Advertisement

Category: ಸಂಪಿಗೆ ಸ್ಪೆಷಲ್

ಆಂಗ್ರೀ ಯೆಂಗ್ ಮ್ಯಾನ್ ಜಿಕೆಜಿ

ಜಿ.ಕೆ. ಗೋವಿಂದ ರಾವ್ ಅವರು ಅಪ್ಪಟ ನಾಗರಿಕ ಬದುಕಿಗೆ ಶ್ರೇಷ್ಠ ಮಾದರಿಯಾಗಿದ್ದರು. ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳ ಪ್ರಖರ ಪ್ರತಿಪಾದಕರಾಗಿದ್ದರು. ಆಡಂಬರದ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡು ಪ್ರಚಾರ ಗಳಿಸುವ ಮಠಮಾನ್ಯಗಳನ್ನು ನಿರ್ಭಿಡೆಯಿಂದ ಖಂಡಿಸುವಾಗ ಕೋಪಾವಿಷ್ಟ ವಿಶ್ವಾಮಿತ್ರನಂತಾಗುತ್ತಿದ್ದರು. ಅವರಿಗೆ ದೈವಗಳಲ್ಲಿ, ಅವತಾರಗಳಲ್ಲಿ ಯಾವ ನಂಬಿಕೆಯೂ ಇರಲಿಲ್ಲ; ಮತ್ಸ್ಯಾವತಾರ ಒಂದನ್ನು ಬಿಟ್ಟು!  -ಜಿ.ಕೆ. ಗೋವಿಂದ ರಾವ್  ನೆನಪುಗಳನ್ನು ಹಂಚಿಕೊಂಡಿದ್ದಾರೆ ಅಗ್ರಹಾರ ಕೃಷ್ಣ ಮೂರ್ತಿ

Read More

ಪ್ರೇಕ್ಷಕರ ಜೊತೆಗಿನ ಸಂಬಂಧಗಳ ಮಹತ್ವ ಅರಿಯೋಣ

ಒಂದು ಬದಲಾವಣೆ ರಂಗಭೂಮಿಯಲ್ಲಿ ಬರಬೇಕು ಎಂದು ಆಗ್ರಹಿಸುವಾಗ ನಾವು ಆಯ್ಕೆ ಮಾಡಿಕೊಳ್ಳುವ ನಾಟಕಗಳ ಕಥಾವಸ್ತು ಯಾವುದು ಮತ್ತು ಅದು ಹೇಗಿರಬೇಕು ಅನ್ನೋದು ಮುಖ್ಯ ಆಗುತ್ತದೆ. ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ನಾವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇವೋ, ಅದು ಪ್ರೇಕ್ಷಕರಿಗೆ ಅರ್ಥ ಆಗಬೇಕಾಗಿದೆ. ಸಾಮಾನ್ಯವಾಗಿ ನಾವು ಮಾಡುವ ಎಲ್ಲಾ ನಾಟಕಗಳು ಪ್ರೇಕ್ಷಕರಿಗೆ ಅರ್ಥ ಆಗುವುದಿಲ್ಲ.
’ರಂಗಭೂಮಿಯಲ್ಲಿ ಮರುಚಿಂತನೆ’ ಕುರಿತು ಗೌರಿ ಅದಮ್ಯ ಬರೆದ ಅನಿಸಿಕೆ ಇಲ್ಲಿದೆ:

Read More

ಇಡಿಂದಕರೈ ಅಹಿಂಸಾ ಸತ್ಯಾಗ್ರಹಕ್ಕೆ ಹತ್ತು ವರ್ಷ

ತಮಿಳುನಾಡಿನ ರಾಧಾಪುರಂ ಜಿಲ್ಲೆಯ ಇಡಿಂದಕರೈ ಹಳ್ಳಿ ಕಡಲದಂಡೆಯ ಮೇಲಿರುವ, ಬೀಸುಗಾಳಿಗೆ ಮೈ ಒಡ್ಡಿಕೊಂಡ ಸುಂದರ ಊರು. ಕೂಡಂಕುಳಂ ಹಳ್ಳಿಯ ಪಕ್ಕದ ಹಳ್ಳಿ ಇಡಿಂದಕರೈ ಎಂದರೆ ಬೇಗನೇ ನೆನಪಿಗೆ ಬರಬಹುದು. ಮೀನುಗಾರರೇ ಹೆಚ್ಚಾಗಿರುವ ಇಡಿಂದಕರೈ ಊರಿನಲ್ಲಿ, ಅಣುಸ್ಥಾವರವನ್ನು ವಿರೋಧಿಸಿ ಅತೀ ದೀರ್ಘವಾದ ಉಪವಾದ ಸತ್ಯಾಗ್ರಹ ನಡೆದಿತ್ತು. ಆ ಅಹಿಂಸಾ ಸತ್ಯಾಗ್ರಹಕ್ಕೆ ಈಗ ಹತ್ತು ವರ್ಷಗಳು ತುಂಬಿವೆ.
ಹೋರಾಟದ ಹಾದಿಯ ನೆನಪುಗಳನ್ನು ಹೆಕ್ಕಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ರಂಗಭೂಮಿ ನಮಗೆ ಅನಿವಾರ್ಯ ಎಂಬ ವಿನಯಶೀಲತೆ

ಪ್ರೇಕ್ಷಕನಿಗಾಗಿಯೇ ನಾಟಕ ಎನ್ನುವುದು ಸತ್ಯ. ಆದರೇ ಅವರು ಬಯಸಿದ್ದನ್ನ ಅವರು ಬಯಸಿದ೦ತೆಯೇ ನೀಡುವುದು ನಾಟಕವಲ್ಲಾ.. ಅವರ ಅರಿವಿಗೆ ಇದು ನಮಗಾಗೇ, ನಮಗೆ ಬೇಕಾದದ್ದನ್ನೇ ಆಡುತ್ತಿದ್ದಾರೆ ಅನ್ನುವ ಭ್ರಮೆಯನ್ನ ಹುಟ್ಟಿಸುತ್ತಾ ರ೦ಗಭೂಮಿಯ ಶಿಸ್ತು, ಬದ್ಧತೆ, ಸಿದ್ಧಾ೦ತವನ್ನ ಅವರಿಗೆ ತಲುಪಿಸುವ ಪರಿಯನ್ನ ನಾಟಕಕಾರ, ನಟ, ತ೦ಡ ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.
‘ರಂಗಭೂಮಿ’ಯಲ್ಲಿ ಮರುಚಿಂತನೆ ಕುರಿತು ಬಾಬು ಹಿರಣ್ಣಯ್ಯ ಬರಹ

Read More

ಛತ್ರಪತಿ ಶಿವಾಜಿ ಮಹಾರಾಜನ ಮಗನು ಆಡುವಳ್ಳಿಗೆ ಓಡಿಬಂದ ಕತೆ!

‘ಆಡುವಳ್ಳಿಯ ಇತಿಹಾಸದ ಬಗ್ಗೆ ನನಗೆ ಕುತೂಹಲಕಾರಿಯಾದ ಸುಳಿವು ಆಕಸ್ಮಿಕವಾಗಿ ಸಿಕ್ಕಿದ್ದು ಮರಾಠರ ಇತಿಹಾಸ ಓದುವಾಗ! ಐವತ್ತು ವರ್ಷ ಹಿಂದಿನ ಇಂಗ್ಲಿಷ್ ಲೇಖನವೊಂದರಲ್ಲಿ ಶಿವಾಜಿಯ ಮಗ ರಾಜಾರಾಮನು ಮೊಘಲರಿಂದ ತಪ್ಪಿಸಿಕೊಂಡು, ಆಡುವಳ್ಳಿ ಮಾರ್ಗವಾಗಿ ಹೋಗಿದ್ದನಂತೆ ಎಂಬ ಒಂದು ಸಾಲಿನ ಮಾಹಿತಿ ಸಿಕ್ಕಿತು. ಅರೆ! ಛತ್ರಪತಿಗೂ ಆಡುವಳ್ಳಿಗೂ ಎತ್ತಣಿಂದೆತ್ತ ಸಂಬಂಧ? ಅದರ ಬೆನ್ನತ್ತಿ ಹೋದಾಗ ಸಿಕ್ಕ ಕನ್ನಡ ಕಾವ್ಯದ ಕುರಿತು ಹೇಳುವ ಮುನ್ನ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು’ ಎನ್ನುತ್ತಾರೆ ಪ್ರಸನ್ನ ಆಡುವಳ್ಳಿ. ತನ್ನೂರಿನ ಇತಿಹಾಸ ಕೆದಕುತ್ತ ಸಾಗಿದ ಅವರ ಅನುಭವ ಲೇಖನ ಇಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ