Advertisement

Month: May 2024

ಮಂಜುಳ ಡಿ ಪುಸ್ತಕದ ಕುರಿತು ಎಂ.ಎನ್. ಸುಂದರ್ ರಾಜ್ ಲೇಖನ

“ಅಂಕಣ ಬರೆಯುವುದೆಂದರೆ, ಒಂದು ವಿಶಾಲಾರ್ಥವನ್ನು ನೀಡುವ ವಸ್ತುವನ್ನು ಕೆಲವೇ ಮಾತುಗಳಲ್ಲಿ ಹುದುಗಿಡುವಂತಹುದು. ಅಂದರೆ ಸಮುದ್ರವನ್ನು ಸಾಸಿವೆ ಕಾಳಲ್ಲಿ ತುಂಬಿದಂತೆ. ಏಕೆಂದರೆ ಒಂದೊಂದೂ ವಸ್ತುಗಳೂ ಸಹ ಕಾದಂಬರಿ ಬರೆಯುವಷ್ಟು ವಿಷಯಗಳನ್ನು ಹೊಂದಿರುತ್ತದೆ. ಉದಾಹರಣೆಗೆ ‘ಕಾಶ್ಮೀರದ ಕರಾಳತೆಯ ಹುದುಲಿನಲ್ಲಿ……’ ನಿಜಕ್ಕೂ ಇಂದಿನ ಕಾಶ್ಮೀರದ ಸ್ಥಿತಿಗೆ ಹಿಡಿದ ಕೈಗನ್ನಡಿ.”

Read More

ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಕ್ಕೇಟಿ ಮಾಧವ ಗೌಡ ಬರೆದ ಕಥೆ

“ಅಜ್ಜ ಅಡ್ಕಾರಿಗೆ ಹೋದದ್ದು ಯಾಕೆ ಎಂದು ಅಮೇಲೆ ತಿಳಿಯಿತು. ಅವರು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದರು. ಮರುದಿನ ಅಮ್ಮ ಅಜ್ಜನ ಸ್ವಚ್ಛ ಬಟ್ಟೆಗಳನ್ನು ಮಡಚಿ ತಂದು ಅಜ್ಜನಿಗೆ ಕೊಟ್ಟರು. ನಾನು ಕಿಸ್ತು ಕಟ್ಟಲು ಹೋಗುವ ನಮ್ಮ ಅಜ್ಜನ ಸಡಗರವನ್ನು ಗಮನಿಸುತ್ತಿದ್ದೆ. ಯಾವುದೋ ರಾಜಕಾರ್ಯಕ್ಕೆ ಹೋಗುವವರಂತೆ ಅಜ್ಜ ಸಂಭ್ರಮಿಸುತ್ತಿದ್ದರು. ಒಗೆದು ಶುಚಿಯಾಗಿದ್ದ ಮೊಣಕಾಲಿನ ಕೆಳಗೆ ಬರುವಂಥ ಮುಂಡು ಉಟ್ಟು”

Read More

ಸಾಹಿತ್ಯ ಸಮ್ಮೇಳನ ಮತ್ತು ಗೋಷ್ಠಿ: ಮಚ್ಚೇಂದ್ರ ಪಿ ಅಣಕಲ್ ಬರೆದ ಲಲಿತ ಪ್ರಬಂಧ

“‘ನನ್ ಹೆಸ್ರು ಕಾರ್ಡನ ಕವಿಗೊಷ್ಠಿಯಲ್ಲಿ ಕೊನೆಯದು’ ಅಂತ ಕಾರ್ಡಿನಲ್ಲಿ ಮುದ್ರಣಗೊಂಡಿತ್ತು. ಅದನ್ನು ಓದುತ್ತಾ ನಿರೂಪಣೆ ಮಾಡೊ ನಾಣಿಗೆ ‘ಅಣ್ಣಾ! ಇಲ್ಲಿ ಬಾ’ ಅಂತ ಮೆಲ್ಲಗೆ ಕರೆದು ಪರದಾ ಹಿಂದೆ ಯಾರಿಗೂ ಕಾಣದಂತೆ ಡಕ್ಕನೆ ಕಾಲ್ ಬಿದ್ದು “ಹ್ಯಾಂಗಾದ್ರು ಈ ಗೋಷ್ಠಿಯಿಂದ ನನ್ನ ಹೆಸ್ರು ಬೇಗ ಹೇಳಿ ಪಾರು ಮಾಡು ನಾಣಿ” ಅಂತ ಕೇಳ್ಕೊಂಡೆ.”

Read More

ಜ಼ಾಯನ್ ನಲ್ಲಿ ಜ಼ೆನ್ ಕ್ಷಣಗಳು: ವಲಸೆ ಹಕ್ಕಿ ಬರೆದ ಪ್ರವಾಸ ಕಥನ

“ಬಡ ನಡುವನ್ನು ಬಳುಕಿಸುತ್ತಾ ಸುಕುಮಾರಿಯಂತೆ ಹರಿಯುವ ವರ್ಜಿನ್ ನದಿಗೆ ಆತುಕೊಂಡ ಕ್ಯಾಂಪ್ ಸೈಟ್ ಒಂದರಲ್ಲಿ ಮೊಕ್ಕಾಂ ಹೂಡಿದೆವು. ಸುತ್ತಲೂ ಕೆಂಪು ಕೆಂಪಾದ ಮರಳುಗಲ್ಲುಗಳಿಂದ ನಿರ್ಮಿತವಾಗಿರುವ ಸುಂದರ ಬೆಟ್ಟ ಗುಡ್ಡಗಳು. ಇನ್ನೂರ ಐವತ್ತು ಮಿಲಿಯನ್ ವರ್ಷಗಳ ಹಿಂದೆ ಮಟ್ಟಸವಾಗಿದ್ದ ಭೂಮಿಯ ಮೇಲೆ ಪದರ ಪದರವಾಗಿ ಜಮೆಯಾದ ಮಣ್ಣು ಮರಳುಗಳಿಂದ ಮುಗಿಲೆತ್ತರದ ಈ ದಿಣ್ಣೆಗಳು ನಿರ್ಮಾಣವಾದುದಂತೆ.”

Read More

ಪ್ರವಾದಿ ನೂಹನ ಸಂದೂಕದಂತಿರುವ ಹಳೆಯ ಕಬ್ಬಿಣದ ಪೆಟಾರಿ: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

‘ಒಂದೊಂದು ಸಲ ನಿನ್ನ ತರಹವೇ ಇರುವ ಇನ್ನೊಂದು ದೇಹ ನೀನು ತಲುಪಬೇಕಾದ ಜಾಗಕ್ಕೆ ನೀನು ತಲುಪುವ ಮೊದಲೇ ತಲುಪಿ ಬಿಡುತ್ತದೆ. ನೀನು ತಡವಾಗಿ ತಲುಪುವ ಹೊತ್ತಲ್ಲಿ ನಿನ್ನನ್ನು ಎಲ್ಲರೂ ಮರೆತು ಬಿಟ್ಟಿರುತ್ತಾರೆ. ಅವನು ನಿನ್ನಂತೆ ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳ ಜೊತೆ ಬದುಕುತ್ತಿರುತ್ತಾನೆ. ಆಗ ನೀನು ಎಷ್ಟು ಅತ್ತು ಕರೆದರೂ ಯಾರೂ ನಂಬುವುದಿಲ್ಲ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ