Advertisement

Tag: Travelogue

ರೂಪ್ಮತಿ ಮಹಲಿನಲಿ… ರೂಪ್ಮತಿಯ ನೆನಪಿನಲಿ…

ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶದ ಮಾಂಡುವಿನಲ್ಲಿ ಸುತ್ತಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ

Read More

ಇನ್ಸ್ಬ್ರುಕ್ ಎಂಬ ಮಾಯಾಲೋಕ

ನಾರ್ಡ್ ಕೆಟ್ಟೆಯಲ್ಲಿ ಪ್ರವಾಸಿಗರಿಗೋಸ್ಕರ “ಇಗ್ಲೂ” ಕೂಡ ಮಾಡಿ ಇಡಲಾಗಿತ್ತು. ಗಟ್ಟಿಯಾದ ಹಿಮದ ಇಟ್ಟಿಗೆಗಳಿಂದ ಕಟ್ಟಿದ ಪುಟ್ಟ ಮನೆಯೇ ಇಗ್ಲೂ. ತಾಪಮಾನ ಹೆಚ್ಚಿದ ಹಾಗೆ ಕರಗಿ ಹೋಗುವ ಈ ಮನೆ, ಬೇಸಿಗೆಯಲ್ಲಿ ಮಾಯವಾಗಿಬಿಡುತ್ತದೆ. ಮತ್ತೆ ಚಳಿಗಾಲದಲ್ಲಿ ಹೊಸದಾಳಿ ಹಿಮ ಬಿದ್ದು, ಗಟ್ಟಿಯಾದಮೇಲೆ ಪುನಃ ಕಟ್ಟಿಕೊಳ್ಳಬೇಕು. ಅಲ್ಲಿಗೆ ಹಿಂದಿನವರ ಕಾಲದಲ್ಲಿ ಪ್ರತಿವರ್ಷ ಹೊಸ ಮನೆ ಕಟ್ಟಿ, ಗೃಹಪ್ರವೇಶ ನಡೆಯುತ್ತಿತ್ತು ಅನ್ನಿಸುತ್ತದೆ!
“ದೂರದ ಹಸಿರು” ಸರಣಿಯಲ್ಲಿ ಇನ್ಸ್ಬ್ರುಕ್ ನಗರದಲ್ಲಿ ಓಡಾಡಿದ ಅನುಭವಗಳ ಬರೆದಿದ್ದಾರೆ ಗುರುದತ್ ಅಮೃತಾಪುರ

Read More

ಮಾರ್ಕೋನಿ ಬೀಚ್: ತೆರೆಯ ಮೇಲಣ ತರಂಗಾಂತರಂಗ

ಸಾಮಾನ್ಯ ಜನರು ಮಾರ್ಕೋನಿ ರಿಸೀವರ್‌ಗಳನ್ನು ಕೊಂಡು ಬೇರೆ ಬೇರೆ ತರಂಗಗಳನ್ನು ಕೈಯಲ್ಲಿ ಕಟ್ಟಿ ಹಾಕಿ ಆಲಿಸುವ ತಂತ್ರಜ್ಞಾನ ಹುಟ್ಟಿದ್ದು ಇಲ್ಲೇ, ಈ ವೆಲ್ಫ್ಲೀಟ್ ಎಂಬ ಚಿಕ್ಕ ಊರಿನಲ್ಲಿ. ರೇಡಿಯೋ ತರಂಗಗಳು ಹುಟ್ಟುಹಾಕಿದ ಕ್ರಾಂತಿ ಅದೆಷ್ಟು ಬೇಗ ಹಬ್ಬಿತೆಂದರೆ ಎಲ್ಲ ಹಡಗುಗಳಲ್ಲೂ ಮಾರ್ಕೋನಿ ಉಪಕರಣವಿತ್ತು. ಸುಪ್ರಸಿದ್ಧ ಟೈಟಾನಿಕ್ ಹಡಗು ಕೂಡ ಮುಳುಗುವ ಮೊದಲು ಮಾರ್ಕೊನಿ ಉಪಕರಣದ ಮೂಲಕ “SOS” ಸಂದೇಶ ಕಳಿಸಿತ್ತು.
ವೈಶಾಲಿ ಹೆಗಡೆ ಬರೆಯುವ ಪ್ರವಾಸ ಲೇಖನ ಮಾಲೆ

Read More

ಹಾಯ್‌ ಅಂಗೋಲಾ!

ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು‌. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ‌ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

`ಜಗದ ಜಗಲಿಯಲಿ ನಿಂತು’: ವೈಶಾಲಿ ಪ್ರವಾಸ ಲೇಖನ ಮಾಲೆ ಆರಂಭ

ಮಾಯಾ ಜನರ ಈ ಖಗೋಳಶಾಸ್ತ್ರದ ನಂಬಿಕೆ ಮತ್ತು ಅವಲಂಬನೆ ಎಷ್ಟರ ಮಟ್ಟಿಗಿತ್ತೆಂದರೆ ಅದು ಅವರ ಜೀವನದ ಪ್ರತಿ ನಡೆಯಲ್ಲೂ ಹಾಸುಹೊಕ್ಕಾಗಿತ್ತು. ಜಗತ್ಪ್ರಸಿದ್ದ ಮಾಯನ್ ಪಿರಾಮಿಡ್ “ಚಿಚೆನ್ ಇಟ್-ಸಾ” ಇದಕ್ಕೊಂದು ನಿದರ್ಶನ. ಇದು ಅವರ ಸರ್ಪದೇವತೆ ಕುಕುಲ್ಕಾನ್ ಮಂದಿರ. ಇಂದಿಗೂ ಇಕ್ವಿನಾಕ್ಸ್ ದಿನ ನಡುಮಧ್ಯಾಹ್ನ, ಸೂರ್ಯನ ನೆರಳು ಪಿರಮಿಡ್ಡಿನ ಮೇಲೆ ಹೇಗೆ ಬೀಳುತ್ತದೆಂದರೆ, ಸರ್ಪವೊಂದು ಮೇಲಿಂದ ಕೆಳಗೆ ಹರಿದಂತೆ ಕಾಣುತ್ತದೆ. ಆ ದೃಶ್ಯ ನೋಡಲು ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ. ವೈಶಾಲಿ ಹೆಗಡೆ ಬರೆಯುವ ʻಜಗದ ಜಗಲಿಯಲಿ ನಿಂತುʼ ಅಂಕಣದ ಮೊದಲ ಬರಹ ಇಲ್ಲಿದೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ