“ನನ್ನೊಳಗೆ ಹೇಳಬೇಕಾದದ್ದು ತುಂಬಾ ಇದೆ. ಯಾವುದು ಮೊದಲು ಹೇಳಲಿ? ಹೇಳಲು ಶುರುಮಾಡಿದರೆ ಶುರು ಮಾಡಿದ ಕತೆಗಳು ಎಲ್ಲೆಲ್ಲೋ ಹೋಗಿ, ಅದು ಉಪಕತೆಗಳ ದಾರಿ ಹಿಡಿಯುತ್ತವೆ” ಎಂದು ನಿಡುಸುಯ್ದರು ಜೋಶಿಯವರು.
“ನಿಮ್ಮ ಮಗ ಮಾಳಕ್ಕೆ ಬಸ್ಸು ಬಂದ ಪ್ರಸಂಗವನ್ನು ತಂದೆಯವರಲ್ಲಿ ಕೇಳಬೇಕು, ಅದು ತುಂಬಾ ಚೆಂದ ಪ್ರಸಂಗ ಅಂದಿದ್ದರು.ಅದನ್ನೇ ಹೇಳಿ” ಅಂದೆ. ನಗುತ್ತ, “ಅದಾ?” ಎಂದ ಜೋಶಿಯವರಲ್ಲಿ ಕತೆ ಹೇಳುವ ಹುಮ್ಮಸ್ಸು ಸಣ್ಣಗೆ ಹತ್ತಿಕೊಂಡಿತು”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಎರಡನೆಯ ಕಂತು.

 

ನಾವು ಮಾಳ ಕಾಡಿನ ದಾರಿ ಹಿಡಿದಾಗ ತಿಳಿ ಸಂಜೆ ಇನ್ನೇನು ಕರಗುತ್ತಿತ್ತು. ಆಕಾಶದಲ್ಲಿ ಮುಗಿಲ ಬಣ್ಣದ ತುಂಡುಗಳು ಹೊಳೆದು ಅದರ ಹೊಳಪು ಶಂಕರ ಜೋಶಿಯವರ ಮನೆಗೆ ಇಷ್ಟಿಷ್ಟೇ ಬೀಳುತ್ತಿತ್ತು. ಆ ಹೊಳಪಲ್ಲೇ ಅಂಗಳದಲ್ಲಿ ಹಾಕಿದ್ದ ಅಡಿಕೆ ರಾಶಿ, ಸುತ್ತಲೂ ಆವರಿಸಿದ್ದ ಬಾಳೆ, ಅಡಿಕೆ, ತೆಂಗಿನ ತೋಟದ ನಡುವಿನಲ್ಲಿಯೇ ದಾರಿ ಮಾಡುತ್ತ ಶಂಕರ್ ಜೋಶಿಯವರ ಮನೆ ಬಳಿ ಬಂದಾಗ ಆ ಸಂಜೆ ನಿಗೂಢತೆಯಲ್ಲಿಯೇ ನಿಂತಿದ್ದ ಆ ಮನೆ ಏನೋ ಹೇಳಲು ಕಾತರಿಸುವ ಮುದುಕಿಯಂತೆ ಕಂಡಿತು.

ಸುಮಾರು ೮೨ ರ ಹರೆಯದ ಶಂಕರ ಜೋಶಿಯವರು ಅಷ್ಟೂ ವರ್ಷ ಮಾಳ ಕಾಡಲ್ಲೇ ತಮ್ಮ ಕನಸುಗಳನ್ನು ಕಳೆದವರು. ಪಶ್ಚಿಮಘಟ್ಟದಲ್ಲಿ ಯಾವ ಯಾವ ಹಕ್ಕಿಗಳಿವೆ? ಯಾವ ಹಕ್ಕಿ ಯಾವ ತರ ಕೂಗುತ್ತದೆ? ಕಾಡು ಕೋಣಗಳು ಹೆಚ್ಚಾಗಿ ಕಾಣಿಸುವ ಪ್ರದೇಶ ಯಾವುದು? ಗಾಳಿಯಲ್ಲಿ ತೇಲಿಕೊಂಡು ಬಂದ ಆ ಪರಿಮಳ ಯಾವ ಕಾಡು ಹೂವಿನದ್ದು? ಎಲ್ಲವನ್ನೂ ಜೋಶಿಯವರಷ್ಟು ಕರಾರುವಕ್ಕಾಗಿ ಹೇಳುವ ಮತ್ತೊಬ್ಬರು ಮಾಳ ಕಾಡಿನಲ್ಲಿಲ್ಲ. ಮಾಳ ಕಾಡಿನದ್ದು ಮಾತ್ರವಲ್ಲ, ಅದರಾಚೆಗೆ ಇರುವ ಕುದುರೆಮುಖ, ಶೃಂಗೇರಿ, ಹೊರನಾಡು, ಕಳಸ ಮೊದಲಾದ ಕನಸಿನಂತಹ ಊರುಗಳ ಕಾಡಿನ ಬಗ್ಗೆ, ಅಲ್ಲಿನ ಮಣ್ಣು, ಕೆರೆ, ನದಿಗಳ ಬಗ್ಗೆ ಜೋಶಿಯವರಲ್ಲಿ ಮುಗಿಯದ ಮಾಹಿತಿಯ ಗಣಿ ಇದೆ. ವಿಜ್ಞಾನಿ ಮಾಧವ ಗಾಡ್ಗೀಳ್, ಕುದುರೆಮುಖ ಪಶ್ಚಿಮ ಘಟ್ಟದ ಕುರಿತು ಅಧ್ಯಯನ ನಡೆಸಲು ಮಾಳಕ್ಕೆ ಬಂದಾಗ ಅವರಿಗೆ ಕಾಡಿನ ಇಂಚಿಂಚನ್ನೂ ವಿವರಿಸಿದ್ದು ಇದೇ ಜೋಶಿಯವರು. ಇಲ್ಲಿನ ಅಪರೂಪದ ಜೀವ ಸಂಕುಲಗಳನ್ನು ವೃಕ್ಷ ರಾಶಿಗಳನ್ನು, ನದಿ ಮೂಲಗಳನ್ನು, ಕಾಡಂಚಿನಲ್ಲಿ ವಾಸಿಸುವ ಜನರ ಬದುಕನ್ನು ತನ್ನ ಜ್ಞಾನದ ಹರಿವಿನಲ್ಲಿ ಮಾಧವ ಗಾಡ್ಗೀಳ್ ಅವರಿಗೆ ತೋರಿಸಿ, ಪಶ್ಚಿಮ ಘಟ್ಟದ ಕುರಿತು ವರದಿ ತಯಾರಾಗಲು ಶ್ರಮಿಸಿದ ಜೋಶಿಯವರು ಪಶ್ಚಿಮ ಘಟ್ಟದ ಬುಡದಲ್ಲಿರುವ ನದಿಯೊಂದು ಮೌನದಲ್ಲಿಯೇ ಮಾತಾಡುವ ಹಾಗೆ ತಣ್ಣಗೆ ಕತೆ ಹೇಳುತ್ತಾರೆ. ವೃದ್ಧಾಪ್ಯದಿಂದ ಕಣ್ಣು ಮಸುಕಾಗಿದ್ದರೂ ರಾತ್ರಿಯ ನೆರಳಿನಲ್ಲಿಯೇ ಅವರು “ನೋಡಿ ಅಲ್ಲಿ ಅದು ಕುರಿಂಗೆಲ್ ಬೆಟ್ಟದ ತುದಿ” ಅಂತ ಆ ರಾತ್ರಿಯೂ ನಿಗೂಢವಾದ ಕನಸೊಂದನ್ನು ತೋರಿಸುತ್ತಾರೆ. ಕತ್ತಲಲ್ಲಿ ಅಷ್ಟೇನೂ ಕಾಣಿಸದಿದ್ದರೂ ಜೋಶಿಯವರ ಅನುಭವದ ಕಣ್ಣಿನ ಅಗಲಕ್ಕೆ ಆ ಬೆಟ್ಟ ರಾತ್ರಿಯೂ ನಮಗೆ ನೆರಳು ನೆರಳಾಗಿ ಕಾಣಿಸುತ್ತದೆ.

ಪಶ್ಚಿಮಘಟ್ಟದಲ್ಲಿ ಯಾವ ಯಾವ ಹಕ್ಕಿಗಳಿವೆ? ಯಾವ ಹಕ್ಕಿ ಯಾವ ತರ ಕೂಗುತ್ತದೆ? ಕಾಡು ಕೋಣಗಳು ಹೆಚ್ಚಾಗಿ ಕಾಣಿಸುವ ಪ್ರದೇಶ ಯಾವುದು? ಗಾಳಿಯಲ್ಲಿ ತೇಲಿಕೊಂಡು ಬಂದ ಆ ಪರಿಮಳ ಯಾವ ಕಾಡು ಹೂವಿನದ್ದು? ಎಲ್ಲವನ್ನೂ ಜೋಶಿಯವರಷ್ಟು ಕರಾರುವಕ್ಕಾಗಿ ಹೇಳುವ ಮತ್ತೊಬ್ಬರು ಮಾಳ ಕಾಡಿನಲ್ಲಿಲ್ಲ. ಮಾಳ ಕಾಡಿನದ್ದು ಮಾತ್ರವಲ್ಲ, ಅದರಾಚೆಗೆ ಇರುವ ಕುದುರೆಮುಖ, ಶೃಂಗೇರಿ, ಹೊರನಾಡು, ಕಳಸ ಮೊದಲಾದ ಕನಸಿನಂತಹ ಊರುಗಳ ಕಾಡಿನ ಬಗ್ಗೆ, ಅಲ್ಲಿನ ಮಣ್ಣು, ಕೆರೆ, ನದಿಗಳ ಬಗ್ಗೆ ಜೋಶಿಯವರಲ್ಲಿ ಮುಗಿಯದ ಮಾಹಿತಿಯ ಗಣಿ ಇದೆ.

ಅವರು ಮಾತಿ ಮಧ್ಯೆ ನಕ್ಕರೆ ಕಾಡಿನ ನಡುವೆ ಹೊಸ ದಾರಿ ಹೊಳೆದಂತೆ, ಅವರು ಬೆರಗಾದರೆ ಘಟ್ಟದ ನಡುವೆ ದೂರದಲ್ಲಿ ಕಡವೆಯೊಂದು ಕಾಣಿಸಿದಂತೆ, ಅವರು ನೆನಪಿನ ಹಿಂದಕ್ಕೆ ಹಿಂದಕ್ಕೆ ತೀರಾ ಹಿಂದಕ್ಕೆ ಹೋದರೆ ನಾವೂ ಅವರ ಜೊತೆ ನಿಬಿಡ ಕಾಡಿನ ಅಗರ್ಭ ಮೌನದಲ್ಲಿ ದುತ್ತೆಂದು ಜಾರಿಹೋದಂತನ್ನಿಸುತ್ತದೆ. ನಾವು ಹೋದಾಗ ಅವರ ಮನೆಯಂಗಳದಿಂದ ಪೂರ್ತಿಯಾಗಿ ಕಾಣಿಸುತ್ತಿದ್ದ ಮಾಳದ ಕಾಡು ಅವರ ಮನೆಯ ಜಗುಲಿಯಿಂದ ತನ್ನ ಹಣೆ ಮಾತ್ರ ತೋರಿಸುತ್ತಿತ್ತು. ನಮ್ಮನ್ನು ಸ್ವಾಗತಿಸಿದ ಜೋಶಿಯವರ ಇನ್ನೋರ್ವ ಮಗ ರಘುನಾಥ ಜೋಶಿಯವರಲ್ಲಿ ನಮಗೆ ಹೇಳಲೆಂದೇ ಅಷ್ಟಿಷ್ಟು ಕತೆಗಳು ಕಾದು ಕೂತಂತಿತ್ತು. ಅವರ ಪತ್ನಿ ಆಗಲೇ ನಿಂಬೆ ಹಣ್ಣು, ಕರಿಮೆಣಸು ಹಾಕಿ ಮಾಡಿದ ಸಿಹಿ ಪಾನಕದ ಲೋಟಗಳು, ಮನೆಯ ಒಲೆಯಲ್ಲಿಯೇ ಸುಟ್ಟ ಸಿಹಿಯಾದ ಗೇರು ಬೀಜ, ಮನೆಯಲ್ಲೇ ಬೆಳೆಸಿದ ಏಲಕ್ಕಿ ಬಾಳೆ ಹಣ್ಣುಗಳು ನಮ್ಮೆದುರು ಇಟ್ಟಿದ್ದೇ, ಕಾಡಿನ ಈ ಸ್ವಾದಿಷ್ಟ ಫಲಾಹಾರದಿಂದ ಕತೆ ಕೇಳುವ ಹುಮ್ಮಸ್ಸು ಇನ್ನೂ ಜಾಸ್ತಿಯಾಯ್ತು.

ಶಂಕರ್ ಜೋಶಿಯವರ ಮಗ ರಾಧಾಕೃಷ್ಣ ಜೋಶಿ ಅವರು ಮಾಳದ ದಟ್ಟ ಕಾಡಿಂದ ಬಾಹುಬಲಿಯನ್ನು ಕಾಣಿಸಿ ನಮ್ಮೊಳಗೆ ಹೊಸತೊಂದು ಜ್ಞಾನೋದಯ ಮೂಡಿಸಿದ ಕತೆಯನ್ನು ಮೊನ್ನೆ ನಿಮಗೆಲ್ಲ ಹೇಳಿದ್ದೆ. ಆದರೆ ಶಂಕರ ಜೋಶಿಯವರಿಗೆ ಈಗ ವಯಸ್ಸಾಗಿದ್ದರಿಂದ ನಮ್ಮನ್ನು ಕಾಡು ಸುತ್ತಿಸುವಷ್ಟು ಶಕ್ತಿಯಾಗಲೀ, ಅವರು ನಮ್ಮಂತ ಹರೆಯದಲ್ಲಿದ್ದಾಗ ಕಂಡ ಬೆರಗುಗಳನ್ನು ಕಾಣಿಸುವಷ್ಟು ಮೈ ವಯಸ್ಸು ಅನುವು ಮಾಡಿಕೊಡುತ್ತಿರಲಿಲ್ಲ. ಆದರೆ ಮಾತಿನಲ್ಲಿಯೇ ನಮ್ಮನ್ನು ದೂರಕೆ, ಬಲು ದೂರಕೆ.. ಕಾಡಿನ ಲೋಕಕೆ ಕರೆದುಕೊಂಡು ಹೋಗುವ ಶಕ್ತಿ ಅವರಲ್ಲಿ ತುಂಬಾ ಇತ್ತು. ಬದುಕಿನ ಜೀವನ ಪ್ರೀತಿಗೆ ಬೇಕಾದಷ್ಟು ಇಂಧನ ಇವರಲ್ಲಿ ಸಿಕ್ಕೇ ಸಿಗುತ್ತದೆ ಅನ್ನೋ ನಂಬಿಕೆಯಿಂದ ಕಾಡಿನ ಮೌನದ ಹಸುರಲ್ಲಿ ರಾರಾಜಿಸುತ್ತಿದ್ದ ಜೋಶಿಯವರ ಮುಖವನ್ನೇ ನೋಡುತ್ತಿದ್ದೆವು, ಅವರೊಳಗೆ ಇನ್ನೇನು ಹುಟ್ಟಲಿರುವ ಗತಕಾಲದ ಕತೆಗಳಿಗೆ ಸಾಕ್ಷೀಭೂತರಾಗುತ್ತ ಕೂತಿದ್ದೆವು.

“ನನ್ನೊಳಗೆ ಹೇಳಬೇಕಾದದ್ದು ತುಂಬಾ ಇದೆ. ಯಾವುದು ಮೊದಲು ಹೇಳಲಿ? ಹೇಳಲು ಶುರುಮಾಡಿದರೆ ಶುರು ಮಾಡಿದ ಕತೆಗಳು ಎಲ್ಲೆಲ್ಲೋ ಹೋಗಿ, ಅದು ಉಪಕತೆಗಳ ದಾರಿ ಹಿಡಿಯುತ್ತವೆ” ಎಂದು ನಿಡುಸುಯ್ದರು ಜೋಶಿಯವರು.
“ನಿಮ್ಮ ಮಗ ಮಾಳಕ್ಕೆ ಬಸ್ಸು ಬಂದ ಪ್ರಸಂಗವನ್ನು ತಂದೆಯವರಲ್ಲಿ ಕೇಳಬೇಕು, ಅದು ತುಂಬಾ ಚೆಂದ ಪ್ರಸಂಗ ಅಂದಿದ್ದರು. ಅದನ್ನೇ ಹೇಳಿ” ಅಂದೆ. ನಗುತ್ತ, “ಅದಾ?” ಎಂದ ಜೋಶಿಯವರಲ್ಲಿ ಕತೆ ಹೇಳುವ ಹುಮ್ಮಸ್ಸು ಸಣ್ಣಗೆ ಹತ್ತಿಕೊಂಡಿತು.

ಇಲ್ಲಿನ ಅಪರೂಪದ ಜೀವ ಸಂಕುಲಗಳನ್ನು ವೃಕ್ಷ ರಾಶಿಗಳನ್ನು, ನದಿ ಮೂಲಗಳನ್ನು, ಕಾಡಂಚಿನಲ್ಲಿ ವಾಸಿಸುವ ಜನರ ಬದುಕನ್ನು ತನ್ನ ಜ್ಞಾನದ ಹರಿವಿನಲ್ಲಿ ಮಾಧವ ಗಾಡ್ಗೀಳ್ ಅವರಿಗೆ ತೋರಿಸಿ, ಪಶ್ಚಿಮ ಘಟ್ಟದ ಕುರಿತು ವರದಿ ತಯಾರಾಗಲು ಶ್ರಮಿಸಿದ ಜೋಶಿಯವರು ಪಶ್ಚಿಮ ಘಟ್ಟದ ಬುಡದಲ್ಲಿರುವ ನದಿಯೊಂದು ಮೌನದಲ್ಲಿಯೇ ಮಾತಾಡುವ ಹಾಗೆ ತಣ್ಣಗೆ ಕತೆ ಹೇಳುತ್ತಾರೆ. ವೃದ್ಧಾಪ್ಯದಿಂದ ಕಣ್ಣು ಮಸುಕಾಗಿದ್ದರೂ ರಾತ್ರಿಯ ನೆರಳಿನಲ್ಲಿಯೇ ಅವರು “ನೋಡಿ ಅಲ್ಲಿ ಅದು ಕುರಿಂಗೆಲ್ ಬೆಟ್ಟದ ತುದಿ” ಅಂತ ಆ ರಾತ್ರಿಯೂ ನಿಗೂಢವಾದ ಕನಸೊಂದನ್ನು ತೋರಿಸುತ್ತಾರೆ. ಕತ್ತಲಲ್ಲಿ ಅಷ್ಟೇನೂ ಕಾಣಿಸದಿದ್ದರೂ ಜೋಶಿಯವರ ಅನುಭವದ ಕಣ್ಣಿನ ಅಗಲಕ್ಕೆ ಆ ಬೆಟ್ಟ ರಾತ್ರಿಯೂ ನಮಗೆ ನೆರಳು ನೆರಳಾಗಿ ಕಾಣಿಸುತ್ತದೆ.

ಮಾಳದ ಕಾಡಿನ ರಸ್ತೆಯಲ್ಲಿ ಆವತ್ತೊಂದು ಉದ್ದ ಮುಸುಡಿಯ ದೊಡ್ಡ ವಸ್ತುವೊಂದು ನಿಂತಿತ್ತು. ಕೆಂಪಗೇ ಹೊಳೆಯುತ್ತಿದ್ದ ಅದರ ಮೂತಿ ಚೂಪಾಗಿ ಓತಿಕ್ಯಾತನ ತರ ಮಿರಿ ಮಿರಿ ಹೊಳೆಯುತ್ತಿತ್ತು. ಅದರೊಳಗಿಂದ ಧಡೂತಿ ವ್ಯಕ್ತಿಯೊಬ್ಬ ಬಿಮ್ಮೆಂದು ಇಳಿದು ಬಂದಾಗ ನಾನು ಅಲ್ಲಿಂದ ಪಿಡ್ಚ. ಆತ ಓಡುತ್ತಿದ್ದ ನನ್ನನ್ನು “ನಿಲ್ಲಿ ನಿಲ್ಲಿ” ಎಂದು ತಾನೂ ನನ್ನ ಬಳಿ ಓಡುತ್ತ ಬಂದು “ಎಂತಕ್ಕೆ ಹೀಗೆ ಓಡ್ತಿದ್ದೀರಿ ಭಯವಾಯ್ತ? ನನ್ನನ್ನು ನೋಡಿ” ಅಂತ ಕಿಸಲ್ಲನೇ ನಕ್ಕ. ಅವನನ್ನು ಸರಿಯಾಗಿ ನೋಡಿದರೆ ಕೊಂಕಣಿ ಗಂಡಸಿನ ಹಾಗಿದ್ದ. ಅದೇ ಧೈರ್ಯದಿಂದ ನಾನು ಅವನ ಬಗ್ಗೆ ಅಷ್ಟಾಗಿ ಭಯಪಡದೇ ದೂರದಲ್ಲಿ ನಿಂತಿದ್ದ ಆ ಉದ್ದ ಮುಸುಡಿನ ಕೆಂಪು ಪೆಟ್ಟಿಗೆಯಂತಹ ವಸ್ತುವನ್ನೇ ನೋಡುತ್ತಿದ್ದೆ. ನನ್ನ ಭಯವರಿತ ಆ ಪುಣ್ಯಾತ್ಮ “ಹೆದ್ರಬೇಡಿ ಅದು ಯುದ್ದದ ಬಾಂಬ್ ತರುವ ವಾಹನವಲ್ಲ. ಅದು ಬಸ್ಸು, ಅಂದ್ರೆ ಗಾಡಿ ಅದು, ಮಾಳಕ್ಕೆ ಹೊಸದಾಗಿ ಬಂದ ಗಾಡಿ. ಇದರಲ್ಲಿ ನೀವು ಕೂತರೆ ಎಲ್ಲ ಊರುಗಳನ್ನು ತಿರುಗಬಹುದು. ಮಂಗಳೂರು, ಧರ್ಮಸ್ಥಳ, ಹೆಬ್ರಿ, ಆಗುಂಬೆ ಹೀಗೆ ಎಲ್ಲಿ ಬೇಕಾದ್ರೂ ಹೋಗ್ಬೋದು ಇದ್ರಲ್ಲಿ. ಮಾಳದಲ್ಲಿರುವ ಅರ್ಧ ಜನರನ್ನು ಇವತ್ತು ಮಂಗಳೂರಿಗೆ ಕರ್ಕೊಂಡು ಹೋಗ್ತೇನೆ. ನಾನು ಈ ಬಸ್ಸಿನ ಮಾಲಿಕ” ಅಂತಂದು ಆ ವ್ಯಕ್ತಿ ಕಾಡ ದಾರಿಯಲ್ಲಿದ್ದ ಯಾವುದೋ ಮನೆ ಕಡೆ ಹೋಗಿ ಅಲ್ಲಿಯೂ ಅದನ್ನೇ ಬಡಬಡಿಸಿ, ಎಲ್ಲರೂ ಅರ್ಧಗಂಟೆಯಲ್ಲಿ ಸಿದ್ಧರಾಗಬೇಕೆಂದೂ, ನಿಮ್ಮನ್ನೆಲ್ಲಾ ದೂರದ ಮಂಗಳೂರಿಗೆ ಆ ಗಾಡಿಯಲ್ಲಿ ಕರಕೊಂಡು ಹೋಗುತ್ತೇನೆಂದೂ ಅರುಹಿದ. ಮೊದಲೇ ಆ ಬಸ್ಸನ್ನು ನೋಡಿ, ಅದು ಬಾಂಬ್ ಗಳನ್ನು ಹೊತ್ತುಕೊಂಡು ಬಂದ ಗಾಡಿ ಎಂದು ಭಯಗೊಂಡಿದ್ದ ಮಾಳದ ಜನರು, ಅದರಲ್ಲೇ ಈ ಪುಣ್ಯಾತ್ಮ ನಮ್ಮನ್ನು ಮಂಗಳೂರಿಗೆ ಕರೆದುಕೊಂಡು ಹೋಗ್ತಾನೆ ಅಂತ ತಿಳಿದ ಮೇಲಂತೂ ಇನ್ನೂ ತಬ್ಬಿಬ್ಬಾದರು.

ಜನರ ಭಯವನ್ನು ಅರ್ಥ ಮಾಡಿಕೊಂಡವನಂತೆ ಆ ಬಸ್ಸು ಮಾಲಿಕ, “ಯಾಕೆ ಹೆದರ್ತಿರಿ ಮಾರಾರ್ರೆ?ನೀವು ಸುಮ್ಮನೆ ಆ ಬಸ್ಸಲ್ಲಿ ಕೂತ್ರೆ ಸಾಕು, ನಿಮ್ಮನ್ನು ಜಾಗೃತೆಯಾಗಿ ಮಂಗಳೂರು ಸುತ್ತಾಡಿಸಿ ಸಂಜೆ ಮತ್ತೆ ಮಾಳಕ್ಕೆ ಬಿಡುತ್ತೇನೆ. ದುಡ್ಡು ಗಿಡ್ಡು ಏನೂ ಕೊಡ್ಲಿಕ್ಕಿಲ್ಲ. ಮಂಗಳೂರಿಗೆ ಹೋಗಿ ಅಲ್ಲಿ ಸುತ್ತಾಡಿಸಿ ಮಧ್ಯಾಹ್ನ ಹೋಟ್ಲಲ್ಲಿ ಒಳ್ಳೆ ಊಟ ಮಾಡಿ ಬರುವಾ ಅಷ್ಟೆ” ಎಂದು ಅಭಯ ನೀಡಿದ ಮೇಲೆ, ಸರಿ ಅನ್ನುವಂತೆ ಮನೆಯವರೆಲ್ಲಾ ಸಿದ್ಧರಾಗಿದ್ದರು. ಹೆಂಗಸರು ಒಳಕ್ಕೆ ಹೋಗಿ ಅಲ್ಪ ಸ್ವಲ್ಪ ಸಿಂಗಾರ ಮಾಡಿಕೊಂಡು ಬಂದರು. ಮಕ್ಕಳು, ಮರಿಗಳು ಕೌತುಕರಿಂದ ಪೆಪ್ಪರ್ ಮಿಂಟು ಚೀಪುತ್ತಾ ಸ್ವರ್ಗಕ್ಕೆ ಹೋಗುತ್ತೇವೆ ಎನ್ನುವಂತೆ ನಗಾಡಿದರು.

ಮಾಳದ ಕಾಡಿನ ರಸ್ತೆಯಲ್ಲಿ ಆವತ್ತೊಂದು ಉದ್ದ ಮುಸುಡಿಯ ದೊಡ್ಡ ವಸ್ತುವೊಂದು ನಿಂತಿತ್ತು. ಕೆಂಪಗೇ ಹೊಳೆಯುತ್ತಿದ್ದ ಅದರ ಮೂತಿ ಚೂಪಾಗಿ ಓತಿಕ್ಯಾತನ ತರ ಮಿರಿ ಮಿರಿ ಹೊಳೆಯುತ್ತಿತ್ತು. ಅದರೊಳಗಿಂದ ಧಡೂತಿ ವ್ಯಕ್ತಿಯೊಬ್ಬ ಬಿಮ್ಮೆಂದು ಇಳಿದು ಬಂದಾಗ ನಾನು ಅಲ್ಲಿಂದ ಪಿಡ್ಚ. ಆತ ಓಡುತ್ತಿದ್ದ ನನ್ನನ್ನು “ನಿಲ್ಲಿ ನಿಲ್ಲಿ” ಎಂದು ತಾನೂ ನನ್ನ ಬಳಿ ಓಡುತ್ತ ಬಂದು “ಎಂತಕ್ಕೆ ಹೀಗೆ ಓಡ್ತಿದ್ದೀರಿ ಭಯವಾಯ್ತ? ನನ್ನನ್ನು ನೋಡಿ” ಅಂತ ಕಿಸಲ್ಲನೇ ನಕ್ಕ. ಅವನನ್ನು ಸರಿಯಾಗಿ ನೋಡಿದರೆ ಕೊಂಕಣಿ ಗಂಡಸಿನ ಹಾಗಿದ್ದ. ಅದೇ ಧೈರ್ಯದಿಂದ ನಾನು ಅವನ ಬಗ್ಗೆ ಅಷ್ಟಾಗಿ ಭಯಪಡದೇ ದೂರದಲ್ಲಿ ನಿಂತಿದ್ದ ಆ ಉದ್ದ ಮುಸುಡಿನ ಕೆಂಪು ಪೆಟ್ಟಿಗೆಯಂತಹ ವಸ್ತುವನ್ನೇ ನೋಡುತ್ತಿದ್ದೆ.

ಎತ್ತರದ ಪರ್ವತದಂತೆ ಉದ್ದಕ್ಕೆ ಲಟ್ಟಗೇ ಇದ್ದ ಆ ಕೆಂಪು ಮೂತಿ ಬಸ್ಸಿನ ಹತ್ತಿರ ಹೋಗುತ್ತಿದ್ದಂತೆಯೇ ಕೆಲವರಿಗೆ ಒಳಗೊಳಗೇ ಪುಕು ಪುಕು ಶುರುವಾಯಿತು. ಅದರೊಳಗೆ ಬಾಂಬು ಇರಬಹುದೆಂದೂ, ನಾವು ಒಳಗೆ ಹೋದ ಕೂಡಲೇ ಅದು ಡಮ್ಮಂತ ಸಿಡಿಯಬಹುದೆಂದೂ, ಮಾಳದ ಪುಕ್ಕಲನೊಬ್ಬ ಇತರರಿಗೂ ತನ್ನ ಭಯವನ್ನು ಹಂಚುತ್ತಿದ್ದ. ಕೊನೆಗೂ ಒಬ್ಬೊಬ್ಬರಿಗೆ ಬಸ್ಸಿನ ಮೆಟ್ಟಿಲು ಹತ್ತುವಂತೆ ಬಸ್ಸಿನ ಮಾಲಿಕ ಆದೇಶಿಸಿದಾಗ ಒಬ್ಬೊಬ್ಬರು ಜೀವ ಕೈಲಿ ಹಿಡಿದುಕೊಂಡು ಮೆಟ್ಟಿಲೇರಿದರು. ಕಲ್ಲು ಬೆಂಚಿನ ಹಾಗಿದ್ದ ಅದರ ಸೀಟಿನಲ್ಲಿ ಕೂತುಕೊಳ್ಳುವಂತೆ ಮಾಲಿಕ ಹೇಳಿದ ಮೇಲಷ್ಟೆ ಕೆಲವರು ಕೂತರು, ಇನ್ನು ಕೆಲವರು ಹೆದರಿ ಅಲ್ಲೇ ಬಸ್ಸಿನ ಒಳಲೋಕವನ್ನು ನಿಗೂಢವಾಗಿ ದಿಟ್ಟಿಸುತ್ತ ನಿಂತುಬಿಟ್ಟರು. ಕೊನೆಗೂ ಎಲ್ಲರೂ ಈವರೆಗೂ ಸಿಗದಿದ್ದ ನವ ರೋಮಾಂಚನ ಅನುಭವಿಸಿ ಮೊದಲ ಬಸ್ಸಿನ ಪ್ರಯಾಣಿಕರಾದರು. ಏನೋ ಸಿಕ್ಕಿತೆಂದು ಕೇಕೆ ಹಾಕಿದರು. ಕೆಲವರು ಬಸ್ಸು ಮುಂದೆ ಹೊರಟಾಗ ಚೀರಿದರು, ಪಿಳ್ಳೆಗಳು ಸುಸ್ಸು ಮಾಡಿದವು, ವಯಸ್ಸಾದ ಅಜ್ಜ ಅಜ್ಜಿಯರು ಶ್ರೀರಾಮ್ ಜಯರಾಂ.. ಜಯ ಜಯರಾಂ.. ಅಂತ ಸತತವಾಗಿ ಮಂತ್ರಪಠಣ ಮಾಡುತ್ತಿದ್ದರು.

ಈ ಎಲ್ಲಾ ಭಯದ, ರೋಮಾಂಚನದ, ಖುಷಿಯ ಪ್ರಯಾಣಿಕರನ್ನು ತುಂಬಿಕೊಂಡ ಆ ಕೆಂಪು ಬಸ್ಸು ಹಗುರನೇ ಮಾಳ ಕಾಡಿನ ಹಸಿರಿನಲ್ಲಿ ತೇಲುತ್ತ, ದೂರದಿಂದ ಇದೇನಿದು ಅಂತ ನೋಡುತ್ತ ನಿಂತಂತಿರುವ ಕುದುರೆಮುಖ ಬೆಟ್ಟಕ್ಕೆ, ಹರಿಯುತ್ತಿದ್ದ ಸ್ವರ್ಣೆಗೆ, ಮಾಳದ ಇಡೀ ಮೌನಕ್ಕೆ ಟಾಟಾ ಮಾಡುತ್ತ ಕಾಡಿನ ದಟ್ಟ ಹಸಿರಿನಲ್ಲಿ ಮಂಗಳೂರಿನ ದಾರಿಯಲ್ಲಿ ಕರಗಿಹೋಯಿತು. ಮಂಗಳೂರಿನ ತನಕವೂ ಇಡೀ ಪಯಣ ಮಾಳ ಜನರಿಗೆ ವಿಹಂಗಮವಾಯಿತು. ಮಂಗಳೂರಿನ ಹೋಟೆಲ್ ನಲ್ಲಿ ಬಸ್ಸಿನ ಮಾಲಿಕರೇ ನಮಗೆಲ್ಲಾ ಊಟ ಮಾಡಿಸಿದರು. ಸಂಜೆಯ ಹೊತ್ತಿಗೆ ನಮ್ಮ ಕೆಂಪು ಬಸ್ಸು ಮಾಳದ ಹಾದಿ ಹಿಡಿದಾಗ ಆಕಾಶವೂ ಕೆಂಪಾಗಿತ್ತು, ಆದಾಗಲೇ ಬಸ್ಸಿನ ಬಗ್ಗೆ ನಮಗೆಲ್ಲಾ ವಿಶ್ವಾಸ ಮೂಡಿತ್ತು.

ಎತ್ತರದ ಪರ್ವತದಂತೆ ಉದ್ದಕ್ಕೆ ಲಟ್ಟಗೇ ಇದ್ದ ಆ ಕೆಂಪು ಮೂತಿ ಬಸ್ಸಿನ ಹತ್ತಿರ ಹೋಗುತ್ತಿದ್ದಂತೆಯೇ ಕೆಲವರಿಗೆ ಒಳಗೊಳಗೇ ಪುಕು ಪುಕು ಶುರುವಾಯಿತು. ಅದರೊಳಗೆ ಬಾಂಬು ಇರಬಹುದೆಂದೂ, ನಾವು ಒಳಗೆ ಹೋದ ಕೂಡಲೇ ಅದು ಡಮ್ಮಂತ ಸಿಡಿಯಬಹುದೆಂದೂ, ಮಾಳದ ಪುಕ್ಕಲನೊಬ್ಬ ಇತರರಿಗೂ ತನ್ನ ಭಯವನ್ನು ಹಂಚುತ್ತಿದ್ದ. ಕೊನೆಗೂ ಒಬ್ಬೊಬ್ಬರಿಗೆ ಬಸ್ಸಿನ ಮೆಟ್ಟಿಲು ಹತ್ತುವಂತೆ ಬಸ್ಸಿನ ಮಾಲಿಕ ಆದೇಶಿಸಿದಾಗ ಒಬ್ಬೊಬ್ಬರು ಜೀವ ಕೈಲಿ ಹಿಡಿದುಕೊಂಡು ಮೆಟ್ಟಿಲೇರಿದರು. ಕಲ್ಲು ಬೆಂಚಿನ ಹಾಗಿದ್ದ ಅದರ ಸೀಟಿನಲ್ಲಿ ಕೂತುಕೊಳ್ಳುವಂತೆ ಮಾಲಿಕ ಹೇಳಿದ ಮೇಲಷ್ಟೆ ಕೆಲವರು ಕೂತರು, ಇನ್ನು ಕೆಲವರು ಹೆದರಿ ಅಲ್ಲೇ ಬಸ್ಸಿನ ಒಳಲೋಕವನ್ನು ನಿಗೂಢವಾಗಿ ದಿಟ್ಟಿಸುತ್ತ ನಿಂತುಬಿಟ್ಟರು.

ಈಗ ನಿಮಗೆ ಈ ಬಸ್ಸಿನ ಕತೆ ಕೇಳಿದಾಗ ನಗು ಬರಬಹುದು. ಆದರೆ ಆ ಕಾಲಕ್ಕೆ ನಮಗೆ ಇದೇ ನಿಜವಾಗಿತ್ತು. ಮೊದಲು ಜನರಿಗೆ ಅಭ್ಯಾಸವಾಗಲಿ ಅಂತ ಜನರಿಗೆ ಹೀಗೆಲ್ಲಾ ಉಚಿತ ಸೇವೆ ಕೊಡುತ್ತಿದ್ದರು ನೋಡಿ, ಎಲ್ಲಾ ಅಭ್ಯಾಸವಾದ ಮೇಲೆ ನಮಗೆ ಬಸ್ಸು ಒಗ್ಗಿದ ಮೇಲೆ ಹಣ ತಗೊಳ್ಳಲು ಶುರುಮಾಡಿದರು” ಎಂದು ನಗುತ್ತ ಜೋಶಿಯವರು ಕತೆ ಮುಗಿಸಿದಾಗ ಆ ಕೆಂಪು ಮೂತಿ ಬಸ್ಸಿನಿಂದ, ಹಗುರನೇ ಇಳಿದು ಕಾಡೊಳಗೆ ಕರಗಿ ಹೋದಂತಾಯಿತು ನಮಗೆ.

ಮಾಳದ ಕಾಡ ದಾರಿಯಲ್ಲಿ ಬಸ್ಸು ಬಂದ ಕತೆ ಆಯಾಯ ಊರುಗಳಲ್ಲಿ ಆ ಕಾಲಕ್ಕೆ ನಡೆದ ಪ್ರಸಂಗಗಳೇ ಆಗಿರಬಹುದು. ಇಲ್ಲಿ ಜೋಶಿಯವರು ಕತೆ ಹೇಳಿದರೆ ಇಂತದ್ದೇ ಒಂದು ಕತೆಯನ್ನು ನಿಮ್ಮೂರಲ್ಲಿ ಹಿರಿಯ ಜೀವಗಳಾದ ಶೆಟ್ಟರೋ? ಭಟ್ಟರೋ ನಿಮಗೆ ಹೇಳಿರಬಹುದು ಅಥವಾ ಕೇಳಿದರೆ ಖಂಡಿತಾ ಹೇಳಬಹುದು. ಆದರೆ ಮಾಳದ ಗವ್ವೆನ್ನುವ ಕಾಡಿನ ಮನೆಯಲ್ಲಿ ಕೂರಿಸಿ ಶಂಕರ ಜೋಶಿಯವರು ಈ ಕತೆ ಹೇಳಿದಾಗ ಈ ಕಾಲಘಟ್ಟದ ಹುಡುಗರಾದ ನಮ್ಮೊಳಗೆ ವಿಚಿತ್ರ ಪುಲಕವಾಯ್ತು. ಇತಿಹಾಸಗಳೇ ಹಾಗೆ, ಎಷ್ಟೊಂದು ಪುಳಕ ಹುಟ್ಟಿಸುತ್ತದೆ ಅಲ್ವಾ? ‘ನೀನು ಸಣ್ಣವನಿದ್ದಾಗ ಹೇಗಿದ್ದಿ ಗೊತ್ತಾ?’ ಅಂತ ಯಾರಾದರೂ ಶುರು ಮಾಡಿದರೆ ನೀವು ಹುರುಪಾಗುತ್ತೀರಿ, ಹಾಗೆಯೇ ಹಿಂದೆ ಈ ಊರು ಹೇಗಿತ್ತು ಗೊತ್ತಾ ಅಂತ ಕತೆ ಶುರುಮಾಡಿದರೂ ಸಾಕು ನಿಮ್ಮ ಕಿವಿ ನಿಮಿರುತ್ತದೆ. ಶಂಕರ ಜೋಶಿಯವರು ಇಂತಹ ಇತಿಹಾಸವನ್ನೂ ಸ್ವಾರಸ್ಯಕರವಾಗಿ ಹೇಳುತ್ತಾರೆ. ಕುದುರೆಮುಖ ಕಾಡಿನ ಕತೆ, ಮಾಳಕ್ಕೆ ವಿಮಾನ ಬಂದ ಕತೆ, ಕಾಡ ಜೇನನ್ನು ಭೂತ ತಿಂದ ಕತೆ ಹೀಗೆ ಎಲ್ಲವನ್ನೂ ಮಕ್ಕಳ ಬೆರಗಿನಲ್ಲಿ ಹೇಳುತ್ತಾರೆ. ಕತೆಗಳೆಂದರೆ ಜೀವನ ಅಂತ ಮತ್ತೆ ಮತ್ತೆ ನಾವು ಗುನುಗಿಕೊಳ್ಳುತ್ತಲೇ ಮಾಳ ಕಾಡಿನ ದಾರಿ ಹಿಡಿಯುತ್ತೇವೆ. ಆ ಕಾಡ ಕತೆಗಳನ್ನು ನಿಮಗೂ ದಾಟಿಸುತ್ತೇನೆ, ಜೋಶಿಯವರು ಹೇಳಿದ ಉಳಿದ ಕತೆಗಳನ್ನು ಇನ್ನೊಮ್ಮೆ ಹೇಳುವೆ.