Advertisement

Month: May 2024

ಪದ್ದಜ್ಜಿಯ ಕಣ್ಣಲಿ ಕಂಡ ನೆನಪುಗಳ ಜಲಪಾತ: ಪ್ರಸಾದ್ ಶೆಣೈ ಅಂಕಣ

“ಒಳ ಬಾಗಿಲಿಂದ ಇಣುಕಿದ ಪದ್ದಜ್ಜಿ ಈಗ ಹೊರಬಂದಳು. ಬೆನ್ನು ಬಾಗಿದ್ದರೂ, ಕೂದಲೆಲ್ಲಾ ಮುಪ್ಪಾಗಿದ್ದರೂ, ಮೈಯೆಲ್ಲಾ ಸುಕ್ಕುಗಟ್ಟಿದ್ದರೂ ಅವಳ ಕಣ್ಣುಗಳು ಫಳ್ಳನೇ ಹೊಳೆಯುತ್ತಿದ್ದವು. ಆ ಕಣ್ಣ ಬೆಳಕಿನಲ್ಲಿ ತಾನು ಕಂಡ ನೂರಾರು ಮಳೆಗಾಲ, ಹೊಳೆಯುವ ಬಿಸಿಲು, ಧಾರೆಯಾಗುವ ಮಂಜು, ಗುಡುಗು-ಸಿಡಿಲಿನ ಮೊರೆದಾಟಗಳು ಕಾಣಿಸುತ್ತಿತ್ತು. ಅವಳ ಸುಕ್ಕುಗಟ್ಟಿ ಭೂಮಿಗೂರಿದ ಪಾದಕ್ಕೆ ನಡೆದ ದಾರಿಯ ಮಣ್ಣಿನ, ಹುಲ್ಲಿನ, ಜಲಪಾತದ…”

Read More

ಭವಿಷ್ಯದಲ್ಲಿ ನಮ್ಮ ಅಡುಗೆ ಸಂಸ್ಕೃತಿ ಹೇಗಿರಬಹುದು?: ಮಧುಸೂದನ್ ಅಂಕಣ

“ಆಗಿನ ದಿನಗಳಲ್ಲಿ ಯಾರಾದರೂ ಬಹಿರಂಗವಾಗಿ ಹೋಟೆಲ್ಲಿನಲ್ಲಿ ಕಾಣಿಸಿಕೊಂಡರೆ ಒಂದೋ ಆತನೇ ಕೆಟ್ಟಿದ್ದಾನೆಂದರ್ಥ. ಅಥವಾ ಅವನ ಹೆಂಡತಿ ಕೆಟ್ಟಿದ್ದಾಳೆಂದರ್ಥ. ಮನೆಯಲ್ಲಿ ಸರಿಯಾಗಿ ಅಡಿಗೆ ಮಾಡಿದ್ದರೆ ಅವನು ಯಾಕೆ ಅಲ್ಲಿಗೆ ಹೋಗುತ್ತಿದ್ದ? ಅವನು ಹಣವನ್ನು ಪೋಲು ಮಾಡಲು ಬಿಟ್ಟು ಇವಳೇನು ಮಾಡುತ್ತಿದ್ದಾಳೆ? ಎಂಬುವಂಥ ಮಾತುಗಳು ಕೇಳಿಬರುತ್ತಿದ್ದವು.”

Read More

ಕೆ. ವಿ. ತಿರುಮಲೇಶ್ ಅನುವಾದಿಸಿದ ಮಿರೋಸ್ಲಾವ್ ಹೋಲುಬ್ ನ ಐದು ಕವಿತೆಗಳು

“ಇನ್ನೂ ಎಷ್ಟು ಚೆನ್ನಾಗಿರಬಹುದು ಈಲಿಯಡ್
ಅಗಮೆಮ್ನೋನ್ ಗೆ ಅವನದೇ ಚಹರೆಯಿತ್ತೆಂದು
ಸಿದ್ಧವಾದರೆ ಅಥವ ಹೆಲೆನಳ ಜೀವಶಾಸ್ತ್ರ
ಸಮಕಾಲೀನ ವಾಸ್ತವಗಳ ಪ್ರತಿಬಿಂಬಿಸಿದರೆ.”- ಕೆ. ವಿ. ತಿರುಮಲೇಶ್ ಅನುವಾದಿಸಿದ ಮಿರೋಸ್ಲಾವ್ ಹೋಲುಬ್ ನ ಐದು ಕವಿತೆಗಳು

Read More

ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಗಗನ್ ಬೂಸ್ನೂರ್. ದಾವಣಗೆರೆಯ ಗಗನ್ ಬಿ.ಕಾಂ ವಿದ್ಯಾರ್ಥಿ. ಹಕ್ಕಿ ಮತ್ತು ಪರಿಸರ ಛಾಯಾಗ್ರಹಣ ಇವರ ಆಸಕ್ತಿಯ ವಿಷಯಗಳು. ಸಾಹಿತ್ಯದ ಓದು ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಸೀರೆಯುಡುವ ಗೋಧಾಳ ಮಗ: ಕೆ.ಸತ್ಯನಾರಾಯಣ ಕಾದಂಬರಿ “ಲೈಂಗಿಕ ಜಾತಕ”ದ ಆಯ್ದ ಭಾಗ

“ಗೋದಾ ಸಾಯುವ ಹಿಂದಿನ ವರ್ಷ ಮಗ-ಸೊಸೆ ಬಂದಿದ್ದಾಗ ದೊಡ್ಡ ರಾದ್ಧಾಂತವೇ ಆಗಿಹೋಯಿತು. ಒಂದು ದಿನ ಸೊಸೆ ಗೊಲೇಚಾ ಮಧ್ಯಾಹ್ನ ನಾಲ್ಕು- ನಾಲ್ಕೂವರೆ ಘಂಟೆ ಹೊತ್ತಿನಲ್ಲಿ ರೂಮಿಂದ ಈಚೆಗೆ ಬಂದ(ಳು). ಸಾಲಂಕೃತ ವಧು. ನೋಡಿದರೆ ಕಣ್ಣು ತುಂಬಿ ಬರುವ ಹಾಗೆ. ನಮ್ಮ ಶ್ರೀ ವೈಷ್ಣವ ಹುಡುಗಿಯರ ರೀತಿಯೇ. ಕೆಂಪಂಚು ಇರುವ ಹಸಿರು ಸೀರೆ, ಬಿಳಿ ಬಣ್ಣದ ತುಂಬು ತೋಳಿನ ರವಿಕೆ, ಲೋಲಾಕು, ದೊಡ್ಡ ಹೆರಳು, ಹೀಗೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ