷ ಆಶಯ ಇದೆ.

ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ|
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ|
ಸ್ಥಿರೈರಂಗೈ ತುಷ್ಟು ವಾಙ ಸ್ತನೂಭಿಃ|
ವ್ಯಶೇಮ ದೇವಹಿತಂ ಯದಾಯುಃ|
ಸ್ವಸ್ತಿ ನಃ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು||
ಓಂ ಶಾಂತಿಃ ಶಾಂತಿಃ ಶಾಂತಿಃ

ಎಂಬುದು.ಈ ಶಾಂತಿ ಮಂತ್ರದ ಒಂದು ಮುಖ್ಯಾಂಶ ಕಿವಿಗಳಿಂದ ಒಳ್ಳೆಯದನ್ನು ಕೇಳೋಣ, ಕಣ್ಣುಗಳಿಂದ ಒಳ್ಳೆಯದನ್ನು ಕಾಣೋಣ. ದೇವಹಿತ ಎನ್ನುವುದೊಂದಿದೆ ಅದನ್ನು ಭಾವಿಸುತ್ತಾ ನಮ್ಮ ಆಯುಷ್ಯವನ್ನು ಕಳೆಯೋಣ ಎನ್ನುವುದು. ನಮ್ಮ ತೊಂದರೆಗಳ ಮೂಲವೆಲ್ಲಾ ಒಳ್ಳೆಯದನ್ನು ಕೇಳುವುದಕ್ಕೆ ನಮ್ಮ ಕಿವಿಗಳನ್ನು, ಒಳ್ಳೆಯದನ್ನು ಕಾಣುವುದಕ್ಕೆ ನಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಳ್ಳದೇ ಇರುವುದು ಮತ್ತು ಮನಸ್ಸನ್ನು ಹಿತವನ್ನು ಭಾವಿಸಲು ಸಿದ್ಧವಾಗಿ ಇರಿಸದಿರುವುದು. ಇದನ್ನೇ ಪುತಿನ ರವರು ಖಂಡ ದೃಷ್ಟಿ ಎನ್ನುತ್ತಾರೆ. ಅವರು ತಮ್ಮ ಶ್ರೀಹರಿ ಚರಿತದ ಅರಿಕೆಯಲ್ಲಿ ಖಂಡ ಮತ್ತು ಅಖಂಡ ದೃಷ್ಟಿಗಳ ನಡುವಿನ ಅಂತರವನ್ನು ಪ್ರಸ್ತಾಪಿಸಿ ನಮಗಿರಬೇಕಾದದ್ದು ಅಖಂಡ ದೃಷ್ಟಿ ಎನ್ನುತ್ತಾರೆ.

ಪು.ತಿ.ನ. ರವರ ಶ್ರೀಹರಿಚರಿತ ಒಂದು ಮಹತ್ವದ ಕೃತಿ. ಇದಕ್ಕೆ ಪ್ರತಿಷ್ಠಿತ ಪಂಪ ಪ್ರಶಸ್ತಿ ಬಂದಿದೆ. ಇದರದು ಬೃಹತ್ ಛಂದಸ್ಸು ಮತ್ತು ಭೃಂಗಿ ನಡೆ. ಶ್ರೀಹರಿಚರಿತ ಕಾವ್ಯವನ್ನು ಕೈಗೆತ್ತಿಕೊಂಡಾಗ ಹಲವಾರು ಪ್ರಶ್ನೆಗಳು ಮನಸ್ಸಿಗೆ ಬಂದೀತು. ಪುತಿನರವರು ಈ ಕೃತಿಯಲ್ಲಿ ಕೃಷ್ಣನನ್ನೇ ಕುರಿತು ಬರೆದಿರುವಾಗ ಇದಕ್ಕೆ ಶ್ರೀಹರಿಚರಿತ ಎಂದು ಹೆಸರಿಟ್ಟದ್ದು ಯಾಕೆ? ನಮಗೆ ಇಬ್ಬರು ಅಧಿದೈವಗಳು – ಹರಿ, ಹರ. ಹರಿ ಯಾರು? ಈ ಪ್ರಶ್ನೆಗೆ ಒಂದು ಉತ್ತರ ಅವನು ಅನುಪಮ, ಅಪ್ರಮೇಯ, ಪ್ರಣವ ಸ್ವರೂಪಿ, ತತ್ ಸತ್ ಎನ್ನುವ ವ್ಯಾಖ್ಯೆಗೆ ಮಾತ್ರ ನಿಲುಕುವವನು. ಇನ್ನೂ ಒಂದು ಉತ್ತರ ಇದೆ: ಸೃಷ್ಟಿಕರ್ತ ಆಗಿರುವ ಬ್ರಹ್ಮ ಸ್ಥಿತಿಕರ್ತ ಆಗಿರುವ ಹರಿಯ ನಾಭಿ ಕಮಲದಿಂದ ಮೂಡಿಬಂದ ಮಗ ಆಗಿರುವುದರಿಂದ ಹರಿ ಸೃಷ್ಟಿಯ ಮೂಲಾಧಾರನೂ ಹೌದು. ಹಾಗೆಯೇ ಯುಗ ಯುಗಗಳಲ್ಲೂ ಸಂಭವಿಸುವವನೂ ಹೌದು. ಕೃಷ್ಣ ಕಾಲ ದೇಶದ ಒಳಗಿನ ಹರಿಯ ಒಂದು ಅವತಾರ, ಹುಟ್ಟಿಬಂದವನು, ಸೃಷ್ಟಿಯ ಒಂದು ವಿಶಿಷ್ಟವಾದ ರೂಪ ಮಾತ್ರ. ಪುತಿನ ರವರ ವೈಯಕ್ತಿಕ ಅಧಿದೈವ ಶ್ರೀಹರಿಯೇ. ಅವರ ಹೃದಯದೊಳಗೆ ಸನ್ನಿಧಿಸಿದವನು ಶ್ರೀಪುರುಷನೇ, ಶ್ರೀಹರಿಯೇ. ಅವರ ಮೊದಲ ನಮಸ್ಕಾರ ಅವನಿಗೇ. ಹೀಗೆ ಈ ಕಾವ್ಯ ಶ್ರೀಹರಿ ಚರಿತ.

ಇನ್ನೊಂದು ಪ್ರಶ್ನೆ – ಶ್ರೀಕೃಷ್ಣನನ್ನೇ ಕುರಿತು ಪುತಿನ ರವರು ಏಕೆ ಕಾವ್ಯ ರಚಿಸಿದರು? ಎಲ್ಲಾ ದೇಶದ ಧಾರ್ಮಿಕ ಇತಿಹಾಸದಲ್ಲಿ ಒಂದು ಅಂಶ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ಅದು ಬಹು ಸಂಖ್ಯಾತರು ತಮ್ಮನ್ನು ಉದ್ಧಾರ ಮಾಡುವವನೊಬ್ಬ ಬರುತ್ತಾನೆ ಎಂದು ಉದ್ಧಾರಕನಿಗಾಗಿ ಕಾಯುತ್ತಾ ಇರುವುದು. ನಮ್ಮ ದೇಶದಲ್ಲಿ ಉದ್ಧಾರಕ ಯಾವುದೋ ಒಂದು ಕಾಲಘಟ್ಟದಲ್ಲಿ ಬಂದು ಮರೆಯಾಗಿ ಬಿಡುವವನು ಅಲ್ಲ. ಅವನು ಯುಗ ಯುಗಗಳಲ್ಲೂ ಕಾಣಿಸಿಕೊಳ್ಳುವವನು. ಉದ್ಧರಿಸುವ ಕೆಲಸ ಮನುಷ್ಯನ ರೂಪದಲ್ಲಿಯೇ ಆಗುತ್ತದೆ ಎಂದೇನೂ ಇಲ್ಲ. ಸೃಷ್ಟಿಯ ಯಾವ ರೂಪ, ಯಾರನ್ನು, ಯಾವ ಜನಸಮೂಹವನ್ನು ಉದ್ಧರಿಸುತ್ತದೆ ಎಂಬುದು ದೇವ ರಹಸ್ಯ. ನಮ್ಮಲ್ಲಿ ಅಧಿದೈವಕ್ಕೂ ಸೃಷ್ಟಿಗೂ ಭಿನ್ನಾ ಭಿನ್ನ ಸಂಬಂಧ. ಇಲ್ಲಿಯೂ ಕೃಷ್ಣಾವತಾರ ಆಗುವುದು ಉದ್ಧಾರಕನ ನಿರೀಕ್ಷೆಯಲ್ಲಿ ಇರುವಾಗಲೇ.

ನಮ್ಮಲ್ಲಿ ರಾಮಾಯಣ, ಮಹಾಭಾರತಗಳ ಜೊತೆಗೆ ಭಾಗವತವೂ ಇದೆ. ಅದು ಭೂಮಿಯಲ್ಲಿ ಇಂದ್ರಿಯ ಲೋಲುಪತೆ ಹೆಚ್ಚಾಗಿಬಿಟ್ಟಿತ್ತು. ಅಧಿಕಾರ, ಕೀರ್ತಿ ಮುಂತಾದ ವ್ಯಾಮೋಹಗಳಿಗೆ ಒಳಗಾಗಿ ಮನುಷ್ಯರು ಮೃಗಗಳಂತಾಗಿ ಬಿಟ್ಟಿದ್ದರು. ಇಂಥ ರಾಕ್ಷಸರನ್ನು ಸಂಹರಿಸುವುದಕ್ಕಾಗಿ ಶ್ರೀಹರಿ ಅವತರಿಸಿ ಬರಲು ಒಪ್ಪಿಕೊಂಡ ಎನ್ನುತ್ತದೆ. ಪುತಿನ ರವರ ಕಾವ್ಯದ-ಹೊನಲುಗಳನ್ನು ಗಮನಿಸಿದಾಗ ಅವರೂ ಕೃಷ್ಣನ ಅವತಾರಕ್ಕಾಗಿ ಕಾತರಿಸುತ್ತಿದ್ದರು ಎಂಬುದು ಸುಸ್ಪಷ್ಟ. ಅದನ್ನು ಶ್ರೀಹರಿಚರಿತದ ಅರಿಕೆಯಲ್ಲೂ ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿರುವ ಒಂದು ಸಂಗತಿ ಇದೆ. ಒಮ್ಮೆ ಪುತಿನರವರು ಮೇಲುಕೋಟೆಯಲ್ಲಿ ಇದ್ದರು. ಅಂದು ಚೆಲುವ ನಾರಾಯಣನ ಉತ್ಸವ ಮೂರ್ತಿಯ ಮೆರವಣಿಗೆ. ಅದೇ ದಿನ ಹೆಚ್. ಎಸ್. ವೆಂಕಟೇಶಮೂರ್ತಿಯವರು ಅವರ ಮನೆಗೆ ಬಂದಿದ್ದರು. ಪು.ತಿ.ನ. ರವರಿಗೆ ಉತ್ಸವದ ವಿಷಯ ಮರೆತುಹೋಯಿತು. ವೆಂಕಟೇಶಮೂರ್ತಿಯವರ ಜೊತೆಯಲ್ಲಿ ಮಾತಾಡುತ್ತಾ ಕುಳಿತು ಬಿಟ್ಟರು. ಅವರ ಹೆಂಡತಿ ಅವರನ್ನು ಎಚ್ಚರಿಸಿದ ಕೂಡಲೇ ಅವರು ಸುಡು ಬಿಸಿಲನ್ನೂ ಲೆಕ್ಕಿಸದೆ ಕಾಲಿಗೆ ಚಪ್ಪಲಿಯನ್ನೂ ಹಾಕಿಕೊಳ್ಳದೆ ಎರಡು ಮೂರು ಬೀದಿಗಳನ್ನು ದಾಪುಗಾಲಿನಿಂದ ದಾಟಿ ಚೆಲುವ ನಾರಾಯಣನನ್ನು ಕಂಡು ಧನ್ಯತೆಯನ್ನು ಅನುಭವಿಸಿದುದು ಅವರ ಮುಖದ ಮೇಲೆ ಎದ್ದು ಕಾಣುತ್ತಿತ್ತು. ಒಂದು ಕಡೆಯ ನೋಟ ಅಪೂರ್ಣ ಎನ್ನಿಸಿ ಮತ್ತೂ ಮೇಲಿನ ಸ್ಥಳಕ್ಕೆ ಹೋಗಿ ತೃಪ್ತಿಯಿಂದ ಚೆಲುವನಾರಾಯಣನ ದರ್ಶನ ಪಡೆದರು. ಈ ಸಂಗತಿಯನ್ನು ಹೆಚ್. ಎ. ವಿ. ಯವರು ತಮ್ಮ ಒಂದು ಲೇಖನದಲ್ಲಿ ವರ್ಣಿಸಿದ್ದಾರೆ.

(ಫೋಟೋ: ರಶೀದ್) 

ಪುತಿನರವರಿಗೆ ಚೆಲುವನಾರಾಯಣ ಬರಿಯ ವಿಗ್ರಹ ಅಲ್ಲ. ಅದು ಶ್ರೀಹರಿಯ ಅರ್ಚಾವತಾರ. ಅವರು ತಮ್ಮ ಒಳಗಣ್ಣಲ್ಲಿ ಕಾಣುವುದು ದ್ವಾಪರಯುಗದಲ್ಲಿ ಒಂದು ನಿರ್ದಿಷ್ಟ ಕಾಲದಲ್ಲಿ ಹುಟ್ಟಿ ನಿರ್ದಿಷ್ಟ ಕಾಲದಲ್ಲಿ ಮರಣಿಸಿದ ಪರಮಹಂಸನನ್ನೇ, ಶ್ರೀಹರಿಯ ಒಂದು ಅವತಾರ ಆದ ಕೃಷ್ಣನನ್ನೇ. ಕನಕದಾಸರ ಒಂದು ಕೃತಿ ಇದೆ. ಅದು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ನಿನ್ನೊಳು ದೇಹವೋ ಕೃಷ್ಣಾ ಎನ್ನುವ ಸಾಲಿನಿಂದ ಆರಂಭವಾಗುತ್ತದೆ. ಅದರ ಕೊನೆಯಲ್ಲಿ ನಾ ನಿನ್ನೊಳಗೋ ನೀನು ನನ್ನೊಳಗೋ ಕೃಷ್ಣಾ ಎಂದು ಕನಕದಾಸರು ಉದ್ಗರಿಸುತ್ತಾರೆ. ಅವರ ಹಾಗೆ ಪುತಿನರವರದೂ ಕೃಷ್ಣ-ಅದ್ವೈತಾನುಭೂತಿಯೇ.

ಇನ್ನೊಂದು ಪ್ರಶ್ನೆ – ಕೃಷ್ಣ ಪುತಿನ ರವರಿಗೆ ಮುಖ್ಯವಾದರೆ ಅದು ವೈಯಕ್ತಿಕ; ಆದರೆ ಅವರು ಎಲ್ಲರಿಗೂ ಕೃಷ್ಣ ಮುಖ್ಯ ಎನ್ನುತ್ತಾರೆ, ಅದು ಯಾಕೆ? ಪುತಿನ ಅನೇಕ ಕಾರಣಗಳನ್ನು ಮುಂದುಮಾಡುತ್ತಾರೆ. ಅವುಗಳಲ್ಲಿ ಮುಖ್ಯವಾದದ್ದು ನಾಲ್ಕು
ಅ) ಮೊದಲನೆಯದು  ಮೊದಲೇ ನಾವು ಇಂದ್ರಿಯ ಲೋಲುಪರು, ಅದು ರಾಕ್ಷಸರ ಹಾಗೆ ವರ್ತಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ, ಇನ್ನು ನಾವು ಆದರಿಸುವ ವಿಜ್ಞಾನದ ಆಧಾರ ಇಂದ್ರಿಯ ಗ್ರಹಿಕೆಯೇ. ಅದು ವಾಸ್ತವಿಕವಾಗಿ ವಾಮನ ಆಗಿರದೆ ತ್ರಿವಿಕ್ರಮನಾಗಿದೆ. ಅದರ ಒಂದು ಹೆಜ್ಜೆ ವಸ್ತುಗಳನ್ನೆಲ್ಲ ಅಳೆದುಬಿಡುತ್ತದೆ. ಇನ್ನೊಂದು ಹೆಜ್ಜೆ ಮನಸ್ಸನ್ನು ಸಂಪೂರ್ಣವಾಗಿ ಆಕ್ರಮಿಸಿಬಿಡುತ್ತದೆ, ಮೂರನೆಯ ಹೆಜ್ಜೆ ಎದೆಯನ್ನು (ಹೃದಯವನ್ನು) ಆರಿಸಿಬಿಡುತ್ತದೆ. ಕೃಷ್ಣನಾದರೋ ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡವನು. ಮೂಲಾಧಾರದಲ್ಲಿ ಇರುವ ಜ್ಞಾನಶಕ್ತಿ, ಕ್ರಿಯಾಶಕ್ತಿ ಮತ್ತು ಇಚ್ಛಾಶಕ್ತಿಗಳನ್ನು ಸಹಸ್ರಾರದಳದಲ್ಲಿರುವ ಶಿಖೆಯವರೆಗೆ ವಿಸ್ತರಿಸಿದ ಪರಮ ಜ್ಞಾನಿ, ಪರಮ ಶಕ್ತಿವಂತ ಮತ್ತು ಪರಮ ಕ್ರಿಯಾಶಾಲಿಯಾದ ಪರಮಹಂಸ.

ಆ) ಎರಡನೆಯದು ಕೃಷ್ಣ ಫಲವಿರಕ್ತಿಯನ್ನು ಹೇಳಿದನೇ ವಿನಃ ಭೋಗವಿರಕ್ತಿಯನ್ನು ಹೇಳಲಿಲ್ಲ. ಅಯುಕ್ತ ಭೋಗವನ್ನು ಮಾತ್ರ ಬೇಡ ಎಂದು ಕೃಷ್ಣ ನಿಷೇಧಿಸುತ್ತಾನ. ಲೋಕದಿಂದ ಸುಖಕ್ಕೆ ಬೆಲೆ, ಸುಖದಿಂದ ಲೋಕಕ್ಕೆ ಬೆಲೆ. ನಮ್ಮ ಪ್ರಾಪಂಚಿಕ ಜೀವನವನ್ನು ಗಮನಿಸಿದರೆ ಮಂಗಳ ಹಿತ ಉನ್ನತಿ ಎನ್ನುವ ಶಿವಸತ್ವವು ಅದರ ಮೂಲಾಧಾರವಾಗಿದೆ ಎಂಬುದೂ, ಅದು ಚಲಿಸುವ ಮಾರ್ಗದ ಅಕ್ಷವೂ ಮಂಗಳ ಹಿತ ಉನ್ನತಿಯೇ ಎಂಬುದೂ ಅರ್ಥವಾಗುತ್ತದೆ. ಅದಕ್ಕೆ ಒಂದು ಸಾಕಾರ ರೂಪ, ಒಂದು ಕಥನಾತ್ಮಕ ಚರಿತ್ರೆ ಶ್ರೀಕೃಷ್ಣನ ಲೀಲಾ ವಿಭೂತಿಗಳು.

ಪುತಿನರವರಿಗೆ ಚೆಲುವನಾರಾಯಣ ಬರಿಯ ವಿಗ್ರಹ ಅಲ್ಲ. ಅದು ಶ್ರೀಹರಿಯ ಅರ್ಚಾವತಾರ. ಅವರು ತಮ್ಮ ಒಳಗಣ್ಣಲ್ಲಿ ಕಾಣುವುದು ದ್ವಾಪರಯುಗದಲ್ಲಿ ಒಂದು ನಿರ್ದಿಷ್ಟ ಕಾಲದಲ್ಲಿ ಹುಟ್ಟಿ ನಿರ್ದಿಷ್ಟ ಕಾಲದಲ್ಲಿ ಮರಣಿಸಿದ ಪರಮಹಂಸನನ್ನೇ, ಶ್ರೀಹರಿಯ ಒಂದು ಅವತಾರ ಆದ ಕೃಷ್ಣನನ್ನೇ. ಕನಕದಾಸರ ಒಂದು ಕೃತಿ ಇದೆ. ಅದು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ನಿನ್ನೊಳು ದೇಹವೋ ಕೃಷ್ಣಾ ಎನ್ನುವ ಸಾಲಿನಿಂದ ಆರಂಭವಾಗುತ್ತದೆ.

ಇ) ಮೂರನೆಯದು ಶ್ರೀಕೃಷ್ಣ ಸ್ವಾಂತನಲ್ಲ, ಸ್ವಕೇಂದ್ರಿತನಲ್ಲ. ಅವನು ಸ್ಥಿತಪ್ರe, ಸಮಷ್ಠಿ ತತ್ತ್ವದ ಪ್ರತೀಕ. ವ್ಯಷ್ಟಿ ಕೊಡುವವನು. ಸಮಷ್ಟಿ ವಿತರಣೆ ಮಾಡುವವನು. ಸಮಷ್ಟಿ ಪ್ರೀತಿ-ದ್ವೇಷರಹಿತ. ಅದರದು ಸಮದೃಷ್ಟಿ, ವ್ಯಷ್ಟಿಗೂ ಸಮಷ್ಟಿಗೂ ಇರುವ ಸಂಬಂಧ ಆದಾನ ಪ್ರದಾನ ರೂಪದ ಅನ್ಯೋನ್ಯತೆ. ಇಬ್ಬರಿಗೂ ಕೊಡುವುದೇ ಕರ್ತವ್ಯ. ಸ್ವ ಇಚ್ಛೆಯಿಂದ ಕೊಡಬೇಕು ಎನ್ನುವ ಮನಸ್ಸು ಗಾಢ ವಿಶ್ವಾಸ, ಪ್ರೀತಿ, ಚೆನ್ನಾಗಿರಿಸಬೇಕು ಎನ್ನುವ ಭಾವವೇ ಮೈತ್ರಿs. ರಾಷ್ಟ್ರನಾಯಕರಿಗೂ ಪ್ರಜೆಗಳಿಗೂ ಮಧ್ಯೆ ಇರಬೇಕಾದದ್ದು ಮೈತ್ರಿಯೇ. ಅಸಂಗ್ರಹದಿಂದ ಲೋಕಸಂಗ್ರಹ, ತ್ಯಾಗದಿಂದ ಭೋಗ, ಕರ್ಮದಿಂದ ನೈಷ್ಕರ್ಮ್ಯ  ಇದು ಲೋಕನಾಯಕರ ಕರ್ತವ್ಯ. ಇದೇ ಪ್ರಜಾಪ್ರಭುತ್ವ ಎನ್ನುವುದರ ನಿಜವಾದ ಅರ್ಥ.

ಈ) ನಾಲ್ಕನೆಯದು ಸಮಷ್ಠಿ ಪ್ರಜ್ಞೆ ನಮ್ಮ ಅನುಭವಕ್ಕೆ ಬರುವಂತಹುದು. ನಮ್ಮ ಶರೀರದ ಅಂಗಾಂಗಗಳು ತಾವೇ ತಾವಾಗಿ ಪರಸ್ಪರ ಪೂರಕವಾಗಿ, ಪಕ್ಷಪಾತರಹಿತವಾಗಿ, ನಿಯಮಬದ್ಧವಾಗಿ ಕೆಲಸ ಮಾಡುತ್ತವೆ. ನೈಸರ್ಗಿಕ ಕ್ರಿಯೆಗಳೂ ಹಾಗೆಯೇ. ಪ್ರಕೃತಿಯ ಇಂಥ ಕರ್ಮಯೋಗದಿಂದಲೇ ನಾವು ಬದುಕಿರುವುದು. ಈ ಕರ್ಮಯೋಗವನ್ನೇ ಸನಾತನ ಧರ್ಮ ಎನ್ನುವುದು, ಇದು ಸೃಷ್ಟಿಯ ಮೂಲದಲ್ಲೇ ಇರುವಂತಹುದು. ಅರಿಷಡ್ವರ್ಗಗಳಿಂದ ನಾವು ಪೀಡಿತರಾಗಿದ್ದರೂ ಸಹ ನಮ್ಮಲ್ಲಿ ಸಮಷ್ಠಿ ಪ್ರಜ್ಞೆ ಖಂಡವಾಗಿಯಾದರೂ ಇರುತ್ತದೆ. ಮಾನವ ಸಮಾಜ ದುಸ್ಥಿತಿಗೆ ಇಳಿದಾಗ ಸಮಾಜದ ಸದಸ್ಯರಲ್ಲಿ ಅಡಗಿರುವ ಸಮಷ್ಠಿ ಪ್ರಜ್ಞೆ ಜಾಗೃತವಾಗುತ್ತದೆ. ಸಮಾಜವನ್ನು ಸುಸ್ಥಿತಿಗೆ ತರಬೇಕೆನ್ನುವ ಮನಸ್ಥಿತಿ ಗಾಢವಾಗುತ್ತದೆ. ಖಂಡ ದೃಷ್ಠಿಗಳನ್ನು ಅಖಂಡಗೊಳಿಸಲು ಸಮಷ್ಠಿಯ ನಿಯೋಗಿಗಳು ಹುಟ್ಟುತ್ತಲೇ ಇರುತ್ತಾರೆ. ಇಂತಹವರಲ್ಲಿ ಕೃಷ್ಣನೂ ಒಬ್ಬ. ಶ್ರೀ ಕೃಷ್ಣ ಹೇಳುವ ಕರ್ಮಯೋಗ ಸೋಮಾರಿಗಳಿಗೆ, ಲೋಭಿಗಳಿಗೆ, ಶೋಷಕರಿಗೆ ಎಡೆಕೊಡದೇ ಇರುವ ವ್ಯವಸ್ಥೆ. ಇದನ್ನು ನಮ್ಮ ಸಾಂಸ್ಕೃತಿಕ ಪ್ರಜ್ಞೆಯಲ್ಲಿ ನೆಲೆಗೊಳಿಸುವುದೇ ನಮ್ಮ ಕರ್ಮಸ್ವಾತಂತ್ರ್ಯ. ಇಂಥ ಕೃಷ್ಣ ಎಲ್ಲಾ ಕಾಲಕ್ಕೂ ಎಲ್ಲರಿಗೂ ಪ್ರಸ್ತುತ ಆಗದೇ ಇರಲು ಹೇಗೆ ಸಾಧ್ಯ ಎನ್ನುತ್ತಾರೆ ಪುತಿನ.

ಮತ್ತೊಂದು ಪ್ರಶ್ನೆ ಶ್ರೀಹರಿ ಚರಿತ ಕಾವ್ಯ ರೂಪದಲ್ಲಿಯೇ ಯಾಕೆ? ನಮ್ಮ ಜೀವನಕ್ಕೆ ಸಂತೃಪ್ತಿ ದೊರೆಯುವುದು ಸೌಂದರ್ಯದ ರಸಾನುಭವ ಆದಾಗಲೇ. ವಾಸ್ತವವಾಗಿ ನಮ್ಮ ಸುತ್ತಲಿನ ಸೃಷ್ಟಿಯೇ ಸೌಂದರ್ಯರಸಾನುಭವದ ಆಕರ. ಬಿರು ಬೇಸಿಗೆ. ಎಲ್ಲ ಸ್ತಬ್ಧವಾಗಿಬಿಟ್ಟಿದೆ. ಆಗ ಮೆಲ್ಲ ಮೆಲ್ಲಗೆ ಗಾಳಿ ಸುಳಿದರೆ ಸಾಕು ಆಹಾ ಎಂದು ಸಂತೋಷ ಪಡುತ್ತೇವೆ. ಎಲ್ಲೆಲ್ಲೂ ಗಾಳಿಯ ಸುಳಿವೇ ಇಲ್ಲ. ಆಗ ಇದ್ದಕಿದ್ದಂತೆ ಎನ್ನುವ ಹಾಗೆ ಗಾಳಿ ಬೀಸಿಬರುತ್ತದೆ. ಮರದಲ್ಲಿ ಎಲೆಗಳು, ರೆಂಬೆ ಕೊಂಬೆಗಳು ಅಲ್ಲಾಡತ್ತವೆ, ಆಗ ಎಷ್ಟು ಚೆನ್ನಾಗಿ ಮರ ನೃತ್ಯ ಮಾಡುತ್ತಾ ಇದೆಯಲ್ಲಾ ಎಂದು ಖುಷಿಯಾಗುತ್ತದೆ. ಬಳ್ಳಿಯಲ್ಲಿ ಎಲ್ಲೋ ಅಡಗಿಕೊಂಡಿರುವ ಮೊಗ್ಗು ಹೂವಾಗಿ ಅರಳುತ್ತದ. ಅದರ ಪರಿಮಳ ಘಂ ಎಂದು ನಮ್ಮನ್ನು ತಾಕುತ್ತದೆ. ಕಣ್ಣು ಹೊರಳಿಸಿ, ಮೂಗು ಅರಳಿಸಿ ಆ ಪರಿಮಳವನ್ನು ಆಸ್ವಾದಿಸುತ್ತೇವೆ. ಗಿಡಗಳ ಪೊದರು. ಅಲ್ಲಿ ಒಂದು ಸಣ್ಣ ಹಕ್ಕಿ. ಅದು ಚಿಂವ್ ಚಿಂವ್ ರಾಗ ಪಾಡುತ್ತದ. ಆಗ ಎಷ್ಟು ಚೆನ್ನಾಗಿ ಸ್ವರ ಸ್ಥಾನಗಳೆಲ್ಲ ಸರಿಯಾಗಿ ಇರುವ ಹಾಗೆ ಇದು ಹಾಡುತ್ತಿದೆಯಲ್ಲ ಎಂದು ಮನಸ್ಸು ಮೆಚ್ಚಿಕೊಳ್ಳುತ್ತದೆ. ಆಗ ಮಾತ್ರ ಬೆಳಗಾಗಿದೆ, ಹಸಿರು ಎಲೆ ಹುಲ್ಲು ಪೊದರುಗಳ ಮೇಲೆ ಮಂಜಿನ ಹನಿಗಳು ಕೂತಿವೆ, ಅವುಗಳ ಮೇಲೆ ಸೂರ್ಯನ ಕಿರಣ ತಾಗಿ ಅವು ಫಳ ಫಳ ಎಂದು ಹೊಳೆಯುತ್ತಿವೆ, ಮನಸ್ಸು ಆಹಾ ಎಂದು ಸಂಭ್ರಮಿಸುತ್ತದೆ, ಇಂಥ ಎಲ್ಲ ಸಂದರ್ಭಗಳಲ್ಲಿ ಮನಸ್ಸು ಹುಲ್ಲಿಗಿಂತಲೂ ಹಗುರವಾಗುತ್ತದೆ, ಕೃಷ್ಣ ಅಲ್ಲಿ ನೆಲೆಯೂರುತ್ತಾನೆ ಎನ್ನುತ್ತಾರೆ ಪುತಿನ.

ಮೂರನೆಯದು ಶ್ರೀಕೃಷ್ಣ ಸ್ವಾಂತನಲ್ಲ, ಸ್ವಕೇಂದ್ರಿತನಲ್ಲ. ಅವನು ಸ್ಥಿತಪ್ರe, ಸಮಷ್ಠಿ ತತ್ತ್ವದ ಪ್ರತೀಕ. ವ್ಯಷ್ಟಿ ಕೊಡುವವನು. ಸಮಷ್ಟಿ ವಿತರಣೆ ಮಾಡುವವನು. ಸಮಷ್ಟಿ ಪ್ರೀತಿ-ದ್ವೇಷರಹಿತ. ಅದರದು ಸಮದೃಷ್ಟಿ, ವ್ಯಷ್ಟಿಗೂ ಸಮಷ್ಟಿಗೂ ಇರುವ ಸಂಬಂಧ ಆದಾನ ಪ್ರದಾನ ರೂಪದ ಅನ್ಯೋನ್ಯತೆ. ಇಬ್ಬರಿಗೂ ಕೊಡುವುದೇ ಕರ್ತವ್ಯ. ಸ್ವ ಇಚ್ಛೆಯಿಂದ ಕೊಡಬೇಕು ಎನ್ನುವ ಮನಸ್ಸು ಗಾಢ ವಿಶ್ವಾಸ, ಪ್ರೀತಿ, ಚೆನ್ನಾಗಿರಿಸಬೇಕು ಎನ್ನುವ ಭಾವವೇ ಮೈತ್ರಿs. ರಾಷ್ಟ್ರನಾಯಕರಿಗೂ ಪ್ರಜೆಗಳಿಗೂ ಮಧ್ಯೆ ಇರಬೇಕಾದದ್ದು ಮೈತ್ರಿಯೇ. ಅಸಂಗ್ರಹದಿಂದ ಲೋಕಸಂಗ್ರಹ, ತ್ಯಾಗದಿಂದ ಭೋಗ, ಕರ್ಮದಿಂದ ನೈಷ್ಕರ್ಮ್ಯ  ಇದು ಲೋಕನಾಯಕರ ಕರ್ತವ್ಯ. ಇದೇ ಪ್ರಜಾಪ್ರಭುತ್ವ ಎನ್ನುವುದರ ನಿಜವಾದ ಅರ್ಥ.

ಶ್ರೀಹರಿಯ ಅವತಾರ ಆದ ಕೃಷ್ಣ ಸಹಜವಾಗಿ ಚೆಲುವ, ಸಮ್ಮೋಹಕ, ಎಲ್ಲ ಸಿರಿ ಸೊಬಗುಗಳ ಕಳೆಗಳ ಗಣಿ; ಅವನು ದಿನಕರ ಕರಧರ ಸುರಚಿರ ಮರಕತ ಮಣಿಸಮ(ನಾದ) ಸುಂದರ; ತಿದ್ದಿದ (ಹಣೆ) ನೊಸಲು, ಮುದ್ದುಗೊಳಿಪ ಕುರುಳು, ಚಿಗುರು ತುಟಿಯ ಮಂದಹಾಸ ಉಳ್ಳವನು; ಕೌಸ್ತುಭ ಮಣಿಯಿಂದ ಬೆಳಗುತ್ತಿರುವವನು; ಕಾಮನಬಿಲ್ಲಿನಂತಹ ವರ್ಣರಂಜಿತ ದುಕೂಲ ಉಟ್ಟ ಚೆಲುವರಾಯ. ಇಷ್ಟಕ್ಕೂ ಕೃಷ್ಣ ಎಂದರೆ ಯಾರು? ಅವನು ಕವಿಯ ವಾಕ್ಕಿಗೆ ವಶನಾಗುವ ಲೀಲಾ ವಿನೋದಿ ಎನ್ನುತ್ತಾರೆ ಪುತಿನ. ಸೃಷ್ಟಿಯ ಮೂಲಾಧಾರ ಆದ ಪರಬ್ರಹ್ಮ ಆನಂದ ಸ್ವರೂಪಿ. ಆನಂದರಸವೇ ಸರಸ್ವತಿ, ಕಾವ್ಯ ಸರಸ್ವತಿಯೇ ರಸ, ಕಾವ್ಯ ರಚನೆ ಎಂದರೆ ಶ್ರೀ ಹರಿ ಸ್ಮೃತಿ, ಶ್ರೀಹರಿ ಸ್ಮೃತಿ ಎಂದರೆ ಕಾವ್ಯ ರಚನೆ ಎನ್ನುತ್ತಾರೆ ಪು.ತಿ.ನ.

ಪುತಿನರವರ ಕಠಿಣವಾದ ಭಾಷೆಯೂ ನಮಗೆ ಪ್ರಶ್ನಾರ್ಥಕ. ಇದನ್ನು ಒಂದು ದೃಷ್ಟಾಂತದಿಂದ ಅರ್ಥಮಾಡಿಕೊಳ್ಳಬಹುದು. ನಮ್ಮ ಬಹಳಷ್ಟು ಪ್ರಾಚೀನ ದೇವಸ್ಥಾನಗಳು ಎತ್ತರವಾದ ಕಡಿದಾದ ಬೆಟ್ಟ ಗುಡ್ಡಗಳ ಮೇಲೆ ಇರುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಒಂದು ಕಾರಣ ನಮಗೆ ದೇವರನ್ನು ನೋಡಲೇ ಬೇಕು ಎನ್ನುವ ಭಾವ ಉತ್ಕಟವಾಗಿ ಇರಬೇಕು ಎನ್ನುವುದು. ಸುಲಭವಾಗಿ ಸಿಗುವ ದೇವರನ್ನು ನೋಡಿದಾಗ ನಾವೇನು ಮಾಡುತ್ತೇವೆ? ನಮಸ್ಕಾರ ಮಾಡಿದ ಹಾಗೆ ಕಣ್ಣಲ್ಲೋ, ಕೈಯಲ್ಲೋ, ತಲೆಯಲ್ಲೋ ಅಭಿನಯ ಮಾಡಿ ಹಾಗೇ ಭರ್ ಎಂದು ಹೋಗಿಬಿಡುತ್ತೇವೆ. ಆದರೆ ಅದೇ ಮೆಟ್ಟಿಲುಗಳನ್ನು ಒಂದಾದ ಮೇಲೆ ಒಂದರಂತೆ ಹತ್ತಿಯೋ, ಕಡಿದಾದ ದಾರಿಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತಲೋ ದೇವಾಲಯವನ್ನು ತಲುಪಿದರೆ ನಮ್ಮ ಸಂತೋಷ ಅತಿಶಯವಾದದ್ದೇ ಆಗಿರುತ್ತದೆ. ಹಾಗೆಯೇ ಪು.ತಿ.ನ. ರವರ ನಾರಿಕೇಳಪಾಕದ ಭಾಷೆ.

ಅದರ ಪದರಗಳನ್ನು ಬಿಡಿಸುತ್ತಾ ಅವರು ಯಾಕೆ ಈ ಪದಗಳನ್ನು ಬಳಸಿದ್ದಾರೆ, ಈ ರೀತಿಯ ವರ್ಣನೆಗಳನ್ನು ಯಾಕೆ ಮಾಡುತ್ತಿದ್ದಾರೆ ಎಂದೆಲ್ಲಾ ಎಚ್ಚರಿಕೆಯಿಂದ ಪರಿಶೀಲನೆ ಮಾಡತ್ತಾ ಹೋದಾಗ ನಮ್ಮ ಕಣ್ಮುಂದೆ ಅವರು ಮಾಡಿರುವ ವರ್ಣನೆ, ಪದಗಳ ಹೊಳಹ ಸ್ಪಷ್ಟವಾಗಿ ಮೂಡುತ್ತದೆ. ಅವರು ಮಾಡುವ ತರ್ಕ, ಅವರ ಸ್ವ ಅನುಭವದ ಸಾರ್ವಕಾಲಿಕತೆ ಇವುಗಳ ಸೊಬಗು ಮನಮುಟ್ಟುತ್ತದೆ. ನಾವೂ ಅವರ ಜೊತೆಯಲ್ಲಿ ಚಿಂತನ ಮಂಥನ ಮಾಡುವ ಹಾಗೆ ಆಗುತ್ತದೆ. ಹೀಗೆ ಆಗಬೇಕು ಎನ್ನುವುದೇ ಪು.ತಿ.ನ ರವರ ಆಸೆ. ಅದರಿಂದಲೇ ಅವರು ನಮ್ಮ ಎಚ್ಚರದ ಅರಿವು ಒಂದು ಹೆಜ್ಜೆಗೆ ವಸ್ತು ಪ್ರಪಂಚವನ್ನು, ಇನ್ನೊಂದು ಹೆಜ್ಜೆಗೆ ಚಿಂತನ ಪ್ರಪಂಚವನ್ನು, ಕೊನೆಯ ಹೆಜ್ಜೆಗೆ ಭಾವ ಪ್ರಪಂಚವನ್ನು ವಾಮನನ ಹಾಗೆ ತ್ರಿವಿಕ್ರಮ ಆಗಿ ಬೆಳೆದು ಅಳೆಯುತ್ತದೆ, ನಮ್ಮನ್ನು ಸಂಪೂರ್ಣವಾಗಿ ಆವರಿಸಿ ಸಂತೃಷ್ಣ ಸಂತೃಪ್ತ ಆಗುತ್ತದೆ; ಆ ಅರಿವಿಗೆ ಶರಣು; ಅದೇ ತನ್ನ ಕಾಪು, ರಕ್ಷಾಕವಚ ಎನ್ನುತ್ತಾರೆ ಪ್ರಣಾಮ ಉಲ್ಲಾಸದಲ್ಲಿ ಪುತಿನ.

ಇನ್ನು ಶ್ರೀಹರಿಚರಿತದ ಸಾರ ಯಾವುದು ಎನ್ನುವುದು ಒಟ್ಟು ಕಾವ್ಯಕ್ಕೆ ಸಂಬಂಧಿಸಿದ ಮುಖ್ಯ ಪ್ರಶ್ನೆ. ಪುತಿನ ರವರಿಗೆ ಅನ್ನಿಸುವುದು ಸೃಷ್ಠಿಯೇ ಮುಖ್ಯವಾದದ್ದು ಎಂದು, ಯಾಕೆ ಎಂದರೆ ಅದು ಆಕರ್ಷಕವಾದದ್ದು ಮತ್ತೆ ಆನಂದವನ್ನು ಕೊಡುವಂತಹುದು. ಪರಮ ವಾಸ್ತವಿಕತೆ ನಿರಾಕಾರವೇ. ಆದರೆ ನಮ್ಮ ಗಮನಕ್ಕೆ ಮೊದಲು ಬರುವುದು ಸಾಕಾರವೇ. ಸಾಕಾರ ಅಂದರೆ ಸೃಷ್ಟಿ ಮತ್ತು ಸ್ಥಿತಿ ಎರಡೂ ಇರುವಂತಹುದು. ಇದರ ಅನುಭವ ಆಗುವುದು ಇಂದ್ರಿಯಗಳಿಂದ. ಇಂದ್ರಿಯಗಳ ಮಿತಿಯೇ ಸಾಕಾರದ ಗ್ರಹಿಕೆಯ ಮಿತಿಯೂ ಹೌದು. ಈ ಮಿತಿಯನ್ನು ಗ್ರಹಿಸುವುದು ಎಂದರೆ ಸೃಷ್ಟಿ ಸ್ಥಿತಿಗಳಿಗೆ ಅತೀತವಾದ ವಾಸ್ತವಿಕತೆಯನ್ನು ಮನನ ಮಾಡಿಕೊಳ್ಳುವುದು. ಆಗ ಸಾಕಾರವನ್ನು ಮೀರುವ ಸತ್ಯ ಯಾವುದು ಎನ್ನುವುದರ ಕಡೆಗೆ ಗಮನ ಹೋಗುತ್ತದೆ. ಅಂತಿಮವಾಗಿ ಪರಮ ಸತ್ಯ ಆಗಿರುವ ನಿರಾಕಾರ ಶ್ರೀಹರಿಯ ಅನುಭಾವ ನಮ್ಮದಾಗುತ್ತದೆ. ಪು ತಿ ನ ರವರು ಈ ದೃಷ್ಟಿಯಿಂದಲೇ ಇಂದ್ರಿಯಗಳು ಹಳತಲ್ಲ, ಅವುಗಳ ನಿಜಸ್ವರೂಪವನ್ನು ಅರಿಯುವುದು ಯಾವಾಗಲೂ ಮಹತ್ವಪೂರ್ಣವಾದದ್ದೇ ಎಂದು ಪ್ರಾರಂಭದಲ್ಲೇ ಹೇಳಿ ವಾಸ್ತವಿಕತೆಯ ಸಾಕಾರರೂಪಿ ವಿಷ್ಣುವಿನ ಅವತಾರದ ಕಥೆಯನ್ನು ತಾನೇಕೆ ಆಯ್ಕೆ ಮಾಡಿಕೊಂಡೆ ಎಂಬುದನ್ನು ಸೂಚಿಸಿದ್ದಾರೆ. ಇದು ಶ್ರೀಹರಿ ಚರಿತದ ಆರಂಭ ಬಿಂದು. ಇದು ಕಾವ್ಯದ ಒಟ್ಟಾರೆ ಗ್ರಹಿಕೆಯೂ ಹೌದು,.

ಯಾವ ಇಂದ್ರಿಯಭಾವದ ಬಗ್ಗೆ ಶ್ರೀಹರಿ ಚರಿತ ಮಾತಾಡುತ್ತಾ ಇದೆ? ಅದು ಅಹಂಕಾರವನ್ನು ಎತ್ತಿಹಿಡಿಯುವ ಎರಡು ರೀತಿಯ ಇಂದ್ರಿಯಭಾವದ ಬಗ್ಗೆ ಹೇಳುತ್ತದೆ. ಒಂದನೆಯದು ಸಾಯುವುದನ್ನು ಮುಂದುಹಾಕುವುದು, ಸಾಧ್ಯವಾದಷ್ಟು ಕಾಲ ಇಂದ್ರಿಯಸುಖಾನುಭವವನ್ನು ಆಸ್ವಾದಿಸುವುದು. ಎರಡನೆಯದು ನಾವೇ ಮುಂದಾಗಿ ನಮ್ಮನ್ನು ಬಲಿದಾನವಾಗಿಸಿಕೊಳ್ಳುವುದು ಅಥವಾ ಎಲ್ಲರನ್ನೂ ಅವರ ಪ್ರಾಣ ಸಹಿತವಾಗಿ ನಮ್ಮ ಅಂಗೈಯಲ್ಲಿ ಇರಿಸಿಕೊಳ್ಳುವುದು. ಇಲ್ಲಿ ಎರಡು ವಿಷಯ ಇದೆ. ಒಂದು, ಸಾವಿಗೆ ನಾವೇ ನೇರವಾಗಿ ಮುಖಾಮುಖಿಯಾಗಿ ಸಾವಿನ ಭಯವನ್ನು ಮೀರುವುದು. ಇನ್ನೊಂದು, ಭೂಲೋಕದ ಬದುಕನ್ನು ನಾವು ಭಾವಿಸಿದಂತೆ ಸುಂದರವಾಗಿ ಮಾಡಿಕೊಳ್ಳುವುದು.

ವಸುದೇವ ದೇವಕಿಯರ ಇಂದ್ರಿಯಭಾವ ಮೊದಲನೆಯ ರೀತಿಯದು: ಇಂದ್ರಿಯಸುಖಾನುಭವವನ್ನು ಸವಿಯುವುದು, ಮಕ್ಕಳನ್ನು ಪಡೆಯುವುದು. ಈ ಕಾವ್ಯದಲ್ಲಿ ಬರುವ ಚಿತ್ರ ಹೀಗಿದೆ. ವಸುದೇವ ದೇವಕಿಯರಿಗೆ ಮದುವೆಯಾಗಿದೆ. ವಸುದೇವ ಹೆಂಡತಿ ದೇವಕಿಯೊಂದಿಗೆ ರಥವೇರಿ ತನ್ನ ಮನೆಗೆ ಹೊರಟಿದ್ದಾನೆ. ಆ ರಥದ ಸಾರಥ್ಯವನ್ನು ಕಂಸ ತಂಗಿಯ ಮೇಲಿನ ಪ್ರೀತಿಯಿಂದ ತಾನೇ ವಹಿಸಿಕೊಂಡಿದ್ದಾನೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ದೇವಕಿಯ ಎಂಟನೆಯ ಗಂಡುಮಗು ಕಂಸನನ್ನು ಕೊಲ್ಲುತ್ತದೆ ಎನ್ನುವ ಆಕಾಶವಾಣಿ ಕೇಳಿ ಬರುತ್ತದೆ. ಕಂಸ ತಕ್ಷಣ ದೇವಕಿಯನ್ನು ಕೊಲ್ಲುವುದಕ್ಕೆ ಸಿದ್ಧ ಆಗಿಬಿಡುತ್ತಾನೆ. ಸಾವು ಎಲ್ಲರಿಗೂ ಸಹಜ ಎಂಬುದನ್ನು ಕಂಸನಿಗೆ ತಿಳಿಸಿ ಹೇಳಿ ದೇವಕಿಯನ್ನು ಕೊಲೆ ಮಾಡದಂತೆ ಅವನನ್ನು ತಡೆಯುವುದಕ್ಕೆ ವಸುದೇವನಿಗೆ ಸಾಧ್ಯ ಆಗುವುದಿಲ್ಲ. ಆಗ ಅವನು ಜೀವ ಉಳಿದುಕೊಂಡರೆ ಸಾಕು, ಮುಂದೆ ನೋಡೋಣ ಎಂದು ಗಂಡು ಹೆಣ್ಣು ಎಂದಿಲ್ಲದೆ ತನ್ನಿಂದ ದೇವಕಿಗೆ ಹುಟ್ಟುವ ಎಲ್ಲಾ ಮಕ್ಕಳನ್ನು ಕಂಸನಿಗೆ ಒಪ್ಪಿಸುತ್ತೇನೆ ಎಂದು ದೇವಕಿಯನ್ನು ಒಂದು ಮಾತೂ ಕೇಳದೆ ಕಂಸನಿಗೆ ಮಾತು ಕೊಟ್ಟುಬಿಡುತ್ತಾನೆ. ದೇವಕಿ ಮೌನವಾಗಿ ಅದನ್ನು ಒಪ್ಪಿಕೊಂಡುಬಿಡುತ್ತಾಳೆ.

ಇನ್ನು ಶ್ರೀಹರಿಚರಿತದ ಸಾರ ಯಾವುದು ಎನ್ನುವುದು ಒಟ್ಟು ಕಾವ್ಯಕ್ಕೆ ಸಂಬಂಧಿಸಿದ ಮುಖ್ಯ ಪ್ರಶ್ನೆ. ಪುತಿನ ರವರಿಗೆ ಅನ್ನಿಸುವುದು ಸೃಷ್ಠಿಯೇ ಮುಖ್ಯವಾದದ್ದು ಎಂದು, ಯಾಕೆ ಎಂದರೆ ಅದು ಆಕರ್ಷಕವಾದದ್ದು ಮತ್ತೆ ಆನಂದವನ್ನು ಕೊಡುವಂತಹುದು. ಪರಮ ವಾಸ್ತವಿಕತೆ ನಿರಾಕಾರವೇ. ಆದರೆ ನಮ್ಮ ಗಮನಕ್ಕೆ ಮೊದಲು ಬರುವುದು ಸಾಕಾರವೇ. ಸಾಕಾರ ಅಂದರೆ ಸೃಷ್ಟಿ ಮತ್ತು ಸ್ಥಿತಿ ಎರಡೂ ಇರುವಂತಹುದು. ಇದರ ಅನುಭವ ಆಗುವುದು ಇಂದ್ರಿಯಗಳಿಂದ. ಇಂದ್ರಿಯಗಳ ಮಿತಿಯೇ ಸಾಕಾರದ ಗ್ರಹಿಕೆಯ ಮಿತಿಯೂ ಹೌದು. ಈ ಮಿತಿಯನ್ನು ಗ್ರಹಿಸುವುದು ಎಂದರೆ ಸೃಷ್ಟಿ ಸ್ಥಿತಿಗಳಿಗೆ ಅತೀತವಾದ ವಾಸ್ತವಿಕತೆಯನ್ನು ಮನನ ಮಾಡಿಕೊಳ್ಳುವುದು.

ಭಾಗವತದ ೨ನೇ ಸ್ಕಂದದ ೧ನೇ ಅಧ್ಯಾಯದ ೧೯ನೇ ಶ್ಲೋಕ ವಿಷ್ಣುವಿನ ಸಾಕ್ಷಾತ್ಕಾರ ಆಗಬೇಕಾದರೆ ವಿಷ್ಣುವಿನ ಅವಯವಗಳನ್ನು ಒಂದೊಂದನ್ನಾಗಿ ಧ್ಯಾನ ಮಾಡಬೇಕು ಎಂದು ಹೇಳುತ್ತದೆ. ಇದರ ಅರ್ಥ ಪ್ರಪಂಚದ ಭೌತಿಕ ಮತ್ತು ಜೈವಿಕ ವರ್ಗೀಕರಣಗಳನ್ನು, ಅಂದರೆ ಒಟ್ಟಾರೆ ಸಾಕಾರದ, ಇಂದ್ರಿಯಭಾವದ ಸಾಧ್ಯತೆಗಳನ್ನು ಮನನ ಮಾಡಿಕೊಳ್ಳಬೇಕ ಎಂದು. ವಸುದೇವನ ಇಂದ್ರಿಯ ಗ್ರಹಿಕೆ ಈ ರೀತಿಯದು. ಅವನು ತನ್ನನ್ನೇ ಬಲಿಯಾಗಿ ಕೊಡುವ ಆಲೋಚನೆ ಮಾಡಬಹುದಿತ್ತು ಅಥವಾ ದೇವಕಿ ನಿನ್ನ ತಂಗಿ, ನೀನೇ ಇಟ್ಟುಕೋ, ಅವಳು ನನಗೆ ಬೇಡವೇ ಬೇಡ ಎಂದು ದೇವಕಿಯನ್ನೇ ಬಿಟ್ಟುಬಿಡುವ ಆಲೋಚನೆ ಮಾಡಬಹುದಾಗಿತ್ತು, ಆದರೆ ಎರಡನ್ನೂ ಮಾಡುವುದಿಲ್ಲ. ಬದಲಿಗೆ ಹೀಗೆ ಯೋಚನೆ ಮಾಡುತ್ತಾನೆ – ತನ್ನ ಮಕ್ಕಳನ್ನು ಕಂಸನಿಗೆ ಬಲಿಯಾಗಿ ಕೊಟ್ಟರೂ, ಕೊಡದಿದ್ದರೂ ಅವುಗಳ ಆಯುಷ್ಯ ಎಷ್ಟೋ ಅಷ್ಟು ಕಾಲ ಮಾತ್ರ ಅವು ಬದುಕುತ್ತವೆ. ಇನ್ನು, ಆಕಾಶವಾಣಿ ಹೇಳುತ್ತಿರುವುದು ದೇವಕಿಯ ಎಂಟನೆಯ ಮಗುವಿನಿಂದ ಕಂಸನ ಮರಣ ಎಂದು. ಎಂಟನೇ ಮಗು ಹುಟ್ಟದೇನೇ ಇರಬಹುದು, ಹುಟ್ಟಿದರೂ ಬೆಳೆದು ಕಂಸನನ್ನು ಕೊಲ್ಲುವಷ್ಟು ದೊಡ್ಡದಾಗದೇನೇ ಇರಬಹುದು. ಕಂಸ ತಾನು ಯಾವತ್ತೂ ಸಾಯುವುದೇ ಇಲ್ಲ ಎಂದು ತಿಳಿದುಕೊಂಡಿದ್ದಾನೆ. ಆಕಾಶವಾಣಿ ನಿಜ ಯಾಕಾಗಿರಬಾರದು? ಇಷ್ಟಕ್ಕೂ ಕಂಸ ಸಾಯುವುದನ್ನು ತಪ್ಪಿಸುವುದಕ್ಕೆ ತಾನು ಯಾರು?

(ಫೋಟೋ: ರಶೀದ್)

ಕಂಸನ ಇಂದ್ರಿಯಭಾವವಾದರೋ ಎರಡನೆಯ ರೀತಿಯದು: ತಾನು ಸಾಯಬಾರದು ಎಂಬುದು. ಒಬ್ಬನ ಸಾವು ಇನ್ನೊಬ್ಬನನ್ನು ಬದುಕಿಸುತ್ತದೆ ಎಂಬುದು ಕಂಸನನ್ನೂ ಸೇರಿಸಿಕೊಂಡು ಎಲ್ಲಾ ಕ್ಷತ್ರಿಯರ ಗ್ರಹಿಕೆ. ಅದಕ್ಕೇ ತಮ್ಮ ಉಳಿವಿಗಾಗಿ ಪ್ರತಿಯೊಬ್ಬ ರಾಜನೂ ಯುದ್ಧ ಮಾಡುತ್ತಾನೆ. ಅವನ ಗುರಿ ಎದುರಾಳಿ ರಾಜನನ್ನು ಸಾಯಿಸುವುದೇ. ಹೀಗೆ ಕಂಸನಂತೆ ಯೋಚಿಸುವ ಅರಸರು ಭೂಮಿಗೆ ತಡೆಯಲು ಆಗದಷ್ಟು ಭಾರ ಆಗಿಬಿಟ್ಟಿದ್ದಾರೆ. ಅವರ ಭಾರವನ್ನು ತೆಗೆದುಹಾಕಿ ಭೂಮಿಯನ್ನು ಉದ್ಧರಿಸುವುದೇ ಕೃಷ್ಣಾವತಾರದ ಉದ್ದೇಶ ಎಂದು ಶ್ರೀಹರಿ ಚರಿತವೂ ಹೇಳುತ್ತದೆ.

ಒಂದರ್ಥದಲ್ಲಿ ಶ್ರೀಹರಿ ಚರಿತದ ೨, ೩, ೪, ೫ನೇ ಉಲ್ಲಾಸಗಳೆಲ್ಲಾ ಸಾವಿಗೇ ಸಂಬಂಧಿಸಿದುದು. ೨ನೇ ಉಲ್ಲಾಸದಲ್ಲಿ ಭಗವಂತನಾದ ವಿಷ್ಣು ಕೃಷ್ಣನಾಗಿ ತಾನು ಅವತಾರ ಎತ್ತಬೇಕು ಎಂದು ಭಾವಿಸಿದ ವಿಷಯ ಇದೆ. ಅದಕ್ಕೆ ಕಾರಣ ಭೂದೇವಿ ಬಯಸಿದ ಹಾಗ ಆಕೆಗೆ ಭಾರವಾಗಿರುವವರು ಸತ್ತು ಅವಳು ಹಗುರವಾಗಬೇಕು ಎನ್ನುವುದು. ಭಾಗವತ ಮತ್ತು ಶ್ರೀಹರಿಚರಿತ ಎರಡೂ ಕೃಷ್ಣನ ಜನನವನ್ನು ಭಾವಿಸುವುದೇ ಕೀರ್ತಿ, ಅಹಂಕಾರ, ಬಗೆ ಬಗೆಯ ಬಲಗಳಿಂದ ವಿಜೃಂಭಿಸುತ್ತಿರುವ ತೋರಿಕೆಗೆ ಜನನಾಯಕರಾಗಿರುವವರನ್ನು ಮರ್ದಿಸಿ ಯೋಗ್ಯವಾದ ವ್ಯಷ್ಟಿ ಮತ್ತು ಸಮಷ್ಠಿಯ ಬದುಕು ಯಾವುದು ಎಂಬುದನ್ನು ಮನಗಾಣಿಸಿಕೊಡುವವನ ಜನನ ಎಂದು. ೩ನೇ ಉಲ್ಲಾಸದಲ್ಲಿ ವಸುದೇವ ತಾನೇ ಮುಂದಾಗಿ ತನಗೆ ದೇವಕಿಯಿಂದ ಹುಟ್ಟಿದ ಮಕ್ಕಳನ್ನೆಲ್ಲಾ ಕಂಸನಿಗೆ ಕೊಡುತ್ತೇನೆ, ಆ ಮಕ್ಕಳನ್ನು ಏನು ಬೇಕಾದರೂ ಅವನು ಮಾಡಿಕೊಳ್ಳಲಿ ಎಂದು ಒಪ್ಪಿಕೊಳ್ಳುವ ವಿಷಯ ಇದೆ. ೪ನೇ ಉಲ್ಲಾಸದಲ್ಲಿ ವಸುದೇವ ದೇವಕಿಯರು ಪಡೆದ ಆರೂ ಮಕ್ಕಳ ಕೊಲೆಯ ವಿಷಯ ಇದೆ. ಏಳನೇ ಮಗು ಹುಟ್ಟುವ ಪೂರ್ವದಲ್ಲೇ ಸತ್ತು ಹೋಯಿತು ಎಂಬ ಅನ್ನಿಸಿಕೆ ಇದೆ. ಸಾಯಲೋ ಅಥವಾ ಸಾಯಿಸಲೋ, ಯಾವುದಕ್ಕಾಗಿಯೋ ಎಂಟನೇ ಮಗು ಹುಟ್ಟುವ ನಿರೀಕ್ಷೆಯ ವಿಷಯವೂ ಈ ಉಲ್ಲಾಸದಲ್ಲಿ ಇದೆ.

೫ನೇ ಉಲ್ಲಾಸದಲ್ಲಿ ದೇವಕಿ ವಸುದೇವರಿಗೆ ತಮಗೆ ಹುಟ್ಟಿದ ಮಗು ಭಗವಂತನೇ ಎನ್ನುವುದು ಅನುಭವಕ್ಕೆ ನೇರವಾಗಿ ಬಂದಿದೆ. ಆದರೂ ಆ ಮಗುವಿಗೆ ಕಂಸನಿಂದ ಸಾವು ಬರುತ್ತದೆ ಎಂದೇ ಒದ್ದಾಡಿಕೊಳ್ಳುತ್ತಾರೆ, ಭಯಭೀತರಾಗುತ್ತಾರೆ, ಆ ಮಗುವನ್ನು ಸಾವಿನಿಂದ ಹೇಗೆ ಪಾರುಮಾಡುವುದು ಎಂದೇ ಚಿಂತಿಸುತ್ತಾರೆ. ಹಾಗೆಯೇ ವಸುದೇವ ತನ್ನ ಮಗುವನ್ನು ನಂದನ ಹೆಂಡತಿಯ ಬಳಿ ಮಲಗಿಸಿ ಬದಲಿಗೆ ತೆಗೆದುಕೊಂಡು ಬಂದ ನಂದನ ಹೆಣ್ಣುಮಗುವನ್ನು ಕಂಸ ಕೊಂದೇ ಬಿಡುತ್ತಾನೆ ಎಂದು ಭಯ ಉದ್ವೇಗಗಳಿಂದ ದೇವಕಿ ಚೀರಾಡಿದುದರ ವಿಷಯವೂ ಇದೆ.

ಇವರಿಗೆ ಸಮಾನಾಂತರವಾಗಿ ನಿಜವಾಗಲೂ ತನ್ನನ್ನು ವಿಷ್ಣು ಕೊಲ್ಲುತ್ತಾನೆ ಎಂದೇ ಒಂದರ್ಥದಲ್ಲಿ ಕಂಸ ನಂಬಿದ್ದಾನೆ. ಅವನು ದಿನಾ ಎನ್ನುವ ಹಾಗೆ ತನ್ನನ್ನು ಕೊಲ್ಲುವವ ಹುಟ್ಟುತ್ತಾನೆ ಎಂದು ನಿರೀಕ್ಷೆ ಮಾಡುತ್ತಾ ಇದ್ದ. ವಾಸ್ತವದಲ್ಲಿ ಅವನು ತಾನು ಸಾಯುವುದೇ ಇಲ್ಲ ಎಂದೇನೂ ಅಂದುಕೊಂಡಿಲ್ಲ. ಯಾವುದೋ ತಿಳಿಯದವರ ಧ್ವನಿ, ಅದೂ ಆಕಾಶವಾಣಿ, ನಿನ್ನನ್ನು ಕೊಲ್ಲುವವವನು ದೇವಕಿಯ ಎಂಟನೇ ಮಗು ಎಂದು ಘೋಷಿಸಿದಾಗ ಅವನಿಗೆ ಬಂದ ಪ್ರಶ್ನೆಗಳು ತನ್ನ ಸಾವನ್ನು ಅಪರಿಚಿತ ಆಕಾರವೇ ಇಲ್ಲದವನ ಅಥವಾ ಇಲ್ಲದವಳ ಧ್ವನಿ ಹೇಗೆ ನಿರ್ಧರಿಸುತ್ತದ? ಅವನಿ(ಳಿ)ಗೆ ಹಾಗೆ ಘೋಷಿಸಲು ಯಾವ ಹಕ್ಕು, ಯಾವ ಅಧಿಕಾರ, ಯಾವ ಆಧಾರ ಇದೆ?. ದೊಡ್ಡ ಭೂಭಾಗದ ರಾಜ ಆದ ತಾನು ತನ್ನ ಸಾವು ಬದುಕುಗಳನ್ನು ನಿರ್ಧರಿಸುವವ ಆಗಬೇಕು ಎಂದು ಅವನು ಅಂದುಕೊಂಡದ್ದು ಸಹಜವೇ. ಅದೇ ಭಾವದಲ್ಲಿ ಅವನು ದೇವಕಿಯು ಪಡೆದ ಆರೂ ಮಕ್ಕಳನ್ನು ಕೊಂದಿದ್ದಾನೆ. ಏಳನೆಯ ಮಗು ತಾನೇ ಸತ್ತು ಹೋಗಿದೆ ಎಂದು ತಿಳಿದಿದ್ದಾನೆ. ಎಂಟನೆಯ ಮಗುವಿಗಾಗಿ ಕಾದಿದ್ದಾನೆ. ಗರ್ಭವತಿ ದೇವಕಿಯ ಅತಿಶಯವಾದ ಸೌಂದರ್ಯವನ್ನು ನೋಡಿದಾಗ ಈಕೆಯ ಗರ್ಭದಲ್ಲಿ ತನ್ನನ್ನು ಕೊಲ್ಲುವವ ಇದ್ದಾನೆ ಎಂದೇ ಅವನಿಗೆ ಅನ್ನಿಸುತ್ತಿತ್ತು. ಈಗಲೇ ದೇವಕಿಯನ್ನು ಕೊಂದುಬಿಟ್ಟರೆ ಹೇಗೆ ಎಂದು ಒಮ್ಮೆ ಅವನಿಗೆ ಅನ್ನಿಸಿತ್ತು. ಆದರೆ ಹೆಂಗಸನ್ನು ಅದರಲ್ಲೂ ಗರ್ಭವತಿಯನ್ನು ಕೊಲ್ಲುವುದು ಪಾಪ, ಮಗು ಹುಟ್ಟಲಿ ಅದನ್ನೇ ಕೊಂದು ತನ್ನ ಸಾವಿನ ಭಯವನ್ನು ಮೀರುತ್ತೇನೆ, ಸಾವನ್ನು ತನ್ನ ವಶದಲ್ಲಿ, ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತೇನೆ ಎಂದುಕೊಂಡ.

ಕಂಸನ ಇಂದ್ರಿಯಭಾವವಾದರೋ ಎರಡನೆಯ ರೀತಿಯದು: ತಾನು ಸಾಯಬಾರದು ಎಂಬುದು. ಒಬ್ಬನ ಸಾವು ಇನ್ನೊಬ್ಬನನ್ನು ಬದುಕಿಸುತ್ತದೆ ಎಂಬುದು ಕಂಸನನ್ನೂ ಸೇರಿಸಿಕೊಂಡು ಎಲ್ಲಾ ಕ್ಷತ್ರಿಯರ ಗ್ರಹಿಕೆ. ಅದಕ್ಕೇ ತಮ್ಮ ಉಳಿವಿಗಾಗಿ ಪ್ರತಿಯೊಬ್ಬ ರಾಜನೂ ಯುದ್ಧ ಮಾಡುತ್ತಾನೆ. ಅವನ ಗುರಿ ಎದುರಾಳಿ ರಾಜನನ್ನು ಸಾಯಿಸುವುದೇ. ಹೀಗೆ ಕಂಸನಂತೆ ಯೋಚಿಸುವ ಅರಸರು ಭೂಮಿಗೆ ತಡೆಯಲು ಆಗದಷ್ಟು ಭಾರ ಆಗಿಬಿಟ್ಟಿದ್ದಾರೆ. ಅವರ ಭಾರವನ್ನು ತೆಗೆದುಹಾಕಿ ಭೂಮಿಯನ್ನು ಉದ್ಧರಿಸುವುದೇ ಕೃಷ್ಣಾವತಾರದ ಉದ್ದೇಶ ಎಂದು ಶ್ರೀಹರಿ ಚರಿತವೂ ಹೇಳುತ್ತದೆ.

ಎಂಟನೆಯ ಮಗು ಹುಟ್ಟಿದೆ ಎಂದು ತಿಳಿದ ಕೂಡಲೇ ತನ್ನನ್ನು ಕೊಲ್ಲುವ ಮಗುವನ್ನು ಎದುರಿಸುವುದಕ್ಕೆ, ತನ್ನ ಸಾವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಕಂಸ ಓಡೋಡಿ ಬಂದ. ಅವನಿಗೆ ಕಂಡದ್ದು ಹೆಣ್ಣುಮಗು, ಅದು ಅವನ ಕೊಲ್ಲುವ ಕೈಯಿಂದ ತಪ್ಪಿಸಿಕೊಂಡು ಬಿಟ್ಟಿತು. ನಿನ್ನನ್ನು ಕೊಲ್ಲುವ ಮಗು ಬೇರೆ ಕಡೆ ಹುಟ್ಟಾಗಿದೆ ಎಂದು ಹೇಳಿ ಮರೆಯಾಯಿತು. ಕಂಸ ನಿರೀಕ್ಷಿಸುತ್ತಿದ್ದರೂ ಸಾವು ಅವನಿಗೆ ಮುಖಾಮುಖಿ ಆಗಲೇ ಇಲ್ಲ. ಸಾವಿನ ಭಯವನ್ನು ಮೀರುವುದಕ್ಕೆ ಅವನಿಗೆ ಅವಕಾಶ ಸಿಗಲ ಇಲ್ಲ. ಘೋಷಿತ ಸಾವು ಬರಲೇ ಇಲ್ಲ. ದಿಗ್ಭ್ರಾಂತನಾದ. ಅಂದು ಕೇಳಿದ ಆಕಾಶವಾಣಿ ಸಂಭವಿಸಬಹುದಾದ ಭವಿಷ್ಯವಾಣಿಯೇ ಅಲ್ಲ ಎಂದುಕೊಂಡ. ತಾನು ಸುಮ್ಮ ಸುಮ್ಮನೆ ಹೆದರಿಕೊಂಡುಬಿಟ್ಟೆ, ಅನಾವಶ್ಯಕವಾಗಿ ಮಕ್ಕಳನ್ನು ಕೊಂದೆ ಎಂದು ಬೇಸರ ಪಟ್ಟ. ಅದು ದೇವಕಿಯ ಬಗೆಗಿನ ಕರುಣೆ ಅನುಕಂಪೆಯ ರೂಪ ಪಡೆಯಿತು. ಸ್ವಲ್ಪವೂ ದುಃಖವನ್ನು ತೋರದೆ ಹಡೆದ ಮಕ್ಕಳನ್ನೆಲ್ಲ ತನಗೆ ಒಪ್ಪಿಸಿದನಲ್ಲಾ ಎಂದು ತನ್ನ ಭಾವನ ಬಗೆಗೆ ಕಂಸನಲ್ಲಿ ಒಂದು ರೀತಿಯ ಸದ್ಭಾವನೆ ಹುಟ್ಟಿತು. ಇನ್ನು ಅವರನ್ನು ಬಂಧನದಲ್ಲಿಟ್ಟುಕೊಂಡು ತನ್ನ ಕಣ್ಣು ಮುಂದೆಯೇ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಅವರನ್ನು ಬಿಡುಗಡೆ ಮಾಡಿದ. ಅವರು ಯಾವ ಪ್ರತೀಕಾರದ ಮಾತಾಡದೇ ಇದ್ದದ್ದರಿಂದ ಅವನಿಗೆ ತುಂಬಾ ಸಮಾಧಾನ ಆಯಿತು. ನೆಟ್ಟಗೆ ತನ್ನ ಅರಮನೆಗೆ ಹೊರಟು ಹೋದ. ಇವೆಲ್ಲಾ ನಡೆದದ್ದು ಮಧ್ಯರಾತ್ರಿಯಿಂದ ಇನ್ನೇನು ಬೆಳಗಾಯಿತು ಎನ್ನುವುದರ ಒಳಗೆ.
ಇಲ್ಲಿಂದ ಮುಂದಿನದು ಬದ್ಧರಿಗೆ ಬಿಡುಗಡೆ ಕೊಡುವ ಮೊದಲ ಸಿರಿ ಆಪ್ತ ಸಂಗಮ ಎನ್ನುವ ೬ನೇ ಉಲ್ಲಾಸ ಗೋಕುಲ ಗಮನಂ. ಇಲ್ಲಿ ಬರುವ ಅಂಶಗಳನ್ನು ಗ್ರಹಿಸಿದರೆ ಇಡೀ ಶ್ರೀಹರಿಚರಿತದ ಭಾವಾರ್ಥದ ಸಾರವನ್ನೆಲ್ಲಾ ಗ್ರಹಿಸಿದಂತೆಯೇ ಆಗುತ್ತದೆ ಎಂದೆನ್ನಬಹುದು. ವಸುದೇವ ದೇವಕಿಯರಿಗೆ ಬಂಧನದಿಂದ ಬಿಡುಗಡೆಯಾಗಿದೆ, ನಿಜಕ್ಕೂ ಬೆಳಗಾಗಿದೆ. ವಸುದೇವನಿಗೆ ಉಲ್ಲಾಸ ಉತ್ಸಾಹ ಮೂಡಿದೆ. ಸಂತೋಷ ಉಕ್ಕೇರುತ್ತಿದೆ. ಅದನ್ನು ಯಾರೊಂದಿಗೆ ಹಂಚಿಕೊಳ್ಳಬಹುದು, ಸ್ನೇಹಿತರ ಹೊರತಾಗಿ? ಇದನ್ನು ಭಾವಿಸುತ್ತಾ ಬದ್ಧರಿಗೆ ಬಿಡುಗಡೆ ಕೊಡುವ ಮೊದಲ ಸಿರಿ ಆಪ್ತ ಸಂಗಮ ಎನ್ನುವುದರಿಂದ ಈ ಉಲ್ಲಾಸ ಆರಂಭವಾಗುತ್ತದೆ:

ಬದ್ಧರಿಗೆ ಬಿಡುಗಡೆ ಇಲ್ಲಿ ಒಂದು ಮುಖ್ಯವಾದ ಭಾವ :-
ಅ) ನಂದನನ್ನು ನಂಬಿ ವಸುದೇವ ಸುರಿಯುತ್ತಾ ಇರುವ ಧಾರಾಕಾರ ಮಳೆಯಲ್ಲಿಯೇ ರಾತ್ರೋ ರಾತ್ರಿ ಕಾಲ್ನಡಿಗೆಯಲ್ಲಿಯೇ ಯಮುನಾ ನದಿ ದಾಟಿ ನಂದನ ಪಾಳೆಯ ತಲುಪಿ ತನ್ನ ಮಗುವನ್ನು ಅವನಲ್ಲಿ ಬಿಟ್ಟುಬಂದಿದ್ದಾನೆ. ಅದನ್ನು ಅವನಿಗೆ ಆಗಲೇ ಹೇಳಬೇಕಿತ್ತು, ಆದರೆ ಹೇಳಲು ಸಮಯವಿಲ್ಲ, ಹೇಳಬೇಕೋ ಬೇಡವೋ ತಿಳಿದಿಲ್ಲ. ಜೊತೆಗೆ ನಂದನ ಮಗುವನ್ನು ಅವನಿಗೆ ಹೇಳದೆ ಕೇಳದೆ ವಸುದೇವ ತಂದುಬಿಟ್ಟಿದ್ದಾನೆ. ಅದು ಹೆಣ್ಣು ಮಗು ಆಗಿದ್ದುದರಿಂದ ಕಂಸ ಅದನ್ನು ಕೊಲ್ಲಲಾರ ಎಂದು ನಂಬಿದ್ದಾನೆ. ಆ ನಂಬಿಕೆ ನಿಜವೋ ಹುಸಿಯೋ ತಿಳಿಯದು. ಆ ಮಗುವಿಗೆ ಕಂಸನಿಂದ ಆಪತ್ತು ಬಂದರೆ ಎನ್ನುವ ಆತಂಕ ಇದ್ದೇ ಇತ್ತು. ಸದ್ಯ! ಆ ಮಗುವೋ ಕಂಸನಿಗೆ ತನ್ನನ್ನು ಕೊಲ್ಲಲು ಬಿಡದೆ ನಿನ್ನ ಸಾವು ನಿನಗಾಗಿ ಕಾದಿದೆ ಎಂದು ಕಂಸನನ್ನು ಹೆದರಿಸಿ ಪಾರಾಗಿಹೋಗಿದೆ. ಅಷ್ಟರ ಮಟ್ಟಿಗೆ ವಸುದೇವನಿಗೆ ಅಪರಾಧಿ ಪ್ರಜ್ಞೆಯಿಂದ ಬಿಡುಗಡೆ ದೊರೆತಿದೆ. ಬೆಳಗಾಗಿದೆ.

ಆ) ವಸುದೇವ ಕಂಸನಿಗೆ ತಾನು ದೇವಕಿಯಿಂದ ಪಡೆಯುವ ಮಕ್ಕಳನ್ನೆಲ್ಲಾ ಒಪ್ಪಿಸುತ್ತೇನೆ ಎಂದು ವಚನ ನೀಡಿ ತನ್ನನ್ನು ತಾನೇ ಕಟ್ಟಿಹಾಕಿಕೊಂಡಿದ್ದ. ಆಕಾಶವಾಣಿ ದೇವಕಿಯ ಎಂಟನ ಮಗು ಕಂಸನನ್ನು ಕೊಲ್ಲುತ್ತದೆ ಎಂದು ಘೋಷಿಸಿತ್ತು. ಎಂಟನೇ ಮಗು ಎಂದು ಕಂಸ ಅಂದುಕೊಂಡದ್ದು ಗಂಡು ಮಗುವೇ ಆಗಿರಲಿಲ್ಲ. ಅದು ಹೆಣ್ಣು ಮಗುವಾದರೂ ಅದು ಎಂಟನೇ ಮಗುವೇ, ತನ್ನನ್ನು ಕೊಲ್ಲುವ ಮಗುವೇ ಎಂದು ಕಂಸ ಅದನ್ನು ಕೊಲ್ಲಲು ಪ್ರಯತ್ನಿಸಿದರೆ ಅದು ಅವನ ಕೈಯಿಂದ ತಪ್ಪಿಸಿಕೊಂಡದ್ದೂ ಅಲ್ಲದೆ ಅವನನ್ನು ಕೊಲ್ಲುವ ಮಗು ಇನ್ನೆಲ್ಲೋ ಹುಟ್ಟಿದೆ ಎಂದು ಮತ್ತೊಂದು ಆಕಾಶವಾಣಿಯನ್ನು ಬಿತ್ತರಿಸಿದೆ. ಇದನ್ನು ಆ ಕ್ಷಣದಲ್ಲಿ ನಂಬಿದ ಕಂಸ ವಸುದೇವ ದೇವಕಿಯರಿಗೆ ಇನ್ನೆಷ್ಟು ಮಕ್ಕಳಾದರೂ ತನಗೆ ಸಂಬಂಧವಿಲ್ಲ ಎಂದು ಅವರನ್ನು ತನ್ನ ಬಂಧನದಿಂದ ಬಿಡಿಸಿದ್ದಾನೆ. ಹೀಗೆ ವಸುದೇವನಿಗೆ ಅವನ ವಚನದ ಬದ್ಧತೆಯಿಂದಲೂ ಬಿಡುಗಡೆ ದೊರೆತಿದೆ. ಬೆಳಗಾಗಿದೆ.

ಕಂಸ ನಿರೀಕ್ಷಿಸುತ್ತಿದ್ದರೂ ಸಾವು ಅವನಿಗೆ ಮುಖಾಮುಖಿ ಆಗಲೇ ಇಲ್ಲ. ಸಾವಿನ ಭಯವನ್ನು ಮೀರುವುದಕ್ಕೆ ಅವನಿಗೆ ಅವಕಾಶ ಸಿಗಲ ಇಲ್ಲ. ಘೋಷಿತ ಸಾವು ಬರಲೇ ಇಲ್ಲ. ದಿಗ್ಭ್ರಾಂತನಾದ. ಅಂದು ಕೇಳಿದ ಆಕಾಶವಾಣಿ ಸಂಭವಿಸಬಹುದಾದ ಭವಿಷ್ಯವಾಣಿಯೇ ಅಲ್ಲ ಎಂದುಕೊಂಡ. ತಾನು ಸುಮ್ಮ ಸುಮ್ಮನೆ ಹೆದರಿಕೊಂಡುಬಿಟ್ಟೆ, ಅನಾವಶ್ಯಕವಾಗಿ ಮಕ್ಕಳನ್ನು ಕೊಂದೆ ಎಂದು ಬೇಸರ ಪಟ್ಟ. ಅದು ದೇವಕಿಯ ಬಗೆಗಿನ ಕರುಣೆ ಅನುಕಂಪೆಯ ರೂಪ ಪಡೆಯಿತು. ಸ್ವಲ್ಪವೂ ದುಃಖವನ್ನು ತೋರದೆ ಹಡೆದ ಮಕ್ಕಳನ್ನೆಲ್ಲ ತನಗೆ ಒಪ್ಪಿಸಿದನಲ್ಲಾ ಎಂದು ತನ್ನ ಭಾವನ ಬಗೆಗೆ ಕಂಸನಲ್ಲಿ ಒಂದು ರೀತಿಯ ಸದ್ಭಾವನೆ ಹುಟ್ಟಿತು.

ಇ) ನಾಲ್ಕು ಗೋಡೆಗಳ ಮಧ್ಯೆ ಸಿಕ್ಕಿಕೊಂಡು ಹೊರ ಜಗತ್ತಿನ ಸಂಪರ್ಕ ಸ್ವಲ್ಪವೂ ಇಲ್ಲದಂತೆ ಹಲವಾರು ವರ್ಷಗಳಿಂದ ಬದುಕುತ್ತಿದ್ದ ವಸುದೇವನಿಗೆ ಈಗ ಆ ನಿರ್ಬಂಧದಿಂದಲೂ ಬಿಡುಗಡೆ ದೊರೆತಿದೆ. ವಸುದೇವನಿಗೆ ಅವನದೇ ಆದ ಆಡಳಿತ ಕೇಂದ್ರ ಇತ್ತು, ಅದಕ್ಕೆ ಸೇರಿದ ಪ್ರಜೆಗಳ ಯೋಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ವಸುದೇವನದಾಗಿತ್ತು. ಒಂದು ಉಲ್ಲೇಖದ ಪ್ರಕಾರ ಕಂಸನ ಅಪ್ಪ ಉಗ್ರಸೇನನ ರಾಜಶಾಹಿ ಇದ್ದಾಗ ವಸುದೇವ ಅವನ ಮಂತ್ರಿಯಾಗಿದ್ದ. ವಸುದೇವನು ಕಂಸನ ಬಂಧಿ ಆದಮೇಲೆ ಪ್ರಜಾ ವರ್ಗದ ಯೋಗಕ್ಷೇಮದ ಜವಾಬ್ದಾರಿಯನ್ನು ನಿರ್ವಹಿಸಲಾಗದ ಬಂಧಿತ ಆಗಿದ್ದ. ಈಗ ಆ ಪರಿಸ್ಥಿತಿಯಿಂದಲೂ ವಸುದೇವನಿಗೆ ಬಿಡುಗಡೆ ದೊರೆತಿದೆ. ಬೆಳಗಾಗಿದೆ.

ಇಲ್ಲಿ ಆಪ್ತ ಸಂಗಮ ಎಂಬುದೂ ಮುಖ್ಯವಾದದ್ದೇ. ಇಲ್ಲಿ ಆಪ್ತಸಂಗಮ ಎಂಬುದಕ್ಕೆ ಎರಡು ಅರ್ಥ –

ಅ) ವಸುದೇವ ಬಂಧನದಲ್ಲಿ ಇದ್ದದ್ದು ಕಂಸನ ಆವರಣದಲ್ಲಿ. ಅಲ್ಲಿ ಅವನಿಗೆ ಅಯ್ಯೋ ಪಾಪ ಎನ್ನುವವರು ಇದ್ದರೂ ಅವನು ಅವರಲ್ಲಿ ಯಾರ ಹತ್ತಿರವೂ ತನ್ನ ಸಂಕಟವನ್ನಾಗಲೀ, ಸಂತೋಷವನ್ನಾಗಲೀ ಹೇಳಿಕೊಳ್ಳುವಂತಿಲ್ಲ. ಅವರೆಲ್ಲಾ ಕಂಸನ ಆಶ್ರಿತರು. ಅವನು ಏನು ಹಂಚಿಕೊಳ್ಳುವುದಿದ್ದರೂ ಅದು ಅವನಿಗೆ ಯಾವ ಕಾರಣಕ್ಕೂ ಅಹಿತ ಬಯಸದವರ ಹತ್ತಿರ ಮಾತ್ರ. ವಸುದೇವ ಆಪ್ತ ಎಂದುಕೊಳ್ಳಬಹುದಾದದ್ದು ನಂದನನ್ನು ಮಾತ್ರ. ಅವನನ್ನು ನಂಬಿ ವಸುದೇವ ತನ್ನ ಮಗುವನ್ನು ಅವನ ಮನೆಯಲ್ಲಿ ಬಿಟ್ಟು ಬಂದಿದ್ದ. ಭಾಗವತದ ಪ್ರಕಾರ ನಂದ ವಸುದೇವನ ಅಣ್ಣ, ಅವನು ವಸುದೇವನನ್ನು ದಾಯಾದಿ ಎಂದು ನೋಡುವುದರ ಬದಲಿಗೆ ತನ್ನ ಸ್ನೇಹಿತ ಎಂದೇ ತಿಳಿದುಕೊಂಡಿದ್ದ. ಇಂಥ ನಂದ ತನ್ನ ಮಗುವನ್ನು ಅವನದೇ ಮಗು ಎಂದು ತಿಳಿದು ಚೆನ್ನಾಗಿ ನೋಡಿಕೊಳ್ಳಬೇಕು, ದುಷ್ಟ ಕಂಸನ ಕೈಗೆ ಸಿಕ್ಕಿ ನಂದನಾಗಲೀ ತನ್ನ ಮಗುವಾಗಲೀ ಅಪಾಯಕ್ಕೆ ಒಳಗಾಗಬಾರದು, ಇದು ಪರಮ ಸ್ನೇಹಿತನ ಬಗ್ಗೆ ವಸುದೇವನಿಗೆ ಬಂದ ಆಲೋಚನೆ. ಏನಾಗುತ್ತಿದೆ ಎಂದು ಕಂಸನಿಗೆ ಗೊತ್ತಾಗುವುದರೊಳಗಾಗಿ ನಂದನಿಗೆ ಮುನ್ನೆಚ್ಚರಿಕೆ ಕೊಟ್ಟುಬಿಡಬೇಕು ಇದು ವಸುದೇವನ ಸದಾಶಯ. ಒಂದು ಕಡೆ ನಂದನ ಸ್ನೇಹ, ಇನ್ನೊಂದು ಕಡೆ ಮಗುವಿನ ಬಗೆಗಿನ ಮೋಹ. ಎರಡರ ಸೆಳೆತಕ್ಕೆ ಸಿಕ್ಕಿದ ವಸುದೇವ ತಕ್ಷಣ ನಂದನಂ ನಂದನನಂ ನೆನೆದು ನಂದನ ಗೋವುಗಳ ಪಾಳೆಯಕ್ಕೆ ಹೊರಟುಬಿಟ್ಟಿದ್ದಾನೆ ಎನ್ನುತ್ತಾರೆ ಕವಿ. ಇದು ಆಪ್ತ ಸಂಗಮ ಎನ್ನುವುದಕ್ಕೆ ಒಂದು ಅರ್ಥ.

ವಸುದೇವ ಕಂಸನಿಗೆ ತಾನು ದೇವಕಿಯಿಂದ ಪಡೆಯುವ ಮಕ್ಕಳನ್ನೆಲ್ಲಾ ಒಪ್ಪಿಸುತ್ತೇನೆ ಎಂದು ವಚನ ನೀಡಿ ತನ್ನನ್ನು ತಾನೇ ಕಟ್ಟಿಹಾಕಿಕೊಂಡಿದ್ದ. ಆಕಾಶವಾಣಿ ದೇವಕಿಯ ಎಂಟನ ಮಗು ಕಂಸನನ್ನು ಕೊಲ್ಲುತ್ತದೆ ಎಂದು ಘೋಷಿಸಿತ್ತು. ಎಂಟನೇ ಮಗು ಎಂದು ಕಂಸ ಅಂದುಕೊಂಡದ್ದು ಗಂಡು ಮಗುವೇ ಆಗಿರಲಿಲ್ಲ. ಅದು ಹೆಣ್ಣು ಮಗುವಾದರೂ ಅದು ಎಂಟನೇ ಮಗುವೇ, ತನ್ನನ್ನು ಕೊಲ್ಲುವ ಮಗುವೇ ಎಂದು ಕಂಸ ಅದನ್ನು ಕೊಲ್ಲಲು ಪ್ರಯತ್ನಿಸಿದರೆ ಅದು ಅವನ ಕೈಯಿಂದ ತಪ್ಪಿಸಿಕೊಂಡದ್ದೂ ಅಲ್ಲದೆ ಅವನನ್ನು ಕೊಲ್ಲುವ ಮಗು ಇನ್ನೆಲ್ಲೋ ಹುಟ್ಟಿದೆ ಎಂದು ಮತ್ತೊಂದು ಆಕಾಶವಾಣಿಯನ್ನು ಬಿತ್ತರಿಸಿದೆ. ಇದನ್ನು ಆ ಕ್ಷಣದಲ್ಲಿ ನಂಬಿದ ಕಂಸ ವಸುದೇವ ದೇವಕಿಯರಿಗೆ ಇನ್ನೆಷ್ಟು ಮಕ್ಕಳಾದರೂ ತನಗೆ ಸಂಬಂಧವಿಲ್ಲ ಎಂದು ಅವರನ್ನು ತನ್ನ ಬಂಧನದಿಂದ ಬಿಡಿಸಿದ್ದಾನೆ.

ಆ) ಕಂಸನಿಂದ ಬಿಡುಗಡೆ ಪಡೆದು ನಂದನ ಪಾಳೆಯದ ಕಡೆಗೆ ಹೊರಟ ವಸುದೇವನದು ಈಗ ವಿಚಿತ್ರವಾದ ಮನಸ್ಥಿತಿ. ಹಿಂದಿನ ದಿನದವರೆಗೂ ದೇವಕಿಗೆ ಆಗುವ ಮಗು, ಆ ಮಗುವನ್ನು ಕೊಲ್ಲಲು ಧಾವಿಸಿ ಬರುವ ಕಂಸ, ಜಗತ್ತಿಗೆ ಕಾಲಿಡುತ್ತಿದ್ದಂತೆಯೇ ಮನಸ್ಸನ್ನೆಲ್ಲಾ ಹಿಂಡುವಂತೆ ಕ್ರೂರ ರೀತಿಯಲ್ಲಿ ಈ ಜಗತ್ತಿನಿಂದ ಬಲಾತ್ಕಾರವಾಗಿ ನಿರ್ಗಮಿಸುವ ಹಾಲುಗಲ್ಲದ ಕಂದ ಇವೆಲ್ಲಾ ಮನಸ್ಸಿನ ತುಂಬಾ ತುಂಬಿಕೊಂಡಿದ್ದವು  ಈಗ ಈ ಎಲ್ಲಾ ತಲ್ಲಣಗಳು ಒಮ್ಮೆಗೇ ಇಲ್ಲವಾಗಿಬಿಟ್ಟಿದೆ.  ಹೇಗೆ ಇದು ಸಾಧ್ಯ ಆಯ್ತು, ಇದು ಭ್ರಮೆ ಇರಬಹುದೇ ಎನ್ನುವ ಸಂದೇಹ ಬೆರೆತ ವಿಸ್ಮಯ ಒಂದು ಕಡೆ; ಸದ್ಯ ಈ ಎಲ್ಲ ತಲ್ಲಣಗಳಿಗೆ ಮುಕ್ತಾಯ ಸಿಕ್ಕಿತಲ್ಲ ಎನ್ನುವ ಅತೀವವಾದ ಆನಂದ ಇನ್ನೊಂದು ಕಡೆ. ಅದರ ಜೊತೆಗೆ ತನ್ನ ಮಗುವನ್ನೇನೋ ನಂದನ ಹೆಂಡತಿ ಯಶೋದೆಯ ಬಳಿ ಬಿಟ್ಟುಬಂದಿದ್ದೇನೆ, ಅವರ ಮಗುವನ್ನು ಎತ್ತಿಕೊಂಡು ಬಂದು ಬಿಟ್ಟಿದ್ದೇನೆ. ಅವರಿಬ್ಬರೂ ತಮ್ಮದು ಹೆಣ್ಣು ಮಗು, ಇಲ್ಲಿರುವುದು ಗಂಡು ಮಗು, ಇದು ತಮ್ಮದಲ್ಲ ಎಂದು ಅದನ್ನು ನಿರಾಕರಿಸಿದರೋ ಏನೋ ಎನ್ನುವ ಆತಂಕ. ತಮ್ಮ ಮಗುವನ್ನು ಕದ್ದುಕೊಂಡು ಹೋದವರು ಯಾರು ಎಂದು ಹುಡುಕಾಡುತ್ತಿದ್ದಾರೇನೋ ಎನ್ನುವ ಅನುಮಾನ, ಗಾಬರಿ. ಇದರ ಜೊತೆಗೆ ತಾನೇ ಅವರ ಮಗುವನ್ನು ಎತ್ತಿಕೊಂಡು ಹೋದೆ ಎಂದು ಗೊತ್ತಾಗಿದ್ದರೆ ಅಥವಾ ಗೊತ್ತಾದರೆ ಒಂದು ಕಡೆ ಮರ್ಯಾದೆ ಹೋಗುತ್ತದೆ, ಇನ್ನೊಂದು ಕಡೆ ಸ್ನೇಹಕ್ಕೆ ಅಪಚಾರ ಮಾಡಿದೆ ಎಂದಾಗುತ್ತದೆ.

ಏನಾದರೂ ತನ್ನ ಮಗುವನ್ನು ತನ್ನದು ಎಂದು ಕರೆದುಕೊಂಡು ಹೋಗುವ ಹಾಗಿಲ್ಲ, ಕರೆದುಕೊಂಡು ಹೋದರೆ ಅದನ್ನು ಕಂಸನ ಕೈಯಿಂದ ಕಷ್ಟದಿಂದ ಪಾರು ಮಾಡಿ ತಾನೇ ಅವನ ಕೈಗೆ ಒಪ್ಪಿಸಿದ ಹಾಗಾಗುತ್ತೆ. ಯಾವುದೇ ಪರಿಸ್ಥಿತಿ ಇದ್ದರೂ ನಂದ ತಕ್ಷಣವೇ ಅವನ ಬಂಡಿ ಪಾಳೆಯವನ್ನು ಎತ್ತಿ ಗೋಕುಲಕ್ಕೆ ಹೋಗಿಬಿಡಬೇಕು, ಕಂಸನಿಂದ ಆಗಬಹುದಾದ ಪೀಡೆಯ ಮುನ್ಸೂಚನೆಯನ್ನು ಅವನಿಗೆ ಕೊಡಲೇ ಬೇಕು ಎಂದು ತಲೆ ಕೊಡವಿಕೊಂಡು ವಸುದೇವ ಹೊರಟಿದ್ದಾನೆ. ಹೀಗೆಲ್ಲಾ ಕಳವಳ, ಉದ್ವೇಗ, ಆತಂಕ, ಅನುಮಾನಗಳಿಂದ ಒದ್ದಾಡುತ್ತಾ ಹೊರಟಿದ್ದಾಗ ಮರೆಯಿಸಿತು ದಿವಸೋಲ್ಲಾಸ ನಿನ್ನೆಯ ದಿನದ ತಲ್ಲಣವನ್, ಅಂತೆಯೆ ಬೆರಗನ್ ದುಃಸ್ವಪ್ನವನು ಚದರಿಸುವ ಜಾಗರದಂತೆ ಎನ್ನುತ್ತಾರೆ ಕವಿ. ಹಾಗೆಯೇ ಮಳೆ ತೊಯ್ದ ಇಳೆಯ ತಂಪಿನ ಕಂಪುಗಾಳಿ ಅವನನ್ನು ತಾಗಿತು ಎಂದೂ ಹೇಳುತ್ತಾರೆ. ಈ ತಂಪು ಗಾಳಿಯ ಸ್ಪರ್ಶವನ್ನು ಮತ್ತು ದಿವಸೋಲ್ಲಾಸವನ್ನು ಹದುಳಕೆ ಸಂದ ನಂಟನನು ನೆಂಟನೊಲು ಸಂಭಾವಿಸಿತು ಎನ್ನುತ್ತಾರೆ ಕವಿ. ಇದು ಆಪ್ತ ಸಂಗಮ ಎನ್ನುವುದರ ಎರಡನೆಯ ಅರ್ಥ.

ಈ ಆಪ್ತ ಸಂಗಮದ ಭಾವವನ್ನು ಕವಿ ವರ್ಣಿಸುವ ರೀತಿ ಹೀಗೆ. ಇದ್ದಕ್ಕಿದ್ದಂತೆ ರಾತ್ರಿಯೆಲ್ಲಾ ಧೋ ಧೋ ಎಂದು ಮಳೆ ಸುರಿದಿದೆ, ಭೂಮಿ ನೆನೆದು ಹಸಿ ಮಣ್ಣಿನ ಕಂಪು ಎದ್ದು ಬಂದಿದೆ, ಅಂಥ ಭೂಮಿಯ ಮೇಲಿನಿಂದ ಗಾಳಿ ಸುಳಿದು ಬಂದುದರಿಂದಾಗಿ ಆ ಗಾಳಿ ಸುಗಂಧಿತ ಆಗಿದೆ. ಧಾರಾಕಾರವಾಗಿ ಮುಸಲಧಾರೆಯಂತೆ ಮಳೆ ಸುರಿದುದರಿಂದ ನೆಲದ ಮೇಲೆ ಏನೇನು ಕಸ ಕಡ್ಡಿ ಇತ್ಯಾದಿ ಕೊಳಕು, ಕಶ್ಮಲಗಳಿದ್ದವೋ ಅವೆಲ್ಲಾ ಕೊಚ್ಚಿಕೊಂಡು ಹೋಗಿದೆ, ಭೂಮಿ ನಿರ್ಮಲವಾಗಿದೆ. ಸುಗಂಧಿತ ಗಾಳಿ ಬೀಸಿ ಬಂದದ್ದು ಮಳೆ ನೀರಿನಿಂದ ತೊಳೆದು ಸ್ವಚ್ಛವಾದ ಇಂಥ ಭೂಮಿಯ ಮೇಲಿನಿಂದ. ಇವೆಲ್ಲದರಿಂದಾಗಿ ಅದು ಕೆಟ್ಟ ಕನಸನ್ನು ಕಂಡು ಎಚ್ಚರವಾದವನು ಸದ್ಯ ಇದು ಬರಿಯ ಕನಸು, ವಾಸ್ತವ ಅಲ್ಲ ಎಂದು ನಿರಾಳ ಆಗುವ ಹಾಗೆ, ಅವನ ಮಲಿನವಾದ ಮನಸ್ಸನ್ನು ಸ್ವಚ್ಛಗೊಳಿಸುವ ಹಾಗೆ ಬೀಸಿ ಬಂದ ತಂಗಾಳಿಯಾಗಿದೆ. ಇಬ್ಬರು ನೆಂಟರು. ಇಬ್ಬರಿಗೂ ಪರಸ್ಪರ ವಿಶ್ವಾಸ, ಪ್ರೀತಿ. ಒಬ್ಬನಿಗೆ ಕಷ್ಟ ನಷ್ಟವಾದರೆ ಇನ್ನೊಬ್ಬನಿಗೆ ಬೇಸರವೇ, ವಿಷಾದವೇ. ಅಂಥ ನೆಂಟನೊಬ್ಬನಿಗೆ ಅತಿಯಾಗಿ ಆಪತ್ತುಗಳು ಕಾಡುತ್ತಾ ಇದ್ದದ್ದು ನಿವಾರಣೆಯಾದರೆ ಇನ್ನೊಬ್ಬ ನೆಂಟ ಅವನಿಗೆ ಸಮಾಧಾನ ಮಾಡುವುದು – ಎಷ್ಟೆಷ್ಟೋ ಎಡರು ತೊಡರುಗಳನ್ನೆಲ್ಲಾ ಧೈರ್ಯದಿಂದ ಎದುರಿಸಿ ಪಾರಾಗಿದ್ದೀಯ, ಇನ್ನೇನು ಎಲ್ಲಾ ಮುಗಿಯಿತು, ಇನ್ನೆಲ್ಲಾ ಒಳ್ಳೆಯ ದಿನಗಳೇ, ಹೆದರಿಕೆ ಆತಂಕಗಳಿಗೆ ಅವಕಾಶವೇ ಇಲ್ಲ ಎಂದು ಅವನಲ್ಲಿ ಸುಂದರ ಭವಿಷ್ಯದ ಬಗೆಗೆ ಭರವಸೆ ವಿಶ್ವಾಸ ಮೂಡಿಸುವ ಹಾಗೆ ಮಾತಾಡುವುದರಿಂದಲೇ  ಈ ರೀತಿ ಬೆಳಗಿನ ತಂಗಾಳಿ ಅವನನ್ನು ಸ್ಪರ್ಶಿಸಿದೆ.  ಹೀಗೆ ಕವಿ ಹೇಳುತ್ತಿರುವುದು ಈ ನಿರ್ದಿಷ್ಟ ಸಂದರ್ಭಕ್ಕೆ ಮಾತ್ರ ಅನ್ವಯ ಆಗುವುದಿಲ್ಲ. ಅದು ಕೃಷ್ಣನ ರೀತಿಯೇ ಹಾಗೆ ಎಂಬುದರ ಸೂಚಕ. ಅದರಿಂದಲೇ ಕವಿ ಪ್ರತಿಯೊಂದು ಅಧ್ಯಾಯಕ್ಕೂ ಉಲ್ಲಾಸ ಎನ್ನುತ್ತಾರೆ. ಶ್ರೀಹರಿಚರಿತದ ಪ್ರತಿಯೊಂದು ಅಧ್ಯಾಯವೂ ಉಲ್ಲಾಸವೇ.

ತಂಗಾಳಿಯ ತಂಪನ್ನೂ ಕಂಪನ್ನೂ ಆಸ್ವಾದಿಸುತ್ತಾ ವಸುದೇವ ಬರುತ್ತಾ ಇದ್ದಾನೆ. ಸ್ವಚ್ಛವಾದ ಮತ್ತು ಸುಗಂಧಿತವಾದ ಈ ಗಾಳಿಯ ಸ್ಪರ್ಶ ವಸುದೇವನಿಗೆ ಹೊಸ ಬದುಕನ್ನೇ ಕೊಟ್ಟಿದೆ. ರಾತ್ರಿಯೆಲ್ಲಾ ಮಳೆ ಸುರಿದು ನಿಂತಿದ್ದರೂ ಅದರ ಹನಿಗಳು ಮರದ ಎಲೆಗಳ ಮೇಲೆ ಕುಳಿತಿದ್ದವು. ಬೆಳಗಾಯಿತು ಎಂದು ಮರದ ಮೇಲಿನಿಂದ ಹಕ್ಕಿಗಳು ಹಾರಿಹೋದಾಗ ಇವನ ಮೈಮೇಲೆ ಮಳೆ ಹನಿಗಳು ಪಟ ಪಟ ಎಂದು ಒಂದೇ ಸಮನೆ ಉದುರಿದವು. ಅವನಿಗೆ ಸ್ನಾನ ಮಾಡಿದ ಹಾಗೆಯೇ ಆಯಿತು. ಸ್ವಚ್ಛತೆಯ ಭಾವ ಅವನ ಮೈ ಮನಸ್ಸುಗಳನ್ನು ಇನ್ನಷ್ಟು ತಂಪು ಮಾಡಿದವು, ಕಳವಳವನ್ನು ನಿವಾರಿಸಿ ದೇಹ ಮನಸ್ಸನ್ನು ತೊಳೆದವು. ಚಿಲಿಪಿಲಿ ಧ್ವನಿ ಮಾಡುತ್ತಾ ಹಾರಿ ಹೋದ ಹಕ್ಕಿಗಳ ಕಲರವ ಈಗ ಬಹಳ ಮಧುರವಾಗಿ ಕೇಳಿಸಿತು ಎನ್ನುತ್ತಾರೆ ಕವಿ. ವಸುದೇವ ಹಕ್ಕಿಗಳ ಕಲರವವನ್ನು ಕೇಳದೆ ವರ್ಷಗಳೇ ಕಳೆದಿವೆ. ಕೇಳಿದರೂ ಸಾವು ಬದುಕಿನ ಸಮಸ್ಯೆ ತಲೆಯ ಮೇಲೆ ತೂಗಾಡುತ್ತಿದ್ದಾಗ ಅದರ ಮಾಧುರ್ಯವನ್ನು ಸವಿಯುವ ಮನಸ್ಸಾದರೂ ಎಲ್ಲಿತ್ತು? ಈಗ ಹಕ್ಕಿಯ ಕಲಕಂಠದಿಂದ ಸಂಭ್ರಮಿಸುತ್ತಾ ಯಮುನಾ ನದಿಯ ದಂಡೆಗೆ ಬರುತ್ತಿದ್ದಾಗ ಅವನನ್ನು ಸ್ವಾಗತಿಸಿದುದು ಉದಯರವಿಯ ಅಪರಂಜಿ ಚಿನ್ನದ ಬಣ್ಣದ ಕೆಂಪು. ವಿಸ್ತಾರವಾದ ಯಮುನಾ ನದಿಯ ನೀರನ್ನೂ ಮತ್ತು ದಂಡೆಯ ಮೇಲೆ ಬೆಳೆದು ನಿಂತಿದ್ದ ದಟ್ಟವಾದ ಸಾಲುಮರಗಳನ್ನೂ ಹಾಗೂ ಅಡ್ಡವಾಗಿ ಇದ್ದವುಗಳನ್ನೆಲ್ಲಾ ಬಳಸಿಕೊಂಡು ತಾನೇ ಮುಂದಾಗಿ ಎಲ್ಲರಿಗೆ ಕಾಣಬೇಕು ಎಂದು ಮುಂದು ಮುಂದಾಗಿ ಬರುತ್ತಿದ್ದವಂತೆ ಸೂರ್ಯನ ಕಿರಣಗಳು. ಅಸಾಧಾರಣವಾಗಿ ಕಂಡ ಸೂರ್ಯೋದಯ ವಸುದೇವನಿಗೆ ತನ್ನ ಭಾಗ್ಯೋದಯದ ಪ್ರತೀಕವಾಗಿ ಕಂಡಿತು. ಸೂರ್ಯನಿಗೆ ಭಕ್ತಿಯಿಂದ ಗೌರವಾದರಗಳಿಂದ ಕೈಮುಗಿದ.

ಇದ್ದಕ್ಕಿದ್ದಂತೆ ರಾತ್ರಿಯೆಲ್ಲಾ ಧೋ ಧೋ ಎಂದು ಮಳೆ ಸುರಿದಿದೆ, ಭೂಮಿ ನೆನೆದು ಹಸಿ ಮಣ್ಣಿನ ಕಂಪು ಎದ್ದು ಬಂದಿದೆ, ಅಂಥ ಭೂಮಿಯ ಮೇಲಿನಿಂದ ಗಾಳಿ ಸುಳಿದು ಬಂದುದರಿಂದಾಗಿ ಆ ಗಾಳಿ ಸುಗಂಧಿತ ಆಗಿದೆ. ಧಾರಾಕಾರವಾಗಿ ಮುಸಲಧಾರೆಯಂತೆ ಮಳೆ ಸುರಿದುದರಿಂದ ನೆಲದ ಮೇಲೆ ಏನೇನು ಕಸ ಕಡ್ಡಿ ಇತ್ಯಾದಿ ಕೊಳಕು, ಕಶ್ಮಲಗಳಿದ್ದವೋ ಅವೆಲ್ಲಾ ಕೊಚ್ಚಿಕೊಂಡು ಹೋಗಿದೆ, ಭೂಮಿ ನಿರ್ಮಲವಾಗಿದೆ. ಸುಗಂಧಿತ ಗಾಳಿ ಬೀಸಿ ಬಂದದ್ದು ಮಳೆ ನೀರಿನಿಂದ ತೊಳೆದು ಸ್ವಚ್ಛವಾದ ಇಂಥ ಭೂಮಿಯ ಮೇಲಿನಿಂದ. ಇವೆಲ್ಲದರಿಂದಾಗಿ ಅದು ಕೆಟ್ಟ ಕನಸನ್ನು ಕಂಡು ಎಚ್ಚರವಾದವನು ಸದ್ಯ ಇದು ಬರಿಯ ಕನಸು, ವಾಸ್ತವ ಅಲ್ಲ ಎಂದು ನಿರಾಳ ಆಗುವ ಹಾಗೆ, ಅವನ ಮಲಿನವಾದ ಮನಸ್ಸನ್ನು ಸ್ವಚ್ಛಗೊಳಿಸುವ ಹಾಗೆ ಬೀಸಿ ಬಂದ ತಂಗಾಳಿಯಾಗಿದೆ.

ಈ ವೇಳೆಗೆ ಅವನ ಮನಸ್ಸು ಮಗುವಿನಂತಾಗಿತ್ತು. ಯಮುನಾ ನದಿಯ ಅಲೆಗಳು ಒಂದರ ಮೇಲೊಂದರಂತೆ ನುಗ್ಗಿ ಬರುತ್ತಾ ಇದ್ದವು. ಅಲೆಗಳ ಹೊಯ್ದಾಟಕ್ಕೆ ಅನುಗುಣವಾಗಿ ನೀರು ಮೇಲೆ ಕೆಳಗೆ ವಿಭಾಗ ಆಗುತ್ತಾ ಇತ್ತು ಮತ್ತು ಹರಡಿಕೊಳ್ಳುತ್ತಲೂ ಇತ್ತು. ನೀರು ಹೇಗೆ ಹರಡಿಕೊಳ್ಳುತ್ತಿತ್ತೋ ಹಾಗೆ ಸೂರ್ಯನ ಬಿಂಬ ಬಗೆ ಬಗೆಯ ಆಕಾರ ತಳೆದು ಕುಣಿದಾಡುತ್ತಾ ಇತ್ತು. ಅದನ್ನೂ ನೋಡಿದ ವಸುದೇವ ಆಹಾ ನಮ್ಮ ಅಳತೆಯಲ್ಲಿಯೇ ಸೂರ್ಯ ಇದ್ದಾನೆ ಎಂದು ಸಂತೋಷಪಟ್ಟ. ಯಮುನಾ ನದಿಯ ಆಚೆಯ ದಂಡೆಯಲ್ಲಿದ್ದ ನಂದನ ಪಾಳೆಯಕ್ಕೆ ನದಿಯನ್ನು ದಾಟಿಯೇ ಹೋಗಬೇಕು. ಅದಕ್ಕೇ ವಸುದೇವ ಯಮುನಾ ನದಿಯ ಬದಿಯಲ್ಲೇ ಬರುತ್ತಾ ಇದ್ದ. ಮನಸ್ಸು ಹಗುರವಾಗಿದ್ದುದರಿಂದ ಸುತ್ತಲೂ ನೋಡುತ್ತಾ ಬರುತ್ತಿದ್ದ. ಅಲ್ಲಿ ಬಗೆ ಬಗೆಯ ಗಿಡ ಮರಗಳು ಇದ್ದವು. ಅವುಗಳಲ್ಲಿ ಬಗೆ ಬಗೆಯ ಬಣ್ಣದ ಹೂಗಳು ಅರಳಿದ್ದವು. ಹೂವುಗಳ ಸೌಂದರ್ಯಕ್ಕೆ ಆಕರವಾದ ಮರ ಗಿಡಗಳ ಬುಡದಲ್ಲಿದ್ದ ಹುಲ್ಲಿನ ಮೇಲಿನ ನೀರಿನ ಹನಿಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು ಅವು ಫಳ ಫಳ ಎಂದು ಹೊಳೆಯುತ್ತಾ ಇದ್ದವು. ಅವು ಆ ಗಿಡ ಮರಗಳಿಗೆ ನಿಮ್ಮ ಚೆಲುವನ್ನು ನೋಡಿಕೊಳ್ಳಿ ಎಂದು ಹೇಳುತ್ತಾ ಅವುಗಳ ಮುಖಕ್ಕೆ ಹಿಡಿದ ಕನ್ನಡಿಯ ಹಾಗೆ ಇರುವುದನ್ನೂ, ಇಡೀ ಭೂಮಿಯೇ ತನ್ನ ಸೃಷ್ಟಿ ಸೌಂದರ್ಯವನ್ನು ಮೆಚ್ಚಿಕೊಳ್ಳುತ್ತಾ ಇರುವುದನ್ನೂ, ಭೂಮಿ ಮತ್ತು ಅದರ ಸೃಷ್ಟಿ ಎರಡೂ ಪಾರ್ವತಿ ಪರಮೇಶ್ವರರಂತೆ ಏಕ ಆಗಿರುವುದನ್ನೂ ನೋಡಿದ. ಮನಸ್ಸು ಇನ್ನಷ್ಟು ಉತ್ಸಾಹದಿಂದ ಉಕ್ಕೇರಿತು.

ವಸುದೇವ ದೇವಕಿಯರ ಎಂಟನೇ ಮಗುವಾಗಿ ವಿಷ್ಣು ಹುಟ್ಟಿದ ಕೂಡಲೇ ಅವರಿಗೆ ತನ್ನ ನಿಜರೂಪವನ್ನು ತೋರಿದ್ದ. ಅದು ಮಗುವಾಗಿಯೂ ಕಾಣುತ್ತಿತ್ತು. ಹಾಗೆಯೇ ಗದೆ, ಶಂಖ, ಚಕ್ರ, ಪದ್ಮಗಳನ್ನು ನಾಲ್ಕೂ ಕೈಗಳಲ್ಲಿ ಹಿಡಿದ, ಪೀತಾಂಬರವನ್ನು ಉಟ್ಟ, ಎದೆಯಲ್ಲಿ ಕೌಸ್ತುಭ ಮಣಿಯನ್ನು ಧರಿಸಿದ, ತಲೆಯಲ್ಲಿ ಕಿರೀಟ ಇದ್ದ ಭಗವಂತನ ಹಾಗೆಯೂ ಕಾಣುತ್ತಿತ್ತು. ಅದು ಸೃಷ್ಟಿ = ಮಗು ಮತ್ತು ಸೃಷ್ಟಿಕರ್ತೃ = ವಿಷ್ಣು ಎರಡೂ ಒಂದೇ ಆಗಿದ್ದ ಅನುಭವ ಆಗಿತ್ತು. ಈ ಅನುಭವ ಇಲ್ಲಿ ಸ್ತ್ರೀ ಪುರುಷರ ಭಿನ್ನಾಭಿನ್ನ ಏಕತೆಯ ಸೂಚಕ ಆದ ಪಾರ್ವತೀ ಪರಮೇಶ್ವರರಂತೆ ತೋರಿತು ಎನ್ನುತ್ತಾರೆ ಕವಿ. ಇದೂ ಸಹ ಕೃಷ್ಣನ ಬದುಕಿನ ರೀತಿಯೇ ಹಾಗೆ ಎನ್ನುವುದರ ಸೂಚಕ. ಮುಂದೆ ಅದರ ವಿವರಗಳು ಬರುತ್ತವ.

ಉತ್ಸಾಹ ಉಲ್ಲಾಸಗಳಿಂದ ಸುತ್ತಲಿನ ಎಲ್ಲಾ ಸಂಗತಿಗಳನ್ನು ಇದೇ ತಾನೆ ಹೊಸದಾಗಿ ನೋಡುತ್ತಿರುವೆ ಎನ್ನುವಂತೆ ನೋಡುತ್ತಾ, ಕೇಳುತ್ತಾ ವಸುದೇವ ದೋಣಿ ನಿಲ್ಲಿಸುವ ಕರೆಯ ಹತ್ತಿರ ಬಂದ, ದೋಣಿ ಏರಿದ, ದೋಣಿ ಮುಂದೆ ಮುಂದೆ ಹೋಗುತ್ತಿದ್ದಂತೆ ಯಮುನೆಯ ನೀರಿನಲ್ಲಿ ಕೈ ಇಟ್ಟು ಅದರ ಆವೇಗ, ತಂಪುಗಳ ಸಂತೋಷವನ್ನು ಸವಿದ. ಹಾಗೆಯೇ ಆಕಾಶ ನೋಡಿ ಅದರ ನೀಲಿ ಬಣ್ಣದ ಸೊಗಸನ್ನೂ ನೋಡುತ್ತಾ ಕುಳಿತ. ಮನಸ್ಸು ದೇಹಗಳೆರಡನ್ನೂ ಆಕಾಶ ಭೂಮಿಗಳೆರಡೂ ಪ್ರೀತಿಯಿಂದ ಸ್ಪರ್ಶಿಸುತ್ತಿವೆ ಎಂಬ ಭಾವನೆ ಮನಸ್ಸನ್ನು ತುಂಬಿತು. ಇದೂ ಸಹ ಆಪ್ತ ಸಂಗಮವೇ. ಅದೇ ಭಾವದಲ್ಲಿ ದೋಣಿ ದಡ ಸೇರುತ್ತಿದ್ದಂತೆಯೇ ವಸುದೇವ ಕೆಳಗಿಳಿದು ಗೊಲ್ಲರ ಪಾಳೆಯದ ದಾರಿ ಹಿಡಿದ.

ಪ್ರಿಯ ಸ್ನೇಹಿತನಾದ ನಂದನನ್ನು ಆದಷ್ಟು ಬೇಗ ನೋಡಲೇ ಬೇಕೆಂದು ಧಾವಂತದಿಂದ ನಂದನ ಪಾಳೆಯಕ್ಕೆ ವಸುದೇವ ಬರುತ್ತಿದ್ದಾಗ ಅವನಿಗೆ ದಟ್ಟವಾಗಿ ಅನ್ನಿಸಿದುದು ಅಲ್ಲೊಸಗೆ ಮೂಡಿರ್ದುದು ಎಂದು. ಅದಕ್ಕೆ ಕಾರಣವಾದದ್ದು ಎಲ್ಲಾ ಕಡೆಯಲ್ಲೂ ಹಾರಾಡುತ್ತಿದ್ದ ವರ್ಣರಂಜಿತ ಪತಾಕೆಗಳು, ಡಂಕದ ಧ್ವನಿಗೆ ಹೊಂದಿಕೊಳ್ಳುವಂತೆ ನುಡಿಯುತ್ತಿರುವ ಮುಖವೀಣಾ ನಾದ, ಅದು ಮೀಟುತ್ತಿದ್ದ ಉಲ್ಲಾಸದ ಉದಯರಾಗ; ಡಂಕ ಮತ್ತು ಮುಖವೀಣೆಗಳ ನಡೆಗೆ, ಲಯಕ್ಕೆ, ತಾಳಕ್ಕೆ ಹೊಂದಿಕೊಳ್ಳುವಂತೆ ಕುಣಿಯುತ್ತಿದ್ದ ಚಿಕ್ಕ ಮಕ್ಕಳು; ಬಗೆ ಬಗೆಯ, ತಮಗೆ ಒಪ್ಪುವ ಬಣ್ಣದ ಬಟ್ಟೆಯನ್ನು ಧರಿಸಿ ದೊಡ್ಡ ಮನುಷ್ಯರ ಹೆಂಡತಿಯರಂತೆ ಸರಭರನೆ ಸಡಗರದಿಂದ ಓಡಾಡುತ್ತಿದ್ದ ಗೊಲ್ಲ ಸ್ತ್ರೀಯರು; ತಲೆಗೆ ಹಿಂದೆ ಚುಂಗು ಇಳಿಬಿಟ್ಟ ರುಮಾಲನ್ನು ಸುತ್ತಿಕೊಂಡು, ಕಚ್ಚೆ ಪಚ್ಚೆ ಉಟ್ಟುಕೊಂಡ. ಸಂತೋಷದಿಂದ ಓಲಾಡುತ್ತಾ ಇದ್ದ ಅವರ ಗಂಡಂದಿರು. ಒಳ್ಳೆ ಮಳೆ ಬಂದ ನಂತರ ಉಳುಮೆ, ಬಿತ್ತನೆ ಮಾಡುವ ಖುಶಿ ಹೇಗೆ ಆಗುತ್ತದಯೋ ಅಂತಹುದೇ ಉತ್ಸಾಹದ ಖುಶಿಯ ಒಸಗೆಯನ್ನು ಎಲ್ಲೆಲ್ಲೂ ನೋಡಿದ ವಸುದೇವ ಇದು ನಂದನ ಪುತ್ರೋತ್ಸವದ ಸಿದ್ಧತೆ ಊಹಿಸಿದ. ಅವನ ಮನಸ್ಸು ಇನ್ನಷ್ಟು ನಿರಾಳ ಆಯಿತು.

ಪುತ್ರೋತ್ಸವದ ಮಂಗಲವನ್ನು ತನ್ನ ಕುಲಬಾಂಧವರೊಡನೆ ಹೀಗೆ ಆಚರಿಸುತ್ತಾ ಇರುವ ನಂದ ಎಲ್ಲಿ ಎಂದು ಕಣ್ಣು ಹಾಯಿಸಿದ. ಬಂಡಿಗಳ ಸಾಲಿನ ಕೊನೆಯ ಹಸಿರು ಚಪ್ಪರದ ಒಳಗೆ ನಂದ ಹೆಮ್ಮೆ, ಸಂತೋಷದಿಂದ ಮೀಸೆಯನ್ನು ನೇವರಿಸುತ್ತಾ, ಬಾಯಿಯಲ್ಲಿ ಸ್ವಲ್ಪ ಹಲ್ಲು ತೋರಿಸುತ್ತಾ, ಮುಖದ ತುಂಬಾ ನಗು ತುಂಬಿಕೊಂಡು ನಿಂತಿದ್ದ. ಇಂಥ ನಂದಗೋಪ ನೋಡಿದವರಿಗೆ ಮಣ್ಣು=ಭೂಮಿ, ಮುಗಿಲು=ಆಕಾಶ ಎರಡರ ಸಂಗಮದಂತೆ ಕಾಣುತ್ತಿದ್ದ ಎನ್ನುತ್ತಾರೆ ಕವಿ. ನಂದಗೋಪನದು ತನ್ನಿಚ್ಛೆಯ ಅಪ್ರತಿಹತಂ ಗಡಸುದನಿ, ಗದರಿಕೆಗೆ ಅವಕಾಶ ಇಲ್ಲ ಎನೆ ಕೂರ್ಮೆ ದಿಟ್ಟಿಯನು ಪಳಗಿಸಿಹ ಕೌಶಲ. ಗದರದೆಯೇ ತನ್ನ ಇಚ್ಛೆಯನ್ನು ತನ್ನ ಸಹಾಯಕರು ಕಾರ್ಯರೂಪಕ್ಕೆ ತರುವಂತೆ ಅವರನ್ನು ಮಣಿಸಬಲ್ಲ ಪ್ರೀತಿಯುತ ನೋಟ ಅವನದು. ನಡೆ ನುಡಿಯ ಸೌದರ್ಯವನ್ನೂ ತನ್ನದಾಗಿಸಿಕೊಂಡಿದ್ದ ನಂದನನ್ನು ಕವಿ ಹರ್ಷ ಸ್ವಸ್ಥ ಎಂದು ವರ್ಣಿಸುತ್ತಾರೆ. ನಂದನ ಸಂತೋಷ ಯಾವುದೋ ಲೌಕಿಕವಾದ ಲಾಭಾಪೇಕ್ಷೆಯು ಪೂರ್ಣಗೊಂಡದ್ದರಿಂದ ಉಂಟಾದದ್ದು ಅಲ್ಲ; ಅವನು ಸಂತೋಷದಿಂದಿರುವುದಕ್ಕೆ ಕಾರಣ ಅವನು ಸಮಾಧಾನಿಯಾಗಿದ್ದಾನೆ = ಸ್ವಸ್ಥನಾಗಿದ್ದಾನೆ ಎನ್ನುವುದೇ ಎನ್ನುತ್ತಾರೆ ಕವಿ.

ವಸುದೇವ ದೇವಕಿಯರ ಎಂಟನೇ ಮಗುವಾಗಿ ವಿಷ್ಣು ಹುಟ್ಟಿದ ಕೂಡಲೇ ಅವರಿಗೆ ತನ್ನ ನಿಜರೂಪವನ್ನು ತೋರಿದ್ದ. ಅದು ಮಗುವಾಗಿಯೂ ಕಾಣುತ್ತಿತ್ತು. ಹಾಗೆಯೇ ಗದೆ, ಶಂಖ, ಚಕ್ರ, ಪದ್ಮಗಳನ್ನು ನಾಲ್ಕೂ ಕೈಗಳಲ್ಲಿ ಹಿಡಿದ, ಪೀತಾಂಬರವನ್ನು ಉಟ್ಟ, ಎದೆಯಲ್ಲಿ ಕೌಸ್ತುಭ ಮಣಿಯನ್ನು ಧರಿಸಿದ, ತಲೆಯಲ್ಲಿ ಕಿರೀಟ ಇದ್ದ ಭಗವಂತನ ಹಾಗೆಯೂ ಕಾಣುತ್ತಿತ್ತು. ಅದು ಸೃಷ್ಟಿ = ಮಗು ಮತ್ತು ಸೃಷ್ಟಿಕರ್ತೃ = ವಿಷ್ಣು ಎರಡೂ ಒಂದೇ ಆಗಿದ್ದ ಅನುಭವ ಆಗಿತ್ತು. ಈ ಅನುಭವ ಇಲ್ಲಿ ಸ್ತ್ರೀ ಪುರುಷರ ಭಿನ್ನಾಭಿನ್ನ ಏಕತೆಯ ಸೂಚಕ ಆದ ಪಾರ್ವತೀ ಪರಮೇಶ್ವರರಂತೆ ತೋರಿತು ಎನ್ನುತ್ತಾರೆ ಕವಿ.

ತನ್ನ ಸ್ನೇಹಿತ ಸ್ವಸ್ಥನಾಗಿರುವುದನ್ನೂ, ಸಂತೋಷದಿಂದ ಇರುವುದನ್ನೂ ನೋಡಿ ವಸುದೇವನಿಗೆ ಸಂಪೂರ್ಣವಾಗಿ ಆನಂದವಾಯಿತು. ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ನಂದ ಮತ್ತು ನಂದನನನ್ನು ನೆನೆದು ಅವರನ್ನು ನೋಡಲೇ ಬೇಕೆಂದು ಹೊರಟಾಗ ಅವನಲ್ಲಿ ಯಾವ ಯಾವ ಗೊಂದಲಗಳು, ಹಿಂಜರಿಕೆಗಳು, ಆತಂಕಗಳು, ಕಳವಳಗಳು, ಸಂಶಯಾನುಮಾನಗಳು ಇದ್ದವೋ ಅವುಗಳಲ್ಲಿ ಯಾವುದೂ ಉಳಿಯಲಿಲ್ಲ, ಇನ್ನು ಯಾವ ಕಿಲ್ಬಿಷಕ್ಕೂ ಅಲ್ಲಿ ಸ್ಥಳಾವಕಾಶ ಇರಲಿಲ್ಲ. ಇಂಥ ವಸುದೇವನನ್ನು ನಂದ ನೋಡಿದ. ಆಚೆ ಈಚೆ ನೋಡದೆ ಸ್ನೇಹಿತನನ್ನು ಬರಮಾಡಿಕೊಳ್ಳಲು ಆತುರದಿಂದ ನುಗ್ಗಿಬಂದ.

ವಸುದೇವ ನಂದನನ್ನು ನೋಡಿದ, ನಂದ ವಸುದೇವನನ್ನು ನೋಡಿದ. ಇಬ್ಬರದೂ ಮಿತ್ರದರ್ಶನವೇ. ವಸುದೇವ ಸಂದರ್ಭ, ಸನ್ನಿವೇಶಗಳನ್ನೆಲ್ಲಾ  ಬುದ್ಧಿಪೂರ್ವಕವಾಗಿ ಪರಿಶೀಲಿಸುತ್ತಾ, ವಿಮರ್ಶಿಸುತ್ತಾ ತನ್ನ ಮನಸ್ಸಿನ ಕಶ್ಮಲಗಳನ್ನೆಲ್ಲಾ ಕಳೆದುಕೊಂಡು ಪರಿಶುಭ್ರನಾಗಿದ್ದಾನೆ. ನಂದ ಸ್ವಾಭಾವಿಕವಾಗಿಯೇ ನಿರ್ಮಲ ಮನಸ್ಸುಳ್ಳವನು ಆಗಿದ್ದಾನೆ. ಇಂಥ ಮಿತ್ರದರ್ಶನ ಸಾಧಾರಣವಾದದ್ದು ಆಗಿರಲು ಸಾಧ್ಯವೇ ಇಲ್ಲ ಎನ್ನುವುದು ಕವಿಯ ನಿರ್ಣಯ. ಹೆಂಡತಿ, ಮಗ, ಬಂಧುಗಳ ಬಗ್ಗೆ ಪ್ರೀತಿ ಇದ್ದರೆ ಅದು ಪ್ರವೃತ್ಯಾತ್ಮಕವಾದದ್ದು (ಇನ್ ಸ್ಟಿನ್‌ಕ್ಟ್ ಟಿವ್). ಇದರಿಂದ ಹಿತ ಆಗುತ್ತದೆಯೋ ಇಲ್ಲವೋ ಹೇಳಲಗುವುದಿಲ್ಲ; ತಿಳಿಯೆ ನಾನ್ ಇವುಗಳಿಂ ನರನ ಆತ್ಮಕೆ ಆವ ಉಪಕಾರ ಎಂದು ಕವಿ ಉದ್ಗರಿಸುತ್ತಾರೆ. ಆದರೆ ಇಲ್ಲಿಯ ಸ್ನೇಹ ವ್ಯಕ್ತಿ ತನ್ನನ್ನೇ ತಾನು ಮೌಲ್ಯವಿವೇಚನೆ ಮಾಡಿಕೊಳ್ಳುವಂತೆ ಮಾಡುವಂತಹುದು. ನಿಜವಾದ ಸ್ನೇಹದಲ್ಲಿ ರತಿ ಇರುತ್ತದೆ, ಕಾಮ ಭಾವನೆ ಇರುವುದಿಲ್ಲ. ಗುರುವಿನ ಬಗೆಗೆ ಇರುವಂತಹ ಗೌರವ ಇರುತ್ತದೆ, ವಿನಯ ಇರುವುದಿಲ್ಲ. ಬಾಂಧವ್ಯ ಇರುತ್ತದೆ, (ಪ್ರಹ್ವತೆ) ಮೋಹ ಇರುವುದಿಲ್ಲ. ಸಾಮಾಜಿಕ ಕಾಳಜಿ ಇರುತ್ತದೆ, ವಿಧಿ ನಿಷೇಧಗಳು ಇರುವುದಿಲ್ಲ. ವಾತ್ಸಲ್ಯ ಇರುತ್ತದೆ, ಮಮಕಾರ ಇರುವುದಿಲ್ಲ. ಇವೆಲ್ಲದರ ರಸಾಯನವೇ ಮೈತ್ರಾಸವಂ ಎನ್ನುತ್ತಾರೆ ಕವಿ. ಇಂಥ ಸ್ನೇಹ ದೇಹ ಮನಸ್ಸು ಬುದ್ಧಿಗಳಿಗೆ ಆಹ್ಲಾದ ಕಾರಕ, ವ್ಯಕ್ತಿಯ ಎಲ್ಲಾ ಚೈತನ್ಯವನ್ನೂ ಜಾಗೃತಗೊಳಿಸುವ ಪ್ರಾಣಶಕ್ತಿ. ಎರಡು ದೇಹಗಳಿದ್ದರೂ ಒಂದೇ ಆತ್ಮ ಎನ್ನುವ ಅನನ್ಯತೆಯ, ಏಕತೆಯ ಭಾವದ ಪ್ರತೀಕ. ಶ್ರೀಹರಿಚರಿತದ ಅರಿಕೆಯಲ್ಲಿ ಪ್ರಸ್ತಾಪಿಸುವ ಸಮಷ್ಠಿ ಪ್ರಜ್ಞೆಯ ಭಾವವಾದ ಮೈತ್ತಿಯ ಪ್ರತೀಕವೂ ಆಗಿರುವ ನಂದ ಮತ್ತು ವಸುದೇವರ ನಡುವೆ ಯಾವ ಕಾರಣಕ್ಕೂ ವೈಮನಸ್ಯ ಬರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಕವಿ.

ಕವಿ ಇಲ್ಲಿ ಗಮನಕ್ಕೆ ತರುತ್ತಿರುವುದು ಸ್ನೇಹದ ದೈವಿಕ ಭಾವವನ್ನು. ವಸುದೇವ ಜಗತ್ತಿನ ಕಲ್ಯಾಣವನ್ನು ಬಯಸಿದ್ದಾನೆ. ಅದಕ್ಕಾಗಿ ತನ್ನ ಮಗನನ್ನು ತನ್ನ ಮಿತ್ರನ ಮೇಲೆ ಸಂಪೂರ್ಣ ಭರವಸೆ ಇಟ್ಟು ಅವನ ಹೆಂಡತಿಯ ಬಳಿ ಮಲಗಿಸಿ ಹೋಗಿದ್ದ. ಸಂಶಯ ಕಳವಳಗಳಿಗೆ ಅವಕಾಶ ಬೇಡ ಎಂದು, ಮಿತ್ರನ ಮಗು ಹೆಣ್ಣು, ಅದಕ್ಕೆ ಯಾವ ತೊಂದರೆಯೂ ಆಗುವುದಿಲ್ಲ ಎಂದು ನಂಬಿ ಆ ಮಗುವನ್ನು ಎತ್ತಿಕೊಂಡು ಹೋಗಿದ್ದ. ಇಂಥ ಸದ್ಭಾವಗಳನ್ನೆಲ್ಲಾ ಸ್ನೇಹದ ರಸಪಾಕದಲ್ಲಿ ಸಮೀಕರಿಸಿದರೆ ಅದು ಜೀವ ಚೈತನ್ಯವನ್ನು ಉಕ್ಕೇರಿಸುತ್ತದೆ, ಮಧುರಭಾವವನ್ನು ಉದ್ದೀಪಿಸುತ್ತದೆ, ವೈವಿಧ್ಯತೆಯಲ್ಲಿ ಏಕತೆ ಎನ್ನುವ ಭಾವ ಬಂಧುರವನ್ನು ಮೂಡಿಸುತ್ತದೆ. ಮೈತ್ರಿಯಿಂದೊಂದರೊಳೆ ಜಗವರಿವುದು ಅಂತಸಾಕ್ಷಿಯಂ ಸರ್ವಸಂಬಂಧಿ ಅಂತರ್ಯಾಮಿಯಂ ಪ್ರೇಮೈಕನಂ ಎನ್ನುತ್ತಾರೆ ಕವಿ. ಹಿತಕಾರಕ ಮೈತ್ರೀಭಾವವನ್ನು ಇಡೀ ಜಗತ್ತಿಗೆ ವಿಸ್ತರಿಸಬಹದು; ಆಗ ಅದು ಎಲ್ಲರೊಂದಿಗೆ, ಎಲ್ಲದರೊಂದಿಗೆ ಆತ್ಮೀಯತೆಯ ಬಂಧವನ್ನು ಬೆಸೆಯುವ ಪ್ರೀತಿ ರಸ ಆಗಿಬಿಡುತ್ತದೆ; ಈ ಅರ್ಥದಲ್ಲಿ ಸೃಷ್ಟಿಕರ್ತನಾದ ಭಗವಂತ ಜಗನ್ಮಿತ್ರ; ಅವನನ್ನು ತಲುಪುವ ಮಾರ್ಗ ಮೈತ್ರಿ. ಇಡೀ ಜಗತ್ತಿಗೆ ವಿಸ್ತರಿಸಬಲ್ಲ ಮೈತ್ರಿಯಿಂದ ವ್ಯಕ್ತಿಗೆ ತಾನೇನು ಮಾಡಬಲ್ಲೆ, ತಾನೇನು ಮಾಡುತ್ತಿದ್ದೇನೆ ಎಂಬ ವಿವೇಚನಾ ಪರಿಜ್ಞಾನ ಉಂಟಾಗುತ್ತದೆ; ಅದೇ ಆತ್ಮಜ್ಞಾನ ಆತ್ಮ ವಿಬೋಧಿ. ಇದರ ಅರ್ಥ ನಮ್ಮಲ್ಲಿ ವೈಯಕ್ತಿಕವಾಗಿರುವ ಸ್ನೇಹಭಾವವು ಕೊನೆಗೆ ನಮ್ಮಲ್ಲಿ ಅಂತರ್ಯಾಮಿಯಾಗಿರುವ, ಭಗವಂತನ ಇರವಿನ ಅರಿವು ಆಗಿಬಿಡುತ್ತದೆ ಎಂದು. ಹೀಗೆ ವ್ಯಷ್ಟಿ-ಸ್ನೇಹವು ಸಮಷ್ಠಿ-ಸ್ನೇಹ ಆಗಿಬಿಡುತ್ತದೆ ಎಂಬುದನ್ನು ಕವಿ ಸೂಚಿಸುತ್ತಾರೆ.

ಇಂಥ ಮಿತ್ರರಾದ ನಂದಗೋಪ, ವಸುದೇವರು ಒಬ್ಬರನ್ನೊಬ್ಬರು ನೋಡಿದರು. ತನ್ನ ಹತ್ತಿರಕ್ಕೆ ಧಾವಿಸಿ ಬಂದ ನಂದಗೋಪನನ್ನು ವಸುದೇವ ಬಿಗಿದಪ್ಪಿದ, ವಸುದೇವನನ್ನು ನಂದಗೋಪ ಬಿಗಿದಪ್ಪಿದ. ವಸುದೇವನ ಕಣ್ಣಿನಿಂದ ಆನಂದದ ಹೊನಲೇ ಹರಿದು ನಂದಗೋಪನ ಬೆನ್ನನ್ನು ತೋಯಿಸಿತು. ಈ ಸಂದರ್ಭದಲ್ಲಿ ದೇವಗಣವೀತೆರೆದ ಸಹ ಅಂಬೋಧ ವಾಃಕಣ ಜಾತಕವಲ್ತೆ. (ಇದೇ ದೇವಗಣ ಒಬ್ಬನ ಜಾತಕದಲ್ಲಿ ಬರೆದ ಸ್ನೇಹ ಎನ್ನುವ ಸಾಗರದ ನೀರಿನ ಕಣ) ಎಂದು ಉದ್ಗರಿಸುತ್ತಾರೆ ಕವಿ. ಭೂಮಿ ಮತ್ತು ಮುಗಿಲುಗಳೆರಡೂ ಪ್ರೀತಿಯಿಂದ ತನ್ನನ್ನು ಸ್ಪರ್ಷಿಸಿದ ಅನುಭವ ಪಡೆದ ದೇವಗಣ ವಸುದೇವ. ಮಣ್ಣು ಆಕಾಶಗಳೆರಡರ ಸಂಗಮವೇ ಆಗಿ ನಂದ ದೇವಗಣ. ಅವರಿಬ್ಬರ ನಡುವಿನ ಸ್ನೇಹ ಸನಾತನ ಧರ್ಮ(sಸಾಗರ)ವಾದ ಕರ್ಮಯೋಗದ ಒಂದು ಸಾಕಾರ ರೂಪ (ವಾಃಕಣ) ಎನ್ನುವುದೇ ಈ ಉದ್ಗಾರದ ಅರ್ಥ. ಹಾಗೆಯೇ ಭಗವಂತನ ಸಾಕಾರ ರೂಪಿಯಾದ ಕೃಷ್ಣ ವಸುದೇವನ ಮಗನಾಗಿ ಏಕೆ ಹುಟ್ಟಿದ, ನಂದಗೋಪನ ಸಾಕುಮಗನಾಗಿ ಏಕೆ ಬೆಳೆದ ಎನ್ನುವುದಕ್ಕೆ ಕವಿ ಸೂಚಿಸುತ್ತಿರುವ ಕಾರಣ.

ಬಹಳ ವರ್ಷಗಳ ನಂತರ ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ ವಸುದೇವ, ನಂದಗೋಪ. ಒಬ್ಬನಿಗೆ ನಿರ್ಬಂಧದ ಬಂಧನದಿಂದ ಬಿಡುಗಡೆ, ಇನ್ನೊಬ್ಬನಿಗೆ ಸಂತಾನವಿಲ್ಲ ಎಂಬ ಕೊರಗಿನಿಂದ ಬಿಡುಗಡೆ. ಈ ಸುಖ ದುಃಖಗಳನ್ನು ಹಂಚಿಕೊಳ್ಳಲು ಸಾಧ್ಯವಾದ ಸಂತೋಷ ಇಬ್ಬರಿಗೂ ಆಗಿದೆ. ಆ ಸಂತೋಷಾಧಿಕ್ಯದಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡರು. ಇಲ್ಲಿ ಪರಸ್ಪರ ಹತ್ತಿರ ಬರುತ್ತಾ ಮಾನಸಿಕವಾಗಿ ನಿರಾಳ ಆಗುವ ಚಿತ್ರವನ್ನು ಕವಿ ಕೊಡುತ್ತಿದ್ದಾರೆ. ವ್ಯಷ್ಟಿ ಸಂಕುಚಿತ ಭಾವದ ಪ್ರತೀಕ. ಅದೇ ವ್ಯಷ್ಟಿ ನಿರಾಳತೆಯಿಂದ ಮಾನಸಿಕವಾಗಿ ಸಮಷ್ಟಿ ಆಗಬಲ್ಲ. ವಸುದೇವ ತನ್ನ ಮಗ, ಬಲಿಷ್ಠ ಕಂಸನನ್ನು ಕೊಲ್ಲಲಿರುವ ತನ್ನ ಮಗ ಎಂಬ ಮೋಹ, ಅಹಂಕಾರ, ಹೆಮ್ಮೆ ಇತ್ಯಾದಿ ಸಂಕುಚಿತ-ವ್ಯಷ್ಠಿಭಾವವನ್ನು ಮೀರಿದ್ದಾನೆ. ತನ್ನ ಮಗ ಎಲ್ಲಾದರೂ ಇರಲಿ, ಬೆಳೆಯಲಿ; ಕಂಸನಂತಹವರನ್ನು ಕೊಂದು ಕಳೆದರಾಯಿತು, ಜಗತ್ತಿಗೆ ಕಲ್ಯಾಣ ಆದರಾಯಿತು ಎಂಬ ಭಾವದಿಂದ ತುಂಬಿದ್ದಾನೆ.

ತನ್ನ ಮನೆಗೆ ಅತಿಥಿಯಾಗಿ ಬಂದ ವಸುದೇವನನ್ನು ತಾನೇ ಮುಂದಾಗಿ ಮಾತಾಡಿಸಿ ಸತ್ಕರಿಸುವುದು ಅತಿಥಿ ಧರ್ಮ ಎನ್ನುವಂತೆ ನಂದಗೋಪ ವಸುದೇವನನ್ನು ಮಾತಾಡಿಸಿದ್ದಾನೆ. ಇದು ನೀನೇನಾ ವಸುದೇವ, ನನಗೆ ನಂಬಲಿಕ್ಕೂ ಸಾಧ್ಯವಾಗುತ್ತಿಲ್ಲ. ನನ್ನ ಕಣ್ಣು ನಿಜ ಹೇಳುತ್ತಿದೆಯಾ? ಇದು ಸುಳ್ಳಲ್ಲ ತಾನೆ? ಎಂದು ಉದ್ಗರಿಸಿದ. ವಸುದೇವನ ಸುಖದ ಭಾಗವನ್ನೇ ಮೊದಲಿಗೆ ಪ್ರಸ್ತಾಪಿಸಿದ. ಅವನಿಗೆ ಆಶ್ಚರ್ಯ ಆದದ್ದು ಎರಡು ಕಾರಣಕ್ಕೆ. ಒಂದು, ವಸುದೇವ ಇದ್ದದ್ದು ಕಂಸನ ಬಂಧನದಲ್ಲಿ. ಕಂಸ ತನ್ನ ತಂದೆಯನ್ನೇ ಸೆರೆಯಲ್ಲಿರಿಸಿ ಸಿಂಹಾಸನದ ಮೇಲೆ ಕುಳಿತವನು. ಅಂತಹವನಿಗೆ ವಸುದೇವನನ್ನು ಸೆರೆಯಿಂದ ಬಿಡಿಸುವ ಕನಿಕರ ಅಥವಾ ಪ್ರೀತಿ ಹೇಗೆ ಬಂತು ಎಂಬುದು. ಇನ್ನೊಂದು ಕಂಸ ಏನೂ ಅರಿಯದ, ದುರ್ಬಲ ಮಕ್ಕಳನ್ನೇ ಹಿಂದೆಮುಂದೆ ನೋಡದೆ ಕೊಲೆಮಾಡಿದವನು; ಅಂತಹ ಕೊಲೆಗಾರನಿಗೂ ಮನಸ್ಸು ಕರಗಿತಾ ಎಂಬುದು. ಏನಾದರೂ ಆಗಿರಲಿ, ಸದ್ಯ! ಈಗಲಾದರೂ ವಸುದೇವನ ದುಃಖಕ್ಕೆ ಕೊನೆ ಸಿಕ್ಕಿತಲ್ಲಾ ಎಂದು ಸಮಾಧಾನ ಪಟ್ಟುಕೊಂಡ.

ತನಗೆ ಪುತ್ರ ಸಂತಾನವಾಗಿ ಸಂತೋಷದಿಂದ ತಾನು ಬೀಗುತ್ತಿರುವಾಗ ತನ್ನಂತೇ ವಸುದೇವನೂ ಸಂತೋಷಪಟ್ಟು ತನ್ನ ಸಂತೋಷದಲ್ಲಿ ಸಹಭಾಗಿಯಾಗಲು ಬಂದಿದ್ದಾನೆ ಎಂಬುದನ್ನು ಭಾವಿಸಿ ಮಾತಿನ ದಿಕ್ಕನ್ನು ಬದಲಾಯಿಸಿದ. ಸರಿಯಾದ ಸಮಯಕ್ಕೆ, ಹೇಳಿ ಕಳುಹಿಸಿದ ಹಾಗೆ ಬಂದೆ; ಕೆಳೆಯೆಂದರಿದೆ ಸೈ ಎಂದು ಶಾಭಾಶ್‌ಗಿರಿ ಕೊಟ್ಟ. ಸ್ನೇಹಿತರೆಂದರೆ ಹಾಗೆ, ಒಬ್ಬ ಏನು ಭಾವಿಸುತ್ತಾನೆ ಎನ್ನುವುದನ್ನು ಬಾಯಿ ಬಿಟ್ಟು ಹೇಳದಿದ್ದರೂ ಇನ್ನೊಬ್ಬನಿಗೆ ತಾನಾಗಿಯೇ ಗೊತ್ತಾಗಿ ಬಿಡುತ್ತದೆ ಎಂದು ಹೆಮ್ಮೆ ಪಟ್ಟುಕೊಂಡ. ಬಾ, ಬಾ, ಮಗುವನ್ನು ನೋಡುವೆಯಂತೆ ಎಂದು ಮಗುವಿನ ಹತ್ತಿರ ಕರೆದುಕೊಂಡು ಹೋದ. ಮಗು ಥೇಟ್ ನಿನ್ನ ಹಾಗೇ ಇದೆ, ನಿನ್ನ ಜಾಡನ್ನೇ ಹೋಲುತ್ತದೆ ನೋಡು ಎಂದು ಸಂಭ್ರಮಿಸಿದ. ಬಣ್ಣ ಮಾತ್ರ ನನ್ನದೇ ನೋಡು ಎಂದು ತನ್ನ ಬಣ್ಣವನ್ನು ತಾನೇ ಆಡಿಕೊಂಡ, ಹಾಸ್ಯದ ಚಟಾಕಿ ಹಾರಿಸಿದ. ಈ ಮಗು ಸಾಮಾನ್ಯದ್ದಲ್ಲ, ಕಣಯ್ಯಾ! ಅತ್ತರೆ ಸೂರೇ ಹಾರಿ ಹೋಗುತ್ತೆ ನೋಡು ಎಂದು ಮಗುವಿನ ಕಂಠಶ್ರೀಯ ಜಬರದಸ್ತನ್ನು ಹೊಗಳಿದ. ಸಂತೋಷದ ಅಲೆಗಳನ್ನೆಬ್ಬಿಸಿದ.

ಇಲ್ಲಿ ಪರಸ್ಪರ ಹತ್ತಿರ ಬರುತ್ತಾ ಮಾನಸಿಕವಾಗಿ ನಿರಾಳ ಆಗುವ ಚಿತ್ರವನ್ನು ಕವಿ ಕೊಡುತ್ತಿದ್ದಾರೆ. ವ್ಯಷ್ಟಿ ಸಂಕುಚಿತ ಭಾವದ ಪ್ರತೀಕ. ಅದೇ ವ್ಯಷ್ಟಿ ನಿರಾಳತೆಯಿಂದ ಮಾನಸಿಕವಾಗಿ ಸಮಷ್ಟಿ ಆಗಬಲ್ಲ. ವಸುದೇವ ತನ್ನ ಮಗ, ಬಲಿಷ್ಠ ಕಂಸನನ್ನು ಕೊಲ್ಲಲಿರುವ ತನ್ನ ಮಗ ಎಂಬ ಮೋಹ, ಅಹಂಕಾರ, ಹೆಮ್ಮೆ ಇತ್ಯಾದಿ ಸಂಕುಚಿತ-ವ್ಯಷ್ಠಿಭಾವವನ್ನು ಮೀರಿದ್ದಾನೆ. ತನ್ನ ಮಗ ಎಲ್ಲಾದರೂ ಇರಲಿ, ಬೆಳೆಯಲಿ; ಕಂಸನಂತಹವರನ್ನು ಕೊಂದು ಕಳೆದರಾಯಿತು, ಜಗತ್ತಿಗೆ ಕಲ್ಯಾಣ ಆದರಾಯಿತು ಎಂಬ ಭಾವದಿಂದ ತುಂಬಿದ್ದಾನೆ.

ಇಲ್ಲಿ ಸಾಧಾರಣವಾಗಿ ತಂದೆ ತಾಯಿಯರು ತಮ್ಮ ಮಗುವನ್ನು ಕುರಿತು ಆಡಿಕೊಳ್ಳುವ ಮಾತುಗಳನ್ನು ಕವಿ ನಮ್ಮ ಗಮನಕ್ಕೆ ತರುತ್ತಿದ್ದಾರೆ. ತಂದೆ ತಾಯಿ ಮತ್ತಿತರರಿಗೆ ಮಗು ಯಾರನ್ನು ಹೋಲುತ್ತದೆ ಎಂಬುದು ಒಂದು ಮುಖ್ಯವಾಗಿ ತಿಳಿಯಬೇಕಾದ ವಿಷಯ. ಯಾರನ್ನು ಹೋಲುತ್ತದೆ ಎಂದು ಮಗುವನ್ನು ನೋಡಿದವರು ಹೇಳುತ್ತಾರೆಯೋ ಅವರಿಗೆ ಆ ಮಗು ತನ್ನನ್ನು ಹೋಲುತ್ತದೆ ಎನ್ನುವುದೇ ಸಂತೋಷದ ವಿಷಯ, ಒಂದು ರೀತಿಯ ಹೆಮ್ಮೆ. ಮಗು ನಂದಗೋಪನನ್ನೂ ಹೋಲುತ್ತದೆ, ವಸುದೇವನನ್ನೂ ಹೋಲುತ್ತದೆ ಎಂದು ಹೇಳುವುದರ ಮೂಲಕ ಕವಿ ಮಗುವಿನ ಮೂಲಕ ಒಬ್ಬ ತನಗೆ ತಾನೇ ಕಟ್ಟಿಕೊಳ್ಳುವ ಆವರಣವನ್ನು, ಕೋಟೆಗೋಡೆಯ ಬಂಧವನ್ನು ಕಳಚಿಹಾಕಿದ್ದಾರೆ. ವ್ಯಷ್ಟಿ ಸಮಷ್ಠಿ ಆಗಬಹುದಾದ ಮಾರ್ಗದ ಒಂದು ರೀತಿಯನ್ನು ತೆರೆದಿಡುತ್ತಿದ್ದಾರೆ. ಮಗು ಅತ್ತಾಗ ಅದರ ಧ್ವನಿ ಸೂರೇ ಕಿತ್ತುಹೋಗುವಂತೆ ಇರುತ್ತದೆ ಎಂದು ಹೇಳುತ್ತಾ ಮಗುವಿನ ಆವರಣವೂ ಕಿತ್ತುಹೋಗುವ, ವಿಸ್ತಾರ ಆಗುವ, ಗಗನಕ್ಕೆ ಚಾಚುವ ಸಾಧ್ಯತೆಯನ್ನು ಗಮನಕ್ಕೆ ತರುವುದರ ಜೊತೆಗೆ ವ್ಯಷ್ಟಿ ಸಮಷ್ಠಿ ಆಗುವುದು ತನ್ನ ಆವರಣವನ್ನು ಮೀರಿ ತನ್ನನ್ನು ತೆರೆದುಕೊಂಡಾಗ ಎಂದು ಸೂಚಿಸುತ್ತಿದ್ದಾರೆ.

ಅತಿಯಾದ ಮೇರೆ ಇಲ್ಲದ ನಿಷ್ಕಲ್ಮಶವಾದ ಸಂತೋಷ ನಂದಗೋಪನದು. ಅವನ ಅಂಥ ಸಂತೋಷದಿಂದ  ಸಂತೋಷಗೊಂಡಿದ್ದ ವಸುದೇವ ಮನಃಪೂರ್ವಕವಾಗಿ ಹೇಳಿದ ಸನ್ಮಿತ್ರ, ನೀಂ ಸುಕೃತಶಾಲಿ; ಮುಪ್ಪಿನೊಳು ಸಂತಾನವಂ ಕಂಡೆ, ನಂದಗೋಪನ ಭಾಗ್ಯ ಮೂರು ರೀತಿಯದು. ಒಂದು, ಮುಪ್ಪಿನಲ್ಲಿ ಮಗುವನ್ನು ಪಡೆದಿರುವುದು. ಎರಡು, ಆ ಮಗು ಚೆಂದದ ಗಂಡುಮಗು ಆಗಿರುವುದು; ಆ ಕಾಲದಲ್ಲಿ ಪಿತೃಋಣವನ್ನು ಸಂದಾಯ ಮಾಡಲು ಒಬ್ಬನಿಗೆ ಒಂದಾದರೂ ಗಂಡು ಮಗು ಇರಬೇಕು ಎಂಬ ಗ್ರಹಿಕೆ ಇತ್ತು. ಮೂರನೆಯದು ಮಗುವಿನ ಆಟಪಾಟಗಳನ್ನೆಲ್ಲಾ ನೋಡಿ, ಅದು ಯೋಗ್ಯವಾಗಿ ಬೆಳೆದು ದೊಡ್ಡದಾಗುವ ಸೌಭಾಗ್ಯವನ್ನು ಅನುಭವಿಸುವ ಅದೃಷ್ಟವನ್ನು ದೇವರ ಕರುಣೆಯಿಂದ ಅವನು ಪಡೆದಿದ್ದಾನೆ ಎಂಬುದು. ಒಬ್ಬನಿಗೆ ಬದುಕಿನಲ್ಲಿ ಮಗುವನ್ನು ಪಡೆಯುವುದು ಎಷ್ಟು ಮುಖ್ಯವೋ ಅದರ ಆಟಪಾಠಗಳನ್ನು ನೋಡಿ ಸಂತೋಷಪಡಲು ಸಾಧ್ಯವಾಗುವುದೂ ಅಷ್ಟೇ ಮುಖ್ಯ. ಅಂತಹ ಮನಸ್ಥಿತಿ ಮತ್ತು ಪರಿಸ್ಥಿತಿ ಎಲ್ಲರಿಗೂ ಇರುವುದೇ ಇಲ್ಲ. ಆತ್ಮೀಯ ಸಂಬಂಧ ತಂದೆ, ಮಕ್ಕಳ ನಡುವೆ ಇದ್ದರೆ ಮಾತ್ರ ಮಗುವಿನ ಆರೋಗ್ಯಯುತ ಬೆಳವಣಿಗೆ ಸಾಧ್ಯ ಎಂಬ ತಿಳುವಳಿಕೆಯೇನೋ ಆ ಕಾಲದ ವೇಳೆಗೇ ಜನರಿಗೆ ಇತ್ತು. ಆದರೆ ಆ ತಿಳುವಳಿಕೆ ಬಹುಮಟ್ಟಿಗೆ ನಡೆವಳಿಕೆಯಲ್ಲಿ ರೂಢವಾಗದೇ ಇದ್ದದ್ದೇ ಸತ್ಯ.

(ಫೋಟೋ: ರಶೀದ್)

ಬಹುಸಂಖ್ಯಾತರಿಂದ ಭಿನ್ನನಾಗಿದ್ದ ವಸುದೇವ ತನ್ನದೇ ಮಗುವಾದರೂ ತನಗಿಲ್ಲದ ಅದೃಷ್ಟ ತನ್ನ ಸ್ನೇಹಿತನಿಗಾದರೂ ದೊರೆಯಿತಲ್ಲ ಎಂದು ಗದ್ಗದಿತ ಕಂಠದಿಂದ ನಂದನ ಭಾಗ್ಯವನ್ನು ಕೊಂಡಾಡಿದ. ಮಗು ಚಿರಂಜೀವಿಯಾಗಲಿ ಎಂದು ಬಾಯ್ತುಂಬ ಹರಸಿದ. ಆನಂತರ ನಮ್ಮನ್ನು ರಾಜ ಅಕಾರಣವಾಗಿ ಸೆರೆಯಲ್ಲಿಟ್ಟ, ಹಾಗೆಯೇ ಬಿಟ್ಟ. ಅವನನ್ನು ನಂಬಲಾಗದು. ಅವನು ಮೊದಲೇ ಶಿಶುಗಡುಕ! ನೀನಾದರೋ ರಾಜಧಾನಿಯ ಹತ್ತಿರವೇ ಇದ್ದೀಯ, ನಿನ್ನ ಪುತ್ರೋತ್ಸವದ ವಿಷಯ ತಿಳಿದು, ಅವನಿಗೆ ಏನಾದರೂ ಸಂಶಯ ಬಂದು ನಿನಗೆ, ನಿನ್ನ ಮಗುವಿಗೆ ಆಪತ್ತು ತರಬಹುದು. ಕಂಸನ ಕುತೂಹಲ ಕೆರಳುವ ಮುಂಚೆಯೇ ನೀನಿಲ್ಲಿಂದ ಹೊರಟು ಗೋಕುಲವನ್ನು ಸೇರಿಕೋ. ನಿನಗೆ ಈ ಎಚ್ಚರಿಕೆಯನ್ನು ಕೊಡುವುದಕ್ಕಾಗಿಯೇ ನಾನು ಬಂದೆ ಎಂದು ಸ್ನೇಹಿತನಿಗೆ ಶುಭ ಕೋರಿದ.

ಕಂಸನಿಗೆ ತನ್ನನ್ನು ಕೊಲ್ಲುವ ಮಗು ಇನ್ನೊಂದು ಕಡೆ ಇದೆ ಎಂಬುದು ತಿಳಿದಿದೆ ಎನ್ನುವ ವಿಷಯ ವಸುದೇವನಿಗೆ ಗೊತ್ತಿತ್ತು. ನಂದನ ಮಗುವಾಗಿ ತೋರಿಬರುತ್ತಿರುವ ಮಗು ಕಂಸನನ್ನು ಕೊಲ್ಲಲಿಕ್ಕಾಗಿ ಹುಟ್ಟಿದುದು ಎಂದೂ ವಸುದೇವನಿಗೆ ಗೊತ್ತಿತ್ತು. ಅದನ್ನು ನಂದಗೋಪನಿಗೆ ಇಲ್ಲಿ ಎಲ್ಲರ ಮುಂದೆ ನೇರವಾಗಿ ಹೇಳುವಂತಿಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ವಿಷಯ ಅದು ಹೇಗೋ ದಾಟಿ ಕಂಸನ ಕಿವಿಯನ್ನು ತಲುಪಿಬಿಡಬಹುದು. ಕಂಸ ವಸುದೇವನನ್ನು ಬಂಧನದಲ್ಲಿ ಪುನಃ ಇರಿಸಬಹುದು. ನಂದಗೋಪನನ್ನೂ ಸೆರೆಮನೆಗೆ ದೂಡಬಹುದು, ಅವನನ್ನೂ ಅವನಿಗೆ ಬೇಕಾದವರನ್ನೂ ಹಿಂಸಿಸಬಹುದು. ಅದರ ಜೊತೆಗೆ ಕಷ್ಟಪಟ್ಟು ಕಂಸನಿಂದ ರಕ್ಷಿಸಿಕೊಂಡ ಮಗು ಸುಲಭ ಬಲಿಪಶು ಆಗಿಬಿಡುತ್ತದೆ. ಈ ಎಲ್ಲಾ ಭಯ ಅವನನ್ನು ಕಾಡುತ್ತಿತ್ತು. ಕಂಸನಿಗೆ ನಂದಗೋಪನಿಗೆ ಮಗು ಆಗಿದೆ ಎಂಬ ವಿಷಯವೇ ಈ ಕ್ಷಣದಲ್ಲಿಯೂ ಗೊತ್ತಾಗಬಾರದು, ಮಗು ಬೆಳೆದು ಬಲಿಷ್ಠ ಆಗುವವರೆಗೂ ಗೊತ್ತಾಗಬಾರದು. ರಾಜಧಾನಿಗೆ ಹತ್ತಿರದಲ್ಲಿಯೇ ಇದ್ದರೆ ಈ ಸುದ್ದಿ ಬೇಗನೇ ಕಂಸನನ್ನು ತಲುಪಿಬಿಡುತ್ತದೆ. ಉತ್ಸವಾಚರಣೆ ಈ ಸುದ್ದಿಯನ್ನು ಕಂಸನಿಗೆ ಮುಟ್ಟಿಸಿಯೇ ಮುಟ್ಟಿಸಿಬಿಡುತ್ತದೆ. ಈ ಎಲ್ಲಾ ಭಯ ಆತಂಕಗಳಿಗೆ ತಕ್ಷಣದ ಪರಿಹಾರ ಜಾಗ ಖಾಲಿಮಾಡುವುದೇ ಎಂದು ವಸುದೇವ ಯೋಚಿಸಿದ್ದ. ಸೂಕ್ಷ್ಮವಾಗಿ ಕಂಸನಿಂದ ನಂದಗೋಪನಿಗೆ ಉಂಟಾಗಬಹುದಾದ ಅಪಾಯದ ಮುನ್ಸೂಚನೆಯನ್ನು ಕೊಟ್ಟದ್ದೇ ವಸುದೇವ ನಂದಗೋಪನಿಗೆ ಕೋರಿದ ಶುಭಾಶಯ ಆಗಿತ್ತು. ವ್ಯಷ್ಟಿ ಸಮಷ್ಠಿಯಾಗಿ ರೂಪುಗೊಳ್ಳಬಹುದಾದ ರೀತಿಯು ಭಯ ಆತಂಕ ಆಪತ್ತುಕಾರಕ ಪರಿಸರವನ್ನು ಶುಭಕಾರಕವನ್ನಾಗಿ ಬದಲಾಯಿಸಿಕೊಳ್ಳುವುದು ಎಂದು ಕವಿ ಇಲ್ಲಿ ಸೂಚಿಸುತ್ತಿದ್ದಾರೆ.

ನಂದನಿಗೂ ಕಂಸನ ರಾಕ್ಷಸೀ ನಡೆಯ ಪರಿಚಯ ಇತ್ತು. ಆಪತ್ತು ಬರುವುದಕ್ಕಿಂತ ಮುಂಚೆಯೇ ಆದು ಬಾರದ ಹಾಗೆ ನೋಡಿಕೊಳ್ಳುವುದೇ ಜಾಣತನ ಎಂದು ಅವನಿಗೂ ಅರ್ಥವಾಗಿತ್ತು. ತಕ್ಷಣವೇ ಉತ್ಸವದ ಸಂಭ್ರಮವನ್ನು ಕಡಿಮೆ ಮಾಡಿದ. ಪಾಳೆಯವನ್ನು ಎತ್ತಲು ಸೂಚಿಸಿದ. ನಾನು ಮಧುರೆಯಲ್ಲಿಲ್ಲ ಎಂದು ಗೊತ್ತಾದರೆ ಅನುಮಾನ ಆರಂಭವಾಗುತ್ತದೆ, ಈಗ ನನ್ನನ್ನು ಬೀಳ್ಕೊಡು ಎಂದ ವಸುದೇವ ಅತಿಥಿ ಉಪಚಾರವನ್ನು ತೆಗೆದುಕೊಂಡು ಸಂಪೂರ್ಣ ಸಮಾಧಾನದಿಂದ ಅಲ್ಲಿಂದ ಕೂಡಲೇ ಹೊರಟುಬಿಟ್ಟ. ಮರುದಿನವೇ ನಂದಗೋಪನೂ ಗೋಕುಲ ಸೇರಿಕೊಂಡ.

(ಫೋಟೋ: ಎ.ಎನ್.ಮುಕುಂದ)

ಕಂಸನಿಗೆ ನಂದಗೋಪನಿಗೆ ಮಗು ಆಗಿದೆ ಎಂಬ ವಿಷಯವೇ ಈ ಕ್ಷಣದಲ್ಲಿಯೂ ಗೊತ್ತಾಗಬಾರದು, ಮಗು ಬೆಳೆದು ಬಲಿಷ್ಠ ಆಗುವವರೆಗೂ ಗೊತ್ತಾಗಬಾರದು. ರಾಜಧಾನಿಗೆ ಹತ್ತಿರದಲ್ಲಿಯೇ ಇದ್ದರೆ ಈ ಸುದ್ದಿ ಬೇಗನೇ ಕಂಸನನ್ನು ತಲುಪಿಬಿಡುತ್ತದೆ. ಉತ್ಸವಾಚರಣೆ ಈ ಸುದ್ದಿಯನ್ನು ಕಂಸನಿಗೆ ಮುಟ್ಟಿಸಿಯೇ ಮುಟ್ಟಿಸಿಬಿಡುತ್ತದೆ. ಈ ಎಲ್ಲಾ ಭಯ ಆತಂಕಗಳಿಗೆ ತಕ್ಷಣದ ಪರಿಹಾರ ಜಾಗ ಖಾಲಿಮಾಡುವುದೇ ಎಂದು ವಸುದೇವ ಯೋಚಿಸಿದ್ದ. ಸೂಕ್ಷ್ಮವಾಗಿ ಕಂಸನಿಂದ ನಂದಗೋಪನಿಗೆ ಉಂಟಾಗಬಹುದಾದ ಅಪಾಯದ ಮುನ್ಸೂಚನೆಯನ್ನು ಕೊಟ್ಟದ್ದೇ ವಸುದೇವ ನಂದಗೋಪನಿಗೆ ಕೋರಿದ ಶುಭಾಶಯ ಆಗಿತ್ತು.
ಇಷ್ಟು ಈ ಉಲ್ಲಾಸದ ಕಥಾ ಪ್ರಸಂಗ. ಇಲ್ಲಿ ವಸುದೇವ ಜಗತ್ತಿಗೇ ಮಿತ್ರ=ಸೂರ್ಯನಂತೆ ಬೆಳಕನ್ನು ನೀಡುವ ಮಧ್ಯವರ್ತಿಯೂ ಆದ; ಬೆಳಗಿನ ಅನುಭವವನ್ನು ಪಡೆದ ಅನುಭಾವಿಯೂ ಆದ ಎನ್ನುವುದನ್ನು ಬೇರೆ ಬೇರೆ ಹಂತಗಳಲ್ಲಿ ಕವಿ ವರ್ಣಿಸಿದ್ದಾರೆ. ಮೊದಲಿಗೆ ಅದು ಮನಸ್ಸನ್ನು ಉಲ್ಲಾಸಗೊಳಿಸುವ ಮುಂಜಾವಿನ ಬೆಳಗಿನ ತಂಗಾಳಿಯ ತಂಪು ಕಂಪಿನ ಸ್ಪರ್ಶವಾಗಿದೆ. ಅನಂತರ ಮನಸ್ಸಿನ ಕಾವಳವನ್ನು ಕಳೆಯುವ ಶುದ್ಧ ಅಪರಂಜಿ ಚಿನ್ನದ ಬಣ್ಣವಾಗಿ ತೋರಿದೆ. ಉದಯಿಸುವ ಸೂರ್ಯನ ಕಿರಣಗಳಾಗಿ ಭಾಗ್ಯೋದಯದ ಸೂಚಕವಾಗಿದೆ. ಹಕ್ಕಿಗಳು ಹಾರಿಹೋದ ಮರಗಳ ರೆಂಬೆಕೊಂಬೆಗಳಿಂದ ಉದುರಿದ ಮಳೆಹನಿಗಳು ದೇಹಭಾವದ ಮಿತಿಯನ್ನು ತೊಳೆದಿವೆ. ಹಕ್ಕಿಗಳ ಕಲರವ ಬೆಳಗಾಯ್ತು ಎನ್ನುವ ಘೋಷಣೆಯಂತೆ ತೋರಿಬಂದರೆ ಇಡೀ ಬದುಕನ್ನು ಒಳಗೊಳ್ಳುವ ಭೂಮಿ ಮತ್ತು ಸೃಷ್ಟಿ ಶಿವಪಾರ್ವತಿಯರಂತೆ ಏಕವಾಗಿ ಕಂಡಿವೆ. ಭೂಮಿ ಆಕಾಶಗಳು ಪ್ರೀತಿಯ ತನಿಸ್ಪರ್ಶವೇ ಆಗಿಬಿಟ್ಟಿವೆ. ಕೊನೆಯಲ್ಲಿ ವಸುದೇವನ ಮಗುವನ್ನು ತನ್ನದೇ ಮಗು ಎಂದು ಯಾವ ಅಳುಕಿಗೂ ಅವಕಾಶವಿಲ್ಲದಂತೆ ಒಪ್ಪಿಕೊಂಡ ನಂದ ಋಗ್ವೇದವು ಪುನಃ ಪುನಃ ಹತ್ತೂ ಮಂಡಲಗಳಲ್ಲಿ ಗೌರವಾದರಗಳಿಂದ ಮಂತ್ರಪೂರ್ವಕವಾಗಿ ಸ್ತುತಿಸುವ ದ್ಯಾವಾ ಪೃಥ್ವಿಗಳ ಸಂಗಮವೇ ಆಗಿರುವ ದರ್ಶನ ಆಗಿದೆ. ಇದು ಈ ಉಲ್ಲಾಸದ ಮುಖ್ಯಭಾವ.

ಇಂಥ ಈ ಉಲ್ಲಾಸದ ಭರತವಾಕ್ಯ ಬದ್ಧರಿಗೆ ಬಿಡುಗಡೆಯೀವ ಮೊದಲ ಸಿರಿ ಆಪ್ತಸಂಗಮ ಎನ್ನುವ ಘೋಷಣೆ. ವಸುದೇವನಂತಹವರ ಬಗೆ ಬಗೆಯ ರೂಪದ ನಿರ್ಬಂಧಗಳ ಬಂಧನಗಳಿಂದ ವಸುದೇವನೇ ಆದಿಯಾಗಿ ಉಳಿದವರೂ ಬಿಡುಗಡೆ ಪಡೆಯುವುದು ಆಪ್ತಸಂಗಮದಿಂದಲೇ. ಬಿಡುಗಡೆಯೇ ವ್ಯಕ್ತಿಗೆ ವೈಯಕ್ತಿಕವಾಗಿ ಆಪ್ತ-ಸಂಗಮ. ಬಿಡುಗಡೆ ಸಾಧ್ಯವಾಗುವುದೂ ಆಪ್ತ-ಸಂಗಮದಿಂದಲೇ. ಬಂಧನದಲ್ಲಿದ್ದೇನೆ, ಅದರಿಂದ ಬಿಡಿಸಿಕೊಳ್ಳಬಹುದು ಎಂಬ ಅರಿವು ಒಬ್ಬನಿಗೆ ಆಪ್ತವಾದದ್ದು. ಆ ಅರಿವು ಬಿಡುಗಡೆ ಪಡೆಯ ಬಹುದಾದ ದಾರಿಗಳನ್ನು ತೆರೆದು ತೋರಿಸುತ್ತದೆ. ಆ ದಾರಿಗಳೂ ಆಪ್ತವಾದದ್ದೇ. ಸಿರಿ = ಹಣ, ಐಶ್ವರ್ಯ, ಆಸ್ತಿ ಇವೆಲ್ಲಾ ಬಡತನದ ಮಿತಿಗಳನ್ನು, ಬಂಧಗಳನ್ನು ಮೀರಲು ಸಹಾಯಕವಾದದ್ದು ಆಗಿ ಆಪ್ತ. ಅದೇರೀತಿ ಮಾನಸಿಕ ಮಿತಿಗಳನ್ನು ಮೀರಲು ಸಾಧನಸಂಪತ್ತು ಆಗುವ ಔದಾರ್ಯ, ಸಹೃದಯತೆ, ಹೃದಯವೈಶಾಲ್ಯಗಳೆಲ್ಲಾ ಆಪ್ತವಾದದ್ದೇ. ನೈತಿಕತೆಯ ಬದ್ಧತೆಯಿರುವವರಿಗೆ ಅವರ ಹಾಗೆ ಇರುವವರು ಜೊತೆಯಾದರೆ ಸಹಜವಾಗಿ ಅವರಿಗೆ ತಮ್ಮ ಜೀವನರೀತಿಗೆ ಸಂಬಂಧಿಸಿದಂತೆ ಉತ್ಸಾಹ ಹುಮ್ಮಸ್ಸು ಹೆಚ್ಚಾಗುತ್ತದೆ; ತಮಗೆ ತಾವೇ ಆಪ್ತ ಆಗುತ್ತಾರೆ. ಈ ಎಲ್ಲಾ ಅರ್ಥಗಳಲ್ಲಿ ಬದ್ಧರಿಗೆ ಮೊದಲ ಸಿರಿ ಆಪ್ತಸಂಗಮವೇ. ಇದು ಇಡೀ ಕಾವ್ಯದ ಭರತವಾಕ್ಯವೂ ಹೌದು.