Advertisement

Category: ದಿನದ ಪುಸ್ತಕ

ಆನಂದದ ಹುಡುಕಾಟದಲ್ಲಿ…: ಡಾ. ಎ.ಎನ್. ನಾಗರಾಜ್ ಅನುಭವ ಕಥನ

ಗಾಂಧೀಜಿಯವರು ದೂರದಲ್ಲಿದ್ದುಕೊಂಡು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು, ಅವರಲ್ಲಿ ಪ್ರೀತಿಯನ್ನು ಉಕ್ಕಿಸಿಬಿಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ತಾಯಿಯ ಮೇಲೆ ಅವರು ಪ್ರಭಾವ ಬೀರಿದ್ದು ಹೀಗೆ. ಗಾಂಧೀಜಿ ಮೈಸೂರಿಗೆ ನಾನು 2 ಅಥವಾ 3 ವರ್ಷದವನಾಗಿದ್ದಾಗ ಬಂದಿದ್ದರಂತೆ. ನಾವೆಲ್ಲ ಅವರನ್ನು ನೋಡುವುದಕ್ಕೆ ಹೋಗಿದ್ದೆವಂತೆ. ಗಾಂಧೀಜಿಯವರು ಎಲ್ಲರಿಂದಲೂ ಹಣ ಸಹಾಯ ಕೋರಿದರಂತೆ. ಏನೂ ಓದಿಲ್ಲದ ಮುಗ್ಧ ಜಯಮ್ಮ ಅವರಿಗೆ ತಕ್ಷಣ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ತೆಗೆದು ಕೊಟ್ಟಳಂತೆ.
ಡಾ. ಎ.ಎನ್. ನಾಗರಾಜ್ ಅನುಭವ ಕಥನ “ಆನಂದದ ಹುಡುಕಾಟದಲ್ಲಿ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಧರೆಗೆ ಮೆರುಗು ತಂದು ನಕ್ಷತ್ರಗಳಾದವರು

ಶಾರ್ಟ್‌ ಹ್ಯಾಂಡ್ ಬರಹದಲ್ಲಿ ವಿಸ್ತಾರ ಸ್ವರೂಪವನ್ನು ಹೇಗೆ ಸಂಕೇತರೂಪದಲ್ಲಿ ಚಿಕ್ಕದಾಗಿ ದಾಖಲಿಸಿಕೊಳ್ಳುತ್ತಾರೋ ಹಾಗೆಯೇ ಇಲ್ಲಿ ವೀರೇಶರು ನಿಜ ಸಾಧಕರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಓದುಗರಿಗೆ ಬೇಸರವಾಗದಿರಲೆಂದು ಪ್ರಾಸ ಬಳಕೆಗೆ ಒತ್ತು ನೀಡಿರುವ ವೀರೇಶರು ತಮ್ಮ ಕವನಗಳನ್ನು ಶಾಲಾ ಮಕ್ಕಳೂ ಸಂತಸದಿಂದ ಕಲಿತು ಹಾಡಲು ಅನುಕೂಲವಾಗುವಂತಾಗಿಸಿರುವುದು ಅವರ ಹೆಗ್ಗಳಿಕೆ.
ವೀರೇಶ ಬ. ಕುರಿ ಸೋಂಪೂರ ಬರೆದ ‘ಧರೆಗೆ ಮೆರುಗು ತಂದವರು’ ಕವನ ಸಂಕಲನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ

Read More

ನೆನಪುಗಳಿಗೆ ಜೀವ ತುಂಬುವ ಬರಹ: ಸ್ಮಿತಾ ಅಮೃತರಾಜ್ ಬರಹ

ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು.
ನಾಗರೇಖಾ ಗಾಂವಕರ ಬರೆದ ಬಾಲ್ಯದ ಅನುಭವಗಳ ಕುರಿತ ಬರಹಗಳ “ಬಣ್ಣದ ಕೊಡೆ” ಕೃತಿಯ ಕುರಿತು ಸ್ಮಿತಾ ಅಮೃತರಾಜ್ ಸಂಪಾಜೆ ಬರಹ

Read More

“ತಾಳೆಗರಿ” ಮತ್ತು ಆರದ ಗಾಯಗಳು…

ಯಾವ ಆಸೆಯಿಂದ ಅವರು ನನ್ ಆಗಿದ್ದರೋ ಅದು ಈಡೇರುವ ಯಾವ ಸೂಚನೆಯೂ ಅವರಿಗೆ ಕಾಣುವುದಿಲ್ಲ. ಒಂದು ಸಾರಿ ಕೀಳು ಜಾತಿಯಲ್ಲಿ ಹುಟ್ಟಿದ್ರೆ ಅವರು ಸಾಯೋವರೆಗೂ ಅಲ್ಲೇ ಇರಬೇಕು. ಅದರ ನೋವು ಅವಮಾನ ಅನುಭವಿಸಲೇಬೇಕು. ನಮ್ಮವರು ನಿದ್ದೆಯಿಂದ ಎದ್ದು ಬರಬೇಕಾಗಿದೆ. ಈ ಗುಲಾಮಗಿರಿಯನ್ನು ಸಹಿಸಿಕೊಳ್ಳಬಾರದು, ಬದಲಾವಣೆಗಾಗಿ ನಾವೇ ಎದ್ದು ನಿಲ್ಲಬೇಕಾಗಿದೆ, ಜಾತಿ ಹೆಸರಿನಿಂದ ತಲೆಮಾರಿನಿಂದ ನಮ್ಮನ್ನು ತುಳಿಯುತ್ತಲೇ ಬಂದವರ ವಿರುದ್ಧ ಧ್ವನಿ ಎತ್ತುವ ಕೆಲಸ ಭಾಮಾ ಅವರು ಮಾಡುತ್ತಾರೆ.
ಡಾ. ಎಚ್‌.ಎಸ್.‌ ಅನುಪಮಾ ಅನುವಾದಿಸಿದ ತಮಿಳಿನ ಬಾಮಾ ಅವರ ಆತ್ಮಕತೆ “ಬಾಮಾ ತಾಳೆಗರಿ”ಯ ಕುರಿತು ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ ಬರಹ

Read More

ಹೂದೋಟದ ಹೂಗಳಂಥಾ “ಸಂಗಮ”

‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ.
ರಾಜಲಕ್ಷ್ಮಿ ಎನ್.‌ ರಾವ್‌ ಅವರ “ಸಂಗಮ” ಕಥಾಸಂಕಲನದ ಕುರಿತು ಸಂಜೋತಾ ಪುರೋಹಿತ್‌ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ