ಕಳೆದು ಹೋದವರು

ಆಲದ ಮರಕ್ಕೆ ಜೋತು ಬಿದ್ದ
ಉದ್ದುದ್ದ ಬಿಳಿಲುಗಳು
ಆ ಕಾಲಕ್ಕೆ ಅವನ್ನು ಹಿಡಿದು ಜೋಕಾಲಿ ಆಟ ಆಡುತ್ತಿದ್ದ ನಾವು.
ಅನತಿ ದೂರದ, ಪೊನ್ನೊಚ್ಚಿ ಮರ
ನಗುತ್ತಿರುವ ಅದರ ಹೂಗಳು.
ಪೂರ್ವಕ್ಕೆ, ಮುಂಗಾರು ಮಳೆಯಿಂದ ಉಕ್ಕಿ ನಿಂತ
ವಿಶಾಲ ಕೆರೆ.

ಮುಪ್ಪಾಗಿ ಬಿದ್ದ ತಾಳೆ ಮರದ ಬುಡದಿಂದ ಮಾಡಿದ್ದ ದೋಣಿಯಲ್ಲಿ
ಸಮಯವೇ ಹುಟ್ಟಾಗಿ, ಆ ದಡಕ್ಕೆ ಸಾಗುತ್ತಿದ್ದ
ಮಕ್ಕಳಷ್ಟೆ, ಕಣ್ಮರೆ!

– ಈ ಯುದ್ದದ ಎಲ್ಲ ಬಾಂಬುಗಳಿಗೂ ತಲೆಯನ್ನು ತಗ್ಗಿಸದೇ ಹೋದ-
ತಾಳೆ ಮರ ಹತ್ತಿ
ತೋಡಿ ಇಳಿಸುತ್ತಿದ್ದ ಮುದುಕನನ್ನು ಕೇಳಿದೆ.
ಇವರೆಲ್ಲ ಎಲ್ಲಿ?

ಉದ್ವೇಗದಿಂದ ಅವನು ಹೇಳಿದ,
“ಅವರೆಲ್ಲಾ ಕೆನಡಾ ದೇಶದ
ಹಣದ ಹೊಲಗಳನ್ನು ಕಟಾವು ಮಾಡಲು ಹೋಗಿದ್ದಾರೆ.”

ತಮಿಳು ಮೂಲ: ಇಳವಾಯಿ ವಿಜಯೇಂದ್ರನ್
ಇಂಗ್ಲೀಷ್ ಗೆ: ಲಕ್ಷ್ಮಿ ಹಾಲ್ಸ್ಟ್ರಾಮ್