Advertisement

ಬೆಕ್ಕಾಯಣ…. ರಾಮಾಯಣ…: ವೇದ ಭದ್ರಾವತಿ ಬರಹ

ಹುಡುಗ ಎಲ್ಲ ಕಿಟಕಿಗಳನ್ನು ಮುಚ್ಚಿ ಬಾಗಿಲು ಹಾಕಿ ಒಮ್ಮೆ ನನ್ನ ಮುಖ ನೋಡಿ ಮೆಲ್ಲಗೆ, ಎರಡೂ ಮರಿಗಳು ಸತ್ತು ಹೋಗಿರುವುದನ್ನೂ ಗಂಡು ಬೆಕ್ಕು ಒಂದನ್ನು ಅರ್ಧ ತಿಂದಿರುವುದನ್ನೂ ಹೇಳಿದ. ನನಗೆ ಜಂಘಾಬಲ ಉಡುಗಿತು! ಮರಿಗಳಿಗಾಗಿ ಹೆಣ್ಣು ಉಗ್ರವಾಗಿ ಕಾದಾಡಿದ್ದು ಸ್ಪಷ್ಟವಾಗಿತ್ತು. ತನ್ನ ಮರಿಗಳಲ್ಲಿ ಯಾವುದೂ ಉಳಿದಿಲ್ಲವೆಂದು ಅದಕ್ಕೆ ತಿಳಿಸುವುದು ಹೇಗೆ?? ಇಷ್ಟು ದಿನ ನಮ್ಮನ್ನು ಕಂಡೊಡನೆ ಮಾರು ದೂರ ಓಡುತ್ತಿದ್ದ ತಾಯಿ ಈಗ ಮುಚ್ಚಿದ್ದ ಕಿಟಕಿಯನ್ನು ಹೊಗುವ ವಿಧಾನ ಹುಡುಕುತ್ತ, ತನ್ನ ಮರಿಗಳು ಅಲ್ಲಿವೆ ಎಂದೂ ನಾವು ಕಿಟಕಿ ತೆರೆದು ದಾರಿ ಕೊಡಬೇಕೆಂದೂ ದಯನೀಯ ಸ್ವರದಲ್ಲಿ ಅಂಗಲಾಚುತ್ತ ನಮ್ಮನ್ನೇ ದಿಟ್ಟಿಸತೊಡಗಿತ್ತು.
ಬೆಕ್ಕುಗಳ ಕುರಿತು ವೇದ ಭದ್ರಾವತಿ ಬರಹ ನಿಮ್ಮ ಓದಿಗೆ

Loading

ಅಂಕಣ

Latest

ಹೊಳೆಸಾಲಿನ ಶಾಲೆಗೆ ಇನ್ನೀಸಬೆಟ್ಟರ್ ಬಂದರು: ಸುಧಾ ಆಡುಕಳ ಅಂಕಣ

ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ದಾರಿಯೆಡೆಗೆ ನೋಡಿದರೆ ಆರಡಿ ಎತ್ತರದ ಚಂದದ ವ್ಯಕ್ತಿಯೊಬ್ಬರು ನಗುತ್ತಾ ಇವರೆಡೆಗೆ ಬರುತ್ತಿದ್ದರು. ಚೌಕಳಿ ಶರ್ಟು ಮತ್ತು ಬಿಳಿಯ ಪ್ಯಾಂಟಿನಲ್ಲಿ ಬಂದ ಅವರನ್ನು ಮಕ್ಕಳು ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟರು. ಸುಧಾ ಆಡುಕಳ ಬರೆಯುವ "ಹೊಳೆಸಾಲು" ಅಂಕಣದ ಒಂಭತ್ತನೆಯ ಕಂತು ನಿಮ್ಮ ಓದಿಗೆ

ಸಾಹಿತ್ಯ

ರವಿ ಮಡೋಡಿ ಬರೆದ ಈ ಭಾನುವಾರದ ಕತೆ

ಮುಂದೆ ಮುಂದೆ ಸಾಗಿದರೂ ಮನೆಗಳು ಮುಗಿಯುವ ಲಕ್ಷಣ ಕಾಣಿಸಿರಲಿಲ್ಲ. ರಮೇಶ ತಾನು ಈ ದಾರಿಯಲ್ಲಿ ಬರಲೇಬಾರದಿತ್ತು, ಬೇರೆಯೊಂದು ದಾರಿಯಲ್ಲಿ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನ ಕೆಲಸವನ್ನು ಪೂರೈಸಿಕೊಳ್ಳಬಹುದಿತ್ತೋ ಏನೋ ಎಂದುಕೊಳ್ಳುತ್ತ ಹಳಿದುಕೊಂಡ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಯಾವಾಗಲೂ ಹೇಳಿಕೊಳ್ಳುತ್ತಿದ್ದ ಮಾತು ಸತ್ಯವೆನಿಸಿ ಯೋಚಿಸುವುದಕ್ಕೆ ತೊಡಗಿದ. ರವಿ ಮಡೋಡಿ ಬರೆದ ಈ ಭಾನುವಾರದ ಕತೆ “ಜೀವದೊಳಗಿನ ಆಟ” ನಿಮ್ಮ ಓದಿಗೆ

ಸರಣಿ

ಬಡತನದ ಬದುಕು ಮತ್ತು ಶಾಲೆಯ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಅವರು "ನಾವು ಬೆಳಿಗ್ಗೆ ಹೊತ್ತು ಮುಂಚೆನೆ ಹೋಗ್ತೀವಿ ನಮಗೆ ಬೆಳಗ್ಗೆ ಏನು ಅಡಿಗೆ ಮಾಡುವುದು ಬೇಡ ಎಂದರು". ಅಮ್ಮ ನಿರಾಳವಾದಳು. ಏಕೆಂದರೆ ಬೆಳಗಿನ ಅಡಿಗೆಗೆ ಮನೆಯಲ್ಲಿ ಅಕ್ಕಿಯೆ ಇರಲಿಲ್ಲ. ಅಕ್ಕಿ ತಗೋಬೇಕು ಅಂದರೆ ಬೀಡಿಯ ಮಾಲೀಕ ಬರಬೇಕಿತ್ತು. ಹಣ ಕೊಡಬೇಕಿತ್ತು ಅನ್ನುವ ಪರಿಸ್ಥಿತಿ ನಮ್ಮದು. ಆದರೆ ಬೆಳಿಗ್ಗೆ ಸಂಬಂಧಿಕರು ಹೋಗುವುದು ತಡವಾಗಿದ್ದರಿಂದ ಬೆಳಗಿನ ಉಪಹಾರವನ್ನು ಮಾಡಬೇಕಾದ ಪರಿಸ್ಥಿತಿ ಅಮ್ಮನದಾಗಿತ್ತು. ಮಾರುತಿ ಗೋಪಿಕುಂಟೆ ಬರೆಯುವ "ಬಾಲ್ಯದೊಂದಿಗೆ ಪಿಸುಮಾತು" ಸರಣಿ

ಪ್ರವಾಸ

ಅನ್ನ ದೇವರ ಮುಂದೆ ಇನ್ನ ದೇವರು ಉಂಟೆ?: ಅಂಜಲಿ ರಾಮಣ್ಣ ಪ್ರವಾಸ ಕಥನ

ಐಶ್ವರ್ಯಾಳ ಸೌಂದರ್ಯ, ಅಮಿತಾಬನ ಎತ್ತರ ಜೊತೆಗೆ ಮಂಗಲ ನಾಥನ ಶಕ್ತಿ ಎಲ್ಲವೂ ಗೌಣ ಹಸಿವಿನ ಮುಂದೆ. ಅಲ್ಲಿಯೇ ನಾಲ್ಕಾರು ರಸ್ತೆಯ ಮುಂದೆ ಇದ್ದ, ದೊಡ್ಡ ಶಾಮಿಯಾನ ಹಾಕಿ ಮದುವೆ ಮನೆಯ ಊಟದ ಹಜಾರದಂತೆ ಇದ್ದ ಜಾಗಕ್ಕೆ ಕರೆದುಕೊಂಡು ಬಂದ ಪವನ್. 'ಸಾಯು ಕ್ರುಪಾ’ ಎನ್ನುವ ಬೋರ್ಡ್ ಇತ್ತು. ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶನ ಸಾಂದೀಪನಿ ಆಶ್ರಮಕ್ಕೆ ಭೇಟಿಕೊಟ್ಟ ಅನುಭವದ ಕುರಿತ ಬರಹ

ವ್ಯಕ್ತಿ ವಿಶೇಷ

ಅಪ್ಪಯ್ಯ ಎಂದರೆ….: ಇಂದಿರಾ ಜಾನಕಿ ಎಸ್. ಶರ್ಮ ಬರಹ

ಒಂದುದಿನ ಅಪ್ಪಯ್ಯ 'ಚಂದಮಾಮ' ಪುಸ್ತಕ ಓದುತ್ತಿದ್ದಾಗ ಬಂದ ಪರಿಚಿತರೊಬ್ಬರು ...... ನೀವೂ ಚಂದಮಾಮ ಓದ್ತೀರಾ...?” ಎಂದು ಆಶ್ಚರ್ಯದಿಂದ ಕೇಳಿದ್ದರು. ಆಗ ಅಪ್ಪಯ್ಯ .... ಯಾರ ಮನೆ ಹಾಳುಮಾಡುವುದು... ಎಂದು ಯೋಚಿಸುವುದಕ್ಕಿಂತ ಚಂದಮಾಮ ಓದುವುದೇ ಒಳ್ಳೆದಲ್ವೋ.....!” ಅಂತ ಹೇಳಿದ್ದರು. ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದರೂ ಆಗಿದ್ದ ದೇರಾಜೆ ಸೀತಾರಾಮಯ್ಯನವರ ಮಗಳು ಇಂದಿರಾ ಜಾನಕಿ ಎಸ್. ಶರ್ಮ ತಮ್ಮ ತಂದೆಯ ಕುರಿತು ಹಂಚಿಕೊಂಡ ಕೆಲವು ನೆನಪುಗಳು...

ಸಂಪಿಗೆ ಸ್ಪೆಷಲ್

ಉಳ್ಳವರ ಜೊಳ್ಳುತನ: ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಒಮ್ಮೆ ‘ಬಿಹಾರಿ ಭೈಯ್ಯ’ ಹೀಗೆ ಕರ್ಕೊಂಡ್ ಬರುವಾಗ, ಆ ಕುಡುಕ ಮಹಾಶಯನೇ ಬ್ಯಾಲೆನ್ಸ್ ತಪ್ಪಿಸಿ, ಬೈಕ್ ಬಿದ್ದು, ಇಬ್ಬರಿಗೂ ಪೆಟ್ಟಾಗಿ, ನೋಡಿದವರು ಹತ್ತಿರದ ಆಸ್ಪತ್ರೆಗೆ ಸೇರಿಸಿ, ಆ ಮಹಾಶಯನ ಮಕ್ಕಳು, ಮೊಮ್ಮಕ್ಕಳು ಬೈಕ್ ಚಾಲಕನದೇ ತಪ್ಪೆಂದು ದಬಾಯಿಸಿ, ಅವನಿಂದಲೇ ಹಣ ಪೀಕಿ, ಟ್ರೀಟ್ಮೆಂಟ್‌ಗೆ ಅದಕ್ಕೆ ಇದಕ್ಕೆ ಎಂದು ಅದರಲ್ಲಿ ಬೇಕಾದ ಬೇಡದ ಟೆಸ್ಟ್‌ಗಳನ್ನೆಲ್ಲ ಮಾಡಿಸಿ, ಆ ಬಿಹಾರಿ ಭಯ್ಯ ಈ ಊರಿನ ಸಹವಾಸವೇ ಬೇಡ ಎಂದು ಈಗ ಇಲ್ಲಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಗೋಣಿಪುರಕ್ಕೆ ಮನೆ ಶಿಫ್ಟ್ ಮಾಡಿದನಂತೆ! ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಈ ದಿನದ ಚಿತ್ರ

ಪುನೀತ್ ಸಾಕ್ಯ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ಪುನೀತ್ ಸಾಕ್ಯ. ನೀನಾಸಂ ಪದವೀಧರರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಗಭೂಮಿ ಮತ್ತು ಸಿನಿಮಾ ನಿರ್ದೇಶನ ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ಡಿ.ಶಬ್ರಿನಾ ಮಹಮದ್ ಅಲಿ ಬರೆದ ಈ ದಿನದ ಕವಿತೆ

"ಹೆಂಗಳೆಯರ ಮೊಗದಲಿ ನಗುವ ತರಿಸಲು ಬಾಡಿದ ಹೂಗಳಿಗೆ ನವಚೈತನ್ಯ ತುಂಬಲು ಬಂದಿರಬಹುದೇ ಈ ಯುಗಾದಿ!"-ಡಿ.ಶಬ್ರಿನಾ ಮಹಮದ್ ಅಲಿ ಬರೆದ ಈ ದಿನದ ಕವಿತೆ

ರವಿ ಮಡೋಡಿ ಬರೆದ ಈ ಭಾನುವಾರದ ಕತೆ

ಮುಂದೆ ಮುಂದೆ ಸಾಗಿದರೂ ಮನೆಗಳು ಮುಗಿಯುವ ಲಕ್ಷಣ ಕಾಣಿಸಿರಲಿಲ್ಲ. ರಮೇಶ ತಾನು ಈ ದಾರಿಯಲ್ಲಿ ಬರಲೇಬಾರದಿತ್ತು, ಬೇರೆಯೊಂದು ದಾರಿಯಲ್ಲಿ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನ ಕೆಲಸವನ್ನು ಪೂರೈಸಿಕೊಳ್ಳಬಹುದಿತ್ತೋ ಏನೋ ಎಂದುಕೊಳ್ಳುತ್ತ ಹಳಿದುಕೊಂಡ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಯಾವಾಗಲೂ ಹೇಳಿಕೊಳ್ಳುತ್ತಿದ್ದ ಮಾತು ಸತ್ಯವೆನಿಸಿ ಯೋಚಿಸುವುದಕ್ಕೆ ತೊಡಗಿದ. ರವಿ ಮಡೋಡಿ ಬರೆದ ಈ ಭಾನುವಾರದ ಕತೆ “ಜೀವದೊಳಗಿನ ಆಟ” ನಿಮ್ಮ ಓದಿಗೆ

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು


ನಮ್ಮ ಫೇಸ್ ಬುಕ್


ನಮ್ಮ ಟ್ವಿಟ್ಟರ್



ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ


ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ