Advertisement

Tag: Travelogue

ಜೀವಂತ ಬೇರುಗಳ ಸೇತುವೆಯ ಮೇಲೆ ನಡೆಯುತ್ತಾ…

ಸದಾ ಮೇಲೆ ಅಲೆಯುತ್ತಿರುವ ಮೋಡ, ಕೆಳಗೆ ನೀರು ತುಂಬಿದ ಭೂಮಿ, ಬೀಳುವ ಸಮೃದ್ಧ ಮಳೆಯಿಂದಾಗಿ ದಟ್ಟವಾಗಿ ಬೆಳೆಯುವ ಕಾಡು ದೂರದಿಂದ ನೋಡಲು ರಮಣೀಯವೆನಿಸಿದರೂ ಅದರ ಸುತ್ತಲೂ ಜೀವನ ಕಟ್ಟಿಕೊಳ್ಳಲು ಕಠಿಣ ಸವಾಲೊಡ್ಡುತ್ತದೆ. ಆದರೆ ಮಾನವನ ಜೀವನ ಮಾಡುವ ತುಡಿತ ಎಂತಹ ಪ್ರಕೃತಿ ಸವಾಲುಗಳನ್ನೂ ಮೀರುತ್ತದೆ ಎನ್ನುವುದಕ್ಕೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಖಾಸಿ ಜನಾಂಗವೇ ಸಾಕ್ಷಿ. ಖಾಸಿಗಳ ಭಾಷೆ ಖಾಸಿ, ವಾಸಿಸುವ ಬೆಟ್ಟ ಖಾಸಿ.

Read More

ಗುರುದತ್ ಅಮೃತಾಪುರ ಬರೆವ ಹೊಸ ಸರಣಿ ಇಂದು ಆರಂಭ

ಹೊಸ ಊರಿಗೆ ಪ್ರವಾಸ ಹೋಗುವ ಖುಷಿ ಇಮ್ಮಡಿಯಾಗುವುದು ಆ ಸ್ಥಳದ ಪೂರ್ವಾಪರವನ್ನು ತಿಳಿದಾಗ. ಗುರುದತ್ ಅಮೃತಾಪುರ ಅವರು ಪ್ರವಾಸವನ್ನು ಇಷ್ಟಪಡುವವರು. ಜೊತೆಗೆ ಆ ಜಾಗಗಳ  ಇತಿಹಾಸವನ್ನೂ ಅರಿಯುವ ಕುತೂಹಲ  ಹೊಂದಿದವರು. ಯುರೋಪ್ ಖಂಡದ ಈಶಾನ್ಯ ಭಾಗದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಭಾರತದಂತೆಯೇ ಅಹಿಂಸಾತ್ಮಕ ಹೋರಾಟದ ಹಾದಿಯನ್ನು ಹಿಡಿದ ದೇಶವದು. ಎಲೆಮರೆಯ ಕಾಯಿ ಎಸ್ಟೋನಿಯಾದ ರಾಜಧಾನಿ ತಾಲಿನ್ ಕುರಿತ ಬರಹದೊಂದಿಗೆ ತಮ್ಮ ಸರಣಿಯನ್ನು ಅವರು ಆರಂಭಿಸಿದ್ದಾರೆ.

Read More

ದಟ್ಟ ಕಾಡಿನ ನಡುವೆ ಕುರಿಂಗಲ್ಲು ಹೊಳೆಯಿತು:ಪ್ರಸಾದ್ ಬರೆಯುವ ಮಾಳ ಕಥಾನಕ

”ನಾವು ಮೇಲೆ ಹೋದಂತೆಲ್ಲಾ ಮಗಿಲಿನೆತ್ತರಕ್ಕೆ ತೇಲಿ ಹೋದಂತೆ, ಈವರೆಗೂ ಕಂಡಿರದ ವಿಸ್ಮಯ ಲೋಕವೊಂದನ್ನು ಬೆನ್ನಟ್ಟಿ ಹೋಗುವಂತೆ ಅನ್ನಿಸುತ್ತಿತ್ತು. ಕಾಡಿನ ಎಳೆಬಿಸಿಲು ರಚ್ಚೆ ಹಿಡಿದ ಮಗುವಿನಂತೆ ಮೆತ್ತಗಾಗಿದ್ದರೂ, ಅದರ ಪ್ರಖರತೆಗೆ ಮೈಯೆಲ್ಲಾ ಆಗಲೇ ಬೆವರಾಗಿತ್ತು. ಅಲ್ಲೊಂದು ಮರದ ನೆರಳಿನಲ್ಲಿ ಕೂತು ಸುಸ್ತಿನ ನಿಟ್ಟುಸಿರು ಬಿಟ್ಟು, ಮಗಿಲಿನೆತ್ತರಕ್ಕೆ ನೋಡಿದೆವು.”

Read More

ಹಸಿರು ಹಾಡಿನ ನಡುವೆ ಕಸದ ರಾಶಿ:ಸುಜಾತಾ ತಿರುಗಾಟ ಕಥನ

”ಕಾಡು ಬಿಟ್ಟು ಬಂದ ಹಕ್ಕಿಗಳು ರಸ್ತೆಯಲ್ಲಿ ಬಿದ್ದ ಕಾಳನ್ನು ಕಾಣುವ ಬಗೆ, ಊರು ಬಿಟ್ಟು ಬಂದವರು ಪಟ್ಟಣದ ಥಳುಕಿಗೆ ನಲುಗಿ ಹೋಗುವ ಕಥೆ, ಮಾಡಿದ ಸಾಲ ತೀರಿಸಲು ಬಂದು ಒಗ್ಗದ ಕೆಲಸಗಳನ್ನು ಮಾಡುತ್ತಲೇ ಅರ್ಧವಯಸ್ಸಿಗೆ ಹಣ್ಣಾಗಿ, ಇತ್ತ ಮಕ್ಕಳು, ಅತ್ತ ಊರಲ್ಲಿ ಗಟ್ಟಿಮುಟ್ಟಾಗಿ ಉಳಿದ ತಾಯ್ತಂದೆಯರ ನಡುವೆ ನಲುಗುವ ಕಾರ್ಮಿಕ ಬಂಧುಗಳು…”

Read More

ದಿಲ್ಲಿಯಲ್ಲಿ ಒಂದು ಹಳ್ಳಿ ಬಂದು ಕೂತ ಬಗೆ:ಸುಜಾತಾ ತಿರುಗಾಟ ಕಥನ

ರೈತನ ಗುಡಿಸಿಲಿನ ಸರಳತೆ ಹಾಗೂ ನಿರುಮ್ಮಳತೆಯನ್ನು ಹೊತ್ತು ತಂದು ನಗರದ ರಾಜಬೀದಿಯನ್ನು ಹಾದು ಆ ಗಜಿಬಿಜಿಯ ಗಲ್ಲಿಯಲ್ಲಿ ನಿಂದು ದುಡಿದುಣ್ಣುವ ಜನರ ಮಹತ್ವವನ್ನು ಸಾರುತ್ತ ನಿಂತಿದ್ದವು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ