Advertisement

Tag: KV Thirumalesh

ಸಾಹಿತಿ ಮಾಹಿತಿ ಕೋಶ ಎಂಬ ಮುಗಿಯದ ರೊಮ್ಯಾನ್ಸ್: ಕೆ.ವಿ. ತಿರುಮಲೇಶ್ ಲೇಖನ

“ಹಾಥಾರ್ನ್ ನ ವಿವರಗಳನ್ನು ಓದಿದ ನಂತರ ನಾನು ಕಣ್ಣೋಡಿಸಿದ ನಮೂದು ಸರ್ ವಾಲ್ಟರ್ ಸ್ಕಾಟ್ ಗೆ ಸಂಬಂಧಿಸಿದ್ದು. ಈ ಸುಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರನ “ಐವಾನ್ ಹೊ” ಎಂ.ಎ. ಯ ಓದಿನ ಪಟ್ಟಿಯಲ್ಲಿ ಇದ್ದರೂ ನಾನದನ್ನು ಓದಿರಲಿಲ್ಲ. ನಾವು ವಿದ್ಯಾರ್ಥಿಗಳು ಪಾಠಪಟ್ಟಿಯಲ್ಲಿ ಇದ್ದುದೆಲ್ಲವನ್ನೂ ಓದುತ್ತಿರಲಿಲ್ಲ, ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗೆ ಅವಕಾಶವಿದ್ದುದರಿಂದ ನಾವು ಈ ರಿಸ್ಕನ್ನು ತೆಗೆದುಕೊಳ್ಳುತ್ತಿದ್ದೆವು.”

Read More

ಜರ್ಕುಂ ಬುರ್ಕುಂ ಏನಜ್ಜೀ?: ಕೆ.ವಿ. ತಿರುಮಲೇಶ್ ಬರಹ

“ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರು. ಬಹುಶಃ ‘ತೋಟರ’ ಎನ್ನುವ ಬ್ರಾಂಡಿನದು. ಯಾಕೆ ಇಂಥ ಬೇಡಿಕೆಯೆಂದರೆ ನಮ್ಮೂರಿನ ತಯಾರಿಕೆಗಳಿಂತ ಇದು ಎಷ್ಟೋ ಮುಂದುವರಿದಿತ್ತು. ಇದಕ್ಕೆ ಬಳಸಿದ ಕಬ್ಬಿಣಕ್ಕೆ ಬೇಗ ತುಕ್ಕು ಹಿಡಿಯುತ್ತಿರಲಿಲ್ಲ. ಬಾಯಿ ಹರಿತವಾಗಿತ್ತು. ಅಲ್ಲದೆ ಇದರ ಹಿಡಿ ಉಳೆಕ್ಕೊಂಬಿನಿಂದ ಮಾಡಿದುದಾಗಿತ್ತು.”

Read More

ಕೆ. ವಿ. ತಿರುಮಲೇಶ್ ಅನುವಾದಿಸಿದ ಮಿರೋಸ್ಲಾವ್ ಹೋಲುಬ್ ನ ಐದು ಕವಿತೆಗಳು

“ಇನ್ನೂ ಎಷ್ಟು ಚೆನ್ನಾಗಿರಬಹುದು ಈಲಿಯಡ್
ಅಗಮೆಮ್ನೋನ್ ಗೆ ಅವನದೇ ಚಹರೆಯಿತ್ತೆಂದು
ಸಿದ್ಧವಾದರೆ ಅಥವ ಹೆಲೆನಳ ಜೀವಶಾಸ್ತ್ರ
ಸಮಕಾಲೀನ ವಾಸ್ತವಗಳ ಪ್ರತಿಬಿಂಬಿಸಿದರೆ.”- ಕೆ. ವಿ. ತಿರುಮಲೇಶ್ ಅನುವಾದಿಸಿದ ಮಿರೋಸ್ಲಾವ್ ಹೋಲುಬ್ ನ ಐದು ಕವಿತೆಗಳು

Read More

ಸನಾದಲ್ಲಿ ಬರೆದ ಕೆಲವು ಅಪೂರ್ಣ ಟಿಪ್ಪಣಿಗಳು: ಕೆ. ವಿ. ತಿರುಮಲೇಶ್ ಬರಹ

“ಪ್ರಜಾಪ್ರಭುತ್ವವನ್ನು ಟೀಕಿಸುವವರಿಗೆ ಬೇರೆ ಯಾವ ಪದ್ಧತಿ ಯಾವ ಉತ್ತಮ ಕಾರಣಕ್ಕೆ ಬೇಕೋ ತಿಳಿಯುವುದಿಲ್ಲ. ಪ್ರಜಾಪ್ರಭುತ್ವವೊಂದನ್ನು ಬಿಟ್ಟು ಇನ್ನುಳಿದ ಯಾವುದೇ ರಾಜಕೀಯ ವ್ಯವಸ್ಥೆಯೂ ಇವರಿಗೆ ಒಪ್ಪಿಗೆಯೇ? ಪ್ರಜಾಪ್ರಭುತ್ವವೆಂದರೆ ಯಾಕೆ ಇವರಿಗೆ ಇಷ್ಟೊಂದು ಹೆದರಿಕೆ? ಹಾಂ! ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ, ವಿಮರ್ಶಿಸುವ ಸ್ವಾತಂತ್ರ್ಯವಿದೆ. ಇದು ಇವರಿಗೆ ಸಹ್ಯವಲ್ಲ”

Read More

ಕವಿ ತಿರುಮಲೇಶ್ ಅನುವಾದಿಸಿದ ಅಮೇರಿಕಾದ ರಾಷ್ಟ್ರಕವಿ ಮರ್ವಿನ್ ಸಂದರ್ಶನ

“ಈ ಅನುವಾದ ಮಾಡುತ್ತ ಇರುವಾಗ, ಇದುವರೆಗೆ ಅನುವಾದದ ಕುರಿತು ನಾನು ಅರಿತುಕೊಂಡಿದ್ದೇನೆ ಎನ್ನುವುದೆಲ್ಲವೂ ಅಮಾನತಿನಲ್ಲಿರುತ್ತದೆ. ಇಂಗ್ಲಿಷ್ ನಲ್ಲಿ ಮಂತ್ರಗಳಿಲ್ಲ. ಇಂಗ್ಲಿಷ್ ಯಾವತ್ತೂ ಮಂತ್ರಿಸುವ ಭಾಷೆಯಾಗಿರಲಿಲ್ಲ, ಆದ್ದರಿಂದ ಬಳಸಬಹುದಾದ ಅಥವಾ ವಿಸ್ತರಿಸಬಹುದಾದ ಪರಂಪರೆಯಿಲ್ಲ. ನಾವು ಹಿಂದೆ ಮಾತಾಡಿದ ಮೌಖಿಕ ಪರಂಪರೆಯ ಮೇಲೆ ಕೆಲಸ ಮಾಡಬೇಕೆಂಬ ನನ್ನ ದೀರ್ಘಕಾಲಿಕ ಬಯಕೆಯಿದೆ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ