Advertisement

Month: May 2024

ಪ್ರಸಾದ್‌ ಕೋಮಾರ್‌ ತೆಗೆದ ಈ ದಿನದ ಚಿತ್ರ

ಈ ದಿನದ ಫೋಟೋ ತೆಗೆದವರು ಪ್ರಸಾದ್‌ ಕೋಮಾರ್. ಮೂಲತಃ ಎಲ್ಲಾಪುರದವರಾದ ಪ್ರಸಾದ್‌ ಸಧ್ಯ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾಹಿತ್ಯ, ಸಂಗೀತ, ನಾಟಕ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಆಯಾ, ಮೇಂಸಾಹಿಬ್ ಮತ್ತು ಮಕ್ಕಳು

ಒಮ್ಮೆ ಬ್ರಿಟನ್ ತಲುಪಿದ ಮೇಲೆ ಕೆಲವು ಆಯಾಗಳು ಯಜಮಾನರ ಬಂಧುಗಳ ಮನೆಯನ್ನು ಭೇಟಿ ಮಾಡುವಾಗ ಜೊತೆಗೆ ಹೋಗುವ ಸಾಧ್ಯತೆ ಇತ್ತು. ಮತ್ತೆ ಕೆಲವರನ್ನು ವಾಪಸು ಕಳುಹಿಸಲಾಗುತ್ತಿತ್ತು. ಅಂತಹ ಆಯಾಗಳು, ತಮ್ಮ ಅಗತ್ಯ ಇರುವ, ಭಾರತಕ್ಕೆ ಮರಳುವ ಬ್ರಿಟಿಷ್ ಕುಟುಂಬಗಳಿಗೋಸ್ಕರ ಕಾಯಬೇಕಿತ್ತು. ಇಂತಹ ಆಯಾಗಳಲ್ಲಿ ಕೆಲವರು ಬ್ರಿಟನ್ನಿಗೆ ಹಲವು ಭೇಟಿ ಮಾಡಿದವರೂ ಇದ್ದರು. ಹೆಚ್ಚಿನವರಿಗೆ  ವಾಪಸು ಹೋಗುವ ಟಿಕೇಟು ನೀಡಲಾಗುತ್ತಿತ್ತು. ಆದರೆ ಎಲ್ಲರಿಗೂ ಅಲ್ಲ. ಬಹಳ ಆಯಾಗಳನ್ನು ಅವರನ್ನು ಬ್ರಿಟನ್ನಿಗೆ ಕರೆತಂದ ಕುಟುಂಬದವರು ಬಿಟ್ಟುಬಿಡುತ್ತಿದ್ದರು.
ಯೋಗೀಂದ್ರ ಮರವಂತೆ ಬರಹ

Read More

ಸೃಜನಶೀಲತೆಯ ಬೆಳಕಿನಲ್ಲಿ ವಿಜ್ಞಾನವೂ ಸಿದ್ಧಾಂತವೂ

ತನ್ನ ಬಾಲ್ಯದ ಧಾರ್ಮಿಕತೆಯ ತತ್ತ್ವವು ವಸ್ತುನಿಷ್ಠವಾಗಿ ಸಂಶೋಧನೆ ನಡೆಸಬೇಕಾದ ವಿಜ್ಞಾನಿಯ ದೃಷ್ಟಿಯನ್ನು ಪ್ರಭಾವಿಸುತ್ತದೆಯೆ? ಅದರಿಂದಾಗಿ ಕೆಲವೊಮ್ಮೆ ಧನಾತ್ಮಕ, ಇನ್ನು ಕೆಲವೊಮ್ಮೆ ಋಣಾತ್ಮಕ ಫಲಿತಾಂಶಗಳಿಗೆ, ವಾಸ್ತವದಿಂದ ದೂರವಾದ ಸಿದ್ಧಾಂತಗಳಿಗೆ ಅದು ಎಡೆಮಾಡಿಕೊಡಬಹುದೆ ಎಂಬ ಪ್ರಶ್ನೆಗಳನ್ನು ಪದರ ಪದರವಾಗಿ ಬಿಡಿಸಿಡುವ ನಾಟಕವಿದು. ನಿರ್ದೇಶನ  ಅತ್ಯಂತ ಪರಿಣಾಮಕಾರಿಯಾದುದು. ದೇಹಭಾಷೆ ಮತ್ತು ಧ್ವನಿಯ ಏರಿಳಿತಗಳ ಮೂಲಕ ಸಲಾಂ ಅವರ ಹತಾಶೆ, ನೋವುಗಳನ್ನು ಅಭಿವ್ಯಕ್ತಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ‘ಅಬ್ದುಸ್ ಸಲಾಮ್ ಅವರ ವಿಚಾರಣೆ’ ನಾಟಕದ ಕುರಿತು ಡಾ. ಸುದರ್ಶನ ಪಾಟೀಲಕುಲಕರ್ಣಿ ಬರಹ

Read More

ಸೂರ್ಯಕೀರ್ತಿ ಅನುವಾದಿಸಿದ ತೈವಾನಿನ ಕವಿ ಡಾ. ಟ್ಜೆಮಿನ್ ಇಶನ್ ತ್ಸೈ ಅವರ ಕವಿತೆಗಳು

“ಹಾರುವ ಹಕ್ಕಿ ಹಾಡುತ್ತವೆ,
ಮಣ್ಣಿನ ಅಡಿಯಲ್ಲಿ ಗುಹೆಗಳು
ಪರಸ್ಪರ ನುಸುಳುತ್ತವೆ;
ವಿಭಜನೆಯಾಗಲು ಬಯಸುವುದಿಲ್ಲ
ಅವು ಮಿಂಚಿನ ಬೂದಿಯಲ್ಲಿ ಮುಳುಗಲು ಬಯಸುವುದಿಲ್ಲ.”- ಸೂರ್ಯ ಕೀರ್ತಿ ಅನುವಾದಿಸಿದ ತೈವಾನಿನ ಕವಿ ಡಾ. ಟ್ಜೆಮಿನ್ ಇಶನ್ ತ್ಸೈ ಅವರ ಎರಡು ಕವಿತೆಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ