Advertisement

Month: April 2024

ಮೋಹದ ಪಥದಲ್ಲಿ ರಿಂಗಣಿಸುವ ಇಹಲೋಕ: ಶ್ರೀದೇವಿ ಕೆರೆಮನೆ ಬರಹ

“ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು.”

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕ ತಂದೆ”

“ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ.”

Read More

ಅಬ್ಬೆಯ ಉಗುರು ತೆಗೆಯುವುದು: ಗುರುಗಣೇಶ್ ಭಟ್ ಬರಹ

“ದೊಡ್ಡಬ್ಬೆಗೆ ಉಗುರು ತೆಗೆಯಲು ಯಾರೂ ಜನ ಸಿಗುವುದಿಲ್ಲ. ಆಕೆ ಕುತ್ತಿಗೆ ವಾರೆ ಮಾಡಿಕೊಂಡು ನಾನು ಬಂದಿದ್ದೇನೋ ಹೇಗೋ ಎಂದು ನೋಡುತ್ತಾಳೆ. ಹದಿನೈದು ದಿನಕ್ಕೋ ತಿಂಗಳಿಗೋ ನಾನು ಟೈಮು ಮಾಡಿಕೊಂಡು ಹೋಗಿ ಉಗುರು ತೆಗೆದು ಬರುತ್ತೇನೆ. ಕೊಳಕು ತುಂಬಿರುವ ಉಗುರು ನೋಡಿದರೆ ಒಮ್ಮೆ ಕಿರಿಕಿರಿಯಾಗುತ್ತದೆ. ನೇಲ್ ಕಟರ್ ಉಪಯೋಗಿಸುವ ಹಾಗಿಲ್ಲ.”

Read More

ಪಾರ್ವತಿ-ಗಣಪಿಯರೆಂಬ ಜೀವಕೊರಳ ಗೆಳತಿಯರು: ಭಾರತಿ ಹೆಗಡೆ ಕಥಾನಕ

“ಹಸಿಹಸಿ ಬಾಣಂತಿ ಪಾರ್ವತಿ ಮಗುವನ್ನೂ ಕರೆದುಕೊಂಡು ಮನೆಯಿಂದ ಹೊರಬಿದ್ದಳು. ಸೀದಾ ಅಘನಾಶಿನಿ ನದಿಯ ದಂಡೆಯ ಮೇಲೆ ಹೊಳೆಯನ್ನೇ ದಿಟ್ಟಿಸಿತ್ತ ಕುಳಿತಳು. ಅದೆಷ್ಟು ಹೊತ್ತು ಹಾಗೆಯೇ ಕುಳಿತಿದ್ದಳೋ… ಹಿಂದೆ ಗಣಪಿ ಬಂದು ನಿಂತದ್ದೂ ಅರಿವಿಗೆ ಬಾರದಂತೆ. ‘ಎಂತದ್ರಾ ಅಮ್ಮಾ.. ಹೀಂಗ್ ಕುಂತೀರಿ’ ಎಂದು ಗಣಪಿ ಕೇಳಿದಾಗಲೇ ಎಚ್ಚರವಾಗಿದ್ದು. ‘ಎಂತ ಇಲ್ಲ ಗಣಪಿ, ಈ ಹೊಳೆಗೇ ಬಿದ್ದು ಸತ್ಹೋಗನ ಅಂದರೆ ನಂಗೆ ಈಜು ಬರ್ತದೆ…”

Read More

ಗದ್ದೆಗೆ ಬಿದ್ದದ್ದು ಧೂಮಕೇತುವೆ?: ಮುನವ್ವರ್ ಜೋಗಿಬೆಟ್ಟು ಪರಿಸರ ಕಥನ

“ಸಹಪಾಠಿಗಳು ಯಾರೂ ಕುತೂಹಲಿಗರಾದಂತೆ ಕಂಡು ಬರಲಿಲ್ಲ. ನಾನು ಕೆಲವು ಗೆಳೆಯರಲ್ಲಿ ಈ ವಿಚಾರವೆತ್ತಿ ನೋಡಿದೆ, ಅವರ್ಯಾರು ಸೊಪ್ಪು ಹಾಕಲಿಲ್ಲ. ಬೆಳಗ್ಗೆ ಪೇಪರ್ ತರುವವನನ್ನು ಕಾಯುತ್ತಾ ನಿಂತೆ. ಅವನದಾಗಲೇ ತಂದು ಕೊಟ್ಟು ಅದು ಅಧ್ಯಾಪಕರ ಕೊಠಡಿಗೆ ಹೋಗಿಯಾಗಿತ್ತು. ಇನ್ನು ಪತ್ರಿಕೆ ನಮಗೆ ಸಿಗಬೇಕಾದರೆ ಸಂಜೆಯಾದ್ರೂ ಆಗಬೇಕಿತ್ತು. ಸಂಜೆವರೆಗೂ ಕಾದೆ. ಕೊನೆಗೆ ಪತ್ರಿಕೆ ಸಿಕ್ಕಿತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ