Advertisement

Category: ಸಂಪಿಗೆ ಸ್ಪೆಷಲ್

ರಂಗೋಲಿ ಕಲಿಸಿ ಬಲಿಪಾಡ್ಯಮಿಗೆ ಹೊರಟ ಅಜ್ಜಿ

“ಪ್ರಯಾಸದಲ್ಲಿಯೇ ಏರು ದಾರಿಯನ್ನು ಏರಿ ಹೋಗುತ್ತಿರಬೇಕಾದರೆ ಅಜ್ಜಿ ಅರ್ಧಕ್ಕೆ ಸಿಕ್ಕೇ ಬಿಟ್ಟರು. “ಪೋಲಿಸರ ಕೈಗೆ ಕಳ್ಳ ಸಿಕ್ಕಂತಾಯಿತು ನನ್ನ ಪರಿಸ್ಥಿತಿ!”. “ನಾನು ಬರೋವರೆಗೂ ಕಾಯೋದಕ್ಕೇನಾಗಿತ್ತು?” ಎನ್ನುತ್ತಾ ಜೋರಾಗಿ ಕಿರುಚಲು ಪ್ರಾರಂಭ ಮಾಡಿದಳು. ನನಗೆ ಮಾತನಾಡಲು ಅವಕಾಶವೇ ಕೊಡಲಿಲ್ಲ. ಮೊದಲೆ ಅದು ರಸ್ತೆ! ಹೋಗೋರು ಬರೋರು ಎಲ್ಲ ನಮ್ಮನ್ನೆ ನೋಡೋರು ಅದಕ್ಕೆಲ್ಲಾ ಹೆದರುವ ಜಾಯಮಾನ ಆಕೆಯದ್ದಾಗಿರಲಿಲ್ಲ ಬಿಡಿ!”
ಸುಮಾವೀಣಾ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಬಿಸಿಲ ನಾಡಿನಲ್ಲಿ ಹೆಕ್ಕಿದ ಕಾವ್ಯಸಾಲುಗಳು

“ವೈಶಾಖ ಮಾಸದ ಬೇಸಿಗೆಯ ಬಿರುಬಿಸಿಲಿನ ತಾಪಕ್ಕೆ ನೆಲ ಕಾದು ಕೆಂಪಾಗಿ, ಉತ್ತು ಬಿಟ್ಟಿದ್ದ ಹೊಲ ಗದ್ದೆಗಳ ಮಣ್ಣು ಧೂಳು ಧೂಳಾಗಿರುವಾಗ ಆಕಾಶದಲ್ಲಿ ಮೋಡ ಮಂದಯಿಸಿ ಕಪ್ಪು ಕಪ್ಪಾಗಿದೆ…. ಆಗ ತಂಗಾಳಿಯ ತೆರೆಯೊಂದು ದೂರದಿಂದ ಬಂದು ಬಡಿದಾಗ ನೆಲದೊಡಲಿಂದ ಕಂಪೊಂದು ಹೊಮ್ಮಿ ಬರುವುದರ ಜೊತೆಗೆ ಕವಿಯ ಮನಸೂ ಅರಳುತ್ತದೆ. ಈ ಕಾರಣವನ್ನು ಕೆಲವರು `ಕಾವ್ಯ ಎನ್ನುವುದು ಕವಿಯ ಕರ್ಮ’…”

Read More

ದೂರ ಅನ್ನುವ ಹತ್ತಿರ ಭಾವವಿದು…

ದೂರ ಎನ್ನುವ ಪದ ಕೆಲವರಿಗೆ ತುಂಬಾ ದೂರ, ಕೆಲವರ ಹೃದಯಕ್ಕೆ ತೀರಾ ಹತ್ತಿರ. ‘ದೂರ’ ಪದ ಕೇಳಿದಾಗಲೆಲ್ಲ ನಿಮಗೆ ಯಾವ ಭಾವ ಮೂಡುತ್ತದೋ ನಂಗೆ ಗೊತ್ತಿಲ್ಲ. ಆದರೆ ದೂರ ಎನ್ನುವುದು ನಿಮಗೆ ಹತ್ತಿರದಲ್ಲಿ ಕಾಣಿಸದಿದ್ದದ್ದನ್ನು ಕಾಣಿಸುವ ಬೈನಾಕ್ಯುಲರ್‌ನಂತೆ. ಹತ್ತಿರ ಇರುವಾಗ ಕಾಣಿಸದ್ದು ದೂರದಲ್ಲಿ ಬೇರೊಂದು ರೀತಿಯಲ್ಲೇ ಕಾಣಿಸುತ್ತದೆ. ನಂಗ್ಯಾಕೋ ದೂರ ಅನ್ನುವ ಪದ ತೀರಾ ಕಾಡುತ್ತಿರುವುದು ಆ ಒಂದು ಪದ ನನ್ನಲ್ಲಿ ಕುತೂಹಲ…”

Read More

ಅಮ್ಮ ಒಬ್ಬಳೇ ಕುಳಿತು ನೋಡುವ ಪತ್ತನಾಜೆಯ ಕಾಲ

ದೀಪಾವಳಿ ಸಂದರ್ಭದಲ್ಲಿ ತಿರುಗಾಟ ಆರಂಭಿಸುವ ಕರಾವಳಿಯ ಯಕ್ಷಗಾನ ಮೇಳಗಳು ವೃಷಭ ಮಾಸದ ಹನ್ನೊಂದನೇ ದಿನದಂದು ಅಂದರೆ ಮೇ ತಿಂಗಳಂತ್ಯದಲ್ಲಿ ಪ್ರದರ್ಶನ ಮುಕ್ತಾಯಗೊಳಿಸುತ್ತವೆ. ದೇವಸ್ಥಾನಗಳ ಆಶ್ರಯದಲ್ಲಿ ನಡೆಯುವ ಮೇಳಗಳ ಸಮಾರೋಪವು ಒಂದು ಪುಟ್ಟ ಜಾತ್ರೆಯಂತೆ ವೈಭವಯುತವಾಗಿ ಇರುತ್ತಿತ್ತು. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಆಚರಣೆಗಳಿಗೆ ಅವಕಾಶವಿಲ್ಲ. ಸಾಂಕೇತಿಕ ಆಚರಣೆಯ ಕುರಿತು…”

Read More

ಒಂದು ನೆಲನೆಲ್ಲಿಯ ಕತೆ

“ಸಂಸ್ಕರಿಸಿ ಪೊಟ್ಟಣವಾಗಿಸಿದ ಆಹಾರದಲ್ಲಿ ಒಪ್ಪಿತ ಮಟ್ಟದಲ್ಲಿ ಪ್ರಿಸರ್ವೇಟಿವ್, ಎಸ್ಸೆನ್ಸ್ ಅಥವಾ ರಾಸಾಯನಿಕ ಬಣ್ಣ ಇರುತ್ತದೆ. ಒಟ್ಟಿನಲ್ಲಿ ಹತ್ತಾರು ವಿಧಗಳಲ್ಲಿ ಇವುಗಳೆಲ್ಲ ನಮ್ಮ ದೇಹವನ್ನು ಸೇರಿ ಘಾಸಿ ಮಾಡುತ್ತವೆ ಎಂಬ ಅಧ್ಯಯನಗಳನ್ನು ಓದುತ್ತ ನಾವು ಜಾಗೃತರಾಗಬೇಕು ಎಂದುಕೊಳ್ಳುತ್ತೇವೆ. ಸಾವಯವ ಬದುಕನ್ನು ಬಾಳಬೇಕು ಎಂದುಕೊಳ್ಳುತ್ತೇವೆ. ಆದರೆ ಮತ್ತೊಂದೆಡೆ ಬಹಳ ಸೌಜನ್ಯ ಮತ್ತು ಸಭ್ಯತೆಯಿಂದಲೇ ನಾವು ಗಿಡಗಳ ಮೇಲೆ ದಾಳಿ ಮಾಡುತ್ತೇವೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ