Advertisement

Category: ಸಾಹಿತ್ಯ

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಬೇಲೂರು ರಘುನಂದನ್‌ ಬರೆದ ಕಥೆ

ಶರಾಬು ಪಾಕೀಟು ಸಿಗೋದು ಶೆಟ್ರು ತೋಟದಿಂದ ಬರೋಬ್ಬರಿ ಐದು ಮೈಲಿ ದೂರ. ಮಳೆ ಬೇರೆ. ನಡ್ಕಂಡು ಹೋಗಿ ಇವಳು ಶರಾಬು ಕುಡ್ದು ಏಡಿ ಹಿಡಿದು ತರೋ ಹೊತ್ಗೆ ಕತ್ತಲು ಕವಿದಿರುತ್ತೆ. ಹಂಗಾದ್ರೆ ರಾತ್ರಿ ಮಿಣಕ ಮಿಣಕ ಅನ್ನೊ ದೀಪದ ಬೆಳಕಲ್ಲಿ ಒಲೆ ಮುಂದೆ ಹೋಗೋದು ಸಾಧ್ಯವಿಲ್ಲ ಅಂತ ಎಣಿಸಿ ಶೆಟ್ರ ಹೆಂಡ್ತಿ ಬರ ಬರ ಒಳಗೋದ್ಲು. ಅಟ್ಟದ ಮೇಲಿಟ್ಟಿದ್ದ ಶೆಟ್ರ ಬಾಟ್ಲಿಲಿ ಅರ್ಧ ಇನ್ನೊಂದು ಬಾಟ್ಲಿಗೆ ಸುರ್ಕಂಡು ಅಮ್ಮಯ್ಯಂಗೆ ತಂದುಕೊಟ್ಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೇಲೂರು ರಘುನಂದನ್‌ ಬರೆದ ಕತೆ ‘ಏಡಿ ಅಮ್ಮಯ್ಯ’

Read More

ಶ್ರೀನಿವಾಸ ಜೋಕಟ್ಟೆ ಬರೆದ ಈ ಭಾನುವಾರದ ಕತೆ

ಅಂತೂ ಎಂದಿಗಿಂತ ಸ್ವಲ್ಪ ಬೇಗನೆ ರೈಲು ಇಳಿದರೂ ಸ್ಟೇಷನ್ ಹೊರಗಡೆ ರಿಕ್ಷಾ ಹಿಡಿಯಲು ಕ್ಯೂ ಬೇರೆ. ಎಂದಿಗಿಂತಲೂ ಕ್ಯೂ ಸ್ವಲ್ಪ ಹೆಚ್ಚೇ ಇತ್ತು. ತೀರಾ ಅಗತ್ಯದ ಸಾಮಾನುಗಳನ್ನು ಹಿಡಿದುಕೊಂಡು ಮನೆಗೆ ಬಂದರೆ ಆಗಲೇ ಚಿಕ್ಕಪ್ಪ, ಚಿಕ್ಕಮ್ಮ ಮನೆಗೆ ಬಂದಿದ್ದರು. “ಹೇಗಿದ್ದೀರಿ? ಪ್ರಯಾಣ ಕಷ್ಟವಾಯಿತಾ…..?” ಇತ್ಯಾದಿ ಔಪಚಾರಿಕವಾಗಿ ವಿಚಾರಿಸಿ ವಿಜಯೇಂದ್ರ ಸ್ನಾನಕ್ಕೆ ಹೋದ. ಸಹನಾ ಎಲ್ಲರಿಗೂ ರಾತ್ರಿಯ ಊಟಕ್ಕೆ ತಯಾರಿ ನಡೆಸಿದಳು. ಇವಳು ಹಪ್ಪಳ ಕಾಯಿಸಿದರೆ ಎಲ್ಲಾ ಅಡುಗೆ ಮುಗಿದಂತೆ ಎಂದು ಚಿಕ್ಕಮ್ಮನಲ್ಲಿ ಹೇಳಿದ.
ಶ್ರೀನಿವಾಸ ಜೋಕಟ್ಟೆ ಬರೆದ ಕತೆ ‘ಗುಡ್ಡ’.

Read More

ನನ್ನ ಮೆಚ್ಚಿನ ನನ್ನ ಕಥಾ ಸರಣಿಯಲ್ಲಿ ಬೆಳಗೋಡು ರಮೇಶ ಭಟ್ ಕತೆ

ಆ ಹೆಂಗಸು ಯಾವ ಮಾತನ್ನೂ ಆಡದೆ ಸುಮಾರು ಅರ್ಧ ಗಂಟೆ ಹಾಗೆಯೇ ಕುಳಿತಿದ್ದಳು. ಅಕ್ಕನ ಕಾಲಿಗೆ ನಮಸ್ಕಾರ ಮಾಡಿ ‘ಹೋಗಿ ಬರುತ್ತೇನಮ್ಮ’ ಎಂದಳು. ನನ್ನಲ್ಲಿ ಯಾವ ಮಾತನ್ನೂ ಆಡಲಿಲ್ಲ. ಮಗುವನ್ನು ಜೋಯಿಸರ ಕುರ್ಚಿಯ ಎದುರು ಸಾಷ್ಟಾಂಗ ನಮಸ್ಕಾರ ಮಾಡಿಸಿದಳು. ತಾನೂ ಆ ಕುರ್ಚಿಗೆ ನಮಸ್ಕರಿಸಿದಳು. ‘ಬಸ್ಸಿಗೆ ತಡಾವಾಯಿತೋ ಏನೋ’ ಎಂದು ತನ್ನಷ್ಟಕ್ಕೆ ಎಂಬಂತೆ ಅಕ್ಕನಿಗೆ ಮತ್ತೊಮ್ಮೆ ಹೇಳಿ ಅವಸರದಲ್ಲಿ ನಡೆದು ಹೋದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೆಳಗೋಡು ರಮೇಶ ಭಟ್ ಬರೆದ ಕತೆ ಜೋಯಿಸರ ಕುರ್ಚಿ ಈ ಭಾನುವಾರದ ನಿಮ್ಮ ಓದಿಗೆ

Read More

ಅಬ್ದುಲ್ ರಶೀದ್ ವಿರಚಿತ ‘ರಕ್ತಚಂದನ’ ಎಂಬ ನೀಳ್ಗತೆಯು

ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. …”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ ಬರೆದ ಕತೆ

ಕುಲಕರ್ಣಿ ದತ್ತು ಎದ್ದು ನಿಂತು “ಗುರಪಾದ ಹೆಣಾ ಮಣ್ಣ ಮಾಡಬ್ಯಾಡ. ಹಂಗೇನಾದರು ಆತಂದ್ರ ಪೋಲಿಷವರೆಗೆ ಹೋಗತದ ನೋಡು. ನಮ್ಮದಂತು ಕಬೂಲಿಲ್ಲ. ನಾ ನಡೀತೇನ ಅಂತಂದು ಎದ್ದು ಹೊರನಡೆದ. ಅವನ ಜೋಡ ಏಳೆಂಟಮಂದಿ ಎದ್ದರು. ಮಹಮ್ಮದ ಅಲಿ ಎದ್ದು ನಿಂತು ಗುರಪಾದನ ಕಡೀಗಿ ತಿರಿಗಿ “ಗುರುಪಾದನ್ನ ನಮ್ಮ ಜಾತಿಗಿ ವಿರುದ್ಧವಾಗಿ ನಾನೇನು ಮಾಡಂಗಿಲ್ಲ. ನಿಮಗ ಶಿವಾ ಹೆಂಗೋ ನಮಗ ಅಲ್ಲಾನು ಹಂಗ, ನಾವಿನ್ನ ಬರ್ತಿವಿ.. ಎಂದ್ಹೇಳಿ ಅವರು ಎಲ್ಲರು ಎದ್ದುಹೋದರು.”
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ