Advertisement

Month: May 2024

ಸೌಮ್ಯ ಕೆ.ಆರ್. ಬರೆದ ಈ ದಿನದ ಕವಿತೆ

“ತೆವಳುವಾಗ ನೋಡಿ
ಋಷಿಪಟ್ಟಳೆಂದರೆ
ಅದೂ ನೆನಪಿಲ್ಲ

ಮುದ್ದು ಮುದ್ದಾದ ಅಂಗಿಯ
ತೊಡಿಸಿದ್ದಳೆನೋ
ಅದಾವುದೂ ನನಗೆ ನೆನಪಿಲ್ಲ”-ಸೌಮ್ಯ ಕೆ.ಆರ್. ಬರೆದ ಈ ದಿನದ ಕವಿತೆ

Read More

ನನ್ನನ್ನು ಹುಡುಕಿಕೊಳ್ಳುವ ದಾರಿಯಲ್ಲಿ ಸಿಕ್ಕ ಹೊಳಹುಗಳು

ಕನಕ ದಾಸರು “ನಾನು ಹೋದರೆ ಹೋದೇನು” ಎಂದಾಗ, ಅವರೆಂದದ್ದು ಸತ್ತ ನಂತರ ಸ್ವರ್ಗ ಸೇರುವ ಮಾತಲ್ಲ – ಮಕ್ಕಳಿಗಾಗಿ ಆ ಕತೆಯನ್ನು ನಾವು ಹೇಳಿದರೂ. ಅವರೆಂದದ್ದು ಪೂರ್ಣ ಧ್ಯಾನದಲ್ಲಿ ತೊಡಗಿಕೊಂಡಾಗ ಈ “ನಾನು” ಎಂಬ ಭಾವ “ಹೋಗುವ” ವಿಷಯ. ಆಸಕ್ತಿಕರ ವಿಷಯವೆಂದರೆ, ಆಧುನಿಕ ನ್ಯೂರೋಸೈನ್ಸ್ ಸಹ ಅದನ್ನೇ ಹೇಳುತ್ತಿದೆ. ಧ್ಯಾನದಲ್ಲಿ ತೊಡಗಿಕೊಂಡವರ ಮಿದುಳನ್ನು ಪರಿಶೀಲಿಸಿದಾಗ, ಮಿದುಳಿನ “ನಾನು ಕೇಂದ್ರ”ಗಳು ಸ್ಥಬ್ಢವಾಗುವುದನ್ನು ಗಮನಿಸಿದ್ದಾರೆ.  ಶೇಷಾದ್ರಿ ಗಂಜೂರು ಬರೆದ ಲೇಖನ..

Read More

ಗಂಟಿಚೋರರೇ ನೆನಪಿಟ್ಟುಕೊಂಡ ಕಥನಗಳಲ್ಲಿದೆ ಚರಿತ್ರೆ

ಸೇಟ್‌ಜೀ ಒಬ್ಬರು ಬೆಂಗಳೂರಿನಿಂದ ಮುಂಬೈಗೆ ಹೆಚ್ಚುವರಿ ಗೋಲ್ಡ್ ಬಿಸ್ಕೆಟ್ ಸಾಗಿಸುವ ಮಾಹಿತಿ ಸಂಗ್ರಹಿಸಿ ಪ್ಲಾನ್ ಮಾಡಿದಂತೆ ಅವರೆಲ್ಲ ಸೇರಿ ‘ರಾಬರಿ’ ಮಾಡಿದರು. ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು, ಆದರೆ ತಪ್ಪಿಸಿಕೊಳ್ಳುವಾಗ ಈ ಟೀಮಿನ ಇಬ್ಬರು ಸಿಕ್ಕಿಹಾಕಿಕೊಂಡರು.  ಮರುದಿನ ದೊಡ್ಡ ಸುದ್ದಿಯಾಯಿತು. ಸಿಕ್ಕಿಹಾಕಿಕೊಂಡ ಸದಸ್ಯರು ಕಳ್ಳತನದ ಕುರಿತು ಬಾಯಿಬಿಡಲಿಲ್ಲ. ಆಗ ಪೊಲೀಸರೊಂದು ಉಪಾಯ ಮಾಡಿ, ಬಂಧಿತರನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಮುಂದೇನಾಯಿತು ?
‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಡಾ.ಅರುಣ್ ಜೋಳದ ಕೂಡ್ಲಿಗಿ ಬರಹ. 

Read More

‘ಶಿಲಾಲತೆ’ಯಲ್ಲಿ ಪದುಮಳ ಬಳೆಗಳ ದನಿಯಿಲ್ಲವಲ್ಲ

ಕೆ.ಎಸ್. ನರಸಿಂಹ ಸ್ವಾಮಿ ಅವರು ಪ್ರೇಮಕವಿಯಾಗಿ ಸುಪ್ರಸಿದ್ಧರಾದರೂ ಅವರು ಬದುಕಿನ ಜಿಜ್ಞಾಸೆಗಳ ಬಗ್ಗೆ, ಅಧ್ಯಾತ್ಮದ ಕುರಿತು, ಇತರ ಸಂದಿಗ್ಧಗಳ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಿದ್ದಾರೆ. ಅವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು… ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು. ಅವರ ಜನ್ಮದಿನವಾದ ಇಂದು, ಅವರ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ‘ಶಿಲಾಲತೆ’ಯ ನಲವತ್ತರ ಚೆಲುವೆಯ ಬಗ್ಗೆ ವಿಶ್ಲೇಷಣಾ ಬರಹ ಬರೆದಿದ್ದಾರೆ ಲೇಖಕಿ ಮಾಲಿನಿ ಗುರುಪ್ರಸನ್ನ.

Read More

‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಯೋಗೀಂದ್ರ ಮರವಂತೆ ಸರಣಿ ಶುರು

ಇಂದಿನ ಲಂಡನ್ನಿನ ವೈಶಿಷ್ಟ್ಯವನ್ನು ವಲಸಿಗರ ಕಣ್ಣಲ್ಲಿ ಸರಳವಾಗಿ ವ್ಯಾಖ್ಯಾನಿಸುವುದಾದರೆ, ಬ್ರಿಟಿಷರಲ್ಲದ ಬಿಳಿಯರಲ್ಲದ ಜನರು ಅತ್ಯಂತ ವೇಗವಾಗಿ,  ಹೆಚ್ಚೇನೂ ಅಡೆತಡೆ ಇಲ್ಲದೆ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಸ್ವೀಕೃತರಾಗುವ ತಾಣ  ಎನ್ನಬಹುದು.  ಹೀಗೆ ಲಂಡನ್ ನಗರದ ಆದಿಪುರಾಣದೊಂದಿಗೆ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಎಂಬ ಹೊಸ ಸರಣಿಯನ್ನು ಆರಂಭಿಸಿದ್ದಾರೆ ಲೇಖಕ ಯೋಗೀಂದ್ರ ಮರವಂತೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ