Advertisement

Category: ಸಾಹಿತ್ಯ

ರೋಹಿತ್ ರಾಮಚಂದ್ರಯ್ಯ ಅನುವಾದಿಸಿದ ಪ್ರಣವ್ ಸಖದೇವ್ ಬರೆದ ಮರಾಠಿ ಕತೆ

“ಆಮೇಲೆ ನನಗೆ ಏನಾಯಿತೋ ಯಾರಿಗೆ ಗೊತ್ತು; ನಾನು ಪಟಕ್ಕನೆ ಟೇಬಲ್ ಮೇಲೆ ಇಟ್ಟಿದ್ದ ನನ್ನ ಮೊಬೈಲ್ ಫೋನ್ ತೆಗೆದುಕೊಂಡು ಅವನ ಐದಾರು ಫೋಟೋ ತೆಗೆದೆ. ರಿಯಾನನು ನನ್ನ ಕಡೆ ನೋಡಿದ. ಅವನ ಉದ್ದನ್ನ ಮುಖ ಶಾಂತವಾಗಿತ್ತು. ನೇರ ಮೂಗಿನ ತುದಿ ನೆನೆದು ಕೆಂಪಾಗಿ ಹೋಗಿತ್ತು. ಆತನ ಕಪ್ಪು ಕಣ್ಣುಗಳಲ್ಲಿ ಅಂಜಿಕೆಯಿರಲಿಲ್ಲ.”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಬ್ದುಲ್‌ ರಶೀದ್ ಬರೆದ ಕಥೆ

“ಈ ರೋಸಿ ಸಿಸ್ಟರ್ ಮತ್ತು ಸುಶೀಲಾ ಟೀಚರ್ ಬಾಡಿಗೆಗಿದ್ದ ಕೋಣೆಗಳ ನಡುವಲ್ಲಿ ಈರಪ್ಪ ಟೈಲರ ಅಂಗಡಿಯಿತ್ತು. ಈರಪ್ಪ ಟೈಲರು ತಮ್ಮ ಸಂಸಾರ ಸಮೇತವಾಗಿ ಒಳಕೋಣೆಯಲ್ಲಿ ವಾಸಿಸುತ್ತಿದ್ದು ಹೊರಗಿನ ಕೋಣೆಯನ್ನು ಟೈಲರ್ ಅಂಗಡಿಯನ್ನಾಗಿ ಮಾಡಿಕೊಂಡಿದ್ದರು. ಈ ಈರಪ್ಪ ಟೈಲರ್ ಮಾತು ತುಂಬ ಕಡಿಮೆ ಆಡುತ್ತಿದ್ದರು….”

Read More

ಡಾ. ಜ್ಯೋತಿ ಬರೆದ ಈ ಭಾನುವಾರದ ಕಥೆ

“ಯಾರೋ ಹೇಳಿದರು, ಕಾಶಿಯ ರಾಜನಲ್ಲಿ ಬಿಳಿ ಕುದುರೆಗಳಿವೆಯೆಂದು. ಹಾಗಾಗಿ, ಗಾಲವ ನನ್ನ ಕಾಶಿಗೆ ಕರೆತಂದ. ಅಲ್ಲಿನ ರಾಜ ದಿವೋದಾಸನಲ್ಲಿ ೨೦೦ ಬಿಳಿ ಕುದುರೆಗಳಿದ್ದವು. ಅವನಿಗೂ ಗಂಡು ಮಗು ಬೇಕಿತ್ತು. ಗಾಲವ ಪುನಃ ಒಪ್ಪಂದ ಮಾಡಿಕೊಂಡ. ನನಗೆ ಈ ಬಾರಿ ಏನು ಅನ್ನಿಸಲಿಲ್ಲ. ಮನಸ್ಸು ಮತ್ತು ಹೃದಯಗಳೆರಡೂ ಹೆಪ್ಪುಗಟ್ಟಿದ್ದವು. ವರ್ಷ ಕಳೆಯೋದರಲ್ಲಿ ಮಗ ಪ್ರತಾರ್ಧನ ಹುಟ್ಟಿದ. ಆದರೆ, ಈ ಬಾರಿ ಮಗುವಿನೊಂದಿಗೆ ಯಾವುದೇ ವ್ಯಾಮೋಹ…”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಕ್ಷತಾ ಹುಂಚದಕಟ್ಟೆ ಬರೆದ ಕಥೆ

“ನಾನು ಧಡಕ್ಕನೇ ಎದ್ದು ಕೂತೆ. ಆ ಹುಡುಗ ಅಮ್ಮ ಅವಳು ಎದ್ದಳ್ ಎದ್ದಳ್ ಎಂದು ಕೂಗಿಕೊಳ್ತಾ ಓಡಿದ. ಮೈತುಂಬಾ ಬೆವರು ಹರಿಯುತ್ತಿತ್ತು. ಆ ಹುಡುಗಿ, ಎದ್ದೇಳಾ? ಆ ಕಡೆ ಗುಡ್ಡದಲ್ಲಿ ರಾಶಿ ಮುಳ್ಳು ಹಣ್ಣು ಬಿಟ್ಟಿತ್ತು. ನಿನ್ನ ಕರ್ಕಂಡು ಹೋಗಣಾ ಅಂತ್ಹೇಳಿ ಕಾಯ್ತಾ ಕೂತ್ಕಂಡಿದ್ದ್ ಅಂತ್ಹೇಳಿ ನನ್ನ ಕೈ ಹಿಡಿದು ಎಳೆಯತೊಡಗಿದಳು. ಅಷ್ಟರಲ್ಲಿ ಅಮ್ಮಮ್ಮ ಬಂದ್ಬಿಟ್ಟು ಮೈ ಕೈಯಲ್ಲ ಮುಟ್ಟಿ ಜ್ವರ ಬಿಟ್ಟಿದೆ.
‘ನಾನು ಮೆಚ್ಚಿದ ನನ್ನ ಕಥೆʼಯ..”

Read More

ಎಸ್. ನಾಗಶ್ರೀ ಬರೆದ ಕಥೆ ‘ಬೆಳಕ ಹಾದಿ’

“ನಾನೇ ಮೇಲೆ ಬಿದ್ದು ಹೋದರೂ ಸರಿಯಾದ ಸ್ಪಂದನೆಯಿಲ್ಲದೆ, ತಿಂಗಳುಗಟ್ಟಲೆ ಮಾತು ಬಿಟ್ಟು, ಬೇರೆ ಬೇರೆ ಮಲಗುವ ರೂಢಿ ಚಾಲ್ತಿಗೆ ಬಂತು. ಒಂದೇ ಮನೆಯಲ್ಲಿದ್ದೂ ನಮ್ಮ ಮಧ್ಯೆ ಮೈಲಿಗಟ್ಟಲೆ ಅಂತರ ಬೆಳೆಯುತ್ತಾ ಹೋಯಿತು. ಆಗ ಅಮ್ಮನ ಮನೆಗೆ ಹೋಗುವ ಬಯಕೆ ತೀವ್ರವಾಗುತ್ತಿತ್ತು. ಹೇಗಿದ್ದರೂ ಅಲ್ಲಿ ಯಾರದ್ದಾದರೂ ಮದುವೆ-ಮುಂಜಿ, ನಾಮಕರಣ ಅಂದರೆ ಎಲ್ಲರಿಗಿಂತ ಮೊದಲು ನನಗೇ ಬುಲಾವ್ ಬರ್ತಿತ್ತು….”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ