Advertisement

Category: ಸರಣಿ

ಯಾವುದು ಕನಸು? ಯಾವುದು ನನಸು?

ಸೋನ್ಯಾಳನ್ನು ಅವಳ ದಿಗ್ಭ್ರಾಂತಿ, ಅಸ್ಪಷ್ಟ ಭಯಗಳಲ್ಲಿ, ಅಪಶಕುನದ ಹೆದರಿಕೆಗಳಲ್ಲಿ ಹಾಗೇ ಬಿಟ್ಟು ಅವನು ಹೊರಟು ಹೋದ. ಅವನು ಇನ್ನೊಂದು ವಿಚಿತ್ರವಾದ, ಅನಿರೀಕ್ಷಿತವಾದ ಭೇಟಿ ನೀಡಿದ್ದ ಅನ್ನುವುದು ಆನಂತರ ತಿಳಿಯಿತು. ಹನ್ನೊಂದು ಗಂಟೆಯ ನಂತರ ತಿಳಿಯಿತು. ಮಳೆ ಇನ್ನೂ ನಿಂತಿರಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಮುಸುಕಿನ ಮರೆಯ ಪಾಡು

ನಾವು ಹುಟ್ಟಿ ಬೆಳೆದಿದ್ದ ಊರಲ್ಲಿ ಚಿಕ್ಕಪ್ಪ ಎಂಬುವವನೊಬ್ಬ ಇದ್ದ. ರಭಸವಾದ ಕುಡುಕ. ಎಣ್ಣೆ ಕೊಡಿಸಿದರೆ ಎಲ್ಲಾ ನ್ಯಾಯವನ್ನು ತಲೆಕೆಳಗೆ ಮಾಡುತ್ತಿದ್ದ. ಆ ಮನೆಯಲ್ಲಿ ನನ್ನ ತಮ್ಮನಿಗೂ ನನಗೂ ಭಾಗ ಬರಬೇಕಿತ್ತು. ನಾನದರತ್ತ ತಿರುಗಿಯೂ ನೋಡಿರಲಿಲ್ಲ. ತಮ್ಮ ಬೆಂಗಳೂರು ಸೇರಿ ಅಲ್ಲೇ ಸಂಸಾರ ಹೂಡಿ ಒಂದು ಪುಟ್ಟ ಮನೆಯನ್ನು ಮಾಡಿಕೊಂಡಿದ್ದ. ಅವನಿಗೂ ಅಂತಹ ಆಸಕ್ತಿ ಇರಲಿಲ್ಲ. ಆದರೆ ನನ್ನಕ್ಕ ಬಿಟ್ಟಿರಲಿಲ್ಲ. ನಾವು ಭಾಗ ಕೊಡುವುದಿಲ್ಲ ಎಂದು ಅವನ ಮಗ ಹಾಗೂ ಹೆಂಡತಿ ಎಗರಾಡುತ್ತಿದ್ದರು.
ಮೊಗಳ್ಳಿ ಗಣೇಶ್‌ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂರನೆಯ ಕಂತು

Read More

ವಿಪರೀತ ನಡೆಯ ಅಜ್ಜ ಬಲಿಪರೂ, ಅವರ ವಿಪರೀತ ಪ್ರೀತಿಯೂ

ಅಜ್ಜ ಬಲಿಪರು ಸ್ವಲ್ಪ ವಿಕ್ಷಿಪ್ತ ಸ್ವಭಾವದವರೂ ಹೌದು. ನಾಲ್ಕಾರು ದಿನಗಳ ಕಾಲು ಉಪವಾಸ ಇರಬಲ್ಲರು, ನಾಲ್ಕಾರು ದಿನದ ಭೋಜನವನ್ನು ಒಮ್ಮೆಗೇ ಮಾಡಬಲ್ಲರು. ಬಡತನ, ತಿರುಗಾಟದ ಬದುಕು ಅವರದ್ದಾಗಿತ್ತು. ಹಾಗಾಗಿ ಜೀವನ ಕ್ರಮದಲ್ಲಿಯೂ ಈ ರೀತಿಯ ವ್ಯತ್ಯಾಸಗಳಿದ್ದವು. ಅದರಿಂದ ಅವರ ಆರೋಗ್ಯವೂ ಏರುಪೇರಾದುದುಂಟು. ಆದರೆ ಅವರಿಗೆ ಮೊಮ್ಮಗನ ಕಂಠ ಶಕ್ತಿಯ ಮೇಲೆ…

Read More

ಐಬಿಲ್ಲದ ಕೊಲೆಯ ಜಾಡು ಹಿಡಿದಾಗ ಕಂಡ ವಿಸ್ಮಯಗಳು

ಐಬಿಲ್ಲದ ಕೊಲೆ ಎಂದು ಶೀರ್ಷಿಕೆ ಕೊಟ್ಟು ಬರಹವನ್ನು ಮುಗಿಸಿದರೂ, ಅದು ನಿಜಕ್ಕೂ ಹಾಗಿರಲಿಲ್ಲ ಎಂಬುದು ನನಗೆ ಬಳಿಕ ತಿಳಿಯಿತು. ಮರಳುಗಾಡಿನಲ್ಲಿ ನಡೆದ ಕೊಲೆಯ ಪೂರ್ವಾಪರಗಳು ಎಷ್ಟೋಕಾಲದ ಬಳಿಕ ಅನಾವರಣಗೊಂಡಿದ್ದವು. ಅದು ಮೊಬೈಲು, ಕಂಪ್ಯೂಟರು ಇಲ್ಲದ ಕಾಲವಾದ್ದರಿಂದ ಪತ್ತೆದಾರಿಕೆಯು ನಿಧಾನವಾಗಿತ್ತು. ಕೊಲೆಯ ಹಿಂದಿರುವ ಕಾರಣವನ್ನು ಹುಡುಕಬೇಕಾದರೆ ಸಾಕ್ಷ್ಯಗಳು ಅಗತ್ಯವಾಗಿರುತ್ತವೆ.

Read More

ಕಾಳಪ್ಪಬ್ಲಾಕಿನಲ್ಲಿ ಟೆಸ್ಟ್ ಕ್ರಿಕೆಟಿಗರು!

ಈ ಕ್ರಿಕೆಟ್ ಹುಚ್ಚು ಬರೆ ಹುಡುಗರಿಗಲ್ಲ, ಹುಡುಗಿಯರಿಗೂ ಇದ್ದಿತು. ನಮ್ಮ ಮನೆಯಲ್ಲೂ ರಾಮೇಶ್ವರಿ, ಎದಿರು ಮನೆಯ ಸ್ವರ್ಣ, ವಿಜಯ, ಪುಷ್ಪರಿಗೂ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇದ್ದು ಅವರೂ ಕ್ರಿಕೆಟ್ ನೋಡಲು ಹೋಗುತ್ತಿದ್ದರು. 1953 ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರಿಕೆಟ್‌ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯಿತು. ಅದರ ಹೆಸರು ರೋಹಿಂಗಟನ್ ಬೇರಿಯಾ ಟ್ರೋಫಿ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ