Advertisement

Category: ಅಂಕಣ

ವಿಳಾಸದ ಅಂದದ ಬೆಡಂಗಿನ ಪೆಂಡಿರೇ ಪೆಂಡಿರಲ್ಲಿಯಾ: ಆರ್. ದಿಲೀಪ್ ಕುಮಾರ್ ಅಂಕಣ

“ಒಂದಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಪರಿಸರವನ್ನು ಕಟ್ಟಿಕೊಡುವ ಪಂಪನ ಕಲೆ ಬಹುಮುಖ್ಯವಾಗುತ್ತದೆ. ಯಾವುದೇ ರಸವೂ ಅದು ಸ್ಪಷ್ಟವಾಗಿ ಗ್ರಹಿಕೆಗೆ ಬರುವುದು ಅಲ್ಲಿನ ಪರಿಸರದ ಆಧಾರದ ಮೇಲೆ. ಇಲ್ಲಿ ಕತ್ತಲಾಗಿದೆ, ಪೆಂಡವಾಸದ ಮನೆಯ ಮುಂದೆ ಹೋಗುತ್ತಿದ್ದಾನೆ, ಮಬ್ಬು ಗತ್ತಲು, ಬಾಗಿಲ ಮುಂದೆ ಜಗುಲಿಗಳ ಮೇಲೆ ಕುಳಿತಿರುವವರು, ಅಲ್ಲಿನ ಬಣ್ಣ ಕಪ್ಪು ಮಿಶ್ರಣ ಹಸಿರು. ಹೀಗೆ ಒಂದು ಸಂದರ್ಭದ ಬಹುಮುಖ್ಯ ಅಂಶಗಳೇ ಗಮನ ಸೆಳೆದು ಬಿಡುತ್ತದೆ.”

Read More

ಧಾರವಾಡದ ದಿನಗಳ ನೆನೆಯುತ್ತಾ…: ಲಕ್ಷ್ಮಣ ವಿ.ಎ. ಅಂಕಣ

“ಎಲೆಯುದುರುವ ಕಾಲವಿದು. ರಾತ್ರಿ ಮೈಯ್ಯೆಲ್ಲ ಥರಗುಟ್ಟುವ ಚಳಿ. ಕಾಲಿಗೆ ಬರುವ ಹೊದಿಕೆ ತಲೆಗೆ ಬರುತ್ತಿರಲಿಲ್ಲ ತಲೆಗೆ ಬಂದದ್ದು ಕಾಲಿಗೆ ಬರುತ್ತಿರಲಿಲ್ಲ. ಅಷ್ಟೇ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ವಿಶೇಷವಾಗಿ ಚಳಿಗಾಲದಲ್ಲಿ ಹೀಗಾಗಿ ತಾಯ ಗರ್ಭದಲ್ಲಿ ಮಗು ಮಲಗಿರುತ್ತದಲ್ಲ ಎರಡು ಕಾಲು ಮಡಚಿ ತಲೆ ತಗ್ಗಿಸಿ ಅರ್ಧ ಬಿಲ್ಲಿನಾಕಾರಾದಲ್ಲಿ ಹಾಗೆ ಮಲಗುತ್ತಿದ್ದೆ, ಧಾರವಾಡದ ಸಪ್ತಾಪೂರದ ಮಿಚಿಗನ್ ಕಂಪೌಂಡಿನ ಸಿಂಗಲ್ ಔಟ್ ಹೌಸ್ ರೂಮಿನಲ್ಲಿ…”

Read More

ಬಡತನದ ಘನತೆ ಮತ್ತು ದಯೆ ಧರ್ಮದ ಮೂಲ:ಶ್ರೀಹರ್ಷ ಸಾಲಿಮಠ ಅಂಕಣ

“ಬಡತನ ಎನ್ನುವುದೊಂದೇ ದೊಡ್ಡ ಅಡ್ಡಗಾಲಲ್ಲ. ಅತಿ ದೊಡ್ಡ ತೊಡರುಗಾಲಿರುವುದು ಮನುಷ್ಯನ ಘನತೆಯದ್ದು! ಇಂಡಿಯಾದಂತಹ ದೇಶಗಳಲ್ಲಿ ಆರ್ಥಿಕವಾಗಿ ಒಂದೇ ದಾರ್ಢ್ಯವಿದ್ದರೂ ಸಾಮಾಜಿಕವಾಗಿ ಅಂತಸ್ತು ಬೇರೆ. ಅವು ವೃತ್ತಿಯಾಧಾರಿತವಾಗಿರಬಹುದು, ಜಾತಿಯಾಧಾರಿತವಾಗಿರಬಹುದು, ಧರ್ಮಾಧಾರಿತವಾಗಿರಬಹುದು…. ಆಸ್ಟ್ರೇಲಿಯದಂತಹ ದೇಶಗಳಲ್ಲಿ ಆರ್ಥಿಕವಾಗಿ ಮೇಲು ಕೆಳಗುಗಳಿದ್ದರೂ ಸಾಮಾಜಿಕ ಅಂತಸ್ತು ಒಂದೇ…”

Read More

ಶ್ರೀಸಾಮಾನ್ಯರ ಹಸಿರು ಕ್ರಾಂತಿ ಕಥೆಗಳು: ವಿನತೆ ಶರ್ಮಾ ಅಂಕಣ

“ಆಕೆಯ ಮನೆಯಂಗಳದ ಕೈತೋಟದಲ್ಲಿದ್ದ ಗಿಡಮರಗಳು, ಸುಮಾರು ಹದಿನೈದು ಗೊಬ್ಬರ ಡಬ್ಬಗಳು, ಬಕೆಟ್ಟುಗಳು, ಮೂರು ಗೊಬ್ಬರ ಹುಳುಗಳ ಕೇಂದ್ರಗಳು, ಒಂದು ದೊಡ್ಡ ಇಡೀ ಬಾತ್ ಟಬ್ಬನ್ನು ಗೊಬ್ಬರ ಹುಳು ಸಾಕಾಣಿಕೆ ಕೇಂದ್ರವನ್ನಾಗಿರಿಸಿದ ಪ್ರಯತ್ನ, ಮೂಲೆಯಲ್ಲಿದ್ದ ಕೋಳಿಸಾಕಾಣಿಕೆ ಕೇಂದ್ರ ಎಲ್ಲವನ್ನೂ ನೋಡಿ ಅಬ್ಬಾಬ್ಬಾ ಎಂದೆ. ನನ್ನನ್ನು ಬೆರಗಾಗಿಸಿದ ವಿಷಯವೆಂದರೆ ಆಕೆಯ ಈ ಎಲ್ಲಾ ಪ್ರಯತ್ನಗಳಲ್ಲಿ ತೊಂಭತ್ತು ಭಾಗಕ್ಕೆ ಯಾವುದೇ ಹಣ ಹೂಡಿಕೆಯಿಲ್ಲದಿದ್ದದ್ದು….”

Read More

ಸಾಮಾನ್ಯಮೇ ಬಗೆಯೆ ಭವತ್ ಕೇಶಪಾಶ ಪ್ರಪಂಚಂ: ಆರ್. ದಿಲೀಪ್ ಕುಮಾರ್ ಅಂಕಣ

“ಹೀಗೆ ಮಾಡಿದ ಪ್ರತಿಜ್ಞೆಯನ್ನ ಕೊನೆಗಾಣಿಸಿ ಯುದ್ಧರಂಗದಲ್ಲಿ ಅವನಾಡುವ ಮಾತು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ದುಶ್ಯಾಸನನನ್ನು ಕೊಂದು ಅವಳ ಮುಡಿಯನ್ನು ಕಟ್ಟುವುದು, ಕಟ್ಟಿ ನೋಡಿ ನಗುವುದು ಇಲ್ಲಿನ ಬಹು ಮುಖ್ಯವಾದ ಭಾಗ. ಆ ಪದ್ಯವಂತೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹು ಚರ್ಚಿತವಾಗಿದೆ. ಪಂಪನೇ ದ್ರೌಪತಿಯನ್ನು ಕಾರ್ಯ ಕಾರಣದ ಮೂಲ ಅಂಶವಾಗಿ ನಿಲ್ಲಿಸಿ ನೋಡಿರುವುದಕ್ಕೆ ಈ ಪದ್ಯ ಸಾಕ್ಷಿಯಾಗಿದೆ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ