Advertisement

Category: ಸಾಹಿತ್ಯ

ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ

ಬೆಣ್ಣೆಯಲ್ಲಿ ಕೂದಲು ತೆಗೆದಂತೆ, ವಿನಯವೇ ಮೂರ್ತಿವೆತ್ತಂತೆ ಗಿಳಿ ಮಾತಾಡುವ ಜಿನೇಶನಲ್ಲಿ ಇಂಥ ರಾಕ್ಷಸನಿರುವ ಸಾಧ್ಯತೆ, ಈ ಆರದ ಗಾಯದ ಸಾಕ್ಷಿ ಇರದಿದ್ದರೆ ನಂಬಲು ಸಾಧ್ಯವಾಗುತ್ತಿರಲಿಲ್ಲ. ಅವಳ ಬಾಳು ಕನಸಲ್ಲಿ ನಡೆದಂತೆ ಸುಸೂತ್ರವಾಗಿ ಸೌಖ್ಯದಿಂದಿದೆ ಎಂದು ಭಾವಿಸಿದ್ದರೆ ಅದೆಷ್ಟು ನೋವುಗಳನ್ನು ಒಡಲಲ್ಲಿಟ್ಟು ಬೇಯುತ್ತಿದ್ದಾಳೆ ಎನಿಸಿ ಸುಮಾಳ ಹೊಟ್ಟೆಗೆ ಬೆಂಕಿ ಬಿದ್ದು, ಕಣ್ಣಲ್ಲಿ ನೀರು ತುಂಬಿತು.
ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ “ಹಾಡು ಗುಬ್ಬಿ ಪಾಡು!”

Read More

ಸುಜಯ್‌ ಪಿ ಬರೆದ ಈ ಭಾನುವಾರದ ಕತೆ

ಭಾಗೀರಥನ ಕಾಲನ್ನು ಬಿಡಿಸಲು ಬೇಕಾಗಿ ಸಂಕದ ಎರಡು ಹಲಗೆಗಳನ್ನು ಕಡಿದು ತೆಗೆದು ಬೇರೆ ಹಲಗೆ ಹಾಕುವಷ್ಟರಲ್ಲಿ ಡೀಮಣ್ಣ ಕಡಿಮೆಂದರೂ ಹತ್ತರ ಮೇಲೆ ಬೀಡಿ ಸೇದಿದ್ದರು. ಬೀಡಿ ಸೇದಿದ ಮೇಲೆ ಉಳಿಯುವ ಬೀಡಿಯ ತುದಿಯನ್ನು ಕೂಡಾ ಜಗಿದು ತಿನ್ನುವ ಅಭ್ಯಾಸವಿದ್ದ ಡೀಮಣ್ಣ ಆವತ್ತು ಪ್ರತೀ ಬೀಡಿ ಮುಗಿಯುತ್ತಲೂ ಬಂಗಾಳದ ಭಾಗೀರಥನಿಗೆ ಬಯ್ಯದೆ ಅವನನ್ನು ಈ ಊರಿಗೆ ಕರೆದುಕೊಂಡು ಬಂದ ಮಣಿಕಂಠನಿಗೆ ಬಾಯಿ ಬಂದಂತೆ ಬಯ್ಯುತ್ತಲೇ ಇದ್ದರು.

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿ.ಆರ್.ಕಾರ್ಪೆಂಟರ್ ಬರೆದ ಕತೆ

ಅಲ್ಲೇ ನಿಂತು ಇವರ ಗೋಳಾಟಗಳನ್ನು ನೋಡುತ್ತ ಲೊಚಗುಟ್ಟುತ್ತಿದ್ದ ಮಾಸಲು ಬಣ್ಣದ ಖಾಕಿ ನಿಕ್ಕರಿನ ವ್ಯಕ್ತಿಯು ‘ಗೌಡರು ಸೇಟ್‌ಕೇಕ್ ಆಟ ಆಡಕ್ಕೆ ಮೈದಾನುಕ್ಕೆ ಹೋಗೌರೆ’ ಎಂದ. ಇಷ್ಟೊತ್ತೂ ಮನೆಯ ಒಳಗಿದ್ದು, ಕನ್ನಡಕದ ಮೂಲಕ ಜಗವ ನೋಡುತ್ತಿದ್ದ ಪದವಿಧರ ವ್ಯಕ್ತಿಯು, ಅವನ ಇಂಗ್ಲಿಷಿಗೆ ಜೋರಾಗಿ ನಗುತ್ತಾ ಹೊರಬಂದು, ‘ಸೇಟ್‌ಕೇಕ್ ಆಟ ಅಲ್ಲವೋ, ಅದು ಶೆಟಲ್‌ಕಾಕ್’ ಎನ್ನಲು ಖಾರದಪುಡಿ ಮೆತ್ತಿಸಿಕೊಂಡಿದ್ದ ಸಣ್‌ರಾಮ ‘ಕುಯ್, ಕುಯ್’ ಎನ್ನುವುದಕ್ಕೂ…

Read More

ಡಾ.ಕೆ. ಷರೀಫಾ ಬರೆದ ಈ ಭಾನುವಾರದ ಕಥೆ “ಹೀಗೊಂದು ಖುಲಾಹ್”

ಇತ್ತೀಚೆಗೆ ಅವನು ಯಾಕೆ ಮಾತು ಮಾತಿಗೆ ತಲ್ಲಾಖ್ ಕೊಡುತ್ತೇನೆಂದು ಹೆದರಿಸುತ್ತಲೇ ಇರುತ್ತಿದ್ದ. ನಾನೂ ಸುಮ್ಮನೇ ಮನೆಯಲ್ಲಿ ಸುಮ್ಮನೆ ಕೂಡುತ್ತಿರಲಿಲ್ಲ. ಟೇಲರಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದೆ. ಅತ್ತೆಯವರು ಮಕ್ಕಳನ್ನು ನೋಡಿಕೊಳ್ಳತ್ತಿದ್ದರು. ಗಂಡ ಮಗಳು ಸಲ್ಮಾಗೆ ಒಳ್ಳೆಯ ಶಾಲೆಗೆ ಸೇರಿಸಿದ್ದನು. ಶೋಯೇಬ್‌ಗೆ ಇನ್ನೂ ಶಾಲೆಗೆ ಹಾಕಿರಲಿಲ್ಲ. ಮಾತು ಮಾತಿಗೆ ಹೊಡಿಬಡಿ ಮಾಡುವುದು, ಕೂಗಾಡುತ್ತಿದ್ದುದೇ ಅವಳಿಗೊಂದು ಸಮಸ್ಯೆಯಾಗಿತ್ತು.

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಸು ಬೇವಿನಗಿಡದ ಬರೆದ ಕತೆ

ಅಳುತ್ತಿದ್ದ ಅವಳನ್ನು ಡಾಕ್ಟರ್ ಒಂದೆರಡು ಗುಳಿಗೆ ನುಂಗಿಸಿ ನೀರು ಕುಡಿಸಿ ಸಮಾಧಾನಪಡಿಸಿದರು. ಕೂಡಲೆ ಆಕೆ ನಿದ್ದೆಹೋದಳು. ಆಕೆಯ ಮನಸ್ಸು ಕೃಷ್ಣನ ಕಥೆಯಿಂದ ಘಾಸಿಗೊಂಡಿದೆಯೆಂದು ಅವರಿಗೆ ತಿಳಿಯಿತು. ‘ನಾಟಕದ ಕೃಷ್ಣ ಬಂದು ನಮ್ಮಣ್ಣನ ಸಾಯಹೊಡದು ನನ್ನ ಕರ್ಕೊಂಡು ಹೋಗ್ತಾನಂತ.’ ಎಚ್ಚರಾದಾಗ ವಿಮಲವ್ವ ಹೇಳಿದ ಮಾತಿಗೆ ಡಾಕ್ಟರ್ ನಕ್ಕರು. ‘ನಿಮ್ಮಣ್ಣ ದೊಡ್ಡ ಹುಲಿ ಅದಾನು. ಇಂವ ಅಡರ್ ಅಂದ್ರ ಕೃಷ್ಣನ ಕಿರೀಟ ಅಲ್ಲೇ ಬೀಳ್ತದ ತಗೋ. ನೀಯೇನೂ ಹೆದರಬ್ಯಾಡ’.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ